ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 153
ಗ್ರಂಥ ರಚನೆ - ಚರಣದಾಸ
ವಿಶ್ವೇಶ್ವರ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ತುಸು ತಡೆದ ಆತ, ನೋಡಿ ನನ್ನ ತಂಗಿ ಮದುವೆ ಆದ ನಂತರವೇ ನಾನು ಮದುವೆ ಆಗಬೇಕು ಅಂದುಕೊಂಡಿದ್ದೆ. ಇದನ್ನು ತಿಳಿದ ಗುರುನಾಥರು "ಆಯ್ತು ನೋಡೋಣ, ಕಾಲ ಏನು ನಡೆಸುತ್ತೆ ಅಂತ" ಅಂದಿದ್ರು. ಅದಾಗಿ ಎರಡೇ ತಿಂಗಳಿಗೆ ನನ್ನ ಮದುವೆ ಆಗಿತ್ತು. ನನ್ನ ಬಂಧುಗಳೆಲ್ಲರೂ ನಾನು ಆಸ್ತಿ ಕಬಳಿಸಲು ಸಂಚು ಮಾಡುತ್ತಿರುವೆ ಅಂದುಕೊಂಡಿದ್ದರು. ನಾನು ಪ್ರತೀ ಬಾರಿ ತಂಗಿ ಮದುವೆ ವಿಚಾರ ಕೇಳಿದಾಗಲೆಲ್ಲಾ ಗುರುನಾಥರು "ತಾಳಯ್ಯಾ ಸ್ವಲ್ಪ ದಿನ" ಅಂತಿದ್ರು.
ನನಗೆ ಮದುವೆ ಆಗಿ ಆರು ವರ್ಷದ ನಂತರವೂ ಸಂತಾನವಾಗಿರಲಿಲ್ಲ. ಒಮ್ಮೆ ಮನೆಗೆ ಬಂದು ಮಲಗಿದ್ದ ಗುರುನಾಥರು ಹೊರಡುವಾಗ ನನ್ನ ಪತ್ನಿಗೆ ಹಣ್ಣು ತಿನ್ನಿಸಿ "ತಾಯಿಯಾಗುವಿ" ಎಂದು ಹರಸಿ ಹೋದರು. ಅದು ಹಾಗೆಯೇ ನಡೆಯಿತು. ಇದಾದ ನಂತರ ಗರ್ಭಿಣಿಯಾದ ನನ್ನ ಹೆಂಡತಿಯೊಂದಿಗೆ ಸಖರಾಯಪಟ್ಟಣ ತಲುಪಿ ಗುರುಗಳ ಆಶೀರ್ವಾದ ಪಡೆಯಲು ಹೋದೆ. ನಮ್ಮನ್ನು ಉಪಚರಿಸಿದ ಗುರುಗಳು ನನ್ನ ಹೆಂಡತಿಗೆ ಒಂದು ಹೊದಿಕೆ ಹೊದಿಸಿ ಕಾರಿನಲ್ಲಿ ಕೂರಿಸಿ "ನೋಡಮ್ಮಾ ನಾನು ನಿನ್ನ ಜೊತೇಲೆ ಇರುತ್ತೇನೆ. ಹೋಗಿ ಬಾ" ಎಂದು ಹರಸಿ ಕಳುಹಿಸಿಕೊಟ್ಟರು.
ತುಸು ಹೊತ್ತಿನ ನಂತರ ನಿದ್ದೆಗೆ ಜಾರಿದ ನನ್ನ ಹೆಂಡತಿ ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಎಚ್ಚೆತ್ತವಳೇ "ಗುರುಗಳೆಲ್ಲಿ" ಎಂದು ಬಡಬಡಿಸತೊಡಗಿದಳು. ನಾನು ಅವರು ಊರಿನಲ್ಲಿದ್ದಾರೆ ಎನ್ನಲು ಆಕೆ "ಇಲ್ಲ... ಅವರು ಇಷ್ಟೊತ್ತೂ ನನ್ನ ಪಕ್ಕದಲ್ಲೇ ಕುಳಿತಿದ್ದರು" ಎಂದಳು ಬೆವರುತ್ತಾ...... ನನಗೊಂದೂ ಅರ್ಥವಾಗಲಿಲ್ಲ. ನಾನು ಆಕೆಯನ್ನು ತವರಿಗೆ ಬಿಟ್ಟು ವಾಪಸ್ಸಾದೆ.
ಮಗುವಿನ ಜನನದ ದಿನಾಂಕದಂದು ಗುರುವಿನ ಆಶೀರ್ವಾದ ಪಡೆದು ನಾನು ಶಿವಮೊಗ್ಗಕ್ಕೆ ಹೊರಟೆ. ಈ ಮಧ್ಯೆ ಹಿಂದಿನ ದಿನ ಸಂಜೆಯಿಂದ ನನ್ನ ಹೆಂಡತಿಗೆ ಹೊಟ್ಟೆನೋವು ನಿಂತು ಹೋಗಿತ್ತು. ಮರುದಿನ ಆಕೆಯನ್ನು ಪರೀಕ್ಷಿಸಿದ ವೈದ್ಯರು ಕರುಳ ಬಳ್ಳಿ ಮಗುವಿನ ಕುತ್ತಿಗೆಗೆ ಸುತ್ತಿಕೊಂಡಿದ್ದು ತಾಯಿ ಉಳಿಯಬೇಕೆಂದಲ್ಲಿ ಸತ್ತ ಮಗುವನ್ನು ತೆಗೆಯಬೇಕೆಂದು ತಿಳಿಸಿದರು.
ಇದರಿಂದ ಆಘಾತಗೊಂಡ ನಾನು ಗುರುಗಳಿಗೆ ಕರೆ ಮಾಡಿ ತಿಳಿಸಲು ಗುರುಗಳು "ಮಗು ಜೀವಂತವಿದೆ. ಇನ್ನೊಮ್ಮೆ ಪರೀಕ್ಷಿಸಲು ಹೇಳು" ಅಂದ್ರು. ನಂತರ ಪರೀಕ್ಷಿಸಿದ ವೈದ್ಯರು ಮಗು ಉಸಿರಾಡುತ್ತಿದೆ ಎಂದು ತಿಳಿಸಿ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರ ತೆಗೆದರು. ಆ ವೈದ್ಯರು "ನನ್ನ 45 ವರ್ಷದ ವೈದ್ಯಕೀಯ ಸೇವೆಯಲ್ಲಿ ಮಗುವೊಂದು ಗರ್ಭದೊಳಗೆ 14 ಘಂಟೆಗೂ ಹೆಚ್ಚು ಕಾಲ ಈ ಸ್ಥಿತಿಯಲ್ಲಿದ್ದು ಬದುಕಿ ಉಳಿದದ್ದು ಇದೇ ಮೊದಲು" ಎಂದು ಉದ್ಗರಿಸಿದರು. ಇಂದು ನನ್ನ ಮಗ ಆರನೇ ತರಗತಿ ಓದುತ್ತಿರುವನು ಎಂದು ಹೇಳಿ ಗುರುಕರುಣೆಯನ್ನು ನೆನೆದು ಮೌನವಾದರು......,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya gurugalaada venkatachala Avara Divya charanamruta galige nanna bhakti poorvaka namanagalu. Poojyare yellarigu manashanti haagu nemmadi honduvante asheervadisi swamy. Hari om tatsat.
ReplyDelete