ಒಟ್ಟು ನೋಟಗಳು

Wednesday, September 6, 2017

ಗುರುನಾಥ ಗಾನಾಮೃತ 
ಮರಿಬ್ಯಾಡ್ವೇ ತಂಗೀ ನೀನು ಗುರುವನು ಮರಿಬ್ಯಾಡ್ವೇ
ರಚನೆ: ಅಂಬಾಸುತ 


ಮರಿಬ್ಯಾಡ್ವೇ ತಂಗೀ ನೀನು ಗುರುವನು ಮರಿಬ್ಯಾಡ್ವೇ
ಗುರುತರ ಭಾಗ್ಯವ ಕೊಡುವವನವೇ ಗುರುವನು ಮರಿಬ್ಯಾಡ್ವೇ ||ಪ||

ಅಜ ಹರಿ ಹರರಾ ಏಕರೂಪನೂ ಗುರುವನು ಮರಿಬ್ಯಾಡ್ವೇ
ಆನಂದ ನಿಲಯಾ ಅಮೃತದಾಯಕ ಗುರುವನು ಮರಿಬ್ಯಾಡ್ವೇ ||೧||

ಅಂತಃಕರಣದಿ ಕೂಗಿ ಕರೆದರೇ ಬರುವನು ಮರಿಬ್ಯಾಡ್ವೇ
ಕಂಬನಿ ಒರೆಸೀ ಕಷ್ಟ ನಿವಾರಿಪ ಗುರುವನು ಮರಿಬ್ಯಾಡ್ವೇ  ||೨||

ಕಾಮ ಕ್ರೋಧವ ಕಳೆಯುವ ನಮ್ಮ ಗುರುವನು ಮರಿಬ್ಯಾಡ್ವೇ
ಆಡಂಬರಕೆ ಎಂದಿಗೂ ಒಲಿಯನು ಗುರುವನು ಮರಿಬ್ಯಾಡ್ವೇ ||೩||

ಗುರುಪಾದ ಸೇವನ ಬಹಳ ದುರ್ಲಭಾ ಅದನು ಮರಿಬ್ಯಾಡ್ವೇ
ಗುರುಪದವೆಂದಿಗೂ ಮೋಕ್ಷಸಾಧನಾ ಗುರುವನು ಮರಿಬ್ಯಾಡ್ವೇ ||೪||

ಜ್ಞಾನವ ನೀಡುವನೆಂದಿಗೂ ಗುರುವೇ ಅವನನು ಮರಿಬ್ಯಾಡ್ವೇ
ತಂದೆತಾಯಿಯಾಗಿ ಬಂದು ಸಲಹುವನು ಗುರುವನು ಮರಿಬ್ಯಾಡ್ವೇ||೫||

ಗ್ರಹಗತಿ ಕೂಡ ಗುರುವಿನ ಮುಂದೇ ಗೌಣ ನೀ ಮರಿಬ್ಯಾಡ್ವೇ
ಘನತರ ಮುಕ್ತಿಯ ಕೊಡುವವನವನೂ ಗುರುವನು ಮರಿಬ್ಯಾಡ್ವೇ ||೬||

ಸಖರಾಯಪುರವಾಸಾ ಸದ್ಗುರುನಾಥಾ ಗುರುವನು ಮರಿಬ್ಯಾಡ್ವೇ
ಅಂಬಾಸುತನ ಅನವರತ ಕಾಯ್ವಾ ಗುರುವನು ಮರಿಬ್ಯಾಡ್ವೇ |೭||

No comments:

Post a Comment