ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 150
ಗ್ರಂಥ ರಚನೆ - ಚರಣದಾಸ
ಬೀಸುವ ಕಲ್ಲು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಮೂಲತಃ ಕಡೂರಿನವರಾದ ಇವರ ಪತಿ ನ್ಯಾಯಾಲಯದಲ್ಲಿ ಉದ್ಯೋಗಿ ಆಗಿದ್ರು. ಇದೀಗ ಬೆಂಗಳೂರು ವಾಸಿಯಾಗಿರುವರು. ನಮ್ಮತ್ತೆಗೆ ಆರೋಗ್ಯ ಸರಿ ಇರಲಿಲ್ಲ. ಕೇಳೋಣಾಂತ ಬಂದೆ, ಶಿವ ದೇಗುಲದ ಹಿಂದಿದ್ದ ಸಮಾಧಿಯ ಬಳಿ ಕುಳಿತಿದ್ದ ಗುರುಗಳು ನನ್ನ ನೋಡಿ "ಬಾ ಬಾ..... ನೀ ಬರ್ತೀಯಾ ಅಂತ ನನಗೆ ಗೊತ್ತಿತ್ತು. ನನಗೆ ಅದ್ವೈತ ಪೀಠದ ಗುರುಗಳು ಒಂದು ಮಂತ್ರೋಪದೇಶ ನೀಡಿದ್ರು. ಅದನ್ನ ಯಾರಿಗೆ ಕೊಡ್ಲಿ... ಅಂತಿದ್ದೆ. ತಗೋ, ನೀ ಇಟ್ಕೋ, ಇದಕ್ಕೆ ದಿನ ಅರಿಶಿನ ಹಾಕಿ ಪೂಜಿಸು. ಆದರೆ ತೆರೆಯಬೇಡ. ಓದಲೇ ಬೇಕು ಅನಿಸಿದ್ರೆ ರಾತ್ರಿ ಮಾತ್ರ ಓದಬೇಡ" ಎಂದು ಒಂದು ಸಣ್ಣ ಚೀಟಿ ನೀಡಿದ್ರು. ಅದಿನ್ನೂ ನನ್ನ ಬಳಿಯೇ ಇದೆ.
ಈ ಮಧ್ಯೆ ನನಗೆ ವಿಪರೀತ ಸ್ವಪ್ನ ಬೀಳುತ್ತಿತ್ತು. ಈ ಕುರಿತು ದುಃಖಿತಳಾದ ನಾನು ಗುರುನಿವಾಸಕ್ಕೆ ಬಂದೆ. ನನ್ನ ನೋಡಿ ಗುರುಗಳು "ನೋಡು ನೀನು ನಲವತ್ತೈದನೇ ವಯಸ್ಸಿಗೆ ಸಾಯಬೇಕೆಂಬುದು ವಿಧಿ ನಿಯಮವಾಗಿತ್ತು. ಆದರೆ ನಿನ್ನ ಒಂದು ಭೋಗಿ ಹತ್ತಿಸಿದ್ದೀನಿ. ಹೆದರಬೇಡ ಅಂದ್ರು. ನನಗೆ ಅರ್ಥವಾಗಲಿಲ್ಲ.
ಮತ್ತೊಮ್ಮೆ ಅನಾರೋಗ್ಯ ಪೀಡಿತಳಾಗಿ ಆಸ್ಪತ್ರೆಗೆ ಹೋಗುತ್ತಿದ್ದ ನನ್ನನ್ನು ಕರೆದು "ಏನೂ ತಿರುಗಿ ನೋಡದೇ ಹೋಗುತ್ತಿದ್ದೀಯಲ್ಲಾ.... " ಅಂದ್ರು. ನಾನು ಗುರುಗಳೇ ನನಗೆ ಹರ್ನಿಯಾ ಆಪರೇಷನ್ ಆಗಬೇಕೆಂದು ವೈದ್ಯರು ಹೇಳಿದ್ದಾರೆ ಎಂದೆ. ಅದಕ್ಕವರು "ನಿನಗೆ ಹರ್ನಿಯಾ ಆಗಿಲ್ಲ. ಸಿಜೇರಿಯನ್ ಮಾಡುವಾಗ ಸ್ವಲ್ಪ ವ್ಯತ್ಯಾಸವಾಗಿದೆ. ಹೆದರಬೇಡ. ಒಂದು ಬೀಸುವ ಕಲ್ಲು ತಂದು ಮನೆಯಲ್ಲಿಡು. ನಿನಗೆ ಆಪರೇಷನ್ ಬೇಡ" ಅಂದಿದ್ರು. ಅದು ಹಾಗೇನೇ ನಡೀತು.
ಈಗಿನ ಪರಿಸ್ಥಿತಿ ನೋಡಿದ್ರೆ ನಾನೇ ಮೊದಲು ದೇಹ ಬಿಟ್ಟಿದ್ರೆ ಒಳ್ಳೆಯದಿತ್ತು ಅನ್ನಿಸುತ್ತೆ. ಆದರೆ, "ಪುರುಷ ಹೋದ್ರೆ ಸ್ತ್ರೀ ದುಃಖ ತಡೆದು ಬದುಕಬಲ್ಲಳು... ಆದ್ರೆ ಸ್ತ್ರೀ ಹೋದ್ರೆ ಪುರುಷ ದುಃಖ ತಡೆಯೋದು ತುಂಬಾ ಕಷ್ಟ ಕಣಮ್ಮಾ..... " ಎಂಬ ಗುರುಗಳ ಮಾತು ನೆನಪಾಗಿ ನನಗೆ ನಾನೇ ಸಮಾಧಾನ ಹೇಳಿಕೊಳ್ಳುತ್ತೇನೆ ಎಂದು ಮೌನವಾದರು.
ದೇವರು ಸಿಕ್ಕಿದ್ದಾರೆ.........
ಮತ್ತೆ ನನ್ನನ್ನು ಕುರಿತು, "ನಮ್ಮೆಜಮಾನರು ಸಖರಾಯಪಟ್ಟಣಕ್ಕೆ ಬರುತ್ತಿದ್ದರು. ನೀವು ನೋಡಿದ್ದೀರಿ. ಅಲ್ಲಿ ನ್ಯಾಯ ಅದಾಲತ್ ಮಾಡುತ್ತಿದ್ದರು. ಹಲವಾರು ನ್ಯಾಯಾಧೀಶರು ಗುರುನಿವಾಸಕ್ಕೆ ಬಂದಿದ್ದರು. ನೆನಪು ಉಂಟೇ?" ಅಂದ್ರು. ನಾನು ಹೂಂ.. ಎಂದು ತಲೆಯಾಡಿಸಿದೆ.
ನಂತರ ಆ ತಾಯಿ ಹೀಗೆ ಹೇಳತೊಡಗಿದರು. ಅದು ನಮ್ಮೆಜಮಾನರು ದೇಹ ಬಿಟ್ಟು ಕೆಲ ದಿನವಾಗಿತ್ತು ಅಷ್ಟೇ. ನಮ್ಮೆನೆಗೆ ಬಂದ ಗುರುಗಳಿಗೆ ನಾನು ದುಃಖದಿಂದ "ನಮ್ಮೆಜಮಾನರು ಏನೂ ಸುಖ ಪಡದೆ ಹೋಗಿಬಿಟ್ಟರಲ್ಲಾ... " ಎನ್ನಲು ಗುರುಗಳು "ಸುಖ ಅಂದ್ರೆ ಏನಮ್ಮಾ? ನಿನ್ನ ಗಂಡ ಲಂಚ ತೊಗೊಂಡಿಲ್ಲ. ಎಲ್ಲರಿಗೂ ಬೇಕಾದವನಾಗಿದ್ದ. ತನ್ನ ಒಳ್ಳೆಯತನದಿಂದ ಬಹಳ ದೂರ ಹೋಗಿದ್ದಾನೆ. ನೀ ಮತ್ತೆ ಅತ್ತು ಅವನನ್ನು ಹಿಂದೆ ಕರಿಬೇಡ ಆಯ್ತಾ?" ಎಂದು ಸಮಾಧಾನ ಮಾಡಿದರು.
ಅದಕ್ಕೂ ಮೊದಲು ಗುರುಗಳು, ನಮ್ಮೆಜಮಾನರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಹೋಗಿ ಮಂತ್ರ ಪಠಣ ಮಾಡಿಸಿ ಎಲ್ಲರಿಗೂ ಭಕ್ತರ ಕೈಯಿಂದ ಆಹಾರ ಹಂಚಿಸುತ್ತಿದ್ದರು. ಆಗ ಅಲ್ಲಿಗೆ ಬಂದ ವಿಚಾರಣಾಧೀನ ಆಪಾದಿತನೊಬ್ಬ ಭಕ್ತರು ನೀಡಿದ ಆಹಾರವನ್ನು ನಿರಾಕರಿಸಿ "ನಂಗೆ ತೊಟ್ಟು ವಿಷ ಕೊಡಿ" ಎಂದನು ದುಃಖದಿಂದ.....
ಇದನ್ನು ಕೇಳಿದ ಆ ಭಕ್ತರು "ಅದು ಬೇಕಾದರೆ ಅಲ್ಲಿ.... ಕಾರಲ್ಲಿ ಕೂತಿದ್ದಾರಲ್ಲ... ಅವರನ್ನ ಕೇಳಪ್ಪಾ" ಎಂದರು, ಗುರುಗಳ ಕಡೆಗೆ ಬೊಟ್ಟು ಮಾಡಿ. ಗುರುಗಳನ್ನು ಸಮೀಪಿಸಿದ ಆ ಆಪಾದಿತ ಅಳುತ್ತ "ಸ್ವಾಮಿ ನಾ ಮಾಡದ ತಪ್ಪಿಗೆ ನನಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಇದು ಯಾವ ನ್ಯಾಯ? ಭಗವಂತನಿಗೂ ನನ್ನ ಕೂಗು ಕೇಳಲಿಲ್ಲವೇ?" ಎಂದನು ಕೈ ಮುಗಿದು........
ಕೂಡಲೇ ಗುರುಗಳು ಅವನಿಗೆ ಸಿಹಿ ತಿನಿಸಿ "ಹೆದರಬೇಡ, ನಿನಗೆ ಶಿಕ್ಷೆ ಆಗಲ್ಲ" ಎಂದು ಅಭಯವಿತ್ತರು. ಅದಾಗಿ ಕೆಲವೇ ಹೊತ್ತಲ್ಲಿ ಅವನಿಗೆ ಬಿಡುಗಡೆ ನೀಡಿ ಆದೇಶ ಮಾಡಿದ ವಿಚಾರ ತಿಳಿದು ಬಂತು. ಆತ ಆನಂದದಿಂದ ಅಳುತ್ತಾ... ಕುಟುಂಬದವರಿಗೆ ಕರೆ ಮಾಡಿ "ನಂಗೆ ದೇವರು ಸಿಕ್ಕವ್ರೆ, ನಾ ಬಿಡುಗಡೆ ಆಗಿಬಿಟ್ಟೆ..... ನಂಗಿನ್ನು ಭಯವಿಲ್ಲ" ಎಂದು ಹೇಳುತ್ತಿದ್ದ ಮಾತು ಅಲ್ಲಿದ್ದ ಭಕ್ತರ ಕಿವಿಗೆ ಬಿತ್ತು.... ಆ ಸದ್ಗುರು ಎಂತಹ ಕರುಣಾಳು ಅಲ್ಲವೇ?
ಇಷ್ಟು ಹೇಳಿ ಒಂದು ಕ್ಷಣ ಕಣ್ಣು ಮುಚ್ಚಿ ಗುರುವನ್ನು ನೆನೆದ ಅವರು "ನನಗೆ ಗುರುಗಳು ಹೇಳಿದ ಕೊನೆಯ ಮಾತಂದ್ರೆ, ನೋಡೂ ಎಂತಾ ಕಾಲದಲ್ಲೂ ಯಾರನ್ನೂ ನಂಬಬೇಡ, ಆ ಈಶ್ವರನ ಮೇಲೆ ನಂಬಿಕೆ ಕಳ್ಕೋಬೇಡ....."
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala gurugalige nanna poojya namanagalu. Yellarigu Daari torisi olleyadaaguvante asheervadisi Kaapadi Guruvarya. Sarve jano sukinobavantu.
ReplyDelete