ಗುರುನಾಥ ಗಾನಾಮೃತ
ಯಾರು ಬಲ್ಲರು ನಿನ್ನ ಮನವ
ರಚನೆ: ಶ್ರೀಮತಿ.ಶೈಲಜಾ ಕುಮಾರ್
ಯಾರು ಬಲ್ಲರು ನಿನ್ನ ಮನವ
ಯಾರು ತಿಳಿವರು ನಿನ್ನಾಂತರ್ಯವ
ಬಯಸದ ಭಾಗ್ಯ ನೀ ಕೊಟ್ಟೆ
ಬಯಸಿದನು ಕೊಡಲು ಮರೆತೆ
ಇದರಿಂದ ಪಾಠವ ನಾ ಕಲಿತೆ
ನೋವು ನಲಿವೆಲ್ಲಾ ನಿನ್ನ ಪಾದಕೆ
ಕಾರಣವೂ ಎಲ್ಲಕೂ ನೀನಂತೆ
ನಮ್ಮಿಚ್ಛೆಯು ಏನೂ ನಡೆಯದಂತೆ
ಬದುಕಿನ ಸೂತ್ರವು ನಿನ್ನ ಕೈಯಲ್ಲಿ
ಕೈ ಹಿಡಿದು ನೆಡೆಸು ನೀನಿಲ್ಲಿ
ನನ್ನದೇನೂ ಇಲ್ಲ ಈ ಜಗದಲಿ
ನೀ ಕೊಟ್ಟ ಭಿಕ್ಷೆಯೇ ಜೀವನದಲಿ
ನಿನ್ನಿಚ್ಛೆಯಿಲ್ಲದೆ ನೆಡೆಯದೇನೂ ಇಲ್ಲಿ
ಶರಣಾಗತರಿಗೇ ರಕ್ಷಿಸುವೆ ನೀನಿಲ್ಲಿ