ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 79
ಗ್ರಂಥ ರಚನೆ - ಚರಣದಾಸ
ಸದ್ಗುರುವಿನ ಪಾದ ಸ್ಪರ್ಶವಾದರೆ ಬರಡು ಭೂಮಿಯಲ್ಲೂ ಫಸಲು ಬೆಳೆಯುವುದು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಮ್ಮೆ ಗುರುನಾಥರು ಬೆಂಗಳೂರಿನ ಕೆಲ ಭಕ್ತರೊಡನೆ ನನ್ನನ್ನು ತಮಿಳುನಾಡಿನ ಓರ್ವ ಸಾಧಕರ ಸಮಾಧಿ ದರ್ಶನಕ್ಕೆಂದು ಕಳಿಸಿದರು.
ಅಲ್ಲಿನ ಸಾಧಕರು ಸಜೀವ ಸಮಾಧಿಯಾಗಿದ್ದು ತನ್ನ ಸಮಾಧಿಯ ಮೇಲೆ ತನ್ನ ಅಪೇಕ್ಷೆಯ ಮೇರೆಗೆ ಒಂದು ಬೇವಿನ ಮರವನ್ನು ನಡೆಸಿದ್ದು ಅದು ದೊಡ್ಡ ಮರವಾಗಿ ಬೆಳೆದಿದೆ. ಅಂದು ನಾವು ದರ್ಶನಕ್ಕೆ ಹೋದಾಗ, ಆ ಬೇವಿನ ಮರ ಬಾಡಲಾರಂಭಿಸಿತ್ತು. ಮತ್ತೊಮ್ಮೆ ಗುರುನಾಥರ ಅಣತಿಯಂತೆ ಅಲ್ಲಿಗೆ ಹೋಗಿದ್ದ ಶಿಷ್ಯರಿಗೆ ಅಲ್ಲಿನ ಪೂಜಾರಿಯು, ಬೇವಿನ ಮರ ಒಣಗಿ ಹೋಗಿದ್ದನ್ನು ತೋರಿಸಿ, ಗುರುನಾಥರ ಕೃಪೆಯಿಂದ ಆ ಮರ ಮತ್ತೆ ಚಿಗುರುವಂತೆ ಮಾಡಬೇಕೆಂದು ತಿಳಿಸಿದರು.
ಇದನ್ನು ತಿಳಿದ ಗುರುನಾಥರು ಅದೇ ಭಕ್ತರ ಕೈಯಲ್ಲಿ ಕೆಲ ವಸ್ತುಗಳನ್ನು ನೀಡಿ ಅದನ್ನು ಬಾಡಿದ್ದ ಆ ಮರದ ಬುಡದಲ್ಲಿ ಇಡಬೇಕೆಂದೂ, ಆ ಮರ ಚಿಗುರುವುದೆಂದೂ ತಿಳಿಸಿದರು. ಆ ಭಕ್ತರು ಹಾಗೆಯೇ ಮಾಡಿ ಬಂದರು. ಮತ್ತೊಮ್ಮೆ ಆ ಭಕ್ತರು ಅಲ್ಲಿಗೆ ಹೋದಾಗ ಅಲ್ಲಿನ ಪೂಜಾರಿಯು ಸಂತೋಷದಿಂದ ಆ ಮರ ಮತ್ತೆ ಚಿಗುರಿದ ವಿಷಯವನ್ನು ತಿಳಿಸಿದರು.
ವಿಖ್ಯಾತ ಅದ್ವೈತ ಪೀಠದ ಯತಿವರೇಣ್ಯರು ಗುರುನಿವಾಸಕ್ಕೆ ಪ್ರತಿ ವರುಷಕ್ಕೆ ಒಂದು ಬಾರಿ ಬಂದು ಹೋಗುವ ಸಂಪ್ರದಾಯವಿತ್ತು. ಗುರುನಿವಾಸದಲ್ಲಿನ ವ್ಯವಸ್ಥೆಯ ಬಗ್ಗೆ ತಿಳಿಯಲು ಗುರುನಿವಾಸಕ್ಕೆ ಬಂಡ ಪೀಠದ ಪ್ರತಿನಿಧಿಗಳು ಕೆಲ ವಿಚಾರಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಿದರು. ಮಾತ್ರವಲ್ಲ ಭಾರಿ ಪ್ರಮಾಣದ ಬಿಲ್ವಪತ್ರೆ ಬೇಕು ಎಂದು ತಿಳಿಸಲು ಗುರುನಾಥರು "ನಾನು ಈಶ್ವರೇಚ್ಛೆಯಿಂದ ಕಿತ್ತ ಬಿಲ್ವಪತ್ರೆಯನ್ನು ಮತ್ತೆ ಜೋಡಿಸುವೆ. ನಿಮ್ಮಿಂದ ಸಾಧ್ಯವೇ?" ಎಂದು ಸವಾಲು ಹಾಕಿದರು.
ಮಾತ್ರವಲ್ಲ "ಇದು ನನ್ನ ಮನೆ ಅಲ್ಲ ಕಣ್ರಪ್ಪ. ಗುರುವಿಗೆ ಸೇರಿದ್ದು. ಅವನಿಗಿಚ್ಛೆ ಇದ್ರೆ ಬರಬಹುದು" ಎಂದು ಕಠೋರವಾಗಿ ನುಡಿದರು. ಇವರ ಉಗ್ರತೆಯನ್ನು ಕಂಡ ಪೀಠದ ಪ್ರತಿನಿಧಿಗಳು ಮರುಮಾತನಾಡದೇ ಅಲ್ಲಿಂದ ತೆರಳಿದರು. ನಂತರ ಪೀಠಾಧಿಪತಿಗಳು ಅಲ್ಲಿಗೆ ಬಂದು ಹೋಗಿದ್ದು ಇತಿಹಾಸ.
ಚಲನಚಿತ್ರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಆಡಿಯೋ ಕಂಪೆನಿಯ ವ್ಯಕ್ತಿಯೋರ್ವರು ಇದ್ದಕ್ಕಿದ್ದಂತೆ ಹಾಸಿಗೆ ಹಿಡಿದರು. ಸಿರಿವಂತರಾದ ಅವರನ್ನು ನಗರದ ಖ್ಯಾತ ವೈದ್ಯರಲ್ಲಿ ತೋರಿಸಿದಾಗಿಯೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ವಿಷಯ ತಿಳಿದ ಗುರುನಾಥರು "ಅವರು ಇಂಥ ರೂಮಿನಲ್ಲಿ ಇಂಥ ದಿಕ್ಕಿನಲ್ಲಿ ಮಲಗಿದ್ದಾರೆ ಅಲ್ಲವೇ? ಅವರ ತಲೆ ಬುಡದಲ್ಲಿರುವ ಫ್ಯಾನ್ ನ ಬೋಲ್ಟ್ ಲೂಸ್ ಆಗಿದೆ. ಅದನ್ನು ಸರಿಪಡಿಸಿ, ಅವರ ಆರೋಗ್ಯವು ಸರಿ ಆಗುವುದು" ಎಂದರು. ಅಂತೆಯೇ ಮಾಡಲು ಸುಮಾರು ಒಂದು ತಿಂಗಳಿಂದ ಯಾವುದೇ ಔಷಧೋಪಚಾರಕ್ಕೂ ಪ್ರತಿಕ್ರಿಯಿಸದ ಆ ವ್ಯಕ್ತಿ ಎದ್ದು ಓಡಾಡಲಾರಂಭಿಸಿದರು.
ತಮಿಳುನಾಡಿನ ಸರ್ಕಾರದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿಯೋರ್ವರ ಮಗುವೊಂದು ವಿಪರೀತ ಹಠಮಾರಿತನ ಸಿಟ್ಟಿನಿಂದ ಕೂಡಿದ್ದು ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಹರಿದು ಎಸೆಯುತ್ತಿತ್ತು. ಅದನ್ನು ನಿಯಂತ್ರಿಸುವುದು ಪೋಷಕರಿಗೆ ದುಸ್ತರವಾಗಿತ್ತು.
ಬೇರೆ ದಾರಿ ಕಾಣದೆ ಅವರು ಮಗುವಿನೊಂದಿಗೆ ಗುರುನಿವಾಸಕ್ಕೆ ಬಂದರು. ಆಗ ಬೆಳಿಗ್ಗೆ ಎಂದಿನಂತೆ ನಾನು ಗುರುನಾಥರ ಅಣತಿಯಂತೆ ಮಲ್ಲಿಗೆ ಹೂವನ್ನು ಅಳೆಸಿಕೊಳ್ಳುತ್ತಿದ್ದೆ. ಸುಮಾರು ಮೂರು-ನಾಲ್ಕು ವರ್ಷ ಪ್ರಾಯದ ಆ ಮಗು ಅಲ್ಲಿಗೆ ಬಂದು ಆ ಹೂವಿನ ಹಾರವನ್ನು ಹಿಡಿದು ಹರಿದೆಸೆಯಲಾರಂಭಿಸಿತು.
ಅದನ್ನು ತಡೆಯಲು ಬಂಡ ಪೋಷಕರನ್ನು ಗುರುನಾಥರು "ತಡೀಬೇಡ ಅದನ್ನ ಸುಮ್ಮನೆ ಇರು ಏನು ಮಾಡುತ್ತೆ ನೋಡೋಣ" ಅಂದು ಆ ಮಗುವಿನತ್ತ ದೃಷ್ಟಿ ಬೀರಿದರು. ಸಾಕಷ್ಟು ಹೂವನ್ನು ಹಾಳು ಮಾಡಿದ ನಂತರ ಆ ಮಗು ಇದ್ದಕ್ಕಿದ್ದಂತೆ ತಣ್ಣಗಾಯಿತು. ಜೊತೆಗೆ ಆ ಮಗುವಿನ ಹಠವು ಅಂದಿಗೇ ಕೊನೆಯಾಯಿತು.
ಮಗುವಿನ ಹಠಮಾರಿತನದ ಕಾರಣವೇನೆಂದು ಪೋಷಕರು ಕೇಳಲು, "ಅಯ್ಯಾ ಪ್ರತಿಯೊಂದು ದೇಹಕ್ಕೂ ಇನ್ನೊಂದು ವಿದೇಹ ವಸ್ತುವಿನ ಸಂಬಂಧವಿರುತ್ತದೆ. ಅದು ಇಷ್ಟೆಲ್ಲ ಆಟವಾಡಿಸುತ್ತೆ. ಈ ಮಗು ತಾಯಿ ಗರ್ಭದಲ್ಲಿದ್ದಾಗ ಮಂಡ್ಯ ಸಮೀಪದಲ್ಲಿ ವಾಸವಿದ್ದು ಅಲ್ಲಿ ಒಂದು ಹೆಣ್ಣು ಜೋರಾಗಿ ಕೂಗಿಕೊಂಡು ಬಾವಿಗೆ ಹಾರಿದ ಘಟನೆಯನ್ನು ನೋಡಿರುವಳು. ಆ ಭಯ ಈ ಮಗುವಿನ ಮೂಲಕ ವ್ಯಕ್ತವಾಗಿದೆ ತಿಳೀತಾ... " ಅಂದರು.
ಒಮ್ಮೆ ಬೆಂಗಳೂರಿನಲ್ಲಿ ದೊಡ್ಡ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬ ಗುರುನಿವಾಸಕ್ಕೆ ಬಂದರು. ಅಂದು ಗುರುನಾಥರೊಂದಿಗೆ ನಾವು ಸುಮಾರು ಎಂಟು-ಹತ್ತು ಜನರಿದ್ದೆವು.
ಗುರುವಿನ ಬಗ್ಗೆ ಭಕ್ತಿ ಹಾಗೂ ಕುತೂಹಲವಿದ್ದ ಆ ವ್ಯಕ್ತಿ ಗುರುನಾಥರ ಹಾವ-ಭಾವವನ್ನು ನೋಡಿ, ಗುರುಗಳೇ" ನೀವು ಹೇಳಿದ್ದು ನಂತೆ ಅರ್ಥ ಆಗುತ್ತಿಲ್ಲ. ನೀವು ಹೇಳಿದ್ದೇ ನಿಜವಾದರೆ ಇಲ್ಲಿ ಈ ಕೋಣೆಯಲ್ಲಿ ಈಗ ಎಷ್ಟು ಜನರಿರುವರು" ಎಂದು ಪ್ರಶ್ನಿಸಲು:
ಗುರುನಾಥರು "ನೋಡಯ್ಯಾ ನೀವು ಎಂಟು ಜನರಲ್ಲದೆ ದೇಹವಿರದ ಇಪ್ಪತ್ತೈದು ಕ್ರೈಸ್ತ ಸನ್ಯಾಸಿನಿಯರು ಇಲ್ಲಿರುವರು. ನಾನು ಅವರೊಂದಿಗೆ ಸಂಭಾಷಿಸುತ್ತಿದ್ದೇನೆ. ಅದಕ್ಕೆ ನಾ ಹೇಳೋದು. ಯಾವಾಗ್ಲೂ ಈ ದೇಹದ ಹತ್ತಿರ ಬರಬೇಡಿ. ನಾ ಇಲ್ಲಿರೋಲ್ಲ ದೇಹ ಮಾತ್ರ ಇಲ್ಲಿರುತ್ತೆ" ಅಂತ ಹೇಳಿದ್ರು.
ಆಗ ಆ ವ್ಯಕ್ತಿ ಗುರು ಸರ್ವಾಂತರ್ಯಾಮಿ ಅನ್ನೋದು ನಿಜಾನಾ? ಹಾಗಿದ್ದರೆ ನೀವು ಬೆಂಗಳೂರಿನ ನನ್ನ ಮನೆ ಹತ್ತಿರಾನೂ ಇದೀರಾ? ಎಂದು ಪ್ರಶ್ನಿಸಲು,
ಗುರುನಾಥರು "ನಿಮ್ಮ ಮನೆ ಹತ್ತಿರ ಇಬ್ಬರು ಭಿಕ್ಷುಕರು ಸದಾ ಬರ್ತಾರೆ. ಅವರಲ್ಲಿ ಒಬ್ಬ ಕಾಲೆಳೆದುಕೊಂಡು ನಡೀತಾನೆ. ಅವನಲ್ಲಿ ನಾನು ಆಗಾಗ ಬಂದು ಸೇರುತ್ತೇನೆ. ಆ ಭಿಕ್ಷುಕ ಸಿಕ್ಕಾಗ ಏನಾದರೂ ಕೊಟ್ಟು ಕಳಿಸು" ಎಂದರು. ಗುರುನಾಥರು ಹೇಳಿದ ಈ ಎಲ್ಲ ವಿಚಾರಗಳು ಸತ್ಯವಾಗಿತ್ತು......,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
This comment has been removed by the author.
ReplyDeleteParama poojya venkatachala avadootarige nanna bhakti poorvaka namanagalu. Sarvarigu arogya ayasu rakshe sahane samadhaana talme buddhi shreyasu santosha karunisi asheervadisi Guruvarya. Hari om tatsat.
ReplyDelete