ಒಟ್ಟು ನೋಟಗಳು

Monday, July 31, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸ್ವೀಕೃತ್ಯಾಸ್ಮಾಕಂ ಭಕ್ತಿಂ
ವಿಶ್ವಾಸಮಚಲಂ ಗುರುಃ |
ವರ್ಷಯತಿ ಮೇಘ ಇವ 
ಅಮಿತಂ ಕಾರುಣ್ಯಾಮೃತಂ ||


ನಮ್ಮ ಅಚಲವಾದ ಶ್ರದ್ಧೆ ವಿಶ್ವಾಸ ಭಕ್ತಿಯನ್ನು ಸ್ವೀಕರಿಸಿದ ಸದ್ಗುರುವು ಮೋಡಗಳು ಭುವಿಗೆ ಅಪಾರ ಮಳೆ ಸುರಿಸುವಂತೆ ಮಿತವೇ ಇಲ್ಲದಷ್ಟು  ಕಾರುಣ್ಯಾಮೃತವನ್ನು ವರ್ಷಿಸುತ್ತಾನೆ....

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
Sri Sadguru Mahime

Author: Charana Dasa

Translator: Shri.Ganesh Prasad

Chapter 115 :  Victory celebrations or Mourning?

Politicians flocked to Gurunatha’s house during election time in a bid to get an audience. Political party leaders and candidates hoped they would get blessings from Gurunatha.

During a national election, local leaders, wanting to know their political future and get blessings from Gurunatha came to his house. Gurunatha would only look for people’s purity of thoughts and feelings. Their clothes, status or political affiliations did not matter to him.

The group that had gathered asked Gurunatha.”Sir, it is certain that our party will win elections, is it not? Our elected representative will become the Prime minister; we can make arrangements for a victory lap, is it not?

Gurunatha replied, “See, as you are expecting your party will win and your chosen candidate will become the Prime Minister also. However, in a party function he will succumb to a human bomb attack, so it is better that you prepare yourselves for mourning”.

They had known Gurunatha to be outspoken and a straight talker. So, without the courage to question him, silently they went back.

Election results came and as Gurunatha had rightly predicted their party won and their candidate became the Prime Minister. But, within months there was bomb explosion in a rally which he attended. His body was sliced into pieces beyond recognition. Guru’s words had come true yet again. Gurunatha used to visit a math near Bangalore. One of the caretakers there offered his respects to Gurunatha and asked him a question. “There are four dogs in our math, Everyday after the puja during the aarti they start whining. No matter what we do, they will not stop”.

Gurunatha smiled and said, “We take birth according to our Karmas. How your shadow follows you and not someone else’s likewise, your Karma will follow you. These dogs are none other than the people who served here earlier (giving out the names of those people). They have stolen silver articles, ornaments of the idol and other things and ended getting this life on account of their sins.

Those of us around him understood the intricacies of Karma and its seriousness. We started analyzing our own conduct and actions from that day.

For Copies of Sadguru Mahime English and Kannada, Guru Bandhus can contact 94810 25416.

Unauthorised copy and distribution in any way without the permission of the Original Author is strictly prohibited.
ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 60
ನಿನಗೆ ಡ್ಯೂಯಲ್ ರೋಲಿದೆ ಅದನ್ನು ಮಿಕ್ಸ್ ಮಾಡುವಂಗಿಲ್ಲ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


'ನಮ್ಮೊಂದಿಗಿನ ಮೂವತ್ತನಾಲ್ಕು ವರ್ಷಗಳ ಒಡನಾಟದಲ್ಲಿ ಮೊದಲ ಹತ್ತು ವರ್ಷಗಳು ನಮ್ಮೊಂದಿಗೆ ಅವರು ಎಷ್ಟು ಸಲೀಸಾಗಿ ಒಂದಾಗಿದ್ದರೆಂದರೆ ಭಾವನ ವರ ಜೊತೆಗೆ ಭಾವನಾಸ ಬಂಧವದಾಗಿತ್ತು ಮುತ್ತು ಅವರು ಸಾಧನೆಯ ತುತ್ತ ತುದಿಗೇರಿ, ಪ್ರಖ್ಯಾತರಾಗಿ ಅವಧೂತರಾಗಲೂ ನನ್ನೊಂದಿಗೆ ಅದೇ ಪ್ರೀತಿ ಸೌಜನ್ಯಗಳ ವ್ಯವಹಾರ ಅವರದಾಗಿತ್ತು. ಎಲ್ಲರೂ ಅವರನ್ನು ಗುರುವೆಂದು ನಮಸ್ಕರಿಸಿದಾಗ... ನನಗೆ ಇದೇನು.... ನಾನು ಇಷ್ಟು ಸರಳವಾಗಿ ಅವರೊಂದಿಗೆ ಇದ್ದೀನಲ್ಲಾ ಎಂಬ ಚಿಂತೆ ನನಗೆ ಬರುತ್ತಿತ್ತು. ಭಾವಮೈದುನರ ಸಂಬಂಧದ ನಡುವೆಯೂ ನನ್ನ ಮನದಲ್ಲಿ ಅವರ ಬಗ್ಗೆ ಒಂದು ಪೂಜ್ಯ ಭಾವನೆ ನನಗೆ ಅರಿಯದೇ ನನ್ನೊಳಗೇ ನಿರ್ಮಾಣಗೊಂಡಿತ್ತು. ಬಹುಶಃ ಅವರು ನಮ್ಮ ಜೀವನದ ಸರ್ವಸ್ವವಾಗಿ, ಎಲ್ಲ ರಂಗಗಳಲ್ಲೂ ನಮ್ಮ ಜೀವನದಲ್ಲಿ ಮಿಳಿತವಾಗಿಬಿಟ್ಟಿದ್ದರು. ಒಮ್ಮೊಮ್ಮೆ ನಾನು ಯಾವ ರೀತಿ ವರ್ತಿಸಬೇಕೆಂದು ನನ್ನ ಮನದಲ್ಲಿ ಪ್ರಶ್ನೆ ಮೂಡಿದಾಗ "ನಿಮಗೆ ಎರಡು ರೋಲುಗಳನ್ನು ನಿರ್ವಹಿಸಬೇಕಾಗುತ್ತದೆ. ಒಂದು ಭಾವನಾಗಿ ಮತ್ತೊಂದು ಬೇಕಾದರೆ ಗುರುವಿನ ಶಿಷ್ಯನಾಗಿ, ಆದರೆ ಒಂದಕ್ಕೊಂದನ್ನು ಮಿಕ್ಸ್ ಮಾಡುವ ಹಂಗಿಲ್ಲ, ಎಂದು ನೇರವಾಗಿ ನುಡಿದಿದ್ದರು. ಒಮ್ಮೆ ಎಲ್ಲೆಲ್ಲಿಗೋ ಬೈಕ್ ನಲ್ಲೇ ಹೊರಟ ನಾನು ಹಾಸನ ತಲುಪಿ, ಚಿಕ್ಕಮಂಗಳೂರಿಗೆ ಬಂದು ಸಖರಾಯಪಟ್ಟಣಕ್ಕೂ ಬಂದೆ. ಸಹಜವಾಗಿ ನಾವು ಸಖರಾಯಪಟ್ಟಣಕ್ಕೆ ಬಂದರೆ ಅವರ ಪ್ರೀತಿ ಆದರಕ್ಕೆ ಕೊನೆಯೇ ಇಲ್ಲ. ಹಾಗಾಗಿ ಅಂದು ನನ್ನ ಜೊತೆಗೇ ಇದ್ದು, ಬೈಕಿನಲ್ಲಿ ನಾನು ಹೊರಟಾಗ ಜೊತೆಗೇ ಬಂದರು. ಬಸ್ ಸ್ಟ್ಯಾಂಡ್ ನ ಬಳಿ ಇಳಿಯುವರೇನೋ ಎಂದು ಬೈಕ್ ನಿಧಾನ ಮಾಡಿದೆ, ಇಳಿಯಲಿಲ್ಲ. ಮುಂದೆ ಮೇಲಿನ ಬಸ್ ಸ್ಟಾಂಡ್ ನ ಬಳಿ ಹೋದೆ. ಅಲ್ಲೂ ಇಳಿಯಲಿಲ್ಲ. ಆಮೇಲೆ ಊರು ಮುಂದಿನ ಜಾಗದ ಬಳಿ ಬೈಕ್ ನಿಲ್ಲಿಸಿ - 'ನಿಮ್ಮ ಮನೆಗೆ ನಿಮ್ಮ ತಂಗಿ ಬಂದಿದ್ದಾರೆ. ಅಜ್ಜಿ ಇದ್ದಾರೆ, ಯಾರು ಯಾರೋ ಇದ್ದಾರೆ... ನೀವು ನನ್ನ ಜೊತೆ ಬರುವುದಕ್ಕಿಂತ ಅಲ್ಲಿರುವುದು ಹೆಚ್ಚು ಸರಿಯೇನೋ' ಎಂದಾಗ, ಯಾವ ಭಾವವಿಲ್ಲದೇ ಬೈಕಿನಿಂದ ಇಳಿದು ಹೊರಟರು. ಮುಂದೆ ತಮಾಷೆಯಾಗಿ ಮನೆಯಲ್ಲಿ 'ನಮ್ಮ ಭಾವ ನೋಡಯ್ಯಾ... ನನ್ನ ಜೊತೆಗೆ ಕರೆದುಕೊಂಡು ಹೋಗಲೇ ಇಲ್ಲ.... ಬಿಟ್ಟು ಹೋದರು' ಎಂದು ತಮಾಷೆ ಮಾಡಿದರಂತೆ. ಹಿಂಗೆ ನಮ್ಮ ಅವರ ಮಧ್ಯದಲ್ಲಿ ಯಾವುದೇ ಪ್ರಿಜುಡೀಸ್ ಸಹ ಇರಲಿಲ್ಲ. ನನ್ನನ್ನು ಹೇಗೆ ಅವರು ಕಾಪಾಡುತ್ತಿದ್ದರೆಂದರೆ... ಸದಾ ಅವರ ಶ್ರೀರಕ್ಷೆ ನನ್ನ ಮೇಲೆ ಇರುತ್ತಿತ್ತು. ಪ್ರತಿ ದಿನ ಬೆಳಗೆದ್ದರೆ... ಅಂದಿನ ಕೆಲಸ ಕಾರ್ಯಗಳ ಇನ್ಸ್ಟ್ರಕ್ಷನ್ಸ್ ನನಗೆ ಬಂದಿರುತ್ತಿತ್ತು. ಇದು ಅವರು ನೇರವಾಗಿಯೋ ಅಪ್ರತ್ಯಕ್ಷವಾಗಿಯೋ ನೀಡಿರುತ್ತಿದ್ದರು. ಅವರು ತೋರಿಸಿದ ದಾರಿಯಲ್ಲಿ ನಾನು ನಡೆದದ್ದೇ ಜಾಸ್ತಿ. ಎಷ್ಟೋ ಸಾರಿ ನಾನು ಅವರಿಗೆ ಇಷ್ಟವಿಲ್ಲದೇ ಎಲ್ಲಿಗಾದರೂ ಹೋಗಬಯಸಿದರೆ ಎಷ್ಟು ಪ್ರಯತ್ನ ಮಾಡಿದರೂ ಹೋಗಲಾಗುತ್ತಿರಲಿಲ್ಲ. ಅದವರ ಇಚ್ಛೆಗೆ ಬಂತೆಂದರೆ ಎಲ್ಲ ಸುಸೂತ್ರವಾಗಿ ನಡೆಯುತ್ತಿತ್ತು. ಏನೂ ಕೇಳದೇ ಎಲ್ಲ ನೀಡಿದ ಆ ಚೈತನ್ಯದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಡೀ ಆಕಾಶವನ್ನೇ ನನಗೆ ಕೊಟ್ಟು ಬಿಟ್ಟಿದ್ದಾರೆ' ನನಗೀಗ ಏನೂ ಮಾತನಾಡಲು ಆಗುತ್ತಿಲ್ಲ. ನನ್ನದಾಗಿ ನನ್ನದೇನೂ ಉಳಿದಿಲ್ಲ ಎನ್ನುತ್ತಾರೆ ಸೂರ್ಯನಾರಾಯಣರಾಯರು ಭಾವುಕರಾಗಿ. 

ನೀವೇ ಬಂದು ನನ್ನನ್ನು ಉಳಿಸಿದ್ದು 

ಒಂದು ಮನೆ, ಮನೆ ಎಂದ ಮೇಲೆ ಹಲವು ವಯೋಮಾನದವರು ಇರುವುದು ಸಹಜವೇ. ಆ ಮನೆಯಲ್ಲೂ ಅತ್ಯಂತ ವಯೋವೃದ್ಧರಾದ ಅಜ್ಜಿಯೊಬ್ಬರಿದ್ದರು. ಗುರುನಾಥರ ಭಕ್ತರವರಾಗಿದ್ದರು - ಸಂಬಂಧವೂ ಇದ್ದಿತು. ಈ ಬಾರಿಯಂತೂ ಅಜ್ಜಿಯ ಸ್ಥಿತಿ ಚಿಂತಾಜನಕವಾಗಿಬಿಟ್ಟಿತ್ತು. ಇನ್ನೇನೋ... ಮುಗಿದೇ ಹೋಯಿತೇನೋ ಎಂಬಂತಹ ಸ್ಥಿತಿ ಬಂದಿತಂತೆ. ಅಪಾರವಾದ ಬಂಧು ಬಳಗದವರೂ, ಹತ್ತಿರದಲ್ಲಿ, ದೂರದಲ್ಲಿ ಎಲ್ಲ ಕಡೆ ಇರುವವರಿಗೂ ಫೋನು ಮಾಡಿದರು. ಮನೆ ತುಂಬಾ ಜನ- ಬಾಂಧವರು. ಬಂದವರಿಗೆಲ್ಲಾ ಅನ್ನ ಸಂತರ್ಪಣೆ ನಡೆಯತೊಡಗಿತು. ಫೋನು ಮಾಡಿದವರು 'ಯಾರು ಬೇಕಾದರೂ ಈಗಲೇ ಬಂದು ಬಿಡಿ. ಎಷ್ಟು ದಿನ ಬೇಕಾದರೂ ಇರಿ... ಮತ್ತೆ. ಪದೇ ಪದೇ ತಿಳಿಸುವುದೂ ಕಷ್ಟ. ಆಮೇಲೆ ನಮ್ಮನ್ನು ದೂರಬೇಡಿ' ಎಲ್ಲಾ ಬಾಂಧವರೂ ಬಂದರು. ಗುರುನಾಥರೂ ಬಂದರು. ಅಜ್ಜಿಯ ಬಳಿ ಕುಳಿತು, ತಲೆ ನೇವರಿಸಿದ್ದು ಅಲ್ಲಿದ್ದವರಿಗೆ ಕಂಡಿತು. ಆದರೆ, ಒಳಗೆ ಹೃದಯದ ಸಂಭಾಷಣೆ ಅದೇನು ನಡೆಯಿತೋ?' - ವಾಪಸ್ಸು ಹೊರಡುವಾಗ ತಂಗಿ ಭಾವನಾವರನ್ನು ಕರೆದು ಗುರುನಾಥರೆಂದರಂತೆ. 'ಏನೂ ಯೋಚಿಸಬೇಡ... ಏನೂ ಆಗುವುದಿಲ್ಲ... ಭಾವ... ಧೈರ್ಯವಾಗಿರಿ.. ಏನೂ ಆಗಲ್ಲ... ನೋಡಮ್ಮಾ ನೀನು ಧೈರ್ಯವಾಗಿರು. ನಿನ್ನ ಕೈಲಾಗುತ್ತದೆ... ಬಂದವರಿಗೆಲ್ಲಾ ಮಾಡಿ ಹಾಕು' ಎಂದರಂತೆ.... 

ಇಪ್ಪತ್ತು ಇಪ್ಪತ್ತೈದು ದಿನಗಳವರೆಗೆ ಹೀಗೆ ಅನ್ನದಾನ - ಮನೆ ತುಂಬಾ ಜನಗಳು. ಆಗಾಗ್ಗೆ ಮುಗಿದು ಹೋಯಿತು ಎಂದು ಅಜ್ಜಿಯನ್ನು ಕೆಳಗಿಟ್ಟು ಗಂಗಾಜಲ ಬಾಯಿಗೆ ಹಾಕುವುದು, ಮತ್ತೆ ಹಾಸಿಗೆಯಲ್ಲಿ ಮಲಗಿಸುವುದು ನಡೆದಿತ್ತು.... ಮುಂದೆ ಅಜ್ಜಿ ಗುಣಮುಖವಾಯಿತು. ನಾಲ್ಕು ವರ್ಷಗಳವರೆಗೆ ಇದ್ದರು. ಬಂದವರೊಂದಿಗೆಲ್ಲಾ ಅಜ್ಜಿ ಹೇಳಿಕೊಂಡಿದ್ದೆಂದರೆ 'ಗುರುನಾಥರೇ ನನ್ನನ್ನು ಬದುಕಿಸಿದ್ದು' ನೀವು ಬಂದು ನನ್ನನ್ನು ಉಳಿಸಿದಿರಿ' ಇಲ್ಲದಿದ್ದರೆ ನಾನೆಲ್ಲಿ ಉಳಿಯುತ್ತಿದ್ದೆ' ಎಂದು ಅದೆಷ್ಟು ಸಾರಿ  ಗುರುನಾಥರನ್ನು ಅವರು ಸ್ಮರಿಸಿದರೋ. 

ಮತ್ತೊಮ್ಮೆ ಗುರು ಮನೆಯಲ್ಲಿ ಒಂದು ಹಬ್ಬದ ಸಡಗರ. ಎಷ್ಟು ಜನ ಭಕ್ತಾದಿಗಳು ಬರುವರೆಂಬುದೂ ಎಂದೂ ಊಹಿಸಲಾಗದೇ, ಆದರೂ ಒಂದು ಲೆಕ್ಕದಲ್ಲಿ ಹೋಳಿಗೆಯ ಸಿದ್ಧತೆಯಾಗಿರುತ್ತಿತು. ಬಂದವರಿಗೆಲ್ಲಾ ಹೋಳಿಗೆಯ ಸಮಾರಾಧನೆಯು, ಊಟಕ್ಕೆ ಕುಳಿತಾಗ ಆಗುವುದಲ್ಲದೇ, ಹೊರಡುವಾಗಲೂ ಪ್ರಸಾದ ರೂಪವಾಗಿ ಮನೆಗೂ ಕಳಿಸಲಾಗುತ್ತಿತ್ತು. ಹೋಳಿಗೆ ಪ್ರಸಾದ ಮಾಡಿದವರಿಗೆ ಎಲ್ಲಿ ಕಡಿಮೆಯಾವುದೋ ಎಂಬ ಚಿಂತೆ ಉಂಟಾಗುತ್ತಿತ್ತು. ಆದರೆ... ಎಂದೂ ಹೋಳಿಗೆ ಕಡಿಮೆಯಾಗುವುದೇ ಇಲ್ಲ. ಮಾಡುವವರು ಲೆಕ್ಕಾಚಾರ ತಪ್ಪಿದರೇನೋ ಎಂದು ಚಿಂತಿಸಿದರೆ, ಸರಿಯಾಗಿ ಲೆಕ್ಕವಿಟ್ಟಿದ್ದಾರೆ. ಕೊಡುವುದು, ಬಡಿಸುವುದಕ್ಕೂ ಏನೂ ಕಮ್ಮಿ ಇಲ್ಲ.. ಆದರೆ ಮತ್ತಷ್ಟು, ಮತ್ತಷ್ಟು ಹೋಳಿಗೆಯು ಕೊಟ್ಟಷ್ಟು ಹೆಚ್ಚಾಗುತ್ತಲೇ ಸಾಗಿರುತ್ತಿತ್ತು. ಸಾಕಾಗದೇನೋ ಎಂದು ಅನುಮಾನ ಪಟ್ಟವರ ಅನುಮಾನ, ನಿರಾಧಾರವಾಗಿಬಿಡುತ್ತಿತ್ತು. ಹೀಗೆ ಅನ್ನಪೂರ್ಣೆಯೇ ಗುರುನಾಥರಿದ್ದಲ್ಲಿ ಆವಾಸವಾಗಿದ್ದು, ಎಲ್ಲವನ್ನೂ, ಅಭಿವೃದ್ಧಿಗೊಳಿಸುತ್ತಿದ್ದುದನ್ನು ಕಂಡವರಿಗೇನೂ ಕಡಿಮೆ ಇಲ್ಲ. ಅದನ್ನು ಸತ್ಸಂಗಕ್ಕಾಗಿ ಹಂಚಿಕೊಂಡಾಗ - ಗುರುನಾಥರ ಕೈನಿಂದ ಹೋಳಿಗೆ ಪಡೆದು ತಿಂದಷ್ಟೇ ಸಿಹಿಯ ಅನುಭವ - ಭಾವುಕರದು. 

ಗುರುನಾಥರ ಶಿಷ್ಯರು ಸ್ನಾನ ಮಾಡಿಸಿ, ಗುರುನಾಥರಿಗೆ ಹೊಸ ಪಂಚೆಯನ್ನು ಉಡಿಸಿ ಕಳಿಸುತ್ತಿದ್ದರಂತೆ. ಮನೆಯಿಂದ ಹೊರಗೆ ಹೊರಟರೆಂದರೆ, ಅದೆಷ್ಟು ಜನ ಎದುರಿಗೆ ಬಂದ ಭಕ್ತರು ಕಾಲಿಗೆ ಬಿದ್ದರೆಂದರೆ - 'ಗುರುನಾಥರ ಕೈ ತಮ್ಮ ಸೊಂಟಕ್ಕೆ ಸುತ್ತಿದ್ದ ಪಂಚೆಯ ಗಂಟಿನತ್ತ ಸಾಗುತ್ತಿತ್ತು. ಕಿತ್ತಲೆ ಹಣ್ಣೋ, ದ್ರಾಕ್ಷಿಯೋ  ಏನಾದರೂ ಒಂದು ಕೈಗೆ ಬರುತ್ತಿತ್ತು. ಬಂದವರಿಗೆ ಪ್ರಸಾದ ನೀಡಿ, ಹರಸಿ ಕಲಿಸುತ್ತಿದ್ದುದನ್ನು ಅವರ ಆಪ್ತ ಶಿಷ್ಯರುಗಳು ಬೆರಗುಗಣ್ಣುಗಳಿಂದ ನೋಡುತ್ತಿದ್ದರಂತೆ. ಒಬ್ಬ ಅಂತರಂಗದ ಭಕ್ತರು ಇದೇ ರೀತಿ ದ್ರಾಕ್ಷಿಯನ್ನು ತೆಗೆದುಕೊಂಡಿರುವುದನ್ನು ನೋಡಿದರು. ಒಂದೆರಡು ಸಾರಿಯಾದರೆ, ಪಂಚೆಯ ಗಂಟಿನಲ್ಲಿ ಇಟ್ಟುಕೊಂಡಿರಬಹುದು ಎಂದು ಸುಮ್ಮನಾಗಬಹುದು. ಐದಾರು ಸಾರಿ ಹೀಗೆ ತೆಗೆದು ಕೊಡುತ್ತಿದ್ದರೆ.... ಅದೇನು ಸೊಂಟಕ್ಕೆ ಸುತ್ತಿದ ಪಂಚೆಯ ಗಂಟೋ... ಕೈ ಚೀಲವೋ... ಕೇಳಿಯೇಬಿಟ್ಟರಂತೆ ಗುರುನಾಥರನ್ನು.. 'ಏ ಸುಮ್ಮನಿರೋ, ನನಗೆ ಅಸಿಡಿಟಿ ಅಂತ ಒಂದೆರಡನ್ನು ಪಂಚೆಯ ಗಂಟಿನಲ್ಲಿ ಇಟ್ಟಿರುತ್ತೇನೆ. ಯಾರಿಗಾದರೂ ಬೇಕಾದರೆ ತೆಗೆದುಕೊಡುತ್ತೇನೆ' ಎಂದು ಯಾಮಾರಿಸುವ ಉತ್ತರ ನೀಡಿದಾಗ, ಆ ಭಕ್ತ 'ಅಲ್ಲ ಗುರುನಾಥರೇ, ಈಗ ತಾನೇ ಪಂಚೆ ಬೇರೆ ಮಡಿ ಖಾಲಿ ಪಂಚೆ ಉಟ್ಟುಕೊಂಡಿರಲ್ಲಾ.... ' ಎಂದು ಅಳುಕುತ್ತಲೇ ಕೇಳಿದಾಗ 'ಅದನ್ನೂ ನೀನು ನೋಡಿಬಿಟ್ಟೆಯಾ.. ಸುಮ್ಮನಿರು ಅದನ್ನೆಲ್ಲಾ ಕೇಳಬಾರದು' ಎಂದು ಪ್ರೀತಿಯಿಂದ ಹುಸಿಮುನಿಸು ತೋರಿಸಿದರಂತೆ ಗುರುನಾಥರು. 

ಒಂದೇ ಎರಡೇ ಇಂತಹ ಚಮತ್ಕಾರಗಳು. ಇದೆಲ್ಲಾ ಪವಾಡಗಳಲ್ಲ. ಸಹಜವಾಗಿ ನಡೆಯುವ ಘಟನೆಗಳೆಂಬಂತೆ, ತಾವೇನೂ ಮಾಡೇ ಇಲ್ಲ, ಏನೂ ನಡೆದೇ ಇಲ್ಲವೆನ್ನುವಂತೆ... ಬಹು ಸರಳವಾಗಿ ಇದ್ದುಬಿಡುತ್ತಿದ್ದರಂತೆ, ಗುರುನಾಥರು. 

ಇಂತಹ ಅನೇಕ ಗುರು ಲೀಲೆಗಳು ನಿತ್ಯ ಸತ್ಸಂಗಕ್ಕೆ ಗುರುಬಂಧುಗಳು, ಗುರುಸಂಬಂಧಿಗಳು ನೀಡುತ್ತಲೇ ಸಾಗಿದ್ದಾರೆ. ಅದನ್ನೆಲ್ಲಾ ಸತ್ಸಂಗಾಭಿಮಾನಿಗಳೊಂದಿಗೆ ಹಂಚಿಕೊಳ್ಳುವುದೇ ಒಂದು ಸಮಾರಾಧನೆ. ಪ್ರಿಯ ಗುರುಬಂಧುಗಳೇ, ನಾಳೆಯೂ ಬರುವಿರಲ್ಲಾ... ಧನ್ಯವಾದಗಳು. ಗುರುನಾಥರ ಸಹೋದರಿಯರಿಗೆ, ಬಂಧುಗಳಿಗೂ ಮತ್ತೊಂದು ನಮನ ಸಲ್ಲಬೇಕಲ್ಲವೇ? 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

Sunday, July 30, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಮೃಣ್ಮಯೇ ಆದರ್ಶೇ ಯಥಾ
ನ ದೃಶ್ಯತೇ ಸ್ಪಷ್ಟಂ ರೂಪಂ |
ಮದಾಹಂಕಾರಮನಸಿ 
ಕಥಂ ವಾ ದೃಶ್ಯೇತ ಗುರುಃ ||


ಹೇಗೆ ಮಣ್ಣಿನಿಂದ ಆವೃತವಾದ ಕನ್ನಡಿಯಿಂದ ಸ್ಪಷ್ಟವಾದ ರೂಪವು ಕಾಣಿಸುವುದಿಲ್ಲವೋ ಹಾಗೆ ಮದ ಅಹಂಕಾರವೇ ಮೊದಲಾದ ಅವಗುಣಗಳಿಂದ ಯುಕ್ತವಾದ ಮನಸ್ಸಿನಲ್ಲಿ ಸದ್ಗುರುವಿನ ಸಾಕ್ಷಾತ್ಕಾರವಾದರೂ ಹೇಗೆ ಸಾಧ್ಯವಾಗುತ್ತದೆ...ನಿರ್ಮಲವಾದ ಮನಸ್ಸಿನಲ್ಲಿ ಮಾತ್ರ ಸದ್ಗುರುವಿನ ದರ್ಶನವುಂಟಾಗುವುದು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Saturday, July 29, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸಮತ್ವಂ ಸರ್ವಜಂತುಷು
ಸರ್ವಾವಸ್ಥಾಸು ಏಕತ್ವಂ |
ಸ್ಥಿರಧೀಃ ಜಗದ್ವ್ಯಾಪಾರೇ  
ಪ್ರೇರಕೋ ಏವ ಸದ್ಗುರುಃ ||


ಸಕಲಚರಾಚರ ಜಂತುಗಳನ್ನು ಸಮಭಾವದಿಂದ ನೋಡುವುದನ್ನು... ಕೋಪತಾಪಗಳಾದಿ ಸಕಲಾವಸ್ಥೆಗಳಲ್ಲಿ ಒಂದೇ ರೀತಿಯಾಗಿ ಇರುವುದನ್ನು‌... ಕ್ಷಣಭಂಗುರವಾದ ಜಗತ್ತಿನ ವ್ಯಾಪಾರಗಳಲ್ಲಿ ಸ್ಥಿರವಾದ ಮನಸ್ಸು ಹೊಂದುವಂತೆ ಪ್ರೇರೇಪಿಸುವವನೇ  ಸದ್ಗುರುವು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
Sri Sadguru Mahime

Author: Charana Dasa

Translator: Shri.Ganesh Prasad

Chapter 114 :  How will I get my Guru?

Guru is an ocean of compassion; he will be waiting to liberate his devotees from the entanglement of this world. However, only when one’s karma reduces he/she will get a Guru.

Two friends had set out from Bangalore to see the seer from an advaitha math. During their journey they heard about Gurunatha from someone so they cut short their journey to visit Sakharaya Patna. Even before they entered Gurunatha’s house, he stopped them and said. You had set out to visit the advaitha peetha; you have come here cutting short your journey. This is not acceptable. You should visit the advaitha peetha first and then come here. Then we shall talk.

Those friends were surprised as Gurunatha told them about each of their steps just by a mere look at them. They had food at Guruantha’s house and started towards the advaitha peetha as they had planned earlier. After their visit to the peetham they came back to Sakharaya Patna the next day. But, as their luck would have it, they were never able to meet Gurunatha. Guru will not be available easily to one and all.

In another instance, Gurunatha came out of his house and went to one of the devotee’s house in the same town. An old lady in the house received him. He told her “I am very hungry and I want you to serve me some food, will you get me some food please”? The old lady served him whatever she had prepared for herself. Gurunatha had that food, greeted the lady with folded hands came back to his house and was resting on his chair.

Within about ten minutes news came from that house that the old lady had passed away. A devotee who was standing next to Gurunatha, who had seen him coming out of that devotee’s house asked him whether he was already aware that the old lady was about to die.

Gurunatha told him “Yes, and in order to give her salvation I had food from her”.

One will be able to get a Guru only on account of the merit that he/she has accumulated in the previous lives.

For Copies of Sadguru Mahime English and Kannada, Guru Bandhus can contact 94810 25416.

Unauthorised copy and distribution in any way without the permission of the Original Author is strictly prohibited. 
ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 59
ಗುರುವಿದ್ದಾಗ ಚಿಂತೆ ಏಕೆ? 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥


ಗುರುನಾಥರನ್ನು ಅಣ್ಣನಾಗಿ ಪಡೆದ ತಂಗಿಯ ಮಹಾನುಭಾವ ಇಂದಿನ ಸತ್ಸಂಗಕ್ಕೆ ಸಿಕ್ಕಿರುವುದು ಇಂದಿನ ವಿಶೇಷವಾಗಿದೆ. ಅವರೆನ್ನುತ್ತಾರೆ: "ನಮ್ಮ ಅಣ್ಣ ನಮಗಾಗಿ ಎದುರು ಕುಳಿತು ಹೀಗೆ ಮಾಡು, ಇದು ಸರಿ, ಇದು ತಪ್ಪೆಂದು ತಿಳಿಸದಿದ್ದರೂ, ನಮ್ಮನ್ನು ಪರಿಪೂರ್ಣವಾಗಿ ಬೆಳೆಸಿದುದನ್ನು ಮರೆಯುವಂತಿಲ್ಲ. ಅದೆಷ್ಟೋ ವಿಚಾರಗಳು ನಮ್ಮ ಮನದಲ್ಲಿ ಮೂಡಿ ಕಾರ್ಯ ರೂಪವಾಗುವ ಹಿನ್ನೆಲೆಯಲ್ಲಿ ಇದು ಹೇಗೆ ನಮಗೆ ತಿಳಿಯಿತೆಂದು ಯೋಚಿಸಿದರೆ ಒಂದಿಂಚೂ ತಪ್ಪು ಹೆಜ್ಜೆ ಇಡದಂತೆ, ಸರಿ ದಾರಿಯಲ್ಲಿ ನಾವು ಸಾಗುವಂತೆ ಮಾನಸಿಕವಾಗಿ ಬೋಧೆಯನ್ನವರು ನೀಡುತ್ತಿದ್ದುದೇ ಕಾರಣ. ಅವರ ಕರ್ತೃತ್ವ ಶಕ್ತಿ ಹೇಗಿತ್ತೆಂದರೆ ಎಲ್ಲವೂ ಕರಾರುವಾಕ್ಕಾಗಿಯೇ ನಡೆಯುವಂತೆ ಪ್ರೇರೇಪಿಸುತ್ತಿದ್ದರು. ನಮ್ಮಲ್ಲಿ ನಡೆಯುವ ಅನ್ನದಾನವೆಂದರೆ ಅದೊಂದು ನಿತ್ಯ ಸಂತರ್ಪಣೆಗಳೇ ಆಗಿರುತ್ತಿತ್ತು. ಇದು ನಮ್ಮ ಮನೆ ಮಾತ್ರವಲ್ಲ. ನಮ್ಮ ಊರಿನ ಎಲ್ಲ ಮನೆಗಳಲ್ಲೂ ಹಾಗೇ ಸಾಗುತ್ತಿತ್ತು. ಅವರು ಮಾಡುತ್ತಿದ್ದ ದಾನ ಧರ್ಮ, ಅಣ್ಣ ಸಂತರ್ಪಣೆಗಳು, ತಮಗೆ ಉಳಿಸಿಕೊಳ್ಳದೇ ದಾನ ಮಾಡುವ ರೀತಿ ನಮಗೆ ಎಂದೂ ತಪ್ಪೆಂದು ಅನಿಸುತ್ತಲೇ ಇರಲಿಲ್ಲ. ಅನೇಕ ಜನರು ಇದೇಕೆ ಹೀಗೆ ಇದ್ದದ್ದೆಲ್ಲಾ ದಾನ ಮಾಡುತ್ತಾರೆ, ನಾಳಿನದ್ದು ಯಾಕೆ ಚಿಂತಿಸುತ್ತಿಲ್ಲ... ನೀವು ಏನಂತೀರಿ ಎಂದು ಟೀಕಿಸಿದ್ದಾರೆ ನನ್ನೆದುರಿಗೆ. ಆದರೆ ನನ್ನಣ್ಣ ನನಗೆ ದೇವರಾಗಿ ತಂದೆಯಾಗಿ ನನ್ನ ಎಲ್ಲಾ ಸರ್ವಸ್ವವೇ ಅವರಾಗಿರುವುದರಿಂದ ಗುರುನಾಥರು ಮಾಡಿದ ಎಲ್ಲಾ ಕೆಲಸಗಳೂ ನನಗೆ ಸಮ್ಮತ ಶಿರೋಗ್ರಾಹ್ಯವೇ ಆಗಿತ್ತು. ನಾವೇನು ಮಾಡಬೇಕು ಯಾವುದು ಮಾಡಿದರೆ ತಪ್ಪಾಗುತ್ತದೆ ಎಂಬುದೆಲ್ಲಾ ಅವರೇ ನಮಗೆ ಅದು ಹೇಗೋ ತಿಳಿಸಿ ಮಾಡಿಸುತ್ತಿದ್ದರು" ಎಂದು ಭಾವ ಶುದ್ಧಿಯ ನೈಜ ನುಡಿಗಳನ್ನಾಡುತ್ತಾರೆ ಗುರುನಾಥರ ಒಡಹುಟ್ಟಿದ ತಂಗಿಯೊಬ್ಬರು. 

ಒಮ್ಮೆ ಅವರ ಯಜಮಾನರು ಹಾಸಿಗೆ ಹಿಡಿದರಂತೆ. ಅತಿ ಘೋರವಾದ ಪರಿಸ್ಥಿತಿ. ವೈದ್ಯರುಗಳೆಲ್ಲಾ ಕೈಚೆಲ್ಲಿ ಕುಳಿತರಂತೆ. ಅರ್ಧ ಶರೀರ ಇನ್ ಫೆಕ್ಷನ್ ಆಗಿದೆ. ನಾವೇನೂ ಹೇಳುವಂತಿಲ್ಲ. ಅವರ ಪುಣ್ಯದಿಂದ ಮಾತ್ರಾ ಅವರು ಉಳಿಯಬಲ್ಲರು ಎಂದು ತಿಳಿದಾಗ ಆ ಭಕ್ತೆ, ತಂಗಿ ಎಲ್ಲರಿಗೆ ಫೋನು ಮಾಡಿ ಗುರುನಾಥರಿಗೂ ವಿಷಯ ತಿಳಿಸಿದರಂತೆ. ತಡ ರಾತ್ರಿಯಾಗಿತ್ತು. ಗುರುನಾಥರು ಒಂದೆಡೆ ಊರಿನಲ್ಲಿ ಕುಳಿತುಬಿಟ್ಟರಂತೆ. ಅದ್ಯಾವ ದೈವದ ಮೊರೆ ಹೋದರೋ ತಮ್ಮದೇನನ್ನು ಬದಲಾಗಿ ನೀಡಿದರೋ ತಂಗಿಯ ಮಾಂಗಲ್ಯ ಭಾಗ್ಯವನ್ನು ಉಳಿಸಿಕೊಟ್ಟರು. ಇಂದೂ ಆ ದಂಪತಿಗಳು ನಿರಂತರ ಗುರುನಾಥರ ಸ್ಮರಣೆಯಲ್ಲಿ ಪ್ರತಿ ಕ್ಷಣಗಳನ್ನು ಕಳೆಯುತ್ತಿದ್ದಾರೆ ಸಂತಸದಿಂದ. 

ನಂಬಿದವರ ಉದ್ಧಾರ ಶತಸಿದ್ಧ ಮಾಡಲು ಸಾಧ್ಯನಾದ ಗುರುವಿಗೆ ಆಗದ್ದೇನಿದೆ ಅಲ್ಲವೇ? ಮಾನ್ಯ ಸತ್ಸಂಗಾಭಿಮಾನಿ ಗುರು ಭಕ್ತರೇ, ನಾಳೆಯೂ ನಮ್ಮೊಂದಿಗೆ ಇರಿ. ಮತ್ತಷ್ಟು ಗುರುನಾಥಾಮೃತ ಹರಿಯಲಿದೆ. ಇದು ಒಂದೆರಡು ಪುಟಗಳಲ್ಲಿ, ಪುಸ್ತಕಗಳಲ್ಲಿ ಮುಗಿಯುವುದಲ್ಲ. ಗುರು ಕರುಣಾಸಾಗರ, ಹಾಗೆಯೇ ಸತ್ಸಂಗ ನಿರಂತರ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

Friday, July 28, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಸುವರ್ಣಂ ತಾಡನತಾಪೈಃ 
ಯಥಾ ಪರೀಕ್ಷತೇ ಜನಃ |
ಗುರುಣಾ ಭಕ್ತಃ ವಿಶ್ವಾಸಂ
ದೃಢಚಿತ್ತಂ ಪರೀಕ್ಷತೇ ||


ಹೇಗೆ ಚಿನ್ನವನ್ನು ಜನರು ಕಾಯಿಸುವುದರಿಂದ..ಬಡಿಯುವುದರಿಂದ ಒರೆಹಚ್ಚಿ ಪರಿಶುದ್ಧಚಿನ್ನವನ್ನು ಪಡೆಯುತ್ತಾರೋ... ಹಾಗೆಯೇ ಸದ್ಗುರುವು ತನ್ನ ಭಕ್ತರ ದೃಢಭಕ್ತಿ ಅಚಲವಾದ ವಿಶ್ವಾಸಗಳನ್ನು ಅನೇಕರೀತಿ ಪರೀಕ್ಷಿಸುತ್ತಾನೆ... ಹಾಗೆ ಮಾಡಿ ಭಕ್ತರ ಅಂತರಂಗವನ್ನು ಶುದ್ಧಗೊಳಿಸಿ ಅಲ್ಲೇ ನೆಲೆಸುತ್ತಾನೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
Sri Sadguru Mahime

Author: Charana Dasa

Translator: Shri.Ganesh Prasad

Chapter 113 :  Last days

About two months prior to leaving his body, Gurunatha used to tell “Another month or so I will not be here, it is becoming difficult to work keeping this body”. He used to cryptically ask how many more day lights he may see. He was not traveling far from house. Wherever he went he was returning before 10.30pm.

About a week earlier, he called all women who were part of Soundarya Lahari reciting team. He got them to recite Soundarya Lahari at his home, offered his respects to them through flowers, fruits and clothes. Later he called one of the members and told her..”See one week from now, I will not be here. At 2 am a person will ask Charanadasa who can console Amma and be with her, he will take your name and he himself will come to your house. Please be ready”.

In between this, Gurunatha had performed Paduka puja at a devotee’s house in Chickmagalur. Though Gurunatha had asked her to get him the ‘Prasada’, she had not turned up.

About 48 hours prior to leaving his body he made me call her and tell her “ I will send the car, please come, it will extend my life by one year, I still have a lot of work to do, I need to get eight marriages arranged for my devotees. Please come”.

She did not respond properly, later Gurunatha said “See if you do not come now, you will not see me alive 48 hours from now with these words he hung up”. I looked at Gurunatha as if to ask what he meant by that. He said, “Sometimes we have to frighten people”. But, his face was devoid of emotions quite unlike when used to joke.

As a part of my job at his house, I was arranging the coconut leaf base which I had gathered from his farms. This year I had gathered an unusually high number of them. Looking at me Gurunatha cryptically said “Arrange them well, will be useful”. I did not read much into what he had said at that point. Later they were used to burn his body. Then it descended on me as to what he was hinting at, months before.

During this time once Gurunatha asked me to visit an advaitha peetha at about 80-100 kms distance from Sakharaya Patna.

I lost my temper and told him. “I have so much work here and you are asking me to visit the math. Instead of making me roam around like this, just get my job done and send me from here once and for all”.

Then Gurunatha in his usual calm disposition replied “Nobody can be with the other forever, then how come you shall be with me?”

Tears rolled down my eyes when I realized my mistake and I told Gurunatha, ”No not like that, I only meant.. How can I leave when l have so much work here?”

He only said “It’s fine”. All these events in hindsight indicate that he had made up his mind about leaving his body.

A few years before itself, he had called a few of his devotees and said “I am an ‘ichha marani’ (one who can decide when he wants to die). Whenever someone writes about me in newspapers, eight days from that day I will be no more”.

One Sunday an editorial appeared in a newspaper with Gurunatha’s photo under the title “How a Guru should be” which described his life. Eight days after that he left his body.

About a week earlier, a couple who happened to be upasakas of lord Ganapathi came to Gurunatha’s residence, he welcomed and offered the couple his respects and told... “I know it is lord Ganapathi who has come, tell something about me”

They replied, “You shall live only for about a week from now”, and so it happened.

For Copies of Sadguru Mahime English and Kannada, Guru Bandhus can contact 94810 25416.

Unauthorised copy and distribution in any way without the permission of the Original Author is strictly prohibited. 
ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 58
ಮಾತು ಬರದಾಗಿದೆ 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

"ಎಲ್ಲರೂ ಭಗವಂತನನ್ನು ಕೇಳಿ, ಬೇಡಿ ಪಡೆಯುವುದಿದೆ. ಆದರೆ ನನಗೆ ಗುರುನಾಥರು ಏನೂ ಕೇಳದೇ ಎಲ್ಲವನ್ನೂ ನೀಡಿದ್ದಾರೆ. ಅಷ್ಟೇ ಅಲ್ಲ ನಾನೇನೂ ಮನದಲ್ಲಿ ಇಚ್ಛೆ ವ್ಯಕ್ತ ಮಾಡಿಕೊಳ್ಳುವುದರ ಮೊದಲೇ ನನಗೆಲ್ಲಾ ಕೊಡಿಸಿ ಬಿಡುತ್ತಿತ್ತು ಗುರುನಾಥರ ಸಹವಾಸ. ಸುಮಾರು ನಲವತ್ತು ವರ್ಷಗಳ ನಮ್ಮ ಒಡನಾಟದಲ್ಲಿ ನಾನದೆಷ್ಟು ಸುಖವಾಗಿರುವಂತೆ ಅವರು ನೋಡಿಕೊಂಡರೆಂದರೆ ಯಾವಾಗಲೂ ನನ್ನ ಹಿಂದೆ ಮುಂದೆ ಒಂದು ರೀತಿ ಜೊತೆಯಾಗಿಯೇ ಇರುತ್ತಿದ್ದುದು, ಅದ್ಯಾವ ಜನ್ಮದ ಅನುಬಂಧವೋ, ನಾನಾವ ಜನ್ಮದಲ್ಲಿ ಈ ಗುರುವಿಗೆ ಒಂದು ಹೂವನ್ನು ಅರ್ಪಿಸಿದ್ದೇನೋ, ಈ ಜನ್ಮದಲ್ಲಿ ನನಗೆ ಅದರ ಫಲ, ಬಂಧುವಾಗಿ, ಗುರುವಾಗಿ, ನಿರ್ದೇಶಕರಾಗಿ, ನನ್ನ ಜೀವನದ ಸರ್ವಸ್ವವಾಗಿ ಅವರು ಇದ್ದರು... ಈಗಲೂ ಇದ್ದಾರೆಂಬ ಭಾವನೆ ನನಗಿದೆ. ಯಾವ ಜನ್ಮದ ಋಣಾನುಬಂಧವೋ ಇದು, ನಾನರಿಯೆ' ಎನ್ನುತ್ತಾರೆ ಭಾವ ತುಂಬಿ, ಗದ್ಗದಿತರಾಗಿ ಬೆಂಗಳೂರಿನ ಸೂರ್ಯನಾರಾಯಣ್ ಅವರು. 

ಪ್ರಿಯ ಗುರು ಬಾಂಧವ ಸತ್ಸಂಗಾಭಿಮಾನಿಗಳೇ..... ಇಂದು ತಮ್ಮ ಗುರುನಾಥರ ವಿಶಿಷ್ಟ ಸಂಬಂಧವನ್ನು ನಿತ್ಯ ಸತ್ಸಂಗಕ್ಕಾಗಿ ಧಾರೆಯೆರೆಯುತ್ತಿರುವ ಗುರುನಾಥರ ಆಪ್ತ ಸಂಬಂಧಿಗಳ ಕೆಲವು ವಿಶೇಷಾನುಭವಗಳು ಹೀಗಿವೆ. 

"ಗುರುನಾಥರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದರೆ, ನನ್ನದೆಂಬುದು ಏನೂ ಇಲ್ಲದಿರುವಾಗ, ನನ್ನ ಜೀವನದ ಸರ್ವಸ್ವವೂ ಅವರೇ ಆಗಿರುವಾಗ, ನನ್ನದಾಗಿ ನಾನೇನು ಹೇಳಿಕೊಳ್ಳಲಿ? ಎಂದು ಪ್ರಶ್ನಿಸುವ ಅವರ ನುಡಿಗಳೀಗ ಮೌನವಾಗಿವೆ. ಒಂದು ಕಾಲದಲ್ಲಿ ಬ್ಯಾಂಕಿನಲ್ಲಿ ಒಳ್ಳೆಯ ವಾಚಾಳಿ ಸೂರಿ ಎಂದೇ ಹೆಸರಾದವರು ಗುರುನಾಥರ ಸಂಗಸೌಖ್ಯ ಅವರನ್ನು ಹೆಚ್ಚಿಗೆ ಮಾತನಾಡದಂತೆ ಗುರುನಾಥರ ಸಾನ್ನಿಧ್ಯದ ಸುಖಾನುಭವದಲ್ಲಿ ಅವರ ಅಪರಂಪಾರತೆಯನ್ನು ಕಂಡ ಅವರನ್ನು ಮೌನಿಯಾಗಿಸಿ ಬಿಟ್ಟಿದೆಯಂತೆ. ಎಲ್ಲ ಗುರುಗಳೂ ಉಪದೇಶಿಸುವುದು ಅದನ್ನೇ ಅಲ್ಲವೇ? ಮೊದಲು ಮಾತನ್ನು ಕಡಿಮೆ ಮಾಡು. ಏಕೆಂದರೆ, ಮಾತು ನಿಂತಾಗಲೇ ಸಾಧನೆ. ಸಾಧ್ಯನೆಯ ಸತ್ಪಲಗಳನ್ನು ಪಡೆಯುತ್ತಾ ಹೋದಂತೆ ಮಾತು ವ್ಯರ್ಥವೆನಿಸುತ್ತದೆ. ಮೌನಾನಂದ ಸುಖದ ಮುಂದೆ ಯಾವ ಮಾತೂ ಬೇಡದಂತಾಗಿ, ಗುರು ಪದಗಳ ಅನುಸರಣೆ, ನಿರಂತರ ಸ್ಮರಣೆಯೇ ನಮ್ಮ ಜೀವನದ ಗುರಿಯಾಗುವುದು ಸಹಜವೇ ಅಲ್ಲವೇ. 

ಇಷ್ಟಾಗಿಯೂ ಗುರುನಾಥರೊಂದಿಗೆ ನೇರವಾಗಿ ಮಾತನಾಡುವ ಸಂದರ್ಭಗಳು ಸೂರ್ಯನಾರಾಯಣ್  ಅವರಿಗೆ ಬಂದದ್ದೇ ಕಡಿಮೆಯಂತೆ. ಅಣ್ಣ ತಂಗಿಯರ ಮಧ್ಯೆ ಮಾತಿನ ವಿನಿಮಯವಾಗುತ್ತಿತ್ತು. ಅದರ ಪೂರ್ಣ ಲಾಭವಾಗುತ್ತಿದ್ದುದು ಸೂರ್ಯನಾರಾಯಣರಿಗೆ. ಆದರೂ ಗುರುನಾಥರೊಂದಿಗಿನ ಸಂದರ್ಭಗಳಲ್ಲೆಲ್ಲಾ ಮೌನದಲ್ಲಿಯೇ ಗುರುನಾಥರಿಂದ ಅನೇಕ ಪಾಠಗಳು ದೊರೆಯುತ್ತಿತ್ತು. ಎಲ್ಲವನ್ನೂ ನೀಡಿ, ಪರಮಾತ್ಮನೇ ಜೊತೆಗಿರುವಾಗ ಯಾವುದಕ್ಕೂ ಕೊರತೆ ಇರಲಿಲ್ಲ. ಅಂತೆಯೇ ಅಷ್ಟು ವರ್ಷಗಳ ಬ್ಯಾಂಕಿನ ಕೆಲಸದಲ್ಲಿ 'ಕಾಯಕವೇ ಕೈಲಾಸ' ಎಂದು ನಂಬಿ ನಡೆವಂತೆ, ಒಂದಿಂಚೂ ಅತ್ತಿತ್ತ ಹರಿಯದಂತೆ ನನ್ನನ್ನು ರಕ್ಷಿಸಿದ್ದು ಗುರುನಾಥರೇ. ನಾನು ರಿಟೈರ್ಡ್ ಆದ ಮೇಲೆ ನನಗೆ ಬಂದ ಪೆನ್ಷನ್ ಹಣದಿಂದ ಸ್ವಂತ ಛಾವಣಿಯನ್ನು ಕಟ್ಟಿಕೊಂಡೆ. ಬಾಕಿಯವರು ಏನೇನೋ ಸಾಧಿಸದರೆಂಬತ್ತ ನನಗೆ ಮನವೇ ಹೋಗಲಿಲ್ಲ. ಕಾಮಧೇನುವಂತಹ ಗುರುನಾಥರ ಸಹವಾಸದ ಮುಂದೆ ಲೌಕಿಕ ಸೌಖ್ಯಗಳೆಲ್ಲಾ ಅಂತಹ ಮಹತ್ವವೆನಿಸಲೇ ಇಲ್ಲ' ಎನ್ನುತ್ತಾರೆ ಅವರು. 

'ಬ್ಯಾಂಕಿನ ಉದ್ಯೋಗಿಯಾದ ನನಗೆ ನಾನು ಹೋದ ಕಡೆಗೆಲ್ಲಾ ನನ್ನ ಜೊತೆ ಬಂದು ಅವರು ನನಗೆಲ್ಲಾ ಭೌತಿಕವಾದ  ಅನುಕೂಲತೆಗಳನ್ನೆಲ್ಲಾ ಮಾಡಿಕೊಡುತ್ತಿದ್ದುದು, ನನ್ನ ಅದೃಷ್ಟ. ನನ್ನ ಜೀವನದಲ್ಲಿ ಅವರು ನೀಡಿದ ಒಂದು ವಿಶೇಷ ವರದಾನ ಎಂದರೆ ಸಂತೃಪ್ತಿ. ಅದಕ್ಕಿಂತ ಬೇರೇನೂ ನನಗೆ ಬೇಕಿರಲಿಲ್ಲ' ಎಂದು ಸ್ಮರಿಸುತ್ತಾರೆ. 

"ಒಮ್ಮೆ ನನಗೆ ಹಾಸನಕ್ಕೆ ವರ್ಗವಾಗಿತ್ತು. ಕೂಡಲೇ ನಾನು ಹಾಸನಕ್ಕೆ ಹೋದೆ. ಯಾರೋ ಒಬ್ಬರು ಬಾಡಿಗೆಗೆ ಇರುವ ಒಂದು ಮನೆ ತೋರಿಸಿದರು. ಕೈಯಲ್ಲಿ ಹಣವಿರಲಿಲ್ಲ. ಬಂದು ಅಡ್ವಾನ್ಸ್ ಕೊಡುತ್ತೇನೆ ಎಂದಾಗ ಒಪ್ಪಿದರು. ಮಾರನೆಯ ದಿನ ಬೆಂಗಳೂರಿಗೆ ಹೋಗಿ ಬಂದು ನಿಮಗೆ ಅಡ್ವಾನ್ಸ್ ಕೊಡುತ್ತೇನೆ ಎಂದೆ. ಅವರು ಒಪ್ಪಿದರು. ಒಂದು ರೀತಿ ಓರಲ್ ಅಗ್ರಿಮೆಂಟ್ ಆಗಿತ್ತು. ಮತ್ತೆ ನಾನು ಮಾರನೆಯ ದಿನ ಬೆಂಗಳೂರಿಗೆ ಬಂದಾಗ ಮನೆ ಓನರ್ ಫೋನು ಮಾಡಿ, ನಮ್ಮ ಸ್ನೇಹಿತರು ಈ ಮನೆಗೆ ಬರುತ್ತಿದ್ದಾರೆ. ನಿಮಗೆ ಮನೆ ಕೊಡುವುದು ಕಷ್ಟ ಎಂದು ಬಿಟ್ಟರು. ನಂತರ ಸ್ವಲ್ಪ ಸಮಯದಲ್ಲೇ ಬ್ಯಾಂಕಿನ ಹೆಡ್ ಆಫೀಸಿನಿಂದ ನನಗೆ ಹಾಸನದ ಬದಲು ಚಿಕ್ಕಮಗಳೂರಿನ ಬ್ಯಾಂಕಿನಲ್ಲಿ ಕೆಲಸ ಮಾಡಲು ಆದೇಶ ನೀಡಿದರು. ಎಷ್ಟು ವಿಚಿತ್ರ. ಎಲ್ಲ ವಿಚಿತ್ರಗಳ ಹಿಂದೆಯೂ ನಿಂತಿರುವುದು, ಆಡಿಸುತ್ತಿರುವುದು ಆ ಗುರು ಶಕ್ತಿಯೇ ಎಂಬುದು ನನ್ನ ಅನಿಸಿಕೆ. ಅಷ್ಟೇ ಅಲ್ಲ, ಆ ಬ್ಯಾಂಕ್, ಆ ಊರು ನನಗೆ ಒಂದು ರೀತಿ ಸವಾಲಾಗೇ ಇತ್ತು. ಎಲ್ಲ ಸಮಸ್ಯೆ ಸವಾಲುಗಳು ಬಂದಾಗಲೂ ಜೊತೆ ನಿಂತು ಕಷ್ಟವಾಗದಂತೆ ಪಾರಾಗಿಸುತ್ತಿದ್ದರು ಗುರುನಾಥರು. ಒಮ್ಮೆ ಬೆಳಿಗ್ಗೆ ಎದ್ದು ಪೆಂಡಿಂಗ್ ವರ್ಕ್ಸ್ ಪೂರೈಸಲು ಬ್ಯಾಂಕಿಗೆ ಭಾನುವಾರವೂ ಹೋಗಬೇಕೆಂದು ಹೋರಾಡುವಲ್ಲಿ ಸಖರಾಯಪಟ್ಟಣದಿಂದ ಫೋನು ಬಂದಿರುತ್ತಿತ್ತು. 'ಭಾನುವಾರವಲ್ಲವೇ ಒಂದಿಷ್ಟು ಬಿಡುವು ಮಾಡಿಕೊಂಡು ಊರಿಗೆ ಬಂದು ಹೋಗುತ್ತೀರಾ?. ಗುರುನಾಥರ ವಾಣಿಯಲ್ಲಿದ್ದ ಪ್ರೀತಿ ನನ್ನನ್ನು ಸಖರಾಯಪಟ್ಟಣಕ್ಕೆ ಎಳೆದು ತರುತ್ತಿದ್ದುದರ ಜೊತೆಗೆ, ಅಂದು ನಾನೊಬ್ಬನೇ ಬ್ಯಾಂಕಿಗೆ ಹೋಗದಿದ್ದರೆ ಸಂಭವಿಸಬಹುದಾದ ಅವಘಡಗಳಿಂದಲೂ ಪಾರು ಮಾಡಿರುತ್ತಿತ್ತು. ಹೀಗೆ ಒಂದೇ, ಎರಡೇ ಜೀವನದುದ್ದಕ್ಕೂ ಕಣ್ಣಿನ ರೆಪ್ಪೆಯಲ್ಲಿ ಇಟ್ಟುಕೊಂಡು ಕಾಯ್ದ ಆ ಕರುಣಾನಿಧಿಯ ಬಗ್ಗೆ ನಾನೇನು ಹೇಳಲಿ, ಎಷ್ಟು ಹೇಳಿದರೆ ತೀರುತ್ತದೆ. ಅದಕ್ಕೆ ಮೌನವೇ ಸರಿಯೇನೋ" ಎನಿಸುತ್ತದೆ ಎನ್ನುತ್ತಾರೆ ಸೂರ್ಯನಾರಾಯಣರು. 

ಪ್ರಿಯ ಗುರು ಬಂಧುಗಳೇ ಎಂತಹ ಧಾರಾಳಿ ಗುರುನಾಥರು. ಯಾವ ಜನ್ಮದ ಸಂಬಂಧದ ಅನುಬಂಧವಿದು. ಇದು ಒಬ್ಬರಿಗಲ್ಲ ನೂರಾರು ಜನರಿಗೆ ಗುರುನಾಥರ ಇಂತಹ ಕೃಪೆ, ಕಣ್ಗಾವಲು ದೊರೆತಿದೆ. ಇಂತಹ ಅದ್ಭುತ ಗುರುಲೀಲೆಗಳ ಶ್ರವಣ ಮನನಗಳು ನಮ್ಮನ್ನು ಮತ್ತಷ್ಟು ಗುರುನಾಥರೆಡೆಗೆ ಸೆಳೆಯುವುದರಲ್ಲಿ ಸಂಶಯವಿಲ್ಲ. ಹಾಗಾಗಿ ನಿತ್ಯ ಸತ್ಸಂಗ ಸಾಗುತ್ತಿರಲಿ. ಗುರುಕಥಾಮೃತಧಾರೆಯು ಸುರಿಯುತ್ತಿರಲಿ. ಮತ್ತೆ ನಾಳೆಯೂ ಸೇರೋಣವೇ? 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

Thursday, July 27, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಕಾರ್ಯಕಾರಣಭಾವಶ್ಚ
ತರ್ಕವಿತರ್ಕಾತೀತೋ ಸಃ  |
ಅಶಕ್ಯಂ ಗುರೋರ್ವಿಷಯೇ 
ಯತಃ ಸಃ  ಜಗದ್ವಿಧಾತಾ ||


ಕಾರ್ಯಕಾರಣಭಾವಗಳಾಗಲೀ ... ತರ್ಕವಿತರ್ಕಗಳೇ ಆಗಲೀ... ಸದ್ಗುರುಗಳ ವಿಷಯಗಳಲ್ಲಿ ಅನ್ವಯಿಸುವುದಿಲ್ಲ....  ಅವರೇ ಜಗತ್ತಿನ ಪಾಲನಕರ್ತರಾಗಿರುವುದರಿಂದ  ಅವರ ಲೀಲೆಗಳು ಊಹೆಗೂ ನಿಲುಕದ್ದೇ ಆಗಿರುತ್ತದೆ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
Sri Sadguru Mahime

Author: Charana Dasa

Translator: Shri.Ganesh Prasad

Chapter 112 : The caretaker

Wherever Gurunatha stayed there was no shortage of food and water. If someone nearby wished that he/she wanted to eat something but did not have the means to do so Gurunatha would immediately respond to his/her feelings and get what he/she wished for.

An old lady who stayed very close to Gurunatha’s house used to sell flowers for a living. No matter how hard she tried, she was not able to sell much and always found herself struggling for basic needs. Gurunatha came to know about this and started buying flowers from her and sometimes giving more money than what she asked for. Whenever we were to visit any temple or math he used to send me to her house to get flowers and sometimes to distribute sweets and clothes after such visits. Slowly her life became much more comfortable than what it used to be.

In another instance, a person came in (probably from north Karnataka). When Gurunatha asked him what he wanted, he said, “I have a wife and two kids but now I don’t want to lead a family life anymore. I want to become a Sanyasi, you must bless me”. Gurunatha got a bit angry at him and shouted.. ”Do you even know the meaning of the word Sanyasi?”, the person was speechless. Then Gurunatha continued, if you want understand what Sanyasa means you must donate everything you have and stand on the road then you will understand what Sanyasa means. That person was sitting still with a blank mind after hearing Gurunatha’s words.

A little later he bowed to Gurunatha, went out and gave out whatever he had.. watch, chain and money to the people who were walking around. He spent one day like this with no money for food also. Later he came to Gurunatha’s residence when the hunger was unbearable. He got food but did not get a place to stay. It was winter and he had to spend the night next to the open well near Gurunatha’s residence.

This went on for about two days and then Gurunatha called him inside. He told that person..

“See,if you wanted to become a Sanyasi, you should have thought about it before marriage. Now your wife and two kids are dependent on you, if you leave them stranded it will be against Dharma (principle that controls the universe, one’s conduct must be conforming to that). Their pain and suffering will hinder your progress as Sanyasi.” Hearing these words that person bowed his head.

“Turning your family away and escaping from your responsibilities is not Sanyasa. While being in the family performing your duties diligently and offering the results of that to God is real Sanyasa. As a lotus born in mud won’t have even a small amount of mud on it. Live a life similar to that”. With these words Gurunatha gave him some clothes and money and sent him back.

For Copies of Sadguru Mahime English and Kannada, Guru Bandhus can contact 94810 25416.

Unauthorised copy and distribution in any way without the permission of the Original Author is strictly prohibited.
ಶ್ರೀ ಸದ್ಗುರುನಾಥ ಲೀಲಾಮೃತ - 3
   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  
 ನಿತ್ಯ ಸತ್ಸಂಗ  - 57
ನನಗೇನು ಕೊಡುತ್ತೀಯಾ? 



॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥

ದೇವಿಯ ಉಪಾಸನೆ ಮಾಡುವ ಬೆಂಗಳೂರಿನ ಒಬ್ಬ ತಾಯಿ, ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳಿಗೆ ಒಳಗಾದರು. ಎಲ್ಲ ದೇವಾನುದೇವತೆಗಳ ಸೇವೆ ಮಾಡಿದರೂ ಕಷ್ಟ ಬಗೆ ಹರಿಯಲಿಲ್ಲ. ಕೊನೆಗೆ ಅದ್ಯಾರೋ ರಾಜಾಜಿನಗರದ ಒಂದು ಮನೆಗೆ ಗುರುನಾಥರು ಬಂದಿರುವ ವಿಚಾರ ತಿಳಿಸಿದರು. ಹಲವು ಪ್ರಯತ್ನಗಳನ್ನು ಮಾಡಿದ ಇವರು ಅಲ್ಲಿಗೂ ಹೋದರು. ಗುರುನಾಥರನ್ನು ಕಂಡ ಕೂಡಲೇ ಅವರ ಮನಸ್ಸಿನಲ್ಲಿ ನನ್ನ ದುಃಖವನ್ನು ಬಗೆ ಹರಿಸುವ ದಾತಾರರು ಇವರೇ... ಇಷ್ಟು ದಿನ ಬೇಕಾಯಿತಲ್ಲ, ಇವರ ದರ್ಶನವಾಗಲು, ಎಂದು ಮನದಲ್ಲೇ ನೆನೆದರು. ನಿಶ್ಚಯಿಸಿದರು. ಗುರುನಾಥರ ಪಾದಗಳಿಗೆ ಎರಗಿ, ಮನದಲ್ಲೇ ಬೇಡಿಕೊಂಡರು. ಪಕ್ಕದಲ್ಲಿ ಒಂದು ನಾಯಿ ಬಂದಿತು. ಈಕೆ, ಆ ನಾಯಿಯ ಬೆನ್ನು ಸವರುತ್ತಾ ಕುಳಿತಿದ್ದರು. ಆ ನಾಯಿ ಸಾಮಾನ್ಯ ನಾಯಿಯಾಗಿರಲಿಲ್ಲ. ಇವರ ಪಾಲಿಗೆ ಗುರುಕೃಪಾ ಛತ್ರದಡಿ ಇವರನ್ನು ಕರೆದೊಯ್ಯುವ ದತ್ತ ಸ್ವರೂಪಿಯಾಗಿತ್ತು. ಸ್ವಲ್ಪ ಸಮಯದಲ್ಲೇ ಗುರುನಾಥರು ಈ ತಾಯಿಯ ಕಡೆ ನೋಡುತ್ತಾ ಮನೆಯವರಿಗೆ ಇವರಿಗೆ ಊಟ ಬಡಿಸಿ ಎಂದು ಹೇಳಿದರು. "ಅದು ಸಾಮಾನ್ಯವಾದ ಊಟವಾಗಿರದೆ ಗುರು ಪ್ರಸಾದವಾಗಿತ್ತು. ನನ್ನ ಭವದ ತಾಪತ್ರಯಗಳನ್ನು ಹರಿಸುವ ದಿವ್ಯ ಔಷಧಿಯಾಗಿತ್ತು" ಎನ್ನುತ್ತಾರೆ ಆ ಭಕ್ತೆ. 

"ಹೊಟ್ಟೆಯ ಹಸಿವಿಗೆ ಗುರುನಾಥರು ಊಟ ಹಾಕಿಸಿ ಕರುಣಿಸಿದರು. ಆದರೆ ಅದೆಷ್ಟು ಹೊತ್ತು ಕಾದರೂ ನನ್ನ ಕಡೆ ಮತ್ತೆ ತಿರುಗಿ ನೋಡಲಿಲ್ಲ. ಕಾದು ಕಾದು ಹೊತ್ತು ಸರಿಯುತ್ತಿತ್ತು. ಅದೇಕೆ ಅಷ್ಟು ಹೊತ್ತು ನನ್ನನ್ನು ಈ ರೀತಿ ಕಾಯಿಸಿದರೋ, ಬಹುಶಃ ನನ್ನಲ್ಲಿನ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದರೋ, ಅಥವಾ ತಮ್ಮ ಸಾನ್ನಿಧ್ಯದಲ್ಲಿ ಕುಳ್ಳಿರಿಸಿಕೊಂಡು ನನ್ನ ಪಾಪಗಳನ್ನೆಲ್ಲಾ ದಹಿಸುತ್ತಿದ್ದರೋ, ಅಲ್ಲಿ ಕುಳಿತಿದ್ದ ಅಷ್ಟು ಹೊತ್ತೂ ಗುರುನಾಥರನ್ನು ನೋಡುತ್ತಿದ್ದೆ. ಅನನ್ಯವಾಗಿ ಬೇಡುತ್ತಿದ್ದೆ. ಅವರ ಮೊದಲ ದರ್ಶನದಲ್ಲೇ ನನಗೆ ಅವರ ಬಗ್ಗೆ ಅತೀವ ಭಕ್ತಿ ಶ್ರದ್ಧೆಗಳು ಮನದಲ್ಲಿ ಮೂಡಿದವು. ನನ್ನ ತೊಂದರೆಯ ಭಾರವೆಲ್ಲಾ ಕಳೆದ ಅನುಭವವಾಗುತ್ತಿತ್ತು. ಇಷ್ಟೆಲ್ಲಾ ನಡೆಯುತ್ತಿರುವುದರ ಜೊತೆಗೆ ನನ್ನ ಮನದ ದುಗುಡಗಳನ್ನು ಅವರಲ್ಲಿ ತೋಡಿಕೊಳ್ಳಬೇಕೆಂದರೆ, ಅಸಾಧ್ಯವಾಗಿತ್ತು. ನನ್ನ ಪ್ರಯತ್ನಗಳೆಲ್ಲಾ ವ್ಯರ್ಥ. 

ಬಾಯಿಂದ ಮಾತುಗಳು ಹೊರಡದೇ ಒಮ್ಮೆಲೇ ಅಳತೊಡಗಿದೆ. ಆ ಅಳು ಇಂತಹ ಗುರುನಾಥರು ದೊರೆತ ಸಂತಸಕ್ಕೋ, ನನ್ನ ಅಪಾರ ನೋವಿನ ಜೀವನಕ್ಕೋ ತಿಳಿಯಲಾಗುತ್ತಿರಲಿಲ್ಲ. ಅಂತೂ ಗುರುನಾಥರ ದೃಷ್ಟಿ ನನ್ನ ಕಡೆಗೆ ಮತ್ತೆ ಹರಿಯಿತು. ಅವರ ನುಡಿಗಳು ನೇರವಾಗಿತ್ತು. 'ಯಾಕೆ, ಯಾಕೆ ಬಂದೆ ಇಲ್ಲಿಗೆ... ಏನಾಗಬೇಕಿತ್ತು' ಎಂದು ಕೇಳಿದರು. ದುಃಖದ ಕಟ್ಟೆ ಒಡೆದು ಬಂದಿತು... ಮತ್ತೆ ಅವರೇ ಅಷ್ಟೆಲ್ಲಾ ತಪ್ಪು ಮಾಡಿದ್ದಕ್ಕೆ ಒಂದಷ್ಟಾದರೂ ಅನುಭವಿಸಿ ಸವೆಸೋದು ಬೇಡವಾ? ಎಂದರು. ನಮ್ಮ ಸಂಬಂಧಿಗಳ ಹೆಸರು ಒಂದನ್ನು ಹೇಳಿ... 'ಅವರಿಗೆ ಹೀಗೆಲ್ಲಾ ಅಂದಿದ್ದೀರಲ್ಲಾ ಅದರ ಫಲ ಇದು.. ಎಲ್ಲಾ ಅನುಭವಿಸಿಯೇ ತೀರಬೇಕಲ್ಲ' ಎಂದರು. ನಾನೇನು ಕೇಳದೆಯೇ ನಮ್ಮ ಜೀವನದಲ್ಲಿ ನಡೆದ ಅನೇಕ ಘಟನೆಗಳನ್ನು ಬಿಚ್ಚಿಡುತ್ತಿದ್ದರು ಆ ಮಹಾತ್ಮರು. ಮುಂದೆ ನನ್ನ ಮಗನ ಬಗ್ಗೆ ಕೇಳಿದಾಗ 'ಯಾಕೆ ಅಷ್ಟೊಂದು ಚಿಂತೆ ಮಾಡುತ್ತೀಯಾ... ಎಲ್ಲಾ ಸರಿಯಾಗುತ್ತದೆ. ತಿರುಗಲಿ ಬಿಟ್ಟು ಬಿಡು. ಅಲೆದು ಅಲೆದು ಕಡೆಗೆ ಒಂದು ನೆಲೆಗೆ ಬರುತ್ತಾನೆ' ಎಂದರು. ಜೊತೆಗೆ ಇದ್ದಕ್ಕಿದ್ದಂತೆ 'ನಿನ್ನ ಮಗನನ್ನು ಸರಿ ಮಾಡುತ್ತೀನಿ.. ನನಗೇನು ಕೊಡುತ್ತೀಯಾ?' ಎಂದು ಪ್ರಶ್ನಿಸಿದರು. ಎಲ್ಲ ಹೊಂದಿರುವ ಆ ಮಹಾಪುರುಷನಿಗೆ ನಾನೇನು ಕೊಡಲು ಸಾಧ್ಯ? ನಮ್ಮ ದುಃಖ ದುಮ್ಮಾನಗಳ ಹೊರೆ ಹೊತ್ತು ನಮ್ಮನ್ನು ಉದ್ಧರಿಸಲು, ನಮಗೆ ಸಿಕ್ಕ ಆ ದಾತಾರನ ಎದುರು ನಾನೇನು ಧನಿಕಳೆ... ಆದರೂ 'ನೀವು ಏನು ಕೇಳಿದರೂ ನಿಮಗೆ ಕೊಡುತ್ತೇನೆ' ಎಂದೆ. 'ಏನು ಕೇಳಿದರೂ ಕೊಡುತ್ತೀಯಾ? ಹಾಗಾದರೆ ಆ ದೇವಿಯಲ್ಲಿ ಹೋಗಿ ಬೇಡಿಕೋ ಎಲ್ಲ ಸರಿಯಾಗುತ್ತೆ ಎಂದು ಅಭಯ ವಚನವನ್ನಿತ್ತರು' ಎಂದು ಆ ತಾಯಿ ಮತ್ತೆ ಕಣ್ಣು ತುಂಬಿ ನಿಂತರು. 

ಪ್ರಿಯ ಗುರುಬಾಂಧವರೇ, ನಮ್ಮ ನಿತ್ಯ ಸತ್ಸಂಗಕ್ಕೆ ಮಂತ್ರಾಲಯದ ಗುರುರಾಯರ ಬಳಿ ಹೋದಾಗ ಅಲ್ಲಿ ಸಿಕ್ಕ ಗುರುನಾಥರ ಭಕ್ತೆಯಾದ ಶ್ರೀಮತಿ ಲಲಿತಾ ಅವರು ಗುರುನಾಥರ ಲೀಲಾ ವಿನೋದ, ಕರುಣೆಗಳನ್ನು ಹೀಗೆ ಹಂಚಿಕೊಂಡರು. ಎಲ್ಲೆಲ್ಲೋ, ಎಲ್ಲೆಲ್ಲಿಂದಲೋ ಗುರು ಬಾಂಧವ್ಯವನ್ನವರು ಹೀಗೆ ಬೆಸೆದರು. 

ಈಗವರ ಮಗ ಗುರುನಾಥರ ಭಕ್ತರೊಬ್ಬರ ಅನನ್ಯ ಭಕ್ತರಾಗಿದ್ದಾರೆ. ಈ ತಾಯಿ ಗುರುನಾಥರ ದರ್ಶನ ಪಡೆದು ಅವರ ಕೃಪೆಯಿಂದ ಇದೀಗ ಅವರನ್ನು ನಿತ್ಯ ನೆನೆಯುತ್ತಾ ಸಂತಸದ ಜೀವನ ಸಾಗಿಸುತ್ತಿದ್ದಾರೆ. ಅಪಾರವಾದ ಸಂಕಷ್ಟ ರಾಶಿಗೆ, ಗುರುನಾಥರ ಒಂದು ದರ್ಶನ ಮಾತ್ರವೇ ಪರಿಹಾರ ಒದಗಿಸಿದೆ. ತಮ್ಮ ಜೀವನವನ್ನು ಈ ರೀತಿ ಸರಿ ಮಾಡಿದ ಗುರುನಾಥರ ನಾಮ ಸ್ಮರಣೆಯೇ ಅವರ ಜೀವನದ ಊರು ಗೋಲಾಗಿದೆ. ಗುರುಕಾರುಣ್ಯದ ವಿಶೇಷವೇ ಹೀಗೆ ಅಲ್ಲವೇ ? ಒಂದು ದರ್ಶನ ಅದೆಷ್ಟು ಪರಿಣಾಮಕಾರಿ? ..... ಆದರೆ ಆ ದರ್ಶನವಾಗುವುದೇ ದುರ್ಲಭವಾಗುವುದಿದೆ. ಗುರುವಿಗೆ ಮನ ಬಂದರೆ... ಅವರೇ ನಮ್ಮನ್ನು ಕರೆಸಿ, ಅಲ್ಲ ದುಃಖಗಳನ್ನು ಹರಿಸಿ, ಹರಸಿ ಕಲಿಸುವ ಇಂದಿನ ಗುರುಚರಿತ್ರೆ ನಿಜವಾಗಿಯೂ ಒಂದು ಗುರುಲೀಲೆಯೇ.. ಮತ್ತೆ ನಾಳೆ ಬರುವಿರಲ್ಲಾ, ಗುರುನಾಥರ ಸತ್ಯಧನದೊಂದಿಗೆ ಇರುವಿರಲ್ಲವಾ? ಕಾಣದವರೆಲ್ಲಾ, ಅಪರಿಚಿತರನ್ನೆಲ್ಲಾ ಒಂದು ಮಾಡಿಸುವ ಈ ಗುರು ಬಾಂಧವ್ಯದ ಸವಿ ನನಗರಿವಾದುದು, ಈ ನಿತ್ಯ ಸತ್ಸಂಗದಿಂದಲೇ, ಈ ನಿತ್ಯ ಸತ್ಸಂಗದಲ್ಲಿ ಭಾಗಿಯಾಗಲೂ, ಆ ಗುರುನಾಥರ ಕರುಣೆ ಬೇಕೇ ಬೇಕು. ಈ ಕರುಣೆ ಇದೀಗ ಸಹಸ್ರಾರು ಭಾವುಕರನ್ನು ಒಂದು ಮಾಡಿದೆ. ನಾಳೆಯೂ ಈ ಸತ್ಸಂಗಕ್ಕೆ ಎಲ್ಲಾ ಬರುವಿರಲ್ಲಾ... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.

                   ॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ॥

Wednesday, July 26, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಹೃದ್ದೀಪಂ ಪ್ರಜ್ವಾಲಿತ್ವಾಹಂ
ಪ್ರತೀಕ್ಷ್ಯೇ ಸನ್ನಿಧಿಂ ತವ |
ಆತ್ಮೋದ್ಧಾರಃ ಭವೇದ್ಯಥಾ
ಮಾರ್ಗಂ ಚ ತತ್ಪ್ರದರ್ಶಯ ||


ಹೃದ್ದೀಪವನ್ನು ಪ್ರಜ್ವಲಿಸುತ್ತಾ ನಿನ್ನ ಅಮೋಘವಾದ ಸನ್ನಿಧಿಯನ್ನೇ ನಿರೀಕ್ಷಿಸುತ್ತಿರುವ ಸದ್ಭಕ್ತರಿಗೆ ಆತ್ಮದ ಉದ್ಧಾರವು ಸಾಧ್ಯವಾಗುವ ಮಾರ್ಗವನ್ನು ಪ್ರಕಾಶಿಸುವಂತೆ ಮಾಡಯ್ಯಾ ತಂದೆ ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು