ಗುರುನಾಥ ಗಾನಾಮೃತ
ಕೂಗಿ ಕರೆಯೆ ಬಾರದಿರನು ನಮ್ಮ ಗುರುವರಾ
ರಚನೆ: ಅಂಬಾಸುತ
ಕೂಗಿ ಕರೆಯೆ ಬಾರದಿರನು ನಮ್ಮ ಗುರುವರಾ
ಭಾವಶುದ್ಧಿಯಿಂದ ಒಮ್ಮೆ ಓ ಗುರುನಾಥ ಎಂದು ||ಪ||
ಭಕ್ತೋದ್ಧಾರಕೆ ತಾ ಇಳೆಗೆ ಇಳಿದು ಬಂದಿಹನಾ
ಭಾವಿಕ ಮನದೊಳಗೇ ತಾನೆಂದೂ ನೆಲೆಸುವನಾ
ಬೇಧಭಾವವ ಮಾಡದ ಭಗವಂತನಿವನಾ
ಏಕಮುಖಿಯಾಗಿ ಬಂದ ದತ್ತಾತ್ರೇಯನಾ ||೧||
ಸನ್ಮಾರ್ಗ ತೋರುತ ಸದ್ಭಕ್ತರಾ ಸಲಹುವನಾ
ಸದಾಕಾಲ ಸಾಮೀಪ್ಯದ ಸುಖವ ತಾ ನೀಡುವನಾ
ಕಂಬನಿ ಹರಿಸಿದರೇ ಕರಗುವ ಈಶ್ವರನಾ
ಬೇಡಿಸಿಕೊಳ್ಳದೆ ವರಗಳ ನೀಡುವಾ ಅವಧೂತನಾ ||೨||
ದುಷ್ಟರಿಗೆ ಬಹುಕಷ್ಟನಾ ಶಿಷ್ಟರಾ ಪರಿಪಾಲಕನಾ
ಸಖರಾಯಪುರದಾ ಈ ಸಂತನಾ
ಅಂಬಾಸುತನಾ ಅನವರತಾ ಪೋಷಿಪನಾ
ಶ್ರೀವೇಂಕಟಾಚಲ ನಾಮಾಂಕಿತ ಗುರುನಾಥನಾ ||೩||
No comments:
Post a Comment