ಒಟ್ಟು ನೋಟಗಳು

Wednesday, March 8, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 155


    ಗ್ರಂಥ ರಚನೆ - ಚರಣದಾಸ 

ಅಘೋರೇಶ್ವರ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಒಮ್ಮೆ ಗುರುಗಳೊಂದಿಗೆ ಸಾಗರ ಸಮೀಪ ಹೋಗುತ್ತಿದ್ದಾಗ ದಾರಿ ಬದಿ "ಅಘೋರೇಶ್ವರ ದೇಗುಲ" ಎಂಬ ನಾಮ ಫಲಕ ಪದೇ ಪದೇ ಕಂಡಿತು. ಕೂಡಲೇ ಗುರುಗಳು "ಅದೇನಯ್ಯಾ ಅಘೋರೇಶ್ವರ ಹೊಡೆಯಯ್ಯಾ ನೋಡೋಣ"ಅಂದರು. ಅಲ್ಲಿ ಹೋಗಿ ಶಿವಲಿಂಗವನ್ನು ನೋಡಿದಾಕ್ಷಣ ಗುರುಗಳು ವ್ಯಕ್ತಪಡಿಸಿದ ಭಾವ ಆಶ್ಚರ್ಯಕರವಾಗಿತ್ತು. ಅದೊಂದು ಅದ್ಭುತ ಶಿವಲಿಂಗ. ನಂತರ " ನಾ ಅಲ್ಲಿ ಎರಡು ದಿನ ಪೂಜೆ ಮಾಡಿದ್ದೀನಿ ಕಣಯ್ಯಾ" ಎಂಬ ಗುರುನಾಥರ ಮಾತು ಇವರು ಹೋಗದ ಸ್ಥಳ ಯಾವುದು ಎಂಬ ಪ್ರಶ್ನೆ ಮೂಡಿಸಿತು. 


ಅಘೋರೇಶ್ವರ ದೇಗುಲ


ಅಘೋರೇಶ್ವರ ದೇಗುಲ


ಅಘೋರೇಶ್ವರ 

ಹಾಗೆಯೇ ಮತ್ತೊಮ್ಮೆ ಶಿವಮೊಗ್ಗ ಸಮೀಪ ಇರುವ ಶರಭೇಶ್ವರ ಎಂಬ ದೇಗುಲಕ್ಕೆ ಹೋದೆವು. ಅದೊಂದು ಕಲ್ಲಿನಲ್ಲಿ ಮೂಡಿದ ಆಂಜನೇಯ ಮೂರ್ತಿಯಾಗಿದ್ದು, ಗರ್ಭಗುಡಿಯಲ್ಲಿ ಅರ್ಚಕರು ನಿಲ್ಲುವಷ್ಟು ಮಾತ್ರ ಜಾಗವಿತ್ತು. ವಯೋವೃದ್ಧ ಅರ್ಚಕರು ನಮ್ಮ ಆಗಮನದಿಂದ ಆನಂದಗೊಂಡಿದ್ದರು. ನಾವು ನೀಡಿದ ಹೂವಿನ ಹಾರವನ್ನು ಗರ್ಭಗುಡಿಯ ಬಾಗಿಲಿಗೆ ಕಟ್ಟಿದಾಗಲೆಲ್ಲಾ ಅದು ಕೆಳಗೆ ಬೀಳುತ್ತಿತ್ತು. 

ಇದರಿಂದ ಯಾರೋ ಮಹಾತ್ಮರ ಆಗಮನವಾಗಿದೆ ಎಂದುಕೊಂಡ ಅರ್ಚಕರು "ನೀವ್ಯಾರು? ಹೇಳಿ" ಎಂದು ಗುರುಗಳನ್ನು ಪೀಡಿಸತೊಡಗಿದರು. ಕೊನೆಗೆ ಗುರುಗಳು ಹೇಳಿದರು: "ನಾನು ಸ್ವಾಮೀ ವೆಂಕಟಾಚಲ... ನಾನಿಲ್ಲಿ ನಿಮ್ಮೊಂದಿಗೆ ಮೂವತ್ತು ವರ್ಷದ ಹಿಂದೆ ಆರು ತಿಂಗಳು ಪೂಜೆ ಮಾಡಿದ್ದೆ" ಎಂದು ನೆನಪಿಸಿದರು. ಈ ಮಾತು ಕೇಳಿ ಅರ್ಚಕರು ಅಳುತ್ತಾ ಆನಂದದಿಂದ "ಈ ದಿನ ನನ್ನ ಬಾಳಿಗೆ ಪುಣ್ಯದ ದಿನ" ಎಂದು ಕೈ ಮುಗಿದರು. 

ಆ ಸರ್ವಾಂತರ್ಯಾಮಿಯ ಲೀಲೆಗಳನ್ನು ಅದೆಂತು ವರ್ಣಿಸಲು ಸಾಧ್ಯ ಅಲ್ಲವೇ?........,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

1 comment:

  1. Parama poojya venkatachala gurugalige nanna bhakti poorvaka namanagalu. Guruvarya Yellaranu ee kantaka dinda mukthi kottu manashanti honduvante asheervadisi. Sarve jano sukinobavantu.

    ReplyDelete