ಒಟ್ಟು ನೋಟಗಳು

Thursday, September 7, 2017

ಗುರುನಾಥ ಗಾನಾಮೃತ 
ಬಾ ಗುರುವೇ ಬಾ ಗುರುವೇ ನೀ ಎನ್ನ ದೊರೆಯೇ
ರಚನೆ: ಅಂಬಾಸುತ 


ಬಾ ಗುರುವೇ ಬಾ ಗುರುವೇ ನೀ ಎನ್ನ ದೊರೆಯೇ
ಬಂದೆನ್ನ ಹೃದಯ ಮಂದಿರದೊಳಗೆ ನೆಲೆಸೈ ||ಪ||


ಎಣಿಸದೇ ಅವಗುಣವಾ ತಣಿಸೆ ಬಾರೋ ಮನವಾ
ಅಗಣಿತಾ ಮಹಿಮನೇ ಸುಗುಣಸಾಂದ್ರಾ ಪ್ರಭುವೇ ||೧||


ಗತಿ ನೀಡುವರ ಕಾಣೇ ಗತದಿ ನೊಂದಿಹೆ ಬಹಳಾ
ಗುರುತರಾ ಭಾಗ್ಯವ ನೀಡುತಾ ಪೊರೆವವನೇ ||೨||


ಧೇಹಿ ಎಂದವರ ಪಾಲಿನ ಕಾಮಧೇನುವೇ
ಧರೆಯನುಧ್ಧರಿಸೇ ಬಂದಾ ದತ್ತಾತ್ರಿಯೇ ||೩||


ಆತ್ಮಜ್ಞಾನವನೀವಾ ನಿಜಾನಂದ ರೂಪನೇ
ಜ್ಞಾನದಾಹಿಗಳಿಗೆ ಸುಜ್ಞಾನ ಭಾಸ್ಕರನೇ ||೪||


ಸಖರಾಯಪುರದೊಳೂ ಸತತ ನೆಲೆಸಿರುವವನೇ
ಅಂಬಾಸುತಗೆ ನಿಜ ಸುಖನೀಡೋ ಅರಿವೇ ||೫||

No comments:

Post a Comment