ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 148
ಗ್ರಂಥ ರಚನೆ - ಚರಣದಾಸ
ಪಾವನ ಗಂಗೆ ........ ಅಮ್ಮ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ನಾನು ಈ ಮೊದಲೇ ಹೇಳಿದಂತೆ ಗುರುಪತ್ನಿಯನ್ನು ಅಮ್ಮಾ ಎಂದೇ ಕರೆಯುತ್ತಿದ್ದೆ. ಅಮ್ಮನೂ ಸಹ ಅದೇ ಪ್ರೀತಿ ವಾತ್ಸಲ್ಯದಿಂದ ನನ್ನನ್ನು ನೋಡಿಕೊಂಡಿದ್ದು ನಿಜಕ್ಕೂ ನನ್ನ ಭಾಗ್ಯ. ಸಾಮಾನ್ಯವಾಗಿ ವಿಪರೀತ ಕೆಲಸದ ಒತ್ತಡವಿದ್ದಾಗ ಅಮ್ಮ ನನ್ನಲ್ಲಿಗೆ ಬಂದು ಇಷ್ಟೆಲ್ಲಾ ಮಾಡ್ತೀಯಲ್ಲಾ ಆಯಾಸವಾಯಿತೇನೋ.. ಎಂದು ಹೇಳಿ ಕಾಫಿ ಮಾಡಿಕೊಡುತ್ತಿದ್ದರು.
ಮತ್ತೊಮ್ಮೆ ಚಳಿಗಾಲದಲ್ಲಿ ನನ್ನ ಪಾದಗಳೆರಡೂ ವಿಪರೀತ ಒಡೆದಿದ್ದು ನಡೆಯಲಾಗುತ್ತಿರಲಿಲ್ಲ. ಗುರುನಿವಾಸದಲ್ಲಿ ಯಾರಿಗೂ ಹೀಗೇ ಕೆಲಸ ಮಾಡು ಅಂತ ಯಾರೂ ಹೇಳುತ್ತಿರಲಿಲ್ಲ. ಆದರೂ ನಾನೇ ಒಂದಷ್ಟು ಕೆಲಸವನ್ನು ನಿತ್ಯವೂ ಮಾಡುತ್ತಿದ್ದೆ. ಅಂದು ಕಾಲು ನೋವಿನಿಂದ ಒದ್ದಾಡುತ್ತಿರುವುದನ್ನು ನೋಡಿದ ಅಮ್ಮ ಬಿಸಿನೀರು ಕಾಯಿಸಿ ಅದಕ್ಕೆ ಉಪ್ಪು ಹಾಕಿ ನನ್ನನ್ನು ಬಯ್ಯುತ್ತಾ ಕರೆತಂದು ಆ ನೀರಿನ ಪಾತ್ರೆಯೊಳಗೆ ನನ್ನ ಕಾಲಿರಿಸಿ ಉಪಚರಿಸಿದ್ದನ್ನು ಅಜೀವಪರ್ಯಂತ ಮರೆಯಲು ಅಸಾಧ್ಯ.
ಮತ್ತೊಂದು ದಿನ ಸಂಜೆ ಅಮ್ಮ ಚಪಾತಿ ಮಾಡುತ್ತಿದ್ದರು. ನಾನು ಅಲ್ಲೇ ಓಡಾಡುತ್ತಿದ್ದೆ. ನನ್ನ ಕರೆದು ಗುರುಪಾದುಕೆಗಳಿದ್ದ ಕೋಣೆಯಲ್ಲಿ ಕುಳ್ಳಿರಿಸಿ ಚಪಾತಿ ಹಾಲು ನೀಡಿ "ಇಲ್ಲಿಗೆ ಬಂದೋರೆಲ್ಲಾ ಅವರವರ ಕೆಲಸ ಮಾಡ್ಕೊಂಡು ಹೋಗುತ್ತಾರೆ. ನಿನಗೆ ಇಲ್ಲಿನ ಕೆಲಸ ಬಿಟ್ಟರೆ ಬೇರೇನೂ ಗಮನ ಇರಲ್ಲ. ನಿನ್ನನ್ನ ಕಾಪಾಡಬೇಕಾದ್ದು ನನ್ನ ಧರ್ಮ" ಎಂದು ಹೇಳಿ ನಾನು ಚಪಾತಿ ತಿಂದಾಗೋವರೆಗೂ ನಿಂತಿದ್ದ ಆ ಮಹಾತಾಯಿಯ ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ.... ? ಆ ಪ್ರೀತಿಯ ಸವಿಯನ್ನು ಪದಗಳಲ್ಲಿ ಹೇಳಲಸಾಧ್ಯ.
ತಂದೆ-ತಾಯಿ ಹಾಗೂ ಗುರುಹಿರಿಯರಿಗೆ ಅವಮಾನವಾಗುವಂತೆ ನಡೆದುಕೊಳ್ಳೋದನ್ನ ಗುರುನಾಥರು ಎಂದಿಗೂ ಸಹಿಸುತ್ತಿರಲಿಲ್ಲ. ಒಮ್ಮೆ ವಿಖ್ಯಾತ ಪೀಠವೊಂದರ ಯತಿಗಳೊಬ್ಬರು ವಿಜಯಯಾತ್ರೆ ಹೊರಟ ಸಂದರ್ಭ. ಗುರುನಾಥರು ಆ ಯತಿಗಳು ಸಾಗುವ ಮಾರ್ಗದಲ್ಲಿ ರಂಗೋಲಿ ಬರೆಸಿ ಸ್ವಾಗತಕ್ಕಾಗಿ ಕಾಯುತ್ತಿದ್ದರು. ಆದರೆ ಗುರುನಾಥರು ಆ ಯತಿಗಳನ್ನು ಭೇಟಿಯಾಗಿ "ತಾಯಿಯನ್ನು ನೋಡಿಕೊಳ್ಳೋದು ಬಿಟ್ಟು, ಇನ್ಯಾವ ದಿಗ್ವಿಜಯ ಶ್ರೇಷ್ಠವಲ್ಲ ಎಂದು ಗುಡುಗಿ ಸನ್ಯಾಸಿ ಆದ್ರೂ ತಾಯಿಯನ್ನ ನೋಡ್ಕೋಬೇಕಾದ್ದು ಧರ್ಮ. ತಾಯಿ ಇಲ್ಲದೆ ಜಗತ್ತಿನಲ್ಲಿ ಯಾವುದೂ ಇಲ್ಲ" ಎಂದು ಹೇಳಿದರು.
ಆಗ ಗುರುನಾಥರು "ನೀವು ಹಿಂದಿರುಗುವಾಗ ಮತ್ತೆ ತಾಯಿಯ ದರ್ಶನವಾಗುತ್ತೋ.. ಇಲ್ಲವೋ..... ? ಮತ್ತದೇ ತಂದೆ-ತಾಯಿಯನ್ನು ಪಡೆಯಲು ಐದು ಜನ್ಮ ಕಾಯಬೇಕಾಗುತ್ತೆ" ಎಂದು ಎಚ್ಚರಿಸಿದರು.
ಹಾಗೇ ಆಯಿತು. ಆ ಯತಿಗಳು ಹಿಂದಿರುಗಿದ ಮರುದಿನ ಯತಿಗಳ ಪೂರ್ವಾಶ್ರಮದ ತಾಯಿ ದೈವಾಧೀನರಾದರು.....,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala avadootarige nanna poojya namanagalu. Sarvarigu arogya ayasu rakshe sahane samadhaana buddhi shreyasu santosha karunisi asheervadisi Guruvarya. Sarve jano sukinobavantu.
ReplyDelete