ಒಟ್ಟು ನೋಟಗಳು

Sunday, September 3, 2017

ಗುರುನಾಥ ಗಾನಾಮೃತ 
ಕಂಡೆ ನಾನೂ ಕಂಡೆ ನಾನೂ ವೇಂಕಟಪ್ಪನ ಕಂಡೆ ನಾನೂ
ರಚನೆ: ಅಂಬಾಸುತ 


ಕಂಡೆ ನಾನೂ ಕಂಡೆ ನಾನೂ ವೇಂಕಟಪ್ಪನ ಕಂಡೆ ನಾನೂ
ಕಂಡೆ ನಾನೂ ಕಂಡೆ ನಾನೂ ಎನ್ನಪ್ಪನ ಕಂಡೆ ನಾನೂ ||ಪ||

ಶಂಖ ಚಕ್ರವ ಪಿಡಿಯದವನಾ
ಮಾಲೆ ಮುಕುಟ ಧರಿಸದವನಾ
ಮಾನವಾಕೃತಿಯಿಂದ ಮೆರೆವಾ
ಭಕ್ತಪಾಲಕ ಭಗವಂತನಾ ||೧||

ಬೆಟ್ಟಹತ್ತಿ ಬಾ ಎನ್ನದವನಾ
ಕಾಣಿಕೆ ಪಾತ್ರೆ ಇರಿಸದವನಾ
ಕರುಣಾಮೃತವ ಸುರಿಸುತಲಿ ಸದಾ
ಆನಂದವ ನೀಡುವವನಾ ||೨||

ತಿರುನಾಮವ ಏರಿಸದವನಾ
ಪೂಜೆ ಉತ್ಸವ ಬೇಡದವನಾ
ದಟ್ಟಿಯೊಂದನು ಸುತ್ತಿಕೊಂಡೂ
ದಿಟ್ಟನಾಗೀ ಕುಳಿತವನಾ ||೩||

ರಥವನೇರೀ ಕೂರದವನಾ
ರಾಜನಂತೇ ಮೆರೆಯದವನಾ
ಭಕ್ತರ ರಕ್ಷಿಸೊ ಭಾರಹೊತ್ತೂ
ಭೋಗ ಭಾಗ್ಯವ ತ್ಯಜಿಸಿದವನಾ ||೪||

ಸಪ್ತಗಿರಿಯೊಳು ನಿಲ್ಲದವನಾ
ಸಖರಾಯಪುರವಾಸನಾ
ಅಂಬಾಸುತನಾ ಅನವರತ ಕಾಯ್ವಾ
ಅವಧೂತನಾ ಎನ್ನಪ್ಪನಾ ||೫||

No comments:

Post a Comment