ಒಟ್ಟು ನೋಟಗಳು

Tuesday, November 21, 2017

ಗುರುನಾಥ ಗಾನಾಮೃತ 
ಗುರುನಾಥ ಜೊತೆಗಿರಲೂ ಅನಾಥ ಭಾವವೇಕಮ್ಮಾ
ರಚನೆ: ಅಂಬಾಸುತ 


ಗುರುನಾಥ ಜೊತೆಗಿರಲೂ ಅನಾಥ ಭಾವವೇಕಮ್ಮಾ
ಸ್ಥಿತಿಗತಿಗೆ ಅವನಿಹನೂ ಸಂತತಾ ಸಲಹುವನೂ ||ಪ||

ಹೆತ್ತವಳ ಮರೆಸುವಾ ಮಮತೆ ತೋರುವನವನೂ
ಕಷ್ಟವೆಂದೂ ಕರೆಯೇ ತಾನೋಡಿ ಬರುವನೂ ||೧||

ಪ್ರೀತಿಯಿಂದ ತುತ್ತನೀವಾ ಮುತ್ತಿನಾ ಮಾತುಗಳ ಪೇಳ್ವಾ
ತಪ್ಪು ಮಾಡೇ ಗದರದೇ ತಿದ್ದಿ ಬುದ್ದಿ ಕಲಿಸುವಾ ||೨||

ಕಣ್ಣಂಚಲೂ ನೀರು ಬರದ ಹಾಗೇ ಕಾಯ್ವಾ
ಧರ್ಮಮಾರ್ಗದೇ ನೆಡೆಸೀ ಎಮ್ಮನುದ್ಧರಿಸುವಾ ||೩||

ಹೊತ್ತು ಮೆರೆಸುವ ನಿನ್ನಾ ಹತ್ತಿರದಿ ತಾನಿರುವಾ
ಪುಣ್ಯದಾ ಹಿರಿಗಂಟಾ ನಿನ್ನ ಹೆಗಲೇರಿಸುವಾ ||೪||

ಸಖರಾಯಪುರದಾ ಅವಧೂತಾ ತಾನೇ
ಅಂಬಾಸುತನ ದೊರೆಯು ಅರಿವಿನಾ ಸಿರಿಯೂ ||೫||

No comments:

Post a Comment