ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 15
ಜಗದಗಲ ಅಳೆವವಗೆ.......
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಐದು ತಿಂಗಳ ಮಗು.... ತವರು ಮನೆಯಿಂದ ಗಂಡನ ಮನೆಗೆ ಮಗುವನ್ನು ಕರೆದುಕೊಂಡು ಬರುತ್ತಿದ್ದಾರೆ. ತಂದೆ ತಾಯಿ ಆ ಪುಟ್ಟ ಕಂದ. ಮಗುವಿಗೆ ಅಳು ಸಹಜ. ಆದರೆ, ಅರಸೀಕೆರೆಯಿಂದ ಹೊರಡುತ್ತಿದ್ದಂತೆ ಮಗು ಅಳಲಾರಂಭಿಸಿತು. ಸ್ವಲ್ಪ ಹೊತ್ತು ಸಹಜವಾಗಿ ಮಗು ಅಳುತ್ತಿದೆ, ಎಂದರೆ ಅದು ಹಾಗಾಗಲಿಲ್ಲ. ಅರಸೀಕೆರೆಯಿಂದ ಹಿಡಿದು ಬಾಣಾವರದವರೆಗೂ ಮ್ಯಾರಾಥಾನ್ ರೇಸ್ ನಂತೆ ಮಗು ಅಳುತ್ತಲೇ ಇತ್ತು. ಗಂಟಲು ನರಗಳೆಲ್ಲಾ ಉಬ್ಬಿಕೊಂಡವು. ಮಗುವಿನ ಕಣ್ಣು ಕೆಂಪಗಾಯಿತು. ಏನಪ್ಪಾ ಮಾಡೋದು, ಎಂದು ಮಗುವಿನ ತಂದೆ ಚಿಂತೆಗೀಡಾದರು. ತಾಯಿ ತನ್ನ ಪ್ರಯತ್ನವನ್ನೆಲ್ಲಾ ಮಾಡುತ್ತಿದ್ದರೂ ಎಲ್ಲಾ ವ್ಯರ್ಥವಾಗಿತ್ತು.
ಪ್ರಿಯ ಓದುಗ ಮಿತ್ರರೇ, ಈ ದಂಪತಿಗಳು ಗುರುನಾಥರ ಭಕ್ತರೆಂಬುದನ್ನು ಹೇಳಲು ಮರೆತೆ. ಕ್ಷಮಿಸಿ ಈಗ ಕೂಡಲೇ ಮಗುವಿನ ತಂದೆಗೆ ನೆನಪಾದದ್ದು ಗುರುನಾಥರು. "ನಾವು ಮೊದಲು ಸಖರಾಯಪಟ್ಟಣಕ್ಕಾದರೂ ಹೋಗಿ ಬಂದರೆ ಸರಿಯಾಗಬಹುದೇನೋ" ಎಂದು ನೆನಸಿಕೊಂಡು ಇತ್ತ ತಿರುಗಿ ನೋಡಿದರೆ ಇಂದ್ರಜಾಲ, ಮಹೇಂದ್ರಜಾಲ ಮಾಡಿದಂತೆ ಥಟ್ಟನೆ ಮಗು ಅಳು ನಿಲ್ಲಿಸಿಬಿಟ್ಟಿತು.
ಸ್ಮರಣೆ ಮಾತ್ರಕ್ಕೆ ಗುರುನಾಥರು ಹೇಗೆ ವಿಪತ್ತಿನಿಂದ ಪಾರು ಮಾಡುತ್ತಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ. ಕೆಲವೊಮ್ಮೆ ನಾವು ಮರೆತಾಗ ನಮಗೊಂದು ಸಣ್ಣ ತೊಂದರೆ ನೀಡಿ ಅರಿವು ಮೂಡಿಸುವುದು ಪ್ರಭುವಿನ ರೀತಿ ಏನೋ?
ಸಖರಾಯಪಟ್ಟಣ ತಲುಪಿ, ಗುರುನಾಥರ ಮನೆಯ ಒಳ ಬಂದು, ಅಂಜುತ್ತ ಅಂಜುತ್ತ ಸರಿಯಾಗಿ ಕೂತಿರಲಿಲ್ಲ. ಏಕೆಂದರೆ ಹೆದರಿಕೆ "ಯಾರೋ ಬಂದವರು.,...ಓಹೋಹೋ ನೀನಾ.... ಯಾಕೆ ಸರಿಯಾಗಿ ಕೂತುಕೊಂಡಿಲ್ಲ" ಎಂದರು. ಗುರುನಾಥರು.... ಹೊರಗೆ ಹೆಂಡತಿ ಮಕ್ಕಳಿರುವುದನ್ನು ತಿಳಿದು "ಕರೆದುಕೊಂಡು ಬಾರೋ ಒಳಗೆ" ಎಂದರು. ಮಗುವನ್ನು ತಂದು ಅವರ ತೊಡೆಯ ಮೇಲೆ ಕೂರಿಸಿದೆ. ಮಗುವನ್ನು ಕೂರಿಸಿಕೊಂಡು ಗುರುನಾಥರು ಅದೇನು ಹರಸಿದರೋ.....
ಅಷ್ಟರಲ್ಲಿ "ಒಳಗೆ ಹೋಗಿ ಪಾದುಕೆಗಳ ದರ್ಶನ ಮಾಡಿಕೊಂಡು ಬಾ" ಎಂದರು. ನಂತರ ಮಗುವಿಗೆ ಹಾಲನ್ನು ನೀಡಿ, ಅಲ್ಲಿಯೇ ಇದ್ದ ನಾಯಿಗಳನ್ನು ಸ್ವಲ್ಪ ಹೊತ್ತು ಹೊರ ಕಳಿಸಿದರು.
ಇನ್ನೇನು ನಾವು ಹೋರಡಬೇಕೆನ್ನುವಲ್ಲಿ - ಯಾರಿಗೋ ಮೊದಲೇ ಹೇಳಿ ಐದು ಕರ್ಚೀಪು, ಮರದ ಬಾಗಿನ ಉಡಿಗಳನ್ನೆಲ್ಲಾ ತರಿಸಿಟ್ಟಿದ್ದರು. ನಾವು ಬರುವುದು ಗುರುನಾಥರಿಗೆ ತಿಳಿಸುವುದಿರಲಿ, ನಮಗೇ ತಿಳಿದಿರಲಿಲ್ಲ, ನಾವು ಹೋದವರಿಗೆ ಎಲ್ಲ ಕೊಟ್ಟು ಹರಸಿ ಬೀಳ್ಕೊಟ್ಟರು.
ಇನ್ನೇನು ಮನೆ ಬಾಗಿಲು ಮೆಟ್ಟಲಿಳಿದು ನಾವು ಹೊರಡುವುದರಲ್ಲಿದ್ದಾಗ ಗುರುನಾಥರು, ಹೊಲೆಸಿ ತಂದ ಅಂಗಿಯೊಂದನ್ನು ಮಗುವಿಗೆ ನೀಡಿದರು. ಅಂಗಿಯನ್ನು ತೊಡಿಸಿದಾಗ ಆದ ಆಶ್ಚರ್ಯ ಅಷ್ಟಿಷ್ಟಲ್ಲ. ಏಕೆಂದರೆ, ಮಗುವಿಗೆ ಆ ಅಂಗಿ ಸರಿಯಾಗಿತ್ತು. ಅದಾರು ಮಗುವಿನ ಅಳತೆ ಇವರಿಗೆ ನೀಡಿದ್ದರೋ ಕಾಣೆವು. ಜಗದಗಲವನ್ನೇ ಅಳೆದು, ತೂಗುವ ಗುರುನಾಥರಿಗೆ ಮಗುವಿಗೊಂದು ಅಂಗಿ ಹೊಲಿಸುವುದು ಕಷ್ಟವೇ. ಹೀಗೆ ಎಲ್ಲ ಬಲ್ಲ ಗುರುನಾಥರ ಪ್ರೀತಿಯೇ ವಿಚಿತ್ರ. ಬಾಣಂತಿಯನ್ನು ಮನೆಗೆ ಕರೆಸಿಕೊಂಡು ಮೊದಲು ಉಡಿಯನ್ನು ತುಂಬಿಸಿ - ಭಕ್ತರ ಮನೆಯಲ್ಲಾಗುವುದನ್ನು ತಾವೇ ಮಾಡಿ ತೋರಿಸಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ. ಬೆಳಿಗ್ಗೆ ನಾಮಕರಣಕ್ಕೆ ಸಂಬಂಧಿಗಳು ತಂದುಕೊಟ್ಟ ಅನೇಕ ಅಂಗಿಗಳು ಹೇಗೇಗೋ ಇದ್ದರೂ ಗುರುನಾಥರು ನೀಡಿದ್ದ ಅಂಗಿ ಮಾತ್ರ ಬಹು ಪ್ರೀತಿ ಆಗಿತ್ತು.
ಇದೇ ಭಕ್ತರಿಗೆ ಗುರುನಾಥರು ಮತ್ತೊಂದು ಪರೀಕ್ಷೆಗೆ ಒಮ್ಮೆ ಸಿಲುಕಿಸಿದರು. ಅತ್ಯಂತ ಭಕ್ತಿ ಭಾವದಿಂದ ಅಂದು ಅವರ ಮನೆಗೆ ಹೋದಾಗ ಗುರುನಾಥರು ಒಬ್ಬಟ್ಟನ್ನು ಹಂಚುತ್ತಿದ್ದರು. ಆ ಒಬ್ಬಟ್ಟಿನ ಮೇಲೆ ಮೂರುವರೆ ಇಂಚು ಉದ್ದದ ಬೂಸ್ಟ್ ಬೆಳೆದು ನಿಂತಿತ್ತು. ಸಾಮಾನ್ಯವಾಗಿ ಯಾರು ಏನು ಕೊಟ್ಟರೂ ತಾವು ಪೂರ್ತಿ ತಿನ್ನದೇ, ಅಲ್ಲಿದ್ದವರಿಗೂ ಅದನ್ನು ಪ್ರಸಾದ ರೂಪವಾಗಿ ಕೊಡುವುದು ಅವರ ಸ್ವಭಾವ.
ಒಬ್ಬಟ್ಟಿನ ಮೇಲೆ ಬೂಸ್ಟ ಅನ್ನು ನೋಡಿ ಕೆಲವರು ಹಾಗೆ ಕೈಲಿ ಹಿಡಿದುಕೊಂಡು ಏನು ಮಾಡುವುದೆಂದು ಚಿಂತಿಸುತ್ತಿದ್ದರು. ಆದರೆ ಇವರು ಮಾತ್ರ ಗುರುಪ್ರಸಾದವೆಂದು ಬಾಯಿಗೆ ಹಾಕಿಕೊಂಡು ತಿಂದೇಬಿಟ್ಟರು. ಪ್ರಸಾದ ಸ್ವಾದಭರಿತವಾಗಿತ್ತು. ಇಂದೂ ಕಲ್ಲುಗುಂಡಿನಂತೆ ಇದ್ದಾರೆ. ವಿಷವನ್ನೇ ಉಂಡು ಪ್ರಪಂಚವನ್ನು ಉಳಿಸಿದವನ ಕೈನ ಪ್ರಸಾದ ಭಕ್ತರನ್ನು ಕೊಲ್ಲುತ್ತದೆಯೇ. ಖಂಡಿತಾ ಇಲ್ಲ. ಇವತ್ತೂ ಅವರು ಆರೋಗ್ಯವಂತರಾಗಿ ಇದ್ದಾರೆ, ಗುರುಕೃಪೆಯಿಂದ.
ಗುರುನಾಥರ ಅನನ್ಯ ಭಕ್ತರು ಅನೇಕ ಸಾರಿ ತಾವು ಮಾಡಿದ, ಗುರುಗಳಿಗೆ ಇಷ್ಟವಾದ ತಿಂಡಿ ತೀರ್ಥಗಳನ್ನು ಗುರುನಾಥರ ಹೆಸರು ಹೇಳಿ ತೆಗೆದಿಟ್ಟರೆ, ಅಲ್ಲಿಗೆ ಬಂದು ಅದನ್ನು ಗುರುನಾಥರು ಸ್ವೀಕರಿಸಿದ ಅನೇಕ ಘಟನೆಗಳಿವೆ. ಇದಕ್ಕೆ ಉದಾಹರಣೆ ಎಂಬಂತೆ ಚಿಕ್ಕಮಗಳೂರಿನ ಮೀರಾ ಎಂಬ ಭಕ್ತೆ, ಗುರುನಾಥರ ಹೆಸರು ಹೇಳಿ ಭಕ್ತಿಯಿಂದ ತೆಗೆದಿಟ್ಟ ಪ್ರಸಾದವನ್ನು ಗುರುನಾಥರೇ ಬಂದು "ಎಲ್ಲಮ್ಮಾ ನನಗಿಟ್ಟಿರುವ ಸಜ್ಜಿಗೆ ನನಗೆ ಕೊಟ್ಟುಬಿಡು" ಎಂದು ಪ್ರೀತಿಯಿಂದ ತೆಗೆದುಕೊಂಡಿದ್ದಿದೆ. ಕೆಲವೊಮ್ಮೆ ಅವರ ಹೆಸರು ಹೇಳಿ ತೆಗೆದಿಟ್ಟು ಮರೆತು ಹೋದ ಪ್ರಸಾದವನ್ನು ಮೂರು ನಾಲ್ಕು ದಿನ ಬಿಟ್ಟು ಬಂದ ಗುರುನಾಥರು ಕೇಳಿ ಪಡೆದು - ಆ ತಿಂಡಿ ತೀರ್ಥಗಳು ಯಾವ ಸ್ಥಿತಿಯಲ್ಲಿದ್ದರೂ ಸ್ವೀಕರಿಸಿದ್ದೂ ಉಂಟು.
ಶಬರಿಯ ಎಂಜಲು ಬೋರೆಯಿಂದ ರಾಮ ತೃಪ್ತನಾದರೆ, ಭಕ್ತರಿಟ್ಟ ಪ್ರಸಾದವದೆಷ್ಟು ದಿನದ್ದಾಗಲಿ ಸಂತಸದಿಂದ ಸ್ವೀಕರಿಸುವ ಗುರುನಾಥರು, ಮುಟ್ಟಿದ್ದೆಲ್ಲಾ ಅಮೃತವೇ, ಅವರ ಕೈನಿಂದ ಪ್ರಸಾದ ಸಿಗುವುದೂ ಒಂದು ಮಹಾ ಪುಣ್ಯವೆಂದು ಭಾವಿಸಿ ಸ್ವೀಕರಿಸಿದವರು ಅನೇಕ ಅತಿ ಮಡಿವಂತಿಕೆಯ ಕುಟುಂಬ ಒಂದು ಗುರುನಾಥರ ಸಂಪರ್ಕದಿಂದ ಬಹು ದೊಡ್ಡ ಪರಿವರ್ತನೆ ಪಡೆದು, ಗುರುನಾಥರು ಕುಡಿದುಳಿಸಿದ ಕಾಫಿಯನ್ನು ತೀರ್ಥ ರೂಪದಲ್ಲಿ ಸ್ವೀಕರಿಸಿದ್ದು - ಎಲ್ಲ ಗುರು ಮಹಿಮೆಯೇ.
ಗುರುಭಕ್ತರೇ, ನಾಳಿನ ಗುರುನಾಥ ಚರಿತ್ರೆ ಏನೋ ಬಲ್ಲವರಾರು.... ಬರುವಿರಲ್ಲಾ... ನಮ್ಮೊಂದಿಗೆ ಇರುವಿರಲ್ಲವಾ?.....,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://
Poojya gurugalaada venkatachala Avara Divya paadagalige nanna bhakti poorvaka namanagalu. Guruvarya Yellaranu sadaa kaala nimma aashirvaada haagu rakshe doreyali. Hari om tatsat.
ReplyDelete