ಒಟ್ಟು ನೋಟಗಳು

Friday, September 1, 2017

ಗುರುನಾಥ ಗಾನಾಮೃತ 
ಗುರುನಾಥನಾ ನೀ ಸ್ಮರಿಸು
ರಚನೆ: ಅಂಬಾಸುತ 


ಗುರುನಾಥನಾ ನೀ ಸ್ಮರಿಸು
ನಿನ್ನ ಮನದೊಳಗೇ ಅವನಾ ನಿಲ್ಲಿಸು
ಕಾಮಕ್ರೋಧಾದಿಗಳಾ ತ್ಯಜಿಸೂ
ಸದ್ಗುಣಗಳನೇ ಸ್ವಾಗತಿಸೂ ||

ನಿನ್ನೊಳಗಿಹುದೆಲ್ಲವ ಅವನಡಿಗೇ ಅರ್ಪಿಸೂ
ಗುರುವಾಕ್ಯವನೇ ಎಂದಿಗೂ ಪಾಲಿಸೂ
ಗುರುಮಾತುಗಳನೇ ಎಂದಿಗೂ ಆಲಿಸೂ
ಸಜ್ಜನರನೆಂದೂ ಆದರಿಸೂ ||

ಪೂರ್ವಕರ್ಮಗಳಾ ನೀ ತೀರಿಸೂ
ಸತ್ಸಂಗವನೆಂದಿಗೂ ಆನಂದಿಸೂ
ದುರ್ಜನರಾ ಸಹವಾಸಾ ತಿರಸ್ಕರಿಸೂ
ಸತ್ಚಿಂತನೆಗಳನೇ ಸ್ವೀಕರಿಸೂ ||

ಸಖರಾಯಪುರವಾಸಾಗೆ ನೀ ನಮಿಸೂ
ಅವನಡಿಯೊಳಗೇ ನೀ ಸದಾ ನೆಲೆಸೂ||

No comments:

Post a Comment