ಶ್ರೀ ವೆಂಕಟಾಚಲ ಅವಧೂತರಿಗೆ ಸಂಬಂಧಿಸಿದ ಗ್ರಂಥಗಳು
1. ಶ್ರೀ ಸದ್ಗುರು ಮಹಿಮೆ - ರಚನೆ: ಚರಣದಾಸ
ಶ್ರೀ ವೆಂಕಟಾಚಲ ಆವಧೂತರ ಒಡನಾಟದಲ್ಲಿ ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲವಿದ್ದು ಅವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರ ಹೆಸರನ್ನು ಬಹಿರಂಗಪಡಿಸಿಕೊಳ್ಳಲು ಇಚ್ಛಿಸದ "ಚರಣದಾಸ" ರಿಂದ ವಿರಚಿತವಾದ "ಶ್ರೀ ಸದ್ಗುರು ಮಹಿಮೆ" ಗ್ರಂಥವು 156 ಅಧ್ಯಾಯಗಳನ್ನು ಒಳಗೊಂಡಿದ್ದು ಗುರು ಬಂಧುಗಳು ತಪ್ಪದೆ ಪಾರಾಯಣ ಮಾಡಬೇಕಾದ ಗ್ರಂಥವಾಗಿರುತ್ತದೆ. ಈ ಗ್ರಂಥವು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಲಭ್ಯವಿರುತ್ತದೆ. ಈ ಗ್ರಂಥವನ್ನು ಹೊಂದಲು ಇಚ್ಛಿಸುವ ಗುರುಬಂಧುಗಳು ಶ್ರೀಮತಿ. ಸವಿತಾ ರಘುನಾಥ್, ಬಸವೇಶ್ವರ ನಗರ, ಬೆಂಗಳೂರು ಇವರನ್ನು ದೂರವಾಣಿ ಸಂಖ್ಯೆ: 94810 25416 ಅನ್ನು ಸಂಪರ್ಕಿಸಿ ಗ್ರಂಥವನ್ನು ಖರೀದಿಸಬಹುದು. ಗುರುನಾಥರ ಈ ಅತ್ಯಮೂಲ್ಯ ಗ್ರಂಥಕ್ಕೆ ಬೆಲೆ ಕಟ್ಟಲು ಇಚ್ಛಿಸದ ಚರಣದಾಸರು ಇದಕ್ಕೆ ಇಷ್ಟೇ ಬೆಲೆ ಎಂದು ನಿಗದಿಪಡಿಸಿರುವುದಿಲ್ಲ. ಹಾಗಾಗಿ, ಗುರುಬಂಧುಗಳು ತಮ್ಮ ಶಕ್ತ್ಯಾನುಸಾರ ಗುರುಕಾಣಿಕೆ ನೀಡಿ ಈ ಗ್ರಂಥವನ್ನು ಖರೀದಿಸಿ ಗ್ರಂಥವು ಹೆಚ್ಚು ಹೆಚ್ಚು ಮರುಮುದ್ರಣ ಕಾಣುವಂತೆ ಮಾಡಬೇಕಾಗಿ ಈ ಮೂಲಕ ಪ್ರಾರ್ಥನೆ ಮಾಡಿಕೊಳ್ಳುತ್ತೇವೆ.
2. ಗುರುನಾಥರ ಸನ್ನಿಧಿಯಲ್ಲಿ - ರಚನೆ:ಶ್ರೀ. ಅನಂತರಾಮು
"ಗುರುನಾಥರ ಸನ್ನಿಧಿಯಲ್ಲಿ" ಎಂಬ ಈ ಮಹೋನ್ನತ ಕನ್ನಡ ಪಾರಾಯಣ ಗ್ರಂಥವನ್ನು ಬೆಂಗಳೂರಿನ ಶ್ರೀಯುತ.ಅನಂತರಾಮು ಅವರು ರಚಿಸಿದ್ದು ಇಪ್ಪತ್ತನಾಲ್ಕು ಅಧ್ಯಾಯಗಳು, ಫಲಶ್ರುತಿ, ಗುರುನಾಥರ ವಾಣಿಗಳು ಹಾಗೂ ಭಜನೆಗಳನ್ನು ಒಳಗೊಂಡಿರುತ್ತದೆ. ಈ ಗ್ರಂಥವನ್ನು ಗುರುಬಂಧುಗಳು ಸಪ್ತಾಹ ರೂಪದಲ್ಲಿ ಕೂಡ ಪಾರಾಯಣ ಮಾಡಬಹುದಾಗಿರುತ್ತದೆ. ಈ ಗ್ರಂಥವನ್ನು ಈ ಕೆಳಕಂಡ ಸ್ಥಳದಲ್ಲಿ ಖರೀದಿಸಬಹುದಾಗಿದೆ:
ಶ್ರೀ.ಅನಂತರಾಮು,
ನಂ.64, ಅಕ್ಷಯ, ಓಂಕಾರನಗರ,
4ನೇ ಅಡ್ಡರಸ್ತೆ, ಬನ್ನೇರುಘಟ್ಟ ರಸ್ತೆ,
ಬೆಂಗಳೂರು.
ದೂರವಾಣಿ ಸಂಖ್ಯೆ: 99029 80962
ಅತಿ ಶೀಘ್ರದಲ್ಲಿಯೇ ಈ ಗ್ರಂಥವು ಇಂಗ್ಲೀಷ್ ಭಾಷೆಯಲ್ಲಿಯೂ ಲಭ್ಯವಾಗುತ್ತದೆ ಎಂದು ಗುರುಬಂಧುಗಳಿಗೆ ತಿಳಿಸಲು ನಾವು ಹರ್ಷಿಸುತ್ತೇವೆ.
No comments:
Post a Comment