ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 80
ಗ್ರಂಥ ರಚನೆ - ಚರಣದಾಸ
ಪ್ರಕೃತಿ ನಿಯಂತ್ರಕ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಜಗದ್ವಿಖ್ಯಾತ ಅದ್ವೈತ ಪೀಠದ ಮೇಲೆ ಅಪಾರ ಭಕ್ತಿ ಹಾಗೂ ಪ್ರೀತಿ ಇದ್ದ ಗುರುನಾಥರು ಸದಾ ಅಲ್ಲಿಗೆ ಹೋಗಿ ಬರುತ್ತಿದ್ದರು. ಮಾತ್ರವಲ್ಲ ಗುರುನಿವಾಸಕ್ಕೆ ಬಂದವರನ್ನೂ ದರ್ಶನಕ್ಕಾಗಿ ಅಲ್ಲಿಗೆ ಕಳಿಸುತ್ತಿದ್ದರು. ಆ ಪೀಠಾಧಿಪತಿಗಳಿಗೂ ಗುರುನಾಥರ ಮೇಲೆ ಹಾಗೂ ಗುರು ಭಕ್ತರ ಮೇಲೆ ವಿಶೇಷ ಪ್ರೀತಿ ಅಭಿಮಾನವಿತ್ತು. ಶ್ರೀ ಮಠದ ಪ್ರತಿ ಆಗು-ಹೋಗುಗಳ ಬಗ್ಗೆಯೂ ಗುರುನಾಥರು ಸೂಕ್ಷ್ಮ ಗಮನವಿಟ್ಟಿರುತ್ತಿದ್ದರು.
ಒಮ್ಮೆ ಶ್ರೀ ಮಠದ ಗಂಡಾನೆಯೊಂದು ವಿಪರೀತ ಮದವೇರಿ ಸೇತುವೆ ಮಧ್ಯದಲ್ಲಿ ಮಲಗಿಬಿಟ್ಟಿತು. ಇದನ್ನು ತಿಳಿದ ಗುರುನಾಥರು ಗುರುಭಕ್ತರೋರ್ವರ ಕೈಯಲ್ಲಿ ಒಂದು ವಸ್ತುವನ್ನು ಕಳಿಸಿ ಮದವೇರಿದ ಆ ಆನೆಯ ಮೇಲೆ ಎರಚುವಂತೆ ತಿಳಿಸಿದರು. ಹಾಗೆ ಮಾಡಿದ ಕೆಲ ಹೊತ್ತಿನಲ್ಲಿ ತಣ್ಣಗಾದ ಆನೆ ಮಾವುತನ ಹಿಡಿತಕ್ಕೆ ಬಂತು.
ಮತ್ತೊಮ್ಮೆ ಕೆಲ ದಿನಗಳ ನಂತರ ಅದೇ ಆನೆ ತನ್ನನ್ನು ಕಟ್ಟಿದ ಸರಪಳಿಯನ್ನು ಕಿತ್ತುಕೊಳ್ಳಲು ಹವಣಿಸುತ್ತಾ ವಿಪರೀತವಾಗಿ ಘೀಳಿಡತೊಡಗಿತು.
ಇದನ್ನು ತಿಳಿದ ಗುರುನಾಥರು ಚರಣದಾಸನಾದ ನನ್ನನ್ನು ಕರೆದು ಸ್ವಲ್ಪ ಅರಿಶಿನ ಕುಂಕುಮವನ್ನು ನೀಡಿ, "ಇದನ್ನು ಆ ಆನೆಯ ಮೇಲೆ ಎರಚು, ಭಯಪಡಬೇಡ. ಅಡನು ನಿನಗೇನೂ ಮಾಡಲ್ಲ" ಎಂದು ಹೇಳಿ ನನ್ನನ್ನು ಕಳಿಸಿಕೊಟ್ಟರು.
ಶ್ರೀ ಮಠವನ್ನು ತಲುಪಿದ ನಾನು ನೇರವಾಗಿ ಆನೆಯ ಲಾಯದ ಸಮೀಪ ತಲುಪಿ ಮಾವುತನಿಗೆ ನಾನು ಬಂಡ ಉದ್ದೇಶ ತಿಳಿಸಿ ಆನೆಯ ಸಮೀಪ ಹೋದೆ. ವಿಪರೀತವಾಗಿ ಘೀಳಿಡುತ್ತಾ ಕುಣಿಯುತ್ತಿದ್ದ ಆ ಆನೆಯತ್ತ ಗುರುನಾಥರು ಕೊಟ್ಟ ಅರಿಶಿನ ಕುಂಕುಮವನ್ನು ಭಯ ಪಡುತ್ತಲೇ ಎರಚಿದೆ. ಅದಾಗಿ ಕೆಲವೇ ನಿಮಿಷಗಳಲ್ಲಿ ಆನೆ ತಣ್ಣಗಾಯಿತು.
ಮತ್ತೊಮ್ಮೆ ವಿಪರೀತ ಮಳೆಯಿಂದಾಗಿ ಭೋರ್ಗರೆದು ಹರಿಯುತ್ತಿದ್ದ ತುಂಗೆ ಅಪಾಯದ ಮಟ್ಟವನ್ನು ಮೀರಿ ಹರಿಯಲಾರಂಭಿಸಿತ್ತು. ಶ್ರೀಮಠದ ಸಮೀಪದಲ್ಲಿ ನೆಲೆಸಿದ್ದ ಭಕ್ತರಿಂದ ವಿಷಯ ತಿಳಿದ ಗುರುನಾಥರು ತುಂಗಾನದಿಗೆ ಏನನ್ನೋ ಹಾಕಿ ಆರತಿ ಮಾಡಲು ಹೇಳಿದರು. ಅದಾಗಿ ಕೆಲವೇ ನಿಮಿಷದಲ್ಲಿ ತುಂಗೆಯು ಐದು ಅಡಿ ಕೆಳಗಿಳಿದು ಹರಿಯಲಾರಂಭಿಸಿದಳು.
"ಬೇಕೆಂದಾಗ ಮಳೆ ಹರಿಸಿ ಬೆಲೆ ಬೆಳೆಸುತ್ತಿದ್ದ, ಬೇಡೆಂದಾಗ ನಿಯಂತ್ರಿಸುತ್ತಿದ್ದ ಜಗನ್ನಿಯಾಮಕನ ಇಂಥ ಲೀಲೆಗಳು ಅದೆಷ್ಟೋ....".....,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya Guruvarya nimma aashirvaada haagu rakshe sadaa yellara mele erali haagu nimma aashirvaada sadaa yellara mele erali. Sarve jano sukinobavantu.
ReplyDelete