ಗುರುನಾಥ ಗಾನಾಮೃತ
ಗುರುವೇ ನಿಮ್ಮ ಅಭಯಾ ಎಮ್ಮಮೇಲಿರಲೂ
ರಚನೆ: ಅಂಬಾಸುತ
ಗುರುವೇ ನಿಮ್ಮ ಅಭಯಾ ಎಮ್ಮಮೇಲಿರಲೂ
ನಮಗೇತಕೀ ಭವದ ಭಯಾ
ತಮವಾ ಕಳೆಯುವ ನೀವೇ ನಿಜ ಸೂರ್ಯ
ಎಮಗೆಲ್ಲಾ ಗುರುವರ್ಯಾ ||
ನಾವೀಕ ನೀವೇ ನೌಕೆಯು ನಿಮದೇ
ಪಯಣಿಗರೂ ನಾವೂ
ಈ ಭವ ಸಾಗರದಿ ನೌಕೆಯು ಮುಳುಗದಾ
ಹಾಗೆ ಕಾಯುವಿರಿ ನೀವೂ ||
ಗುರುನಾಥ ನೀನಿರುವಾಗ ಜಗದೊಳು
ಅನಾಥರೂ ಯಾರು
ಅರಿವಿನ ದೊರೆಯೇ ನಿನ್ನ ಬಳಿ ನಾವಿರಲೂ
ಆನಂದವೇ ಇನ್ನೂ ||
ಬೇಡಿಸಿಕೊಳ್ಳದೆ ಪೊರೆಯುವ ಪ್ರಭುವೆ
ಪರಮಾತ್ಮನೂ ನೀನೂ
ಹುಸಿಮುನಿಸಿಂದಾ ಕಳೆಯುತಾ ಪಾಪವಾ
ಹರಸು ಎಮ್ಮನಿಂದೂ ||
ಸಖರಾಯಪುರದಾ ಸದ್ಗುರುನಾಥನೇ
ಸಲಹೋ ಅವಧೂತಾ
ಅಂಬಾಸುತನಾ ಅಂತರಂಗದಲ್ಲೀ
ನೆಲೆಸೋ ಗುರುನಾಥಾ ||
No comments:
Post a Comment