ಗುರುನಾಥ ಗಾನಾಮೃತ
ಪರಮಪಾವನ ನಾಮ ಚಿದಂಬರಾ
ರಚನೆ: ಅಂಬಾಸುತ
ಪರಮಪಾವನ ನಾಮ ಚಿದಂಬರಾ
ನಿನ್ನೊಳಗಿರಲೀ ನಿರಂತರಾ ||ಪ||
ಕುಳಿತೆದ್ದಾಗ ಚಿದಂಬರಾ
ನೆಡೆದು ನಿಂತಾಗಾ ಚಿದಂಬರಾ
ಸ್ನಾನವ ಗೈವಾಗ ಚಿದಂಬರಾ
ಉಟ್ಟು ಉಣುವಾಗ ಚಿದಂಬರಾ ||೧||
ಕನಸಿನ ಒಳಗೂ ಚಿದಂಬರಾ
ನನಸಿನಲೂ ಕೂಡ ಚಿದಂಬರಾ
ಕಂಡವರೆಲ್ಲಾ ಚಿದಂಬರಾ
ಕಾಣದವರು ಸಹ ಚಿದಂಬರಾ ||೨||
ಪುಸ್ತಕದೊಳಗೂ ಚಿದಂಬರಾ
ಮಸ್ತಕದೊಳಗೂ ಚಿದಂಬರಾ
ಮಾಲೆಯೊಳಗೇ ಚಿದಂಬರಾ
ಪ್ರತಿ ಮಾತಿನಲ್ಲೂ ಚಿದಂಬರಾ ||೩||
ಒಳಿತಾಗಲೂ ಚಿದಂಬರಾ
ಕೆಡುಕಿನೊಳಗೂ ಚಿದಂಬರಾ
ತೊಟ್ಟಿಲ ಒಳಗೂ ಚಿದಂಬರಾ
ಚಿತೆಯೇರಿದಾಗಲೂ ಚಿದಂಬರಾ ||೪||
ಸಿಟ್ಟಲೂ ಇರಲೀ ಚಿದಂಬರಾ
ಸುಟ್ಟುಹಾಕುವನದ ಚಿದಂಬರಾ
ನಗುವಿನ ನಗುವೂ ಚಿದಂಬರಾ
ಅಳುವಿನ ಅಳಲೂ ಚಿದಂಬರಾ ||೫||
ಧನಧಾನ್ಯವೆಲ್ಲಾ ಚಿದಂಬರಾ
ನಗನಾಣ್ಯ ಕೂಡಾ ಚಿದಂಬರಾ
ಹೊಲ ಮನೆಯೊಳಗೂ ಚಿದಂಬರಾ
ಬಯಲಿನ ನಡುವಲೂ ಚಿದಂಬರಾ ||೬||
ದೈವಗಳೆಲ್ಲಾ ಚಿದಂಬರಾ
ಸದ್ಗುರು ರೂಪ ಚಿದಂಬರಾ
ಗ್ರಹತಾರೆ ಮಂಡಲ ಚಿದಂಬರಾ
ವಾಯು ವರುಣರೆಲ್ಲ ಚಿದಂಬರಾ ||೭||
ನಿನ್ನ ಚಿತ್ತವಿರಲಿ ಅಂಬರದಂತೆ
ಆಗ ನೀನೇ ಆಗುವೆ ಚಿದಂಬರಾ
ಅಂಬಾಸುತನಾ ಚಿದಂಬರಾ
ಸದ್ಗುರುನಾಥಾ ಚಿದಂಬರಾ ||೮||
No comments:
Post a Comment