ಗುರುನಾಥ ಗಾನಾಮೃತ
ಗುರುವೇ ಬಾರೋ ಎನ್ನರಿವೇ ಬಾರೋ
ರಚನೆ: ಅಂಬಾಸುತ
ಗುರುವೇ ಬಾರೋ ಎನ್ನರಿವೇ ಬಾರೋ
ಗಣನೆಗೆ ನಿಲುಕದ ಮಹಿಮೆಯ ತೋರಿದ ಪ್ರಭುವೇ ಬಾರೋ ||ಪ||
ತಂದೆ ಬಾರೋ ಆತ್ಮಬಂಧು ಬಾರೋ
ದೇಹ ಭಾವ ದೂರಗೊಳಿಸೋ ಧಣಿಯೇ ಬಾರೋ ||೧||
ದೊರೆಯೇ ಬಾರೋ ಎನ್ನ ಸಿರಿಯೇ ಬಾರೋ
ಭವದಾ ದುಖಃ ಹರಿಸುವಾ ಹಿರಿಯನೇ ಬಾರೋ ||೨||
ಶರಣೆನ್ನುವೆ ಬಾರೋ ಶರಣಾಗತಪಾಲನೆ ಬಾರೋ
ಶಾರದೆ ತನಯಾ ಶಾಂತ ಸ್ವರೂಪಾ ಶಂಕರನೇ ಬಾರೋ ||೩||
ಅಚಲಾ ಬಾರೋ ವೇಂಕಟಾಚಲ ಬಾರೋ
ವಿಚಾರವಾದೀ ಸುಚಾರು ಮೂರ್ತಿ ಸಂತನೇ ಬಾರೋ ||೪||
ಸಖನೇ ಬಾರೋ ಸುಖವಾನೀವನೇ ಬಾರೋ
ಸಖರಾಯಪುರವಾಸೀ ಸದ್ಗುರು ಬಾರೋ ||೫||
ಆಶ್ರಿತವತ್ಸಲ ಬಾರೋ ಸಚ್ಚಿದಾನಂದ ಬಾರೋ
ಅಂಬಾಸುತನಾ ಪೊರೆವಾ ಗುರುವೇ ಬೇಗನೆ ಬಾರೋ ||೬||
No comments:
Post a Comment