ಗುರುನಾಥ ಗಾನಾಮೃತ
ಓಡೋಡಿ ತಾ ಬಂದಾ ಸದ್ಗುರುವರಾ ಬೃಂದಾವನದಿ ನಿಂದಾ
ರಚನೆ: ಅಂಬಾಸುತ
ಓಡೋಡಿ ತಾ ಬಂದಾ ಸದ್ಗುರುವರಾ ಬೃಂದಾವನದಿ ನಿಂದಾ
ಭಾವಿಕ ಭಕುತರಾ ಭಕುತಿಗೆ ತಾನೊಲಿದೂ ||ಪ||
ದಟ್ಟಿಯೊಂದನು ಉಟ್ಟು ದಿಟ್ಟ ನರಸಿಂಹನಂತೇ
ಮನದಾ ದುಷ್ಟತನವೆಂಬಾ ಬೇರನ್ನು ಕೀಳುತಾ
ಸಾತ್ವಿಕತೆ ಎಂಬಾ ಬೀಜವನ್ನೂ ನೆಟ್ಟೂ
ಭಕ್ತಿ ಜ್ಞಾನವೆಂಬಾ ಫಲವನ್ನು ನೀಡಲೂ ||೧||
ಯಜ್ಞಪುರುಷ ತಾನೂ ಯಜ್ಞೋಪವೀತ ಧರಿಸೀ
ಕರ್ಮವ ಕಳೆಯುವ ಧರ್ಮಮಾರ್ಗವ ತೋರೇ
ನಸುನಗುತಲಿ ನರವೇಷಧಾರಿ ಹರಾ
ನಾವೀಕ ತಾನಾಗಿ ಈ ಭವಸಾಗರ ದಾಟಿಸೇ ||೨||
ಹುಸಿಮುನಿಸು ತೋರುತಾ ಹಸನಾಗಿ ಬಾಳಿರೆನುತಾ
ಸಾಧುಸಂತರ ಸೇವೆ ಮಾಡಿರಿ ಎನುತಾ
ಸತ್ ಚಿತ್ ಆನಂದ ಸ್ವರೂಪನೆ ತಾನಾಗೀ
ಸತ್ಚಿಂತನೆಗಳಾ ಚಿತ್ತದೊಳಗೇ ಇರಿಸೇ ||೩||
ಸಖರಾಯಪುರಾಧೀಶಾ ಶ್ರೀವೇಂಕಟಾಚಲಾ
ಭಕ್ತವತ್ಸಲ ಭಗವಂತಾ ಅವಧೂತಾ
ಅಂಬಾಸುತನ ಅಂತರಂಗದಾ ಮೊರೆಯಾ ಕೇಳೀ
ಅಜಹರಿಹರ ರೂಪಾ ಸದ್ಗುರುನಾಥಾ||೪||
No comments:
Post a Comment