ಗುರುನಾಥ ಗಾನಾಮೃತ
ಜ್ಞಾನಭಾಸ್ಕರ ಬೆಳಗುತಿರುವ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಜ್ಞಾನಭಾಸ್ಕರ ಬೆಳಗುತಿರುವ
ಕರ್ಮಬಂಧನ ಕಳೆಯುತಿರುವ
ನೋಡಲು ಸಖರಾಯಾಧೀಶನ
ಸಾಲದು ಸಾವಿರ ನಯನ ||
ಹಚ್ಚಿಟ್ಟ ದೀಪಗಳ ಸಾಲು
ಸರಿಸಿತು ಕಾರಿರುಳ ಕತ್ತಲು
ಮರೆಸಿತು ನಮ್ಮೆಲ್ಲರ ಚಿಂತೆ
ಹರಡಿತು ಎಲ್ಲೆಡೆ ನಿಶ್ಚಿಂತೆ || ೧ ||
ನಶಿಸಿ ಮನದ ಅಂಧಕಾರ
ಕರಗಿಸಿ ದುಃಖದ ಮಮಕಾರ
ಓಡಿಸಿ ನಾನೆಂಬ ಅಹಂಕಾರ
ಮಾಡಿಸಿ ಸಚ್ಚಾರಿತ್ರ್ಯದ ಅಲಂಕಾರ || ೨ ||
ದೀಪಜ್ಯೋತಿಯ ಬೆಳಕಿನಲಿ
ನಮ್ಮೆಲ್ಲಾ ಪಾಪಗಳು ಕರಗಲಿ
ಗುರುವರನ ಅನುಗ್ರಹ ದೊರೆಯಲಿ
ಗುರುಸೇವೆಗಮ್ಮ ಬದುಕೇ ಮೀಸಲಾಗಿರಲೀ...|| ೩ ||
No comments:
Post a Comment