ಒಟ್ಟು ನೋಟಗಳು

Wednesday, September 27, 2017

ಗುರುನಾಥ ಗಾನಾಮೃತ 
ಬದುಕೇ ಪಾವನವಾಯಿತು
ರಚನೆ: ಶ್ರೀಮತಿ.ಶೈಲಜಾ ಕುಮಾರ್


ಬದುಕೇ ಪಾವನವಾಯಿತು
ಗುರುವರನ ಸೇವೆಯು ದೊರೆತು
ನಮ್ಮ ಬದುಕೇ ಪಾವನವಾಯಿತು ||

ಪೂರ್ವಿಕರು ಮಾಡಿದ ಪುಣ್ಯದ ಫಲವೋ
ಹಿಂದಿನ ಜನ್ಮಗಳ ಸುಕೃತವೇನೋ
ಮಾಡಿದ ಪೂಜೆಗಳ ಫಲವೋ
ಸಾಧುಜನರ ದರ್ಶನದ ಫಲವೋ || ೧ ||

ಸುಲಭಕೆ ಎಂದೂ ಒಲಿಯನಿವನು
ಯಾರಿಗೂ ಅರ್ಥವಾಗದವನಿವನು 
ಕರ್ಮಮಾರ್ಗದಿ ಜ್ಞಾನವರ್ಜಿಸಿ ಎನುವನೋ
ಜ್ಞಾನದ ಹಾದಿಲಿ ಪರಮಾರ್ಥವ ಕಾಣಿರೆನ್ನುವನೋ  || ೨ ||

ನೆಡೆನುಡಿಯಲಿ ಶುದ್ಧವಾಗಿಹನೋ
ಬಾಹ್ಯಾಡಂಬರಕೆ ಸೋಲನಿವನೋ
ಧರ್ಮಮಾರ್ಗದಿ ನೆಡೆಯಿರಿ ಎನುವನೋ
ಶುದ್ಧಾಂತರಾತ್ಮಕೆ ಒಲಿಯುವನಿವನು || ೩ ||

ಆತ್ಮಸಾಧನೆಯೇ ಗುರಿಯೆನುವನೋ
ಧನಸ್ವರ್ಣಾದಿಗಳಿಗೆ ಬೆಲೆಕೊಡದವನೂ
ಜಪಧ್ಯಾನದಿ ಸಾಧನೆಮಾಡಿರೆನ್ನುವನೋ 
ಶುದ್ಧಮನದಲಿ ಸದಾ ನಲಿಯುವನೂ || ೪ ||

No comments:

Post a Comment