ಒಟ್ಟು ನೋಟಗಳು

Tuesday, July 31, 2018

ಗುರುನಾಥ ಗಾನಾಮೃತ 
ಪಾಲಯಮಾಂ ಗುರುನಾಥ
ರಚನೆ: ಅಂಬಾಸುತ 

ಪಾಲಯಮಾಂ ಗುರುನಾಥ
ಪರಿ ಪಾಲಯಮಾಂ ಗುರುನಾಥ ||ಪ||
ಪರಮಪದವೀಯೊ ಎಂದು ಬೇಡೆನು ನಾ ಪರಮಪುರುಷನೆ
ನಿನ್ನ ಪಾದಪದುಮದ ಧೂಳನ್ನೆನ್ನಾ ಶಿರದ ಮೇಲಿರಿಸೊ ||ಅ.ಪ||

ಹಂಗಿರದಾ ಶ್ರೀರಂಗನ ರೂಪನೆ
ಸತ್ಸಂಗವನಿತ್ತು ನೀ ಸಲಹಯ್ಯ
ಭಂಗವಿಧೂರನೆ ನಿನ್ನ ಮರೆಯದಾ ಹಾಂಗೆ ಜ್ಞಾನ ಗಂಗೆಯನು ಸ್ಪುರಿಸಿ
ಮಂಗತನವ ಮರೆಸುತ ದೇವನೆ ನೀ ಎನ್ನಂತರಂಗದೊಳು ಬಂದು ನೆಲೆಸೊ ||೧||

ಗುರುದೇವನೆ ಗುಣಪರಿಪೂರ್ಣನೆ
ಘನ್ನ ಮಹಿಮೆಯಾ ತೋರಯ್ಯಾ
ಆರರಿಗಳ ಅಟ್ಟಾಡಿಸಿ ಓಡಿಸಿ ಆದಿಮೂರುತಿ ನಿನ್ನ ಅರ್ಚನೆಗಯ್ಯುವ
ನಿಜ ಆನಂದವ ನಿರುತವು ನೀನಗೆ ಪಾಲಿಸಲೇ ಬೇಕೈ ಗುರುವೇ ||೨||

ಶ್ರೀಕೃಷ್ಣಯೋಗೀಂದ್ರ ಅವತಾರಿ
ನಾರಾಯಣ ಯೋಗೀಂದ್ರ ರೂಪಿ
ಸಖರಾಯಪುರದೊಳು ಸಾತ್ವಿಕ ರೂಪದಿ ಬಂದ ಶಿಷ್ಯರನು ಸಲಹುತಲಿರುವೆ
ಅಂಬಾಸುತನ ಈ ಮೊರೆಯನು ಕೇಳುತ ಕನಿಕರದಿ ದರುಶನವನ್ನೀಯೊ ||೩||
ಗುರುನಾಥ ಗಾನಾಮೃತ 
ಒಲ್ಲದ ಮನದಿಂದ ಕೈ ಮುಗಿದು ಬೇಡಿದೊಡೆ
ರಚನೆ: ಆನಂದರಾಮ್, ಶೃಂಗೇರಿ  


ಒಲ್ಲದ ಮನದಿಂದ ಕೈ ಮುಗಿದು ಬೇಡಿದೊಡೆ
ಎಲ್ಲೋ ಮನವಿತ್ತು ಕೂಗಿದೊಡೆ ಬರಲಾರನು
ಗುರುರಾಯ ಸಖರಾಯಪುರದ ಮಹನೀಯನು|
                                                      
ನಡೆದಾಡುವ ದೇವನು ನಿನ್ನ ಎಲ್ಲಾ ನಡೆಯ ಬಲ್ಲನು
ಕಣ್ತಪ್ಪಿಸಿ ನಡೆಯದೇನು ಅವ ಎಲ್ಲಾ  ಬಲ್ಲ ದೇವನು|
                                             
ಅವಕಾಶವಾದಿಯಂತೆ ಭಕ್ತಿ  ತೋರಿದೊಡೆ ನಾನು
ಮರುಳಾಗಿ ಕರುಣಿಸನು ಎಂದೂ ನನ್ನ ಗುರುದೇವನು

ಪ್ರಚಾರ ಪ್ರಿಯನಲ್ಲ ನನ್ನ ಗುರು ಏನೂ ಬಯಸನು
ಅಡೆತಡೆಯಿಲ್ಲದೆ ಗುರು ಸದಾ ಸ್ವಪ್ರಕಾಶಿಸುವವನು|

ಏನೂ ಬಯಸದ ಗುರು ಇರುವುದೆಲ್ಲ ಕೊಡುವನು
ನಿನ್ನರ್ಪಣೆಯ  ಎಲ್ಲರಿಗೂ ಅವ ಸಮರ್ಪಿಸುವನು|

ಅರ್ತತೆಯ ಕೂಗಿನ  ನಿಜ  ಬಕುತನ  ಪ್ರಿಯ ಇವನು
ನಿಜಬಕುತನ ತಿದ್ದಿತೀಡಿ ಸದಾ ಸರಿದಾರಿ ತೋರುವನು

ಬೃಂದಾವನದಲಿ ನೆಲಸಿಹನು ನಮ್ಮೆಲ್ಲರ ದೇವನು
ಸಕರಾಯಪುರವೆಂಬ ಪುಣ್ಯ ಭೂ ವೈಕುಂಠದೊಳು|
ಗುರುನಾಥ ಗಾನಾಮೃತ 
ನೀ ಕಾಡಬೇಡವೊ ನೀ ದೂಡಬೇಡವೊ
ರಚನೆ: ಅಂಬಾಸುತ 

ನೀ ಕಾಡಬೇಡವೊ ನೀ ದೂಡಬೇಡವೊ
ನಾ ನಿನ್ನ ದಾಸನೊ ಸದ್ಗುರುರಾಯ ||ಪ||
ನಾ ಕಾಡುವೆ ನಾ ಬೇಡುವೆ
ನಿನ್ನಡಿಯನೆ ಸದಾ ||ಅ.ಪ||

ದೇಹಿ ಎನ್ನುತ ನಿನ್ನ ಕರುಣಾದಾಹಿಯಾಗಿ
ಬಂದಿಹೆನೊ ಬಳಲುತ ಭವದ ಮನೆಯಿಂದ
ಬರಿದಾದ ಈ ಮನದಿ ನಿನ್ನ ಮೂರುತಿ ತುಂಬಿ
ಸಲಹಯ್ಯ ಸಾಕೆನಗೆ ಬೇರೇನು ಬೇಡೆನೊ ||೧||

ಹೊಸಿಲ ದಾಟಿಸೊ ನಿನ್ನ ಮನೆಯೊಳಗೆ ಸೇರಿಸೊ
ಹಸಿದು ಬಂದಿಹೆನೊ ಹುಸಿಯನಾಡುತಲಿಲ್ಲ
ಭಕ್ಷ್ಯ ಭೋಜನ ಬೇಡೆ ಧನಕನಕ ಮೊದಲೇ ಬೇಡೆ
ದೊರೆ ನೀನು ದೀನ ನಾನು ಪ್ರೇಮದೀ ಹರಸೋ ||೨||

ಗುರುವಿರದ ಬಾಳೆಂದೂ ಹಾಳು ಗುಡಿಯಂತೆ
ಗುರುವಿದ್ದರೆ ಬೇರೇ ದೈವವೇ ಬೇಡವಂತೆ
ಗುರಿತೋರು ಬಾ ಗುರುವೇ ಘನತನದ ಅರಿವೆ
ಗುಣಪೂರ್ಣನಾಗಿಸೆನ್ನ ನಿನ್ನ ಸೇವೆಯ ನೀಡೀ ||೩||

ಸಖರಾಯಪುರವಾಸಿ ಸದ್ಗುರುನಾಥಾ
ಅಂಬಾಸುತ ಎಂದೂ ನಿನ್ನಯ ದಾಸ
ಅವನ ಈ ಮೊರೆಯ ಕೇಳಯ್ಯ ನಾಥ
ಕರುಣೆ ತೋರುತ ಕಾಯೊ ಸದ್ಗುರುನಾಥ ||೪||
ಗುರುನಾಥ ಗಾನಾಮೃತ 
ಹಾಸಿಗೆ ಹೇಸಿಗೆ ಎನಿಸಿದ ಮೇಲೆ
ರಚನೆ: ಅಂಬಾಸುತ 

ಹಾಸಿಗೆ ಹೇಸಿಗೆ ಎನಿಸಿದ ಮೇಲೆ
ಕಾಸಿಗೆ ಕಿಮ್ಮತ್ತು ಕೊಡದ ಮೇಲೆ
ಕನಸಿಗೆ ಕಾಲ ಕಳೆಯದ ಮೇಲೆ
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ||

ಮರಣದಾ ಭಯವ ಬಿಟ್ಟ ಮೇಲೆ
ಮತ್ತಿನ ಮೋಹವ ಸುಟ್ಟ ಮೇಲೆ
ಮರೆಮಾಚದೆ ಎದಿರು ನಿಂತಾ ಮೇಲೆ
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ ||

ಬದುಕ ಬಂಧನವೆಂದು ಭಾವಿಸದ ಮೇಲೆ
ಬರಡಿಗೆ ಕನಿಕರ ತೋರಿದ ಮೇಲೆ
ಭಾವಕ್ಕೆ ಪ್ರತಿಭಾವವ ನೀಡಿದ ಮೇಲೆ
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ ||

ಅರಿವಿನಾ ಹಾದಿ ಹಿಡಿದಾ ಮೇಲೆ
ಆದಿಗೆ ಆದ್ಯತೆ ನೀಡಿದ ಮೇಲೆ
ಆತಂಕವೆಂಬುದ ತಳ್ಳಿದ ಮೇಲೆ
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ ||

ಆನಂದವೆಂಬೋದೆ ಇಲ್ಲಿ ಮಾಳಿಗೆ
ಆನಂದ ರೂಪಿ ಗುರು ಇರುವ ಮಾಳಿಗೆ
ಅಂಬಾಸುತ ತಾನೇರಲು ಬೇಡಿಹ ಮಾಳಿಗೆ
ಗುರುಪಾದ ಕೃಪೆಯಿಂದ ಕಾಣುವ ಮಾಳಿಗೆ 
ಏರುವೆ ನೀ ಮಾಳಿಗೆಯಾ
ಏರುವೆ ನೀ ಮಾಳಿಗೆಯಾ ||

Monday, July 30, 2018

ಗುರುನಾಥ ಗಾನಾಮೃತ 
ಯಾವ ಸೇವೆಯ ಮಾಡಲಿ  ಗುರುವೇ ನಿನ್ನ ಪ್ರೀತಿ ಪಡೆಯಲು 
ರಚನೆ: ಆನಂದರಾಮ್, ಶೃಂಗೇರಿ  


ಯಾವ ಸೇವೆಯ ಮಾಡಲಿ  ಗುರುವೇ ನಿನ್ನ ಪ್ರೀತಿ ಪಡೆಯಲು
ಎಷ್ಟು ಮಾಡಿದರೂ ಸಾಲದು ನಿನ್ನ ಕರುಣೆ ದೊರೆಯಲು|

ಯಾವ ಹೂವ ಅರ್ಪಿಸಿ ಬೇಡಲಿ ನಿನ್ನ ಚರಣಕ್ಕೇ
ಮಾಲೆಯೋ ಬಿಡಿ ಪುಷ್ಪವೋ ಅರಿಯದಾದೆ ಗುರುವೇ"|

ಹೇಗೆ ಮಡಿ ಮಾಡಿ ಬರಲಿ ನಾನು ನಿನ್ನ ಸನಿಹಕೇ
ಮಲಿನ ಮನವ  ಶುದ್ಡಿ ಮಾಡಿ ಬರಲೇ ಗುರುವೇ|

ಉಟ್ಟ ಬಟ್ಟೆಯೊಳು ನಾ ನಿನ್ನ ಬಜಿಸಲೇ ಗುರುವೇ
ನಾರಿನ ಮಡಿಯ ಬಟ್ಟೆ ಎನ್ನ ಬಳಿ ಇಲ್ಲ ಗುರುವೇ|

ಫಲ ಪುಷ್ಪ ಸಿಹಿ ಹಣ್ಣು ತಾಂಬೂಲ ಬುಟ್ಟಿಯಲಿರಿಸಿ
ಪಂಚಾಮೃತ ಎಳನೀರು ಒಪ್ಪವಾಗಿಇಡುವೆ ಗುರುವೇ|

ಮಂತ್ರವಿಲ್ಲದೆ ಬರಿ ಮಂತ್ರಾಕ್ಷತೆಯಲಿ ಪೂಜಿಸುವೆ
ಆರತಿ ಮಾಡದೆ ಮನಧಾರತಿ ಬೆಳಗುವೇ ಗುರುವೇ|

ಇನ್ನು ತಡಮಾಡದೆ ನಿನ್ನ ದರುಶನವ ನೀಡು ಗುರುವೇ
ನಿನ್ನ ಅಶಿರ್ವಾದವೆ  ಎನಗೆ ತೀರ್ಥಪ್ರಸಾದ ಗುರುವೇ|

Sunday, July 29, 2018

ಗುರುನಾಥ ಗಾನಾಮೃತ 
ಬದುಕು ಭಾರವಾಗಿ ಭಕುತಿ ಮಾಡದಾದೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಬದುಕು ಭಾರವಾಗಿ ಭಕುತಿ ಮಾಡದಾದೆ ಗುರುವೇ
ಬದುಕ ನಡೆಸಿ ನಿನ್ನ ನೆನೆವ ಬುದ್ದಿ ನೀಡೋ ಗುರುವೇ|

ಬೇಡುವೆನು ಮನದ ಶಂಕೆ ದೂರ ಮಾಡೊ ಗುರುವೇ
ಮನದ ವಾಸನೆ ಕರ್ಕೋಟಕ ನಾಶ ಮಾಡು ಗುರುವೇ

ಬರಿದು ಮನವು ಕಲ್ಮಶ ತುಂಬುವುದು ನೀ ಕೈ ಬಿಟ್ಟರೆ
ನಿರ್ಮಲ ವಾದೀತು ನೀ ಹರಸಿ ನನ್ನ ಎಚ್ಚರಿಸಿದರೆ|

ಕಣ್ಣು ಕದ್ದು ನೋಡುವುದು ತಾಮಾಸಿಕ ಅಟ್ಟಹಾಸವ
ಬಾಯಿ ಚಪಲವದು ನುಡಿವುದು ಅನ್ಯರ ವಿಷಯವ|

ಆಡಂಬರದ ಬಕುತಿಯ ಬೆನ್ನತ್ತಿ  ನಿನ್ನ ಅರಿಯದಾದೆ
ಅರಿವಿನಾಲಯಕೆ ದಾರಿ ತೋರೋ ಓ  ನನ್ನ ಗುರುವೆ|

ಬರೀ ಬೇಡುವದೊಂದೆ ಬದುಕಾಯ್ತು  ನನ್ನ ಗುರುವೇ ಕತ್ತಲೊಳು ಮನವು ಮಿಂದು ಸಾಕಾಗಿದೆ ಗುರುವೇ|

ಇನ್ನು ತಡಮಾಡದೆ ಎನ್ನ ಸಲಹಯ್ಯ ನನ್ನ ಗುರುವೇ
ಬೇಡುತಲೇ ಮನವು ಬರಿದಾಯ್ತು ಕಾಪಾಡು ಗುರುವೇ|
ಗುರುನಾಥ ಗಾನಾಮೃತ 
ಎಷ್ಟು ಕಾಲ ಭವದ ಚಿಂತೆಯಲಿ ಇರಿಸುತೀಯೋ ಗುರುರಾಯ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಎಷ್ಟು ಕಾಲ ಭವದ ಚಿಂತೆಯಲಿ ಇರಿಸುತೀಯೋ ಗುರುರಾಯ
ಅರಿವಿನ ಮನೆ ಇನ್ನೆಷ್ಟು ದೂರವಿದೆಯೋ ಗುರುನಾಥ |

ಮಾಡುವ ಸೇವೆಯಲಿ ಕುಂದುಬಂದಿತೇ ಗುರುನಾಥ
ಜಪಿಸುವ ನಾಮವು ಕಡಿಮೆಯಾಯಿತೇ ಗುರುದೇವ |

ಹೀನ ಕಾರ್ಯದಲಿ ಮನವು ತೊಡಗೀತೇ ಗುರುನಾಥ
ಅನ್ಯರ ವಿಷಯದಲಿ ನುಡಿಯು ಹೊರಟೀತೇ ಗುರುದೇವ |

ಜಗದ ವೈಭವದಿ ತನುವು ಮೆರೆದೀತೇ ಗುರುನಾಥ 
ಬದುಕಿನಾ ಸಂಕಟದಿ ನಿನ್ನನೇ ಮರೆತೆನೇ ಗುರುರಾಯ |

ನನ್ನದೆಂಬ ಅಭಿಮಾನದಿ ಮಾಯೆ ಮುಸುಕೀತೇ ಗುರುರಾಯ 
ಅತಿಯಾದ ಆಸೆಯಲ್ಲಿ ಅಜ್ಞಾನ ಕವಿದೀತೇ ಗುರುನಾಥ !

Friday, July 27, 2018

ಗುರುನಾಥ ಗಾನಾಮೃತ 
ನಾನೊಂದು ನಾದವಿರದಾ ಬಿದಿರು
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ನಾನೊಂದು ನಾದವಿರದಾ ಬಿದಿರು
ತುಂಬಲಿದಕೆ ಗುರುನಾಮದಾ ಉಸಿರು |
ನಾದಹೊಮ್ಮಿಸು ಈ ಕೊಳಲಿನಲಿ
ಮಾರ್ದನಿಸಲದೆಮ್ಮ ಕೊರಳಿನಲಿ ||

ಹೃದಯದಾಳದಿ ಹೊಮ್ಮಿದ ನಾದ
ಅಳಿಸಲೆಲ್ಲಾ ಅಸಂಖ್ಯ ಭೇದ |
ಅಮೃತರಾಗದಾ ಆಲಾಪನೆ
ಭಕ್ತಿರಸದಾ ಸಂವೇದನೆ ||

ಶರಣಾಗತಿಯ ಭಾವ ಹೊರಹೊಮ್ಮಲೀ
ಗುರುಶಕ್ತಿಯಾ ದನಿಗೂಡಲೀ |
ಗುರುತತ್ತ್ವದಾ ಶೃತಿಸೇರಲೀ
ಗುರುಸೇವೆಯೇ ನಮ್ಮ ಕೃತಿಯಾಗಲೀ ||

ಗುರುನಾಥ ಗಾನಾಮೃತ 
ಎದ್ದು ಬರಬಾರದೆ ಬೃಂದಾವನದಿಂದ ಗುರುವೆ
ರಚನೆ: ಅಂಬಾಸುತ 

ಎದ್ದು ಬರಬಾರದೆ ಬೃಂದಾವನದಿಂದ ಗುರುವೆ
ಸದ್ದು ಮಾಡದೆ ಅಲ್ಲಿ ತಪವ ಮಾಡಿಹೆ ಏಕೇ ||ಪ||

ಕಾನನದ ಏಕಾಂತ ಬಯಸಿ ಕುಳಿತಿಹೆ ಏನು?
ಭಕ್ತರಾಭೀಷ್ಟಗಳ ಸಲಿಸಿ ದಣಿದಿಹೆ ಏನು? ||೧||

ಮೌನ ಹಿಡಿದು ಕುಳಿತರೇನು ಮಾತನಾಡಿಸದೆ ಬಿಡೆನು
ಪಟ್ಟು ಹಿಡಿವೆನು ನಿನ್ನ ಪಾದವ ಕಟ್ಟುವೆನು ||೨||

ಅಷ್ಟು ಪಾಪಿಯೇ ನಾನು ನಿನ್ನ ದರುಶನ ಪಡೆಯದಷ್ಟು
ಇಷ್ಟು ಹೇಳುವೆ ಗುರುವೆ ಮುಂದೆ ನಿನ್ನಿಷ್ಟವೊ ||೩||

ಕರವ ಜೋಡಿಸಿಹೆನೊ ಶಿರವ ನೆಲಕೆ ಮುಟ್ಟಿಸಿಹೆನೊ
ಮನದ ತುಂಬ ನಿನ್ನ ಕಾಣೊ ಬಯಕೆ ತುಂಬಿಕೊಂಡಿಹೆನೊ ||೪||

ಸಖರಾಯಪುರದ ಪ್ರಭುವೆ ಭಕುತರಾ ಭಾಗ್ಯದಾ ನಿಧಿಯೇ
ಅಂಬಾಸುತಗೆ ನಿನ್ನ ಕಾಣೊ ಅರಿವನಿತ್ತು ಪೊರೆಯೊ ದೊರೆಯೇ ||೫||

Thursday, July 26, 2018

ಗುರುನಾಥ ಗಾನಾಮೃತ 
ಮುನಿದು ಮುಖವ ಗಂಟಿಕ್ಕುವೆಯೋ
ರಚನೆ: ಅಂಬಾಸುತ 

ಮುನಿದು ಮುಖವ ಗಂಟಿಕ್ಕುವೆಯೋ
ಗುರುವೇ ನಿನಗೆ ಸರಿ ಇದು ಏನೋ?
ತರಳರ ತಪ್ಪನು ಮನ್ನಿಸದೆ
ಮೌನವಾಗಿರುವುದು ಸರಿಯೇನೋ? ||ಪ||

ಹುಡುಗುತನದಲಿ ತುಡುಕತನವ
ಗಡಬಡಿಸುತಲಿ ಮಾಡಿದೆನೆಂದು
ನೇಮ ಮುರಿದು ನಾರೀಮಣಿಯ
ಹೆಸರ ಹಿಡಿದು ಕೂಗಿದೆನೆಂದೂ ||೧||

ಹಸಿವ ತಡೆಯದೆ ಹುಸಿಯಾ ನುಡಿದು
ಕಸಿವಿಸಿಯಲಿ ಉಂಡೆನೆಂದು
ಮಡಿಯಲಿರದೆ ಮಾಧವನಾ
ಚರಣಕರ್ಚನೆ ಮಾಡಿದೆನೆಂದೂ ||೨||

ಪತ್ರೆ ತರಲು ಹೋಗುವೆನೆಂದು
ಪಾಠ ಬಿಟ್ಟು ಹೋದೆನೆಂದು
ಪದವ ಜೋಡಿಸೊ ಗೀಳಲಿ ಬಿದ್ದು
ಪಾದಸೇವೆಯ ಮರೆತೇನೆಂದೂ ||೩||

ಸಖರಾಯಪುರವಾಸನೆ ನಿನ್ನ
ಸಖನೆಂದು ಕರೆದೇನೆಂದು
ಅಂಬಾಸುತನ ಪದಗಳೊಳಗಿನ
ಭಾವವನ್ನು  ಅರಿಯೆ ಎಂದೂ ||೪||
ಗುರುನಾಥ ಗಾನಾಮೃತ 
ಸ್ಮರಿಸೊ ಗುರುನಾಥನಾ
ರಚನೆ: ಅಂಬಾಸುತ 

ಸ್ಮರಿಸೊ ಗುರುನಾಥನಾ
ಮನವೇ ಸ್ಮರಿಸೋ ಗುರುನಾಥನಾ ||ಪ||

ಅವಧೂತಾತ್ಮಕನ ಅನಂತ ಮಹಿಮನ
ಅಪ್ರಮೇಯನ ಆನಂದರೂಪನ ||೧||

ಸ್ವಾತ್ಮಾರಾಮನ ಸಾಧುಸಜ್ಜನ ವಂದಿತನ
ಸದ್ಗುರುರೂಪನ ಸುಲಭಸಾಧ್ಯನ ||೨||

ಅಕ್ಷರವಾದವನ  ವರೇಣ್ಯತ್ವನ
ಕರ್ಮ ಕಳೆದವನ ತತ್ವಪರಿಪೂರ್ಣನ ||೩||

ಸಖರಾಯಪುರದೊಳು ನಿಂತವನ
ಅಂಬಾಸುತನ ದೊರೆ ಗುರುನಾಥನ ||೪||
ಗುರುನಾಥ ಗಾನಾಮೃತ 
ಹರಿವಾಣ ಸೇವೆಯ ನಿನಗೆ ಅರ್ಪಿಸುವೆನು ಹರಸೊ ಗುರುವೆ
ರಚನೆ: ಅಂಬಾಸುತ 

ಹರಿವಾಣ ಸೇವೆಯ ನಿನಗೆ ಅರ್ಪಿಸುವೆನು ಹರಸೊ ಗುರುವೆ
ಹರಿಯು ನೀನೇ ಹರನು ನೀನೇ ಅಜನು ನೀನೇ ಎನ್ನುತ್ತಾ ||ಪ||

ಅಭಿಷೇಕ ಅಲಂಕಾರ ನಿವೇದನೆ ಆರತಿಗಳ ಮಾಡಿ
ಸಡಗರದಿ ಸಂಭ್ರಮದಿ ಸರ್ವ ಭಕ್ತರನ್ನೊಡಗೂಡೀ ||೧||

ಧೇಹಿ ಧೇಹಿ ಎನುತಾ ಕರವ ಚಾಚಿ ನಿನ್ನಡಿಯಲ್ಲೀ ಬೇಡಿ
ಸೇವೆ ಮಾಡುವೆ ಸೇವ್ಯ ಸೇವಕ ಭಾವವೀಯೊ ಗುರುವೇ ಎನುತಾ ||೨||

ಬಂಗಾರದ ಹರಿವಾಣದಲಿ ನಿನ್ನ ಪದಪಂಕಜದೊಳಗಿಟ್ಟಾ
ತುಳಸಿ ಪತ್ರೆ ಪುಷ್ಪಗಳನು ಇರಿಸಿ ಶಿರದ ಮೇಲೆ ಹೊತ್ತು  ||೩||

ತಾಳ ವೀಣೆಯ ಧರಿಸೀ ಕರದಿ ನಿನ್ನ ನಾಮವ ಪಾಡುತಲಿ
ಲಯಗೊಳಿಸೊ ನಿನ್ನೊಳಗೆನ್ನಾ ಎನುತ ಲಯಬದ್ದನಾಗಿ ||೪||

ಸಖರಾಯಪುರವಾಸಿ ಗುರುವೇ ಅಂಬಾಸುತನಾ ದೊರೆಯೇ
ಸರ್ವ ಸೇವೆಯ ಅರ್ಪಿಸುವೆನೊ ಸಂತ ಸೇವೆಯ ಎನಗೀಯೋ ||೫||
ಗುರುನಾಥ ಗಾನಾಮೃತ 
ಭೋಗಿಯಲ್ಲವೊ ಎನ್ನ ಗುರುನಾಥ
ರಚನೆ: ಅಂಬಾಸುತ 

ಭೋಗಿಯಲ್ಲವೊ ಎನ್ನ ಗುರುನಾಥ
ಭವರೋಗ ಹರಿಸುವ ವಿರಾಗಿ ಮಹಾಯೋಗಿ ||ಪ||

ಅರಿಯದವನಾ ಅರಿವಿಗೆ ಇವ ಸಂಸಾರಿ
ಅರಿತವರಿಗೆ ಇವನೇ ಮುರಾರಿ
ಲೋಕಬಂಧವಿರದ ನಾಕದ ಅಧಿಕಾರಿ
ಸೋಹಂಭಾವದಿಂದಿರುವ ಮನಸಂಚಾರಿ ||೧||

ಮಗುವಾಗಿ ನಕ್ಕಾನೊಮ್ಮೆ ಗದರಿಸಿ ನುಡಿದಾನೊಮ್ಮೆ
ಲಘುತನವ ಗುರುವಾಗಿ ಅಳಿಸಿಹನೆ
ಹಂಗಿರದ ರಂಗಿರದ ಸತ್ಸಂತದೊಡೆಯಾನು
ಮಂಗಮಾಯವಾಗೊ ದೇಹ ಭಾವಾವ ಕಳೆದಾನೊ ||೨||

ಆನಂದರೂಪ ನಿಜಾನಂದ ನೀಡುತಾ
ಜಗದಾನಂದದ ಸವಿಯನ್ನೇ ಉಣಿಸ್ಯಾನೊ
ಮಾಯಾಪಾಶಗಳ ಮರೆಮಾಚಿಸೀ ಬೇಗ
ಮಹಾದೇವ ತಾನಾಗೇ ಎಮಗೆ ಕಂಡ್ಯಾನೊ ||೩||

ಸಖರಾಯಪಟ್ಟಣದೊಳಗೆ ಮೆರೆಯುತ್ತಾ
ಸಖರಾಗಿ ಸತ್ಶಿಷ್ಯರನು ಪೊರೆದಾನು
ಅಂಬಾಸುತನಿಂ ನಿತ್ಯ ಪದಸೇವೆ ಪಡೆಯುತ್ತಾ
ಪಾದಪಂಕಜದ ದರುಶನ ನೀಡ್ಯಾನು ||೪||

Tuesday, July 24, 2018

ಗುರುನಾಥ ಗಾನಾಮೃತ 
ಹೊರಟೆ ನಾನು ಸಖರಾಯಪುರಕೆ ಬಲು ಸಂಭ್ರಮದಿ 
ರಚನೆ: ಆನಂದರಾಮ್, ಶೃಂಗೇರಿ  


ಹೊರಟೆ ನಾನು ಸಖರಾಯಪುರಕೆ ಬಲು ಸಂಭ್ರಮದಿ 
ಗುರುವ ಕಂಡು ಬೇಡಿ ಬರಲು ಬಲು ಹಂಬಲದಿ|

ದಾರಿ ಸವೆಸಿ ಭಕ್ತಿ ಬಾವದಿ ಗುರುವೇ ನಿನ್ನ  ನೆನೆಯುತ 
ಹೆಜ್ಜೆ ಹೆಜ್ಜೆಗೂ ನೀವೇ ಕಾಯಬೇಕು ನನ್ನ ಎನ್ನುತಾ|

ದಣಿವಿಲ್ಲಾ ಈ ದೇಹಕೆ ಎಷ್ಟು ಬಜಿಸಿದರು ಎನುತ
ಅರಿವಿಲ್ಲ ನೋವಿನ ಸುಳಿವಿಲ್ಲ ನೆನೆಸಿದರೆ ಹಾಡುತ |

ಮೂಡನೋ ನಾನು ಬಕುತಿಯ ಗುಟ್ಟು ತಿಳಿದಿಲ್ಲ
ಬರೀ ನೋಡಿ ಕೇಳಿ ನಂಬಿ ನಡೆವ ಭಕ್ತಿ ಇದೆಲ್ಲಾ|

ಸಣ್ಣವನಾದೆನು ನಾ ಗುರುಬಂದುಗಳ ಜೊತೆಗೂಡಿ
ಹೆಚ್ಚು ಅರಿತೆನೋ ನಿಜ ಬಕುತಿಯ ಮಾಡಿ ನೋಡಿ|

ಮೂಕನೋ ನಾನು ಶಾಸ್ತೃವಿದ್ಯೆಗಳ ಸಾಲಿನಲ್ಲಿ
ಕುರುಡು ಭಕ್ತಿಯ ತೋರಿ ಗುರುವ ನಂಬಿದೆನಿಲ್ಲಿ|

ಬೇಕು ಬೇಡಗಳ ಮೂಟೆ ಹೊತ್ತು ಹೊರಟ ಮೂಡ
ಕೆಳಗಿಳಿಸದೇ ನಿರಾಳವಾಗಿದೆ ಎನ್ನ ಎದೆಯ ಗೂಡ|
ಗುರುನಾಥ ಗಾನಾಮೃತ 
ನೀನಲ್ಲವೇ ಗುರುದೇವ ಸ್ತುತಿಪ ಎಲ್ಲರಾ ಮಹಾದೇವ
ರಚನೆ: ಆನಂದರಾಮ್, ಶೃಂಗೇರಿ  


ನೀನಲ್ಲವೇ ಗುರುದೇವ ಸ್ತುತಿಪ ಎಲ್ಲರಾ ಮಹಾದೇವ
ಶರಣು ಶರಣೆನ್ನಲು ಬವಬಂದನ ಕಳೆವ ಗುರುದೇವ|

ಪದಗಳಲೇ ಪೂಜಿಸಿ ನಿನ್ನ ಪಾದ ನೆನೆಸುತ ಬೇಡುವೆ
ಮನದಲೇ  ಅರ್ಚಿಸುತ ನಿನ್ನ ಪಾದವ ಪಿಡಿಯುವೆ|

ಹೃದಯ ಕಮಲದಲಿ ನೆಲೆ ನಿಲ್ಲೊ ಎನ್ನ ಗುರುವೇ
ಅಂತರಂಗದಲ್ಲಿ ನಾ ಬಾವ ಶುದ್ದಿ ಮಾಡಿ ಕೊಳ್ಳುವೇ|

ಬಕುತಿಯಲಿ ಕಡು ಬಡವನು ನಾನು ಎನ್ನ ಕರುನಿಸೊ
ಸದಾ ನಿನ್ನ ಬಜಿಸುವ ಕಾಯಕದಿ ಎನ್ನ ತೊಡಗಿಸೋ|

ತೋರಿಕೆಯ ಬಕುತಿಯದು ಎನಗೆ ಬೇಡ ಗುರುವೇ
ಯಾರಿಗೂ ಅರಿಯದಂತೆ ಬಕುತಿ ಮಾಡಿ ನಡೆವೆ|

ನಿನ್ನ ಮಹಿಮೆ ತಿಳಿದಾಗ ಆಸೆ ಹೊತ್ತು ನಿಂತೆನಯ್ಯಾ
ನೀ ನುಡಿದ ಪದಗಳಾ ಕೇಳಿ ನಾ  ಪಾಠ ಕಲಿತೆನಯ್ಯಾ|

ನಿನ್ನಣತಿ ಇಲ್ಲದೆ ಏನೂ ನಡೆಯದು ಎಂದರಿತೆ ನಾನು
ಇನ್ನು ನನ್ನ ಉದ್ದರಿಸುವ ಕೆಲಸ  ನಿನ್ನದಲ್ಲವೇನೋ|
ಗುರುನಾಥ ಗಾನಾಮೃತ 
ಬೃಂದಾವನದ ಒಳಗೆ ಕುಳಿತ ಸದ್ಗುರುವರ
ರಚನೆ: ಅಂಬಾಸುತ 

ಬೃಂದಾವನದ ಒಳಗೆ ಕುಳಿತ ಸದ್ಗುರುವರ
ಭಾವಿಕ ಭಕುತರ ಭವಬಂಧ ಹರಿಸುವಾ ಈತ ಹರ ||ಪ||

ಬಣ್ಣಿಸಲಾರೆ ಇವನ ಮಹಿಮೆ ಭಾವ ಸುಂದರ
ಭಾವಿಕಾ ಭಕುತರಾ ಮನವೆ ಈತನ ಮಂದಿರ ||೧||

ಸುಲಭಕೆ ಸಿಗುವವನಲ್ಲ ಸಾಧನೆಗೆ ಸಾಕಾರ
ಅಳಿಸುವವನು ತನು ಮನದ ಎಲ್ಲ ವಿಕಾರ ||೨||

ಲೋಕಚಿಂತೆ ಬಿಟ್ಟವರಿಗೆ ಕಂಡ ಸಾಹುಕಾರ
ಕೂಡಿ ಕಳೆದು ಕಲಿಸುವನು ಧರ್ಮದ ವ್ಯವಹಾರ ||೩||

ಕಲ್ಲಿಗೂ ಕರುಣೆ ತೋರೊ ಕೃಪಾಸಾಗರ
ಕಂಡವರಿಗೆಲ್ಲರಿಗೂ ಈತನೇ ಸುರ ಹರ ||೪||

ಲೀಲೆ ತೋರಿದನಿಲ್ಲಿ ಗುರು ಸಖರಾಯಪುರ
ಅಂಬಾಸುತನಿಗೆಂದಿಗೂ ಈತ ಗುರು ಹರಿ ಹರ ವರ ||೫||
ಗುರುನಾಥ ಗಾನಾಮೃತ 
ಸದ್ಗುರುನಾಥನಿಗರ್ಪಣೆ ಯಾತ್ರೆ
ರಚನೆ: ಅಂಬಾಸುತ 

ಸದ್ಗುರುನಾಥನಿಗರ್ಪಣೆ ಯಾತ್ರೆ
ಸದ್ಗುರುನಾಥನಿಗೆ ಅರ್ಪಣೆ ||ಪ||
ಸದ್ಗುರುನಾಥನಿಗೆ ಸಖರಾಯಪುರವಾಸಿಗೆ
ಆತ್ಮಸುಖವಾ ನೀಡೊ ಎನ್ನಾತ್ಮ ಸಖನಿಗೆ ||ಅ.ಪ||

ತನು ಮನವ ದಂಡಿಸಿ ತೋರುವಿಕೆಯಾ ಅಳಿಸಿ
ತಮ ತಾರತಮ್ಯವ ಅಳಿಸೊ ಅಡಿಯಿಟ್ಟಂತಹ ||೧||

ಪದರಕ್ಷೆ ಪಡೆದು ಬಾಹ್ಯ ಪಾದರಕ್ಷೆ ತೊರೆದು
ಗುರುವಿತ್ತ ಪದಗಳ ಪೋಣಿಸುತ ಬಂದಂತಹ ||೨||

ಜ್ಞಾನ ವೀಣೆಯ ಹಿಡಿದು ಲಯದ ತಾಳವ ಬಡಿದು
ಭಕ್ತಿ ಮಾರ್ಗದಿಂದಲಿ ಮುಕ್ತಿ ಮಂಟಪದತ್ತ ನೆಡೆವ ||೩||

ಪರಮಹಂಸರ ಕೃಪೆಯಿಂದ  ಪ್ರಾರಂಭಿಸಿ
ನಾಲ್ಕಾಶ್ರಮಾ ಮೀರಿದಾ ಅವಧೂತನೆಡೆಗೆ ನೆಡೆದ ||೪||

ಅಂಬೆಯ ಸುತನಾಗಿ ಆನಂದ ಬೇಡುತಲಿ
ಅಂತರಂಗದ ದೊರೆ ಅವಧೂತನ ಕಾಣ ಹೊರಟ ||೫||