ಗುರುನಾಥ ಗಾನಾಮೃತ
ಎಲ್ಲಿ ನಿಲುವೆ ಎಂದು ಬರುವೆ ಗುರುವೆ ನಮ್ಮ ಮನೆಯಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಎಲ್ಲಿ ನಿಲುವೆ ಎಂದು ಬರುವೆ ಗುರುವೆ ನಮ್ಮ ಮನೆಯಲಿ
ಎಂತು ನಲಿವೆ ಹೇಗೆ ನುಡಿವೆ ಗುರುವೆ ನಮ್ಮ ಮನದಲಿ || ಪ ।।
ನಿನ್ನ ನೋಡುವ ಕಾತರ
ನೀಗಿಸಿತು ನಮ್ಮೆಲ್ಲಾ ಬೇಸರ
ಹೊತ್ತಿಸಿ ಹೃದಯದಿ ಕಿರುದೀಪ
ಕಾಣುವೆ ಎಲ್ಲೆಲ್ಲೂ ನಿನ್ನ ದಿವ್ಯರೂಪ ।। ೧ ।।
ಸ್ವಾತ್ಮಾರಾಮದ ಆ ಬಿಂಬ
ಮೂಡಿದೆ ಮನದಲದರ ಪ್ರತಿಬಿಂಬ
ಕರ್ಮವಶಪ್ರಾಪ್ತಿಯ ಜೀವನ
ನಿನ್ನ ಸ್ಮರಣೆಯಿಂದ ಪಾವನ ।। ೨ ।।
ಜೀವನವೇ ನೀನಿತ್ತ ಭಿಕ್ಷೆ
ಅದುವೇ ನಮ್ಮ ಬಾಳಿಗೆ ಶ್ರೀರಕ್ಷೆ
ಜನ್ಮಜನ್ಮದ ಅನುಬಂಧ
ತಿಳಿಯದರ ಋಣಾನುಬಂಧ ।। ೩ ।।
No comments:
Post a Comment