ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 59
ಗ್ರಂಥ ರಚನೆ - ಚರಣದಾಸ
ನೆಮ್ಮದಿ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಮ್ಮೆ ವಿಧಿಯಾಟದ ಕುರಿತು ಹೇಳುತ್ತಾ:
"ಭಗವಂತ ಎಲ್ಲಾ ನೀಡಿ ಕೈಗೆ ಸಿಗದಂತೆ, ಅನುಭವಿಸದಂತೆ ಮಾಡ್ತಾನಲ್ಲಾ ಯಾಕೆ ಹೀಗೆ?" ಎಂದು ಪ್ರಶ್ನಿಸಿದ್ರು.
ಮತೊಮ್ಮೆ ಸಂಸ್ಕಾರದ ಬಗ್ಗೆ ಮಾತಾಡ್ತಾ "ಗಂಡು ಹೆಣ್ಣು ಒಪ್ಪಿ ಮದ್ವೆ ಆಗಿ ಸಂಸಾರ ನಡೆಸಿದ್ರೂ ಕೂಡಾ ಪರಸ್ಪರರ ಮೇಲೆ ಗೌರವ-ನಂಬಿಕೆ-ಪ್ರೀತಿ ಕಡಿಮೆ ಆಗುತ್ತಲ್ಲಾ ಯಾಕೆ ಹೀಗೆ?
ಅದೇ ಬೆರಿಯವರು, ಗಂಡ ಅಥವಾ ಹೆಂಡತಿಯ ಒಳ್ಳೆಯ ಗುಣದ ಬಗ್ಗೆ ಹೊಗಳಿದ್ರೆ ಆ ಕ್ಷಣ ಅಭಿಮಾನ ಬಂದ್ರೂ, ಮತ್ತೆ ಎದುರು-ಬದುರಾದಾಗ ಅದೇ ಅಭಿಮಾನ ಇರೋದಿಲ್ವಲ್ಲಾ... ಏನಿದು ಭಗವಂತನ ಲೀಲೆ? ದೇಹ ಸನಿಹವಾದ್ರೂ ಮನಸ್ಸುಗಳೇಕೆ ಬೇರೆಯೋಲ್ಲ?
ಎರಡು ಮನಸ್ಸುಗಳು ಒಂದಾಗುವಿಕೆಯನ್ನು ಮದುವೆ ಅಂತಾರೆ ಕಣಯ್ಯಾ....
ಹಾಗಾದ್ರೆ ಇಲ್ಲಿ ಪರಸ್ಪರರ ದೋಷಗಳೇನು? ಹುಡುಕಬೇಕಲ್ವೇ..?" ಎಂದು ನುಡಿಯುತ್ತಿದ್ದರು. ಮತ್ತೊಮ್ಮೆ ಗಂಡು-ಹೆಣ್ಣು ಪುರುಷ-ಪ್ರಕೃತಿ ಒಂದಾದಂತಷ್ಟೆಯೇ... ಅಲ್ಲಿ ಯಾರೂ ಹೆಚ್ಚಲ್ಲ, ಕಡಿಮೆಯೂ ಅಲ್ಲ. ಯಾರು ಯಾರಿಗೂ ಗುಲಾಮರಲ್ಲ. ಆದ್ರೆ ಪರಸ್ಪರ ಗೌರವ ಆದರವಿಟ್ಟು ಸ್ನೇಹಿತರಾಗಿ ಬಾಳಬೇಕಾದ್ದು ಧರ್ಮ. ಅದು ನಮ್ಮ ಹೆತ್ತವರಿಗೆ ನಾವು ಕೊಡುವ ಗೌರವ ವಂದನೆ ಹಾಗೂ ಮುಂದಿನ ಪೀಳಿಗೆಗೆ ಪಥ ನಿರ್ಮಾಣ ಮತ್ತು ಸಮಾಜಕ್ಕೆ ಮಾದರಿ ಅಷ್ಟೇ......
ಮತ್ತೂ ಮುಂದುವರೆದು ಅಯ್ಯಾ... ಹಣವಿದ್ದೋರೆಲ್ಲಾ ನೆಮ್ಮದಿಯಾಗಿ ಸಂಸಾರ ಮಾಡ್ತಾರೆ ಅನ್ನೋದು ನಮ್ಮ ಭ್ರಮೆ. ಜೀವನದ ದೋಣಿ ಸಾಗೋಕೆ ಬೇಕಾಗಿದ್ದು ಪರಸ್ಪರರಲ್ಲಿ ಗೌರವ-ಪ್ರೀತಿ ಹಾಗೂ ಸಹನೆ ಅಷ್ಟೇ.. ಹಣ ಜೀವನಾವಶ್ಯಕವಾಗಿರಬೇಕೇ ವಿನಃ ಅದುವೇ ಜೀವನವಾಗಬಾರದು ಅಲ್ವೇ? ... ಎಂದು ಪ್ರಶ್ನಿಸಿ, ಹಣ-ಅಂತಸ್ತಿನ ಬಗ್ಗೆ ನಮಗಿದ್ದ ಭ್ರಮೆಯನ್ನು ಮಟ್ಟ ಹಾಕಿ ಬಿಡುತ್ತಿದ್ದರು.
ಹೇಗೆ ಒಂದೇ ಬಸ್ಸಲ್ಲಿ ಭಿನ್ನ ಜನರು ಒಂದಾಗಿ ಕಲೆತು ಒಟ್ಟಾಗಿ ಸಾಗಿ ತಮ್ಮ ತಮ್ಮ ಸ್ಥಳ ಬಂದಾಗ ಇಳಿದು ಹೋಗ್ತೀವೋ... ಹಾಗೇ ನಮ್ಮ ಜೀವನ.. ಎಂದು ಹೇಳಿ ಸಂಸಾರದ ಬಗೆಗಿನ ನಮ್ಮ ತಪ್ಪು ಕಲ್ಪನೆಗಳನ್ನಳಿಸಿ ಬಿಡುತ್ತಿದ್ದರು.
ಹೀಗೆ ನೆಮ್ಮದಿ, ಆನಂದ ಎಂಬುದು ಒಳಗೆ ಹುಡುಕಬೇಕಾದ ವಿಚಾರವೇ ವಿನಃ ಬಾಹ್ಯದಲ್ಲಲ್ಲ. ನಮ್ಮ ಮನಸ್ಥಿತಿ ಸರಿ ಇದ್ರೆ ಎಂತಾ ಪರಿಸ್ಥಿತಿಯನ್ನೂ ಗೆಲ್ಲಬಹುದು. ಆದ್ರೆ ನಮ್ಮ ಮನಸ್ಥಿತಿಯೇ ಸರಿ ಇಲ್ಲದಿದ್ರೆ... ? ಇಲ್ಲಿ ಬದಲಾಗಬೇಕಾದ್ದು ನಮ್ಮ ಮನಸ್ಥಿತಿ, ದೃಷ್ಟಿಕೋನ ಅಲ್ವೇ... ? ......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment