ಗುರುನಾಥ ಗಾನಾಮೃತ
ಎಷ್ಟು ಕಾಲ ಕಾಯಬೇಕಯ್ಯಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಎಷ್ಟು ಕಾಲ ಕಾಯಬೇಕಯ್ಯಾ
ಗುರುವೆ ನಿನ್ನ ದರ್ಶನಕೆ
ಅಂತ ವೇಳೆ ಎಂದು ಬರುವುದಯ್ಯಾ || ಪ ।।
ಅಂಗಳದಿ ಮಲ್ಲೆಜಾಜಿ ಅರಳಿಹುದಯ್ಯಾ
ಗುರುವೆ
ನಿನ್ನ ಪಾದಪೂಜೆಗೆ
ಕಾಯುತಿಹುದಲ್ಲಾ
ಭಕ್ತಿರಸವಿರುವ ಜಲವು ತುಂಬಿಹುದಯ್ಯಾ
ಗುರುವೆ
ನಿನ್ನ ಪಾದದಭಿಷೇಕಕೆ
ಕಾಯುತಿಹುದಲ್ಲಾ ।। ೧ ।।
ಕಂಗಳಲಿ ಆಶಾದೀಪವು ಹೊತ್ತಿಹುದಯ್ಯಾ
ಗುರುವೆ
ನಿನ್ನ ಕಾಣುವ ಹಂಬಲವಿಹುದಯ್ಯಾ
ತಂಪಾದ ಸುಳಿಗಾಳಿ ಚಾಮರಪಿಡಿದು
ಗುರುವೇ
ಕಾಯುತಿಹುದಯ್ಯಾ ।। ೨ ।।
ನಿನ್ನ ದಿವ್ಯವಾಣಿಯ ಕೇಳಲು
ಗುರುವೇ
ಮನವು ಕಾದಿದೆಯಯ್ಯಾ
ನಿನ್ನ ದಿವ್ಯವದನವ ಕಾಣಲು
ಗುರುವೇ
ಭಕ್ತರು ಕಾಯುತಿಹರಯ್ಯಾ ।। ೩ ।।
No comments:
Post a Comment