ಒಟ್ಟು ನೋಟಗಳು

Friday, November 17, 2017

ಗುರುನಾಥ ಗಾನಾಮೃತ 
ಸಂತನೊಬ್ಬನು ಇದ್ದಾನೇ ಸಖರಾಯಪುರದೊಳು
ರಚನೆ: ಅಂಬಾಸುತ 


ಸಂತನೊಬ್ಬನು ಇದ್ದಾನೇ ಸಖರಾಯಪುರದೊಳು
ಸಂತತಾ ಶಿಷ್ಯರಾ ಸಲಹ್ಯಾನೇ ||ಪ||

ಜ್ಞಾನ ದೀವಿಗೆ ಬೆಳಗ್ಯಾನೇ ಆ ಸಂತ
ಅರಿವಿನಾ ಗುರುವಾಗ್ಯಾನೇ
ಅರಸೀ ಬರುತಿಹಾ ಭಕುತಾರಾ ಆ ಸಂತ
ಅತಿ ಮುದದೀ ಹರಸ್ಯಾನೇ ||೧||

ದಟ್ಟಿಯೊಂದನು ಉಟ್ಟಾನೇ ಆ ಸಂತ
ದಿಟ್ಟತನದೀ ಕುಳಿತ್ಯಾನೇ
ತಾನೇ ಬ್ರಹ್ಮನಾಗ್ಯಾನೇ ಆ ಸಂತ
ಘನಬಿರುದಾ (ಅವಧೂತ) ಪಡೆದ್ಯಾನೇ||೨।।

ಸ್ವಾನುಭವದಾ ಸಾರ ತಿಳಿಸ್ಯಾನೆ ಆ ಸಂತ
ಆರು ವಿಕಾರ ಕಳೆದ್ಯಾನೇ
ಕುಟಿಲತನವಾ ಬಿಡಿಸೆ ಬಂದಾನೇ ಆ ಸಂತ
ಪಡಿಪಾಟಲುಗಳಾ ಮರೆಸ್ಯಾನೇ ||೩।।

ಗುಟ್ಟಾಗಿ ಮನದಿ ನಿಂತಾನೇ ಆ ಸಂತಾ
ಅಂಬಾಸುತನಾ ಗುರುವಾಗ್ಯಾನೇ
ಮಮತೇಲಿ ತಾಯಾಗ್ಯಾನೇ ಆ ಸಂತಾ
ಅವಧೂತನಾಗಿ ಮೆರೆದ್ಯಾನೇ ||೪।।

No comments:

Post a Comment