ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 31
ಗುರುಸಾನಿಧ್ಯದ ವಿಶೇಷ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುನಾಥರೊಂದಿಗೆ ಅನೇಕ ಜನ ಭಕ್ತರು ಒಮ್ಮೆ ನಂಜನಗೂಡಿನ ನಂಜುಡೇಶ್ವರನನ್ನು ನೋಡಲು ಕಾರುಗಳಲ್ಲಿ ಹೊರಟರಂತೆ. ನಂಜುಂಡನಿಗೆ ಅರ್ಪಿಸಲು ಎಳನೀರು, ಹೂವು, ಹಣ್ಣು, ಹೀಗೆ ಎಲ್ಲ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ತೆಗೆದುಕೊಂಡಿದ್ದರು. ಗುರುನಾಥರಿಗೋ ವಿಶ್ವಬಾಂಧವ್ಯ. ನಂಜನಗೂಡನ್ನು ಸರಿ ಸಮಯದಲ್ಲಿ ತಲುಪುತ್ತೇವೆಯೋ - ಇಲ್ಲವೋ, ಇಷ್ಟು ಹೊತ್ತಿನ ಮೇಲೆ ನಂಜುಂಡೇಶ್ವರ ದೇವಾಲಯದ ಬಾಗಿಲು ತೆರೆದಿರುತ್ತದೆಯಾ - ಎಂಬೆಲ್ಲಾ ಚಿಂತೆ ಗುರುನಾಥರ ಜೊತೆಗಿರುವ ಕೆಲವು ಭಕ್ತರದ್ದಾಗಿತ್ತು.
ಗುರುಮನ ಮಾಡಿದರೆ ಆಗದ ಕಾರ್ಯ ಯಾವುದಿದೆ? ಆ ಭಾವನೆ ಮತ್ತೆ ಕೆಲವು ಭಕ್ತರಲ್ಲಿ, ಗುರುನಾಥರ ಭಕ್ತರದು ಇದೇ ವಿಶೇಷ.
ಸರಿ ಸುಮಾರು ರಾತ್ರಿ ಹನ್ನೊಂದು ಗಂಟೆಯಾಗಿದೆ. ಕಾರುಗಳು ನಂಜನಗೂಡಿನ ಕಡೆ ಓಡುತ್ತಿವೆ. ನಂಜನಗೂಡು ಇನ್ನೂ ಮೂರು ನಾಲ್ಕು ಮೈಲು ದೂರವಿರುವಾಗ, ಇವರ ಕಾರಿನ ಮುಂದೊಬ್ಬ ವಿಚಿತ್ರ ವ್ಯಕ್ತಿ ಬರುತ್ತಾರೆ. ಗುರುನಾಥರು ಎಲ್ಲರಿಗೂ ಕಾರನ್ನು ನಿಲ್ಲಿಸಲು ಹೇಳಿದರಂತೆ. ತಮ್ಮ ಶಿಷ್ಯರನ್ನು ಕುರಿತು "ನೀವು ತಂದಿರುವ ಹೂವು, ಹಣ್ಣು, ಎಳೆನೀರು, ವಸ್ತುಗಳನ್ನೆಲ್ಲಾ ಈ ವೃದ್ಧರಿಗೆ ಕೊಡಿ, ಭಕ್ತಿಯಿಂದ ನಮಸ್ಕರಿಸಿ" ಎಂದರು.
ಗುರುನಾಥರೆಂದ ಮೇಲೆ ಕೇಳಬೇಕೆ. ಎಲ್ಲ ಶಿಷ್ಯರೂ ಭಕ್ತಭಾವದಿಂದ ಎಲ್ಲವನ್ನು ಸಮರ್ಪಿಸಿ ಅಡ್ಡಬಿದ್ದರು. ಇದನ್ನೆಲ್ಲಾ ಸ್ವೀಕರಿಸಿ, ಪ್ರಸನ್ನಚಿತ್ತನಾದ ಆ ವ್ಯಕ್ತಿ ಅಲ್ಲಿಂದ ಕದಲಿದರು. ಕತ್ತಲೆಯಲ್ಲಿ ಕಣ್ಮರೆಯಾದರು.
"ಎಲ್ಲರೂ ಕಾರನ್ನು ವಾಪಸ್ ತಿರುಗಿಸಿ, ಊರ ಕಡೆ ನಡೆಯಿರಿ" ಎಂದರು ಗುರುಗಳು. ಕಾರುಗಳೆಲ್ಲಾ ಹಿಂತಿರುಗಿ ಪ್ರಯಾಣಿಸತೊಡಗಿದವು. ಸ್ವಲ್ಪ ದೂರ ಹೋದ ನಂತರ, ಒಬ್ಬರು ಮನದಲ್ಲಿ ಈ ರೀತಿ ಯೋಚಿಸಿ "ಗುರುಗಳೇ ಇಷ್ಟು ಹತ್ತಿರ ಬಂದು ನಂಜುಂಡೇಶ್ವರನನ್ನು, ದೇವಾಲಯವನ್ನು ನೋಡದೇ ವಾಪಸ್ ಬಂದು ಬಿಟ್ಟೆವಲ್ಲಾ" ಎಂದರಂತೆ.
ಗುರುಗಳು ಗಂಭೀರವಾಗಿ "ಈಗ ನೀವು ನೋಡಿದ್ದು ಯಾರನ್ನು... ನೀವೆಲ್ಲಾ ಹೂವು, ಹಣ್ಣು, ಎಳೆನೀರು ನೀಡಿ ನಮಸ್ಕರಿಸಿದ್ದು ಯಾರಿಗೆ? ಸಾಕ್ಷಾತ್ ನಂಜುಂಡೇಶ್ವರನೇ, ನಿಮಗೆ ಈ ಸಮಯದಲ್ಲಿ ದರ್ಶನ ನೀಡಿದ ಕಣ್ರಯ್ಯಾ" ಎಂದಾಗ, ಗುರುಸಾಮರ್ಥ್ಯ, ಗುರುಕರುಣೆ ತಮ್ಮ ಅದೃಷ್ಟಕ್ಕೆ ಎಲ್ಲಾ ಸಂತಸಪಟ್ಟರಂತೆ.
ನಾವಾದರೆ ಬರಿ ಕಲ್ಲಿನ ದೇಗುಲ, ಶಿವಲಿಂಗವನ್ನು ಮಾತ್ರ ನೋಡಿ ಬಂದುಬಿಡುತ್ತಿದ್ದೆವೇನೋ, ಗುರುನಾಥರು ಆ ಶಿವನನ್ನೇ ದರ್ಶನ ಮಾಡಿಸಿದ್ದರು. ಇದೆ ಅಲ್ಲವೇ ಗುರುಸಾನ್ನಿಧ್ಯ.
ಗುರು ನಮಗರಿವಾದರೆ ?
ಗುರುನಾಥರ ನಿರಂತರ ಸತ್ಸಂಗದಲ್ಲಿದ್ದ ಭಕ್ತರೊಬ್ಬರು ಗುರುನಾಥರ ಬಗ್ಗೆ ಚಿಂತಿಸುವುದು ಈ ರೀತಿಯಲ್ಲಿ. "ಗುರು ಸುಲಭ ಸಾಧ್ಯನಲ್ಲ, ಅಪರಂಪಾರನಾದ ಆತನನ್ನು ನಾವು ಅರಿತಿದ್ದೇವೆ, ಹಿಡಿದುಕೊಂಡಿದ್ದೇವೆ ಎನ್ನುವುದೇ ಒಂದು ದೊಡ್ಡ ಮೂಢತನ. ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿ ಗೋಕುಲದಲ್ಲಿ ಬೆಳೆದು, ಮಥುರೆಯಲ್ಲಿ ಬಾಳಿದ. ಆತನೊಂದಿಗಿದ್ದ ಕೋಟ್ಯಾಂತರ ಜನರಲ್ಲಿ ಅದೆಷ್ಟು ಜನರಿಗೆ ಆತ "ಪರಮಾತ್ಮ" ನೆಂಬ ಅರಿವು ಬಂದಿತ್ತು? ಸದ್ಗುರುನಾಥರೂ ಹೀಗೆಯೇ. ಆ ಕಪಟನಾಟಕ ಸೂತ್ರಧಾರಿ ಮಾಯಾಜಾಲವನ್ನು ಬೀಸಿ - ತನ್ನನ್ನು ಸಾಮಾನ್ಯರು ಅರಿಯದಂತೆ ಮಂಕು ಹಿಡಿಸಿದ್ದನೋ, ಅಥವಾ ಸುತ್ತಮುತ್ತಲಿನವರ ಕರ್ಮಾ ಕಳೆದಿರಲಿಲ್ಲವೋ, ಅಥವಾ ಅವರು ಕೃಷ್ಣನ ಮಟ್ಟಕ್ಕೆ ಏರಲಾರದವರಾಗಿದ್ದು- ಕೃಷ್ಣನನ್ನೂ ತಮ್ಮ ಮಟ್ಟಕ್ಕೆ ಇಳಿಸಿಕೊಂಡು ಸಾಮಾನ್ಯ ಮಾನವನಂತೆ ಕಂಡರೋ? ಇಲ್ಲಿಯೂ ಗುರುನಾಥರನ್ನರಿತವರೇ ವಿರಳ. ಬಹಳಷ್ಟು ಜನ ಅವರೂ ಎಲ್ಲರಂತೆ ಒಬ್ಬ ಸಹಜ ಮನುಷ್ಯರೆಂದು ಸುಮ್ಮನಿದ್ದುಬಿಟ್ಟರು. ಎಲ್ಲೋ ಕೆಲವರಿಗೆ, ಭಗವಂತನ ಅವತಾರವೇ ಇವರೆಂಬ ಭಾವ ಬಂದರೂ, ಸಾಮಾನ್ಯವಾದ ಮಾಯೆಯ ಮುಸುಕಿಗೆ ಒಳಗಾದರೋ, ಅಥವಾ ಕರ್ಮ ಅವರದಿನ್ನೂ ಬಾಕಿ ಉಳಿದಿತ್ತೋ - ಹತ್ತಿರ ಬಂದೂ ದೂರ ನಿಂತಿರಬಹುದು. ಬೆರಳೆಣಿಕೆಯವರಿಗೆ ಅಗ್ನಿಸ್ವರೂಪದ ಗುರುನಾಥರು ಆ ಭಕ್ತರ ಕರ್ಮಗಳನ್ನು ದಹಿಸಿ ಪುನೀತ ಮಾಡಿ ಉದ್ಧರಿಸಿದ್ದಾರೆ.
"ಈ ಎಲ್ಲಾ ದೊಡ್ಡ ವಿಚಾರಗಳು ಒಂದೆಡೆ ಇದ್ದರೂ - ದರ್ಶನ, ಸ್ಪರ್ಶ, ಸಹವಾಸ, ಕರುಣಾದೃಷ್ಟಿ, ಸತ್ಸಂಗಗಳು ಗುರುನಾಥರಿಂದ ಪಡೆದ ನಾವೆಲ್ಲಾ ಅಷ್ಟುಮಟ್ಟಿಗೆ ಧನ್ಯರೆಂಬ ಸಮಾಧಾನ ಒಂದೇ ನಮಗೆ ಬೇಕಿರುವುದು" ಎನ್ನುತ್ತಾರೆ.
ಪ್ರಿಯ ಸತ್ಸಂಗಿ ಮಹಾನುಭಾವರೇ.... ಗುರುನಾಥರ ವಿಚಾರ ಒಂದಕ್ಕಿಂತ ಒಂದು ಮಿಗಿಲಾದ ವಿಷಯಗಳನ್ನೇ ಬಿಚ್ಚಿಡುತ್ತಿದೆ. ಅವರನ್ನು ಅಂದು ಕಾಣಲಾಗದವರಿಗೂ ಈ ಸತ್ಸಂಗ ಕಿಂಚಿತ್ತಾದರೂ ಮಾರ್ಗದರ್ಶಿಸಿದರೆ ನಿತ್ಯ ಸತ್ಸಂಗ ಸಾರ್ಥಕ. ನಾಳೆಯೂ ನಮ್ಮೊಂದಿಗೆ ಇರುವಿರಲ್ಲವೇ....

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment