ಒಟ್ಟು ನೋಟಗಳು

Saturday, November 18, 2017

ಗುರುನಾಥ ಗಾನಾಮೃತ 
ಗುರುವು ಎನ್ನಲೇ ನಿನ್ನ ದೈವವೆನ್ನಲೇ
ರಚನೆ: ಅಂಬಾಸುತ 


ಗುರುವು ಎನ್ನಲೇ ನಿನ್ನ ದೈವವೆನ್ನಲೇ
ಎನ್ನ ತಾಯಿ ಎನ್ನಲೇ ಆತ್ಮಬಂಧು ಎನ್ನಲೇ ||ಪ||

ಉಸಿರು ಉಸಿರಲೂ ನೀ ಬೆರೆತು ನಿಂತಿಹೇ
ಎನ್ನ ಬಾಳಹಸಿರಿಗೇ ನಿನ್ನ ಹೆಸರನಿರಿಸಿಹೇ
ಅರಿವಿನ ಮನೆಯೊಳಗಿರಿಸಿಹೆ ಆನಂದವ ತುಂಬಿಹೇ
ಅಲ್ಪತೆಯಾ ಕಳೆವ ಹೇ ಘನ್ನಮಹಿಮನೇ ನಿನ್ನಾ ||೧||

ಅನ್ನ ನೀರು ನೀಡುತಿಹಾ ಪ್ರಾಣಕಾರಣಾ ಪ್ರಭುವೇ
ಮೋಹದಾಹ ಕಳೆಯುತಿಹಾ ಓ ಮಹಾನೀಯನೇ
ಮಮತೆಯ ಮಡಿಲಾಗಿಹೆ ಮಾನಾಪಮಾನ ಮರೆಸಿಹೇ
ದೋಷಕಾಣದಂತ ಕಂಗಳ ನೀಡುವ ದೊರೆಯೆ ನಿನ್ನಾ ||೨||

ಸಖರಾಯಪುರದೊಳೂ ವಾಸವಾಗಿಹಾ ಗುರುವೇ
ಶ್ರೀವೇಂಕಟಾಚಲ ನಾಮಾಂಕಿತನೇ
ಅಂಬಾಸುತಗೇ ಜಗದಂಬೆಯೊಳೂ ಕಂಡವನೇ
ಅವಧೂತನಾಗೀ ಅಜ್ಞಾನ ಕಳೆವ ಶಿವನೆ ನಿನ್ನಾ ||೩||

No comments:

Post a Comment