ಗುರುನಾಥ ಗಾನಾಮೃತ
ದಾಸನೆಂದೆನಿಸೀಕೊಳುವಾಸೆ ಎನಗೇ
ರಚನೆ: ಅಂಬಾಸುತ
ದಾಸನೆಂದೆನಿಸೀಕೊಳುವಾಸೆ ಎನಗೇ
ದಾಸತ್ವವನು ನೀಡೀ ಆಸೆ ಪೂರೈಸೋ ಗುರುವೇ ||ಪ||
ನಿನ್ನ ಪಾದ ಸೇವೆಗೈವೇ
ನಿನ್ನ ಪದ ಜಪ ಮಾಡ್ವೇ
ನಿನ್ನುಚ್ಛಿಷ್ಟ ಉಣುವೇ
ನೀನಿಟ್ಟಂತೆ ಇರುವೇ ||೧||
ನೀನಾಡಿಸಿದರೆ ಆಡ್ವೇ
ನೀ ಕುಣಿಸಿದರೆ ಕುಣಿವೇ
ನೀ ತಾಳ ಹಾಕಲು ಪಾಡ್ವೇ
ನೀ ಪೇಳಿದನ್ನೇ ಬರೆವೇ ||೨||
ನಾನೆಂಬುದಿಲ್ಲೀ ಶೂನ್ಯಾ
ನೀನೆಂಬುದೇ ಮಾನ್ಯಾ
ನೀವರವಿತ್ತರೆ ಧನ್ಯಾ
ಗುರು ನೀನಸಾಮಾನ್ಯಾ ||೩||
ನಿನ್ನಂಗಳಾ ಗುಡಿಸುವೇ
ಚಿತ್ತಾರ ಹೂ ಬಿಡಿಸುವೇ
ಎಣ್ಣೆ ಮಜ್ಜನಾ ಮಾಡಿಸುವೇ
ಭೂರಿ ಭೋಜನ ಉಣಿಸುವೇ ||೪||
ನಿನ್ನಿಚ್ಛೆಯಂತೇ ನೆಡೆವೇ
ಗುರುನಾಥ ನಿನ್ನನೇ ನೆನೆವಾ
ಈ ಅಂಬಾಸುತಗೇ
ನಿನ್ನ ದಾಸತ್ವವ ನೀಡೋ ||೫||
No comments:
Post a Comment