ಒಟ್ಟು ನೋಟಗಳು

Wednesday, November 15, 2017

ಗುರುನಾಥ ಗಾನಾಮೃತ 
ಈ ತನುವು ಮನವು ನಿನ್ನದೈ ಗುರವೇ
ರಚನೆ: ಅಂಬಾಸುತ 


ಈ ತನುವು ಮನವು ನಿನ್ನದೈ ಗುರವೇ
ನೀನಿಟ್ಟಂತೇ ನಾನಿರುವೇ ||ಪ||

ಅರಮನೆ ಏಕೇ ಮಹಾಮನೆ ಏಕೇ
ಗತಿ ಕೊಡೊ ಗುರುವೇ ನಿನ್ನ ಮನೆ ಎನಗಿರಲೂ 
ಭಕ್ಷ್ಯಭೋಜ್ಯವೇಕೇ ಮೃಷ್ಟಾನ್ನವೇಕೇ
ಹೊಟ್ಟೆ ತುಂಬಿಸಲು ಗುರುವೇ ನಿನ್ನುಚ್ಛಿಷ್ಟವು ಇರಲೂ ||೧||

ಆಭರಣವೇಕೆ ಅಲಂಕಾರವೇಕೇ
ಅನುಕ್ಷಣ ನಿನ್ನ ಭಜಿಸೇ ಅದೆ ಎನಗೆ ಸಾಕೇ 
ಬಂಧುಬಳಗವೇಕೇ ಸತಿ ಸುತರು ಏಕೇ
ಭವಬಂಧವಾ ಹರಿಸೋ ಗುರು ನೀನೇ ಜೊತೆಗಿರಲೂ ||೨||

ಸಖರಾಯಪುರವಾಸಾ ಹೇ ಅವಧೂತಾ
ನಿನ್ನಿಚ್ಚೆಯಂತೇ ನಾನಿರುವೆ ಧಾತ
ಅಂಬಾಸುತ ನಿನ್ನ ದಾಸರಾ ದಾಸಾ
ತನ್ನತನ ಬಿಡಲು ಹಂಬಲಿಸುತಿಹ ದಾಸ ||೩||

No comments:

Post a Comment