ಗುರುನಾಥ ಗಾನಾಮೃತ
ಗುರುವೆ ತಾಯಿ ಗುರುವೆ ತಂದೆ ಗುರುವೆ ನಮ್ಮ ದೈವವು
ರಚನೆ: ಶ್ರೀಮತಿ.ಶೈಲಜಾ ಕುಮಾರ್
ಗುರುವೆ ತಾಯಿ ಗುರುವೆ ತಂದೆ ಗುರುವೆ ನಮ್ಮ ದೈವವು
ಗುರುವೆ ಪ್ರೇರಕ ಗುರುವೆ ಯೋಜಕ
ಗುರುವೆ ನಮ್ಮ ಜಗವು ।। ಪ ।।
ಕಣ್ಣಲಿ ವಾತ್ಸಲ್ಯವ ಸೂಸುತಿಹ
ಮನದಲಿ ಸದಾ ಇರುವೆನೆಂದಿಹ
ಮಾತಲಿ ಅಭಯವ ನೀಡುತಿಹ
ಕರದಲಿ ಸತ್ಕಾರ್ಯ ಮಾಡಿಸುತಿಹ ।। ೧ ।।
ಕುಜನರ ಸುಮಾರ್ಗಕೆ ತರುವ
ಸುಜನರಿಗೆ ಗಮ್ಯವ ತೋರುವ
ಬಾಳನು ನಂದನ ಮಾಡುವ
ಜೀವನ ಸಾರ್ಥಕ ಮಾಡುವ ।। ೨ ।।
ಶರಣೆಂಬರ ಕೈ ಹಿಡಿಯುವ
ಮತಿಹೀನರಿಗೆ ಮತಿಯ ಕೊಡುವ
ನಿಸ್ವಾರ್ಥದಿ ಬಾಳಿರಿ ಎನ್ನುವ
ಶಿಷ್ಯರುದ್ಧಾರದಲಿ ಸಂತಸ ಕಾಣುವ ।। ೩ ।।
No comments:
Post a Comment