ಗುರುನಾಥ ಗಾನಾಮೃತ
ಗತಿ ನೀನೇ ಗುರುನಾಥಾ
ರಚನೆ: ಅಂಬಾಸುತ
ಗತಿ ನೀನೇ ಗುರುನಾಥಾ
ಸನ್ಮತಿ ಪಾಲಿಸ ಬೇಕೋ ಅವಧೂತಾ ||ಪ||
ಅರಿಯದೆ ಹೋದೇ ನಿನ್ನನು ನಾನು
ಅರಿವಿನ ದೊರೆಯೇ ಅಪ್ರಮೇಯನೇ ||೧||
ಗಣನೆಗೆ ನಿಲುಕದ ಮಹಿಮೆಯ ತೋರಿದೆ
ಗಾಢಾಂಧಕಾರವ ನೀನು ಕಳೆದೆ ||೨||
ರಾಮ ಕೃಷ್ಣಾ ಹರನೂ ನೀನೇ
ಬ್ರಹ್ಮಸ್ವರೂಪ ಗುರುದೇವಾ ||೩||
ನಮ್ಮ ಪಾಲಿಗೆ ನೀ ಸರ್ವಸ್ವ
ನಿನ್ನ ಸಾನಿಧ್ಯವದೇ ಸ್ವರ್ಗ ||೪||
ಮೋಹ ದಾಹದ ಭ್ರಾಂತಿಯ ಬಿಡಿಸೋ
ನಿನ್ನ ನಾಮದಿ ಎನ್ನ ಮನವಿರಿಸೋ ||೫||
ಸಖರಾಯಪುರವಾಸಾ ಹೇ ಗುರುನಾಥಾ
ಅಂಬಾಸುತ ನಿನ್ನ ದಾಸರ ದಾಸ ||೬||
No comments:
Post a Comment