ಗುರುನಾಥ ಗಾನಾಮೃತ
ಕಾಣಿರಿ ಗುರುವರನಾ
ರಚನೆ: ಅಂಬಾಸುತ
ಕಾಣಿರಿ ಗುರುವರನಾ
ಕಂಡ ಕಂಡಕಡೆ ಎಲ್ಲಾ
ಕುಂದದಾ ವರವೀವನಾ ||
ಗಿರಿಶಿಖರದಿ ಗುರುವೂ
ನದಿ ಸಾಗರದಿ ಗುರುವೂ
ಮರಗಿಡದೊಳು ಗುರುವೂ
ಮಂಜು ಮಳೆಯಲೂ ಗುರುವೂ ||
ಪ್ರಾಣಿ ಮಾತ್ರದೊಳು ಗುರುವೂ
ಅನ್ನ ನೀರೊಳು ಗುರುವೂ
ಅತಿಥಿಗಳೊಳೂ ಗುರುವೂ
ಅಲ್ಪರೊಳೂ ಗುರುವೂ ||
ದುಷ್ಟರೊಳೂ ಗುರುವೂ
ಬಹು ಶಿಷ್ಟರೊಳೂ ಗುರುವೂ
ತೃಣದೊಳೂ ಗುರುವೂ
ಮಹತ್ತೊಳು ಗುರುವೂ ||
No comments:
Post a Comment