ಗುರುನಾಥ ಗಾನಾಮೃತ
ಗತಿ ಎನಗೆ ನೀನೇ ಗುರುವೇ ಸಖರಾಯಧೀಶಾ
ರಚನೆ: ಅಂಬಾಸುತ
ಗತಿ ಎನಗೆ ನೀನೇ ಗುರುವೇ ಸಖರಾಯಧೀಶಾ
ಗತಿ ಎನಗೆ ನೀನೇ ಗುರುವೇ ||ಪ||
ಗತಿಯು ನೀನೇ ಎಂದು ನಂಬಿದೆ
ಮತಿಯ ಪಾಲಿಸ ಬೇಕೋ ಪ್ರಭುವೇ
ಸಚ್ಚಿದಾನಂದಾತ್ಮ ರೂಪಾ ಸಗುಣ ನಿತ್ಯಾ ನಿರ್ಮಲಾತ್ಮಾ ||ಅ.ಪ||
ಅನಾಥ ನಾನಾದೆನೋ
ಆಶ್ರಯದಾತರ ಕಾಣದೇ ಬಳಲಿದೆನೋ
ನಾಥನಾಗೀ ನೀನು ಬಂದೂ
ಪೊರೆಯಬೇಕೋ ಎನ್ನ ಗುರುವೇ
ಧರ್ಮ ಹಾದಿಯ ಹಿಡಿಸಿ ಎನ್ನನ್ನು
ಉದ್ಧರಿಸಬೇಕೋ ಅರಿವೇ ||೧||
ಕಾಣೆನೋ ಅನ್ಯರನೂ ನಾ
ಕೈಪಿಡಿದು ನೆಡೆಸೀ ಕರುಣದೀ ಕಾಯ್ವವರಾ
ನಗುವೋ ಅಳುವೋ ನಿನ್ನ ಸನ್ನಿಧಿ
ಸ್ವರ್ಗವೆಂದಿಗೂ ಎಮಗೆ ಗುರುವೇ
ಅಂಬಾಸುತನಾ ಅನವರತ
ಅಂತರಂಗವಾಸೀ ಶ್ರೀವೇಂಕಟಾಚಲ ||೨||
No comments:
Post a Comment