ಒಟ್ಟು ನೋಟಗಳು

Sunday, September 3, 2017

ಗುರುನಾಥ ಗಾನಾಮೃತ 
ನಮೋ ವೇಂಕಟಾಚಲ ಸದ್ಗುರುವರ
ರಚನೆ: ಅಂಬಾಸುತ 


ನಮೋ ವೇಂಕಟಾಚಲ ಸದ್ಗುರುವರ
ನಮೋ ಜ್ಞಾನದಾಯಕ ಗುಣಮಂದಿರ
ನಮೋ ವೇದಸಾರಾಮೃತ ವರ್ಷಿತ
ಆನಂದನಿಲಯಾ  ಆದ್ಯಂತರಹಿತಾ ||

ನಮೋ ವೇಂಕಟಾಚಲ ಸದ್ಗುರುವರ
ನಮೋ ಅದ್ವೈತಾಮೃತ ಸಾರಕ
ನಮೋ ಸುಬೋಧರೂಪ ಸುಂದರ
ಸಾತ್ವಿಕ ಸಾಧಕ ಪರಿಪೋಷಕಾ ||

ನಮೋ ವೇಂಕಟಾಚಲ ಸದ್ಗುರುವರ
ನಮೋ ವಿಶ್ವರೂಪಾತ್ಮಕ ಸಂತಾ
ನಮೋ ಕೃಷ್ಣ ಯೋಗೀಂದ್ರವತಾರೀ
ಸ್ಮತೃಗಾಮಿ ಸ್ವಾನಂದ ಸಾಗರಾ ||

ನಮೋ ವೇಂಕಟಾಚಲ ಸದ್ಗುರುವರ
ನಮೋ  ಅಹಂಭಾವ ವಿನಾಶಕ
ನಮೋ ಅಗಣಿತ ವರಪ್ರದಾಯಕ
ಲೋಕೋದ್ಧಾರಕ ಅವಧೂತಾ ||

ನಮೋ ವೇಂಕಟಾಚಲ ಸದ್ಗುರುವರ
ನಮೋ ಸದಾ ಬ್ರಹ್ಮಾನಂದಾತ್ಮಕಾ
ನಮೋ ತ್ರಿಮೂರ್ತಿ ರೂಪ ಪರಮಾತ್ಮಾ
ತ್ರಿಗುಣಾತೀತ ತ್ರಿಭುವನ ಪಾಲಕಾ ||

No comments:

Post a Comment