ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 88
ಗ್ರಂಥ ರಚನೆ - ಚರಣದಾಸ
ತಲೆದಿಂಬು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುವೆಂದರೆ ಕೇವಲ ಆಧ್ಯಾತ್ಮವೆಂದರ್ಥ ಮಾತ್ರವಲ್ಲ. ಆತ ಬದುಕಿನ ದಾರಿದೀಪ. ಜೀವನದಲ್ಲಿ ಬಸವಳಿದು ಬಂದ ಭಕ್ತರ ಪಾಲಿನ ಸಂಜೀವಿನಿ.
ಒಮ್ಮೆ ಗುರುನಾಥರು ತಮ್ಮ ಹೊಸ ಮನೆಯ ಮುಂಭಾಗದಲ್ಲಿ ಕುಳಿತಿದ್ದರು. ಎಂದಿನಂತೆಯೇ ಜನಜಂಗುಳಿ ಇದ್ದಿತು.
ಆಗ ಸುಮಾರು 45-50 ರ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ಬಂದು ಗುರುನಾಥರಿಗೆ ನಮಸ್ಕರಿಸಿ ಕುಳಿತರು.
ಗುರುನಾಥರು ಎಂದಿನಂತೆ "ಏನಾಗಬೇಕು ನನ್ನಿಂದ?" ಎಂದು ಪ್ರಶ್ನಿಸಲು ಆತ ಹೀಗೆ ಹೇಳತೊಡಗಿದನು.
"ಸ್ವಾಮಿ ನನ್ನ ಕಣ್ಣುಗಳು ಇದ್ದಕ್ಕಿದ್ದಂತೆಯೇ ಮಂಜಾಗಿ, ದೃಷ್ಠಿ ಸರಿಯಾಗಿ ಕಾಣುತ್ತಿಲ್ಲ. ಕಳೆದ 5-6 ತಿಂಗಳಿನಿಂದ ನನಗೆ ಗೊತ್ತಿರುವ ಎಲ್ಲಾ ವೈದ್ಯರಲ್ಲೂ ಪರೀಕ್ಷಿಸಿಯಾಯಿತು. ಅಲ್ಲಿ ಯಾವುದೇ ಸಮಸ್ಯೆಗಳು ಇಲ್ಲವೆಂದರು. ಏನಾದರೂ ಆಗಲಿ ಎಂದು ಜ್ಯೋತಿಷ್ಯ, ಶಾಸ್ತ್ರ, ಹೋಮ-ಹವನಗಳೆಲ್ಲವನ್ನೂ ಮಾಡಿಸಿಯಾಯ್ತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಯಾರೋ ತಮ್ಮ ಬಗ್ಗೆ ಹೇಳಿದರು. ಈಗ ಕೊನೆಯ ಪ್ರಯತ್ನವಾಗಿ ಇಲ್ಲಿಗೆ ಬಂದಿರುವೆ" ಎಂದನು.
ಆಗ ಗುರುನಾಥರು "ಈಗ ನನ್ನನ್ನು ಪರೀಕ್ಷಿಸಲು ಬಂದ್ರೆ ಏನು ಪ್ರಯೋಜನ? ನಿಂಗೆ ನಂಬಿಕೆ ಇದ್ರೆ ಔಷಧಿ ನೀಡುತ್ತೇನೆ ತಿಳೀತಾ?" ಎನ್ನಲು ಆತ ಆಗಬಹುದೆಂದನು.
ಮಾತ್ರವಲ್ಲ ಗುರುನಾಥರಿಗೆ ಕೈಮುಗಿದು ಬೆನ್ನು ತೋರಿಸದಂತೆ ಹಿಮ್ಮುಖವಾಗಿ ಕೆಲ ಹೆಜ್ಜೆ ನಡೆದು ನಿಂತುಕೊಂಡನು.
ಆಗ ಗುರುನಾಥರು "ಯಾಕೆ ಹಿಮ್ಮುಖವಾಗಿ ನಡೆದೆ " ಎಂದು ಪ್ರಶ್ನಿಸಲು
ಆತ ಸ್ವಾಮಿ ನಾನು ಈವರೆಗೆ ಯಾವ ಪೀಠಾಧಿಪತಿ ಸನ್ಯಾಸಿಗಳನ್ನು ದರ್ಶನ ಪಡೆದ ಮೇಲೆ ಎಂದೂ ಅವರಿಗೆ ನನ್ನ ಬೆನ್ನು ತೋರಿಸಿಲ್ಲ" ಎಂದನು.
ಆಗ ಗುರುನಾಥರು ತನ್ನ ಪಕ್ಕದಲ್ಲಿದ್ದ ವ್ಯಕ್ತಿಯನ್ನು ಕರೆದು ಒಂದು ದಿಂಬನ್ನು ಅವರ ಕೈಗೆ ನೀಡಿ, ಆ ಮಧ್ಯ ವಯಸ್ಕನನ್ನು ಕುರಿತು, "ಅಯ್ಯಾ ಈ ವ್ಯಕ್ತಿಯ ಜೊತೆ ಕೆಳಗೆ ಹೋಗು. ಅಲ್ಲಿ ಒಂದು ಅರಳೀ ಮರದ ಸಮೀಪ ನೀನು ಹೋದ ಕೂಡಲೇ ಹಣ್ಣಾದ ಐದು ಅರಳೀ ಎಲೆಗಳು ಉದುರಿ ಬೀಳುವವು. ಅವನ್ನು ತೆಗೆದುಕೊಂಡು ಬಾ. ಆದರೆ ಈ ತಲೆದಿಂಬನ್ನು ಮಾತ್ರ ಕೈ ಬಿಡಬೇಡ. ಬಿಟ್ಟರೆ ಮುಂದೆ ನನಗೆ ಗೊತ್ತಿಲ್ಲ ಎಚ್ಚರ, ಎಚ್ಚರ" ಎಂದರು.
ಆ ಮಧ್ಯವಯಸ್ಕ ಹಿಡಿದ ಆ ವ್ಯಕ್ತಿಯೊಂದಿಗೆ ಈಶ್ವರ ದೇಗುಲದ ಮಂದಿರವಿರುವ ಅರಳೀ ಮರದ ಬಳಿ ಬಂದೊಡನೆ ಗುರುನಾಥರು ಹೇಳಿದಂತೆಯೇ ಸರಿಯಾಗಿ ಐದು ಹಣ್ಣಾದ ಅರಳೀ ಎಲೆಗಳು ಕೆಳಗೆ ಬಿದ್ದವು. ಅವನ್ನು ಜೋಪಾನವಾಗಿ ಆಯ್ದುಕೊಂಡ ಆತ ನೇರವಾಗಿ ಬಂದು ಗುರುನಾಥರ ಮುಂದೆ ನಿಂತರು.
ಆಗ ಗುರುನಾಥರು "ಇನ್ನು ನಿನ್ನ ಕಣ್ಣಿನ ಸಮಸ್ಯೆ ಪರಿಹಾರವಾಯಿತೆಂದು ತಿಳಿ". ನೀನು ಪ್ರತಿದಿನ ಮಲಗುವ ದಿಂಬಿನ ಕೆಳಗೆ ಇದನ್ನಿಟ್ಟು ಅಲ್ಲಿಯೇ ಮಲಗಿದರೆ ಸಾಕು ನಿನ್ನ ಖಾಯಿಲೆ ವಾಸಿಯಾಗುವುದು" ಎಂದರು.
ಆತ "ಸ್ವಾಮಿ ನನ್ನ ಕಣ್ಣಿಗೆ ಉಂಟಾದ ಸಮಸ್ಯೆಯಾದರೂ ಏನು?" ಎಂದು ಕೇಳಿದನು.
ಅದಕ್ಕೆ ಗುರುನಾಥರು "ಅಯ್ಯಾ ನಿನಗೆ ಆಗಾಗ್ಗೆ ಮೊಣಕಾಲು ಗಂಟು ನೋವು ಬರುತ್ತೆ ಅಲ್ವೇ?" ಅಂದ್ರು. ಅದಕ್ಕೆ ಆತ ಹೂಂ... ಎಂದರು.
ಗುರುನಾಥರು "ಅಯ್ಯಾ ನಿನ್ನ ಹೃದಯಕ್ಕೆ ರಕ್ತ ಸಂಚಾರವಾಗುವಾಗ ಕೆಲವೊಮ್ಮೆ ಶುದ್ಧವಾಗದ ರಕ್ತ ನೇರವಾಗಿ ಹೃದಯಕ್ಕೆ ಚಲಿಸುತ್ತಿದ್ದು, ಅದೇ ಅಶುದ್ಧ ರಕ್ತ ನೇತ್ರಗಳ ಸಮೀಪ ಬಂದಾಗ ಕಣ್ಣು ಮಂಜಾಗುವುದು, ಮೊಣಕಾಲು ಬಳಿ ಸಂಚರಿಸಿದಾಗ ಕಾಲು ನೋವಾಗುತ್ತಿತ್ತು ಅಷ್ಟೇ..... ಇನ್ನು ನಿನಗೆ ಈ ಸಮಸ್ಯೆ ಬಾಧಿಸುವುದಿಲ್ಲ" ಎಂದರು. ಆ ವ್ಯಕ್ತಿ ಧನ್ಯತೆಯ ಭಾವದಿಂದ ನಮಸ್ಕರಿಸಿ ಅಲ್ಲಿಂದ ತೆರಳಿದನು. ಗುರು ವಾಕ್ಯದಂತೆಯೇ ಮುಂದೆ ಆತನ ಸಮಸ್ಯೆ ಪರಿಹಾರವಾಯಿತು.........,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya venkatachala swamy Avara Divya paadagalige nanna bhakti poorvaka namanagalu. Yellarigu e kantaka dinda mukthi kottu manashanti honduvante asheervadisi Guruvarya. Hari om tatsat.
ReplyDelete