ಒಟ್ಟು ನೋಟಗಳು

Wednesday, September 13, 2017

ಗುರುನಾಥ ಗಾನಾಮೃತ 
ಪಾಂಡುರಂಗ ಪಾಂಡುರಂಗ
ರಚನೆ: ಅಂಬಾಸುತ 


ಪಾಂಡುರಂಗ ಪಾಂಡುರಂಗ
ಕೊಡಿಸೋ ನಿನ್ನ ಸಂತ ಸಂಘ
ಹಿಡಿಸೋ ನಿನ್ನ ನಾಮ ಭಂಗಾ
ಜಪಿಸಿವೆ ನಾ ರಂಗಾ ರಂಗಾ ||

ನಾಮಜಪದಿ ಶುಧ್ಧ ಅಂತರಂಗಾ
ಹರಿವಳೂ ಮನದೊಳಗೆ ಗಂಗಾ
ಆಕರ್ಷಣೀಯವೂ ಬಹಿರಂಗಾ
ನಿನ್ನ ನಾ ಬಿಟ್ಟಿರಲಿ ಹೆಂಗಾ ||

ಮನವಾಗಿದ್ದಿತ್ತು ಮಂಗಾ
ನಿನ್ನ ಸ್ಮರಣದಿ ಅದೀಗ ರಂಗಾ
ಬಯಸಿಹುದೋ ಸತ್ಸಂಗಾ
ನಾಮ ಸ್ಮರಣವೇ ಹಿಂಗಾ ರಂಗಾ ||

ನಿನ್ನ ನಾಮವಿರಲಿ ಮರೆಯದ್ಹಾಂಗಾ
ಅಂಬಾಸುತನ ಕಾಯೋ ರಂಗಾ
ಸದ್ಗುರುನಾಥನು ನಿನ್ನ ರೂಪಿ ರಂಗಾ
ಅವನಡಿಯೊಳೆನ್ನನಿರಿಸೋ ರಂಗಾ ||

No comments:

Post a Comment