ಒಟ್ಟು ನೋಟಗಳು

Saturday, November 25, 2017

ಗುರುನಾಥ ಗಾನಾಮೃತ 
ಗುರುಮಂದಿರದೊಳು  ದೀಪಾರಾಧನೆ
ರಚನೆ: ಅಂಬಾಸುತ 


ಗುರುಮಂದಿರದೊಳು  ದೀಪಾರಾಧನೆ
ಘನತರ ಶ್ರೀಗುರುವಿಗಿದು ಸಮರ್ಪಣೆ  ||

ಸಾವಿರದ ಸುಖವಾ ನೀಡ್ವಗೇ
ಸಾವಿರದ ದೀಪದ ಸಾಲೂ
ತಮಕಳೆವಾ ಪ್ರಭುವಿಗೇ
ತನ್ಮಯದ ಈ ಸಾಲು  ||

ಚಿತ್ತಾರ ವಯ್ಯಾರ
ದೀಪಗಳೇ ಇಲ್ಲಿ ಮಂದಾರ 
ಭಾವಿಕ ಭಕುತರ 
ಗುರುನಾಮ ಝೇಂಕಾರ  ||

ಶ್ರೀಕಾರ ಓಂಕಾರ 
ಗುರುವಿಲ್ಲಿ ಸಾಕಾರ 
ಬೆಳಗಿಹ ಪ್ರತಿ ಜ್ಯೋತಿಯಲೂ
ಗುರುವಿನದೇ ಆಕಾರ  ||

No comments:

Post a Comment