ಒಟ್ಟು ನೋಟಗಳು

Thursday, December 7, 2017

ಗುರುನಾಥ ಗಾನಾಮೃತ 
ನಾ ತಿಳಿದೆ ನಿನ್ನನ್ನೇ ಗುರುದತ್ತನಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ನಾ ತಿಳಿದೆ ನಿನ್ನನ್ನೇ ಗುರುದತ್ತನಾ
ಶ್ರೀ ಗುರುದತ್ತನಾ 
ಮನವನ್ನು ಬೆಳಗುತಿಹ ಗುರುರಾಯನ || ಪ ।। 

ಗುರುನಾಥ ಕಳೆವನು ತಮವೆಲ್ಲವ
ಭಕುತರಿಗೆ ತರುವನು ಸುಖಶಾಂತಿಯ
ಮನೆಯಲ್ಲಿ ನೆಲೆಪನು ಸಿರಿತರುತಾ
ಮನದಲ್ಲಿ ನಲಿವನು ನಸುನಗುತಾ ।। ೧ ।। 

ಕಂಗಳಲಿ ತುಂಬಿಹುದು ನಿನ್ನ ಬಿಂಬವೇ
ಮನದಲಿ ಕರಗಿದೆ ನಿನ್ನ 
ಪ್ರತಿಬಿಂಬವೇ
ಮಾತಲ್ಲಿ ತುಂಬಿಹುದು ನಿನ್ನ ಗುಣಗಾನವೇ
ಕೃತಿಯಲ್ಲಿ ಆಚರಿಪೆ ನಿನ್ನ ತತ್ತ್ವವೇ  ।। ೨ ।।
ಗುರುನಾಥ ಗಾನಾಮೃತ 
ಸದ್ಗುರುವೇ ತಾಯಿಯೂ ಸದ್ಗುರುವೇ ತಂದೆಯೂ
ರಚನೆ: ಅಂಬಾಸುತ 


ಸದ್ಗುರುವೇ ತಾಯಿಯೂ ಸದ್ಗುರುವೇ ತಂದೆಯೂ
ಸದ್ಗುರುವೇ ಸಕಲವೂ ನಮಗೆಲ್ಲಾ
ಸಖರಾಯಪುರದಾ ಸದ್ಗುರುವ ನೆನೆದರೇ
ದುಖಃ ಸಂಕಟವೆಂಬುದೇ ಇಲ್ಲಾ ||ಪ||

ಅನಾಥ ಭಾವ ಅಳಿಸೀ ಆಶ್ರಯವನ್ನು ನೀಡೀ
ಸಂತತ ಸಲಹುವನು ಸದ್ಗುರುನಾಥನೂ
ಬೇಡದೇ ನೀಡುವನು ಬೇಡಿಕೆ ಎಲ್ಲವನೂ
ಕಲಿಯುಗದ ಕಾಮಧೇನು ಕಲ್ಪವೃಕ್ಷ ಇವನೂ ||೧||

ಶುದ್ದಂತಃಕರಣದಿ ಬದ್ದನಾಗೀ ಭಜಿಸೇ
ಎದುರು ತಾ ನಿಲ್ಲುವನು ಸದ್ಗುರುನಾಥನೂ
ಕೊಳೆಯಾ ತೊಳೆದೂ ಮನದಿ ಜ್ಞಾನದೀವಿಗೆ ಬೆಳಗಿ
ಹರಿಹರರಾ ರೂಪ ತಾಳಿ ನಿಲ್ಲುವನಿವನೂ ||೨||

ದುಷ್ಟರಿಗೆ ಕಷ್ಟನೂ ಶಿಷ್ಟರಿಗೇ ಇಷ್ಟನೂ
ವಿಶಿಷ್ಟ ರೂಪನೂ ಸದ್ಗುರುನಾಥನೂ
ಮಾಯೆಯಾ ಸರಿಸುವಾ ಮಹನೀಯನೂ
ಮಾತೆಯಾಗೀ ಮಮತೆ ತೋರುವನಿವನೂ ||೩||

ಅಂಬಾಸುತನ ಅಂತರಂಗದೊಳಿರುವನು
ಅನವರತ ಪೊರೆವನು ಸದ್ಗುರುನಾಥನು
ಶ್ರೀವೇಂಕಟಾಚಲನೆಂಬಾ ಅವಧೂತನೂ
ಧರೆಯಾನುಧ್ಧರಿಸೇ ತಾ ಓಡಿ ಬಂದಿಹನೂ ||೪||

Wednesday, December 6, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಭ್ರಾಂತಿರ್ನಷ್ಟೇ ಕುತೋ ಭೀತಿಃ
ಭೀತಿರ್ನಷ್ಟೇ ಕುತೋ ಕರ್ಮ |
ಕರ್ಮೇ ನಷ್ಟೇ ತತೋ ಗುರುಃ
ಗುರುಃ ದೈವೇ ತತೋ‌ ಗತಿಃ ||


ಮನದಲ್ಲಿನ ಭ್ರಾಂತಿಯು ‌ನಾಶವಾಗಲು ಭೀತಿಯಿರದು.. ಭೀತಿಯು ನಾಶವಾಗಲು ಕರ್ಮ ಕರ್ಮಫಲಗಳ ಜಿಜ್ಞಾಸೆ ಇರುವುದಿಲ್ಲ..ಕರ್ಮಫಲದ ಅಪೇಕ್ಷೆ  ಇಲ್ಲದಿರುವಾಗ ಸದ್ಗುರುಪ್ರಾಪ್ತಿಯು...ಸದ್ಗುರುವಿ‌ನ ಪ್ರಾಪ್ತಿಯಿಂದ ಇಹಪರದ ಉದ್ಧಾರವಾಗುವುದು..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ಜಗದೊಡೆಯಾ ಶ್ರೀಗುರುದತ್ತಾ
ರಚನೆ: ಅಂಬಾಸುತ 


ದಯಾನಿಧೇ ಶ್ರೀವೇಂಕಟಾಚಲ ಸದ್ಗುರುರಾಯಾ ನಮೋ ನಮೋ
ಅವಧೂತಾ ನೀ ಅಮಿತ ವರದಾತಾ ಕಾರುಣ್ಯಸಾಗರಾ ಪೊರೆಯೋ ಎಮ್ಮನೂ ||ಪ||

ಆಶ್ರಿತವತ್ಸಲಾ ಆನಂದರೂಪಾ ಆದ್ಯಂತರಹಿತಾ ನಮೋ ನಮೋ
ಅಷ್ಟಸಿದ್ದೀ ನವನಿಧಿದಾಯಕ ಪ್ರಭೋ ಆಗಮನಿಗಮಾ ವಂದಿತಾ ಗುರುದೇವಾ ||೧||

ಧರ್ಮ ವಿಚಾರಾ ಬೋಧಸ್ವರೂಪಾ ಮಹಿಮಾನ್ವಿತನೇ ನಮೋ ನಮೋ
ಶಿಷ್ಯೋಧಾರಕಾ ಶಿಷ್ಯ ತಾಪನಿವಾರಕಾ ಪರಮಾತ್ಮ ರೂಪಾ ಪಾಲಿಸೋ ಗುರುದೇವಾ ||೨||

ನಿಜವೈರಾಗೀ ನಿಗಮಾದಿವಂದಿತಾ ನಿರುಪಮ ರೂಪ ನಮೋ ನಮೋ
ಗುಣಪರಿಪೂರ್ಣಾ ಸಾಕ್ಷೀಸ್ವರೂಪಾ ಸಚ್ಚಿದಾನಂದಾತ್ಮಕ ಗುರುದೇವಾ ||೩||

ಅಂಬಾಸುತ ಮಾನಸ ಮಂದಿರ ವಿರಾಜಿತ ಗುರುವೇ ನಮೋ ನಮೋ
ಸಖರಾಯಧೀಶಾ ಸಾತ್ವಿಕ ರೂಪಾ ಅನವರತಾ ಸಲಹೆಮ್ಮನು ಗುರುದೇವಾ ||೪||

Tuesday, December 5, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಕರ್ತವ್ಯಂ ಸತತಂ ಕರ್ಮ
ನಿಸ್ಪೃಹಮಾ‌ನಂದಕರಂ |
ಮಾ ಕುರು ಚ ಫಲಾಪೇಕ್ಷಾ 
ಸಾಧನೇತಿ ಪ್ರಕೀರ್ತ್ಯತೇ ||

ಆಸೆಯಿಲ್ಲದ ಆನಂದಕರವಾದ ಕರ್ಮಗಳನ್ನು ಯಾವಾಗಲೂ ಆಚರಿಸಬೇಕು..ಹೀಗೆ ಕರ್ಮಫಲದ ಆಕಾಂಕ್ಷೆಯಿಲ್ಲದೆ ವಿಹಿತವಾದ ಕರ್ತವ್ಯಗಳನ್ನು ಮಾಡುವುದೇ ಸಾಧನೆಯೆಂದು ಹೇಳಲ್ಪಡುತ್ತದೆ... 

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Monday, December 4, 2017

ಗುರುನಾಥ ಗಾನಾಮೃತ 
ಜ್ಞಾನವ ನೀಡಯ್ಯ ಗುರುವೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಜ್ಞಾನವ ನೀಡಯ್ಯ ಗುರುವೇ
ಕರುಣೆಯ ತೋರಯ್ಯ ಸದ್ಗುರುವೇ || ಪ ।।

ಚಿನ್ನಕೆ ದೊರಕದ
ರತ್ನಕಿಂತ ಅಮೂಲ್ಯದ
ನಿನ್ನ ಪೂಜಿಪ ಜ್ಞಾನವ ನೀಡಯ್ಯಾ
ನಿನ್ನ ಸೇವಿಪ ಮತಿಯ ನೀಡಯ್ಯಾ ।।

ಪಂಡಿತಗೂ ಸಿಗದ
ಪಾಮರನಿಗೂ ತಿಳಿಯದ 
ಜ್ಞಾನವನೀವ ಸಮರ್ಥ ನೀನಯ್ಯಾ
ನಿನ್ನನಲ್ಲದೆ ಬೇರಾರನು ಕೇಳೆನಯ್ಯಾ ।।

ಕಡಲಿಗಿಂತ ಆಳವಾದ
ಗಗನಕಿಂತ ಮಿಗಿಲಾದ
ಜ್ಞಾನವ ಪಡೆಯಲೆನ್ನ ಅನುಗ್ರಹಿಸಯ್ಯಾ
ಜ್ಞಾನದ ಭಿಕ್ಷೆಯ ನೀಡಯ್ಯಾ ।।

ಗಣನೆಗೆ ಸಿಲುಕದ
ಕಲ್ಪನೆಗೆ ಮೀರಿದ
ಅರಿವ ಅರಿಯಲೆಮ್ಮ‌ ದಾರಿ ತೋರಯ್ಯ
ಜ್ಞಾನದ ಹಾದಿಯಲಿ ಕೈ ಪಿಡಿದು ನಡೆಸಯ್ಯಾ ।।
ಅವಧೂತ - ಅಸಮಾನ್ಯ - ಅಪ್ರಮೇಯ - ೧೭
ಸಂಗ್ರಹ : ಅಂಬಾಸುತ 


ಗುರುನಿವಾಸಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲು ನೀರಿನ ಸಮಸ್ಯೆ ಉಂಟಾದಾಗ ಸ್ವಚ್ಛವಾದ ಆಕಾಶದಲ್ಲಿ ಮೋಡಗಳನ್ನು ಕಟ್ಟಿಸಿ ಇದ್ದಕ್ಕಿದ್ದಂತೆ ಅಗತ್ಯವಿದ್ದಷ್ಟು ಮಳೆ ಸುರಿಸಿ ಮನೆಯ ಹೆಂಚಿನ ಸೂರು ನೀರನ್ನೇ ಶೇಖರಿಸಿ,  ಪ್ರಸಾದದ ವ್ಯವಸ್ಥೆ ಮಾಡಲು ತಿಳಿಸಿ,  ಬಂದ ಭಕ್ತಾದಿಗಳ ಹೊಟ್ಟೆ ತುಂಬಿಸಿದವರು - ಅವಧೂತರು.

Saturday, December 2, 2017

ಗುರುನಾಥ ಗಾನಾಮೃತ 
ಜಗದೊಡೆಯಾ ಶ್ರೀಗುರುದತ್ತಾ
ರಚನೆ: ಅಂಬಾಸುತ 


ಜಗದೊಡೆಯಾ ಶ್ರೀಗುರುದತ್ತಾ
ನಿನಗರ್ಪಿತವೋ ಈ ಚಿತ್ತಾ
ನೀನಿಹೆ ನಿಜ ಎನ್ನ ಸುತ್ತ ಮುತ್ತಾ
ಅವಧೂತನಾಗಿಹ ಗುರುದತ್ತಾ ||

ಎನ್ನದೆಂಬುದೇನಿಲ್ಲಾ ಇಲ್ಲಿ ಸ್ವಂತಾ
ನಿನ್ನದಹುದಿಹುದೆಲ್ಲಾ ಗುರುದತ್ತಾ
ನಿನ್ನಲ್ಲೇ ಬೇಡುವೆನೊ ಸುಖಕರ್ತಾ
ಅವಧೂತನಾಗಿಹ ಗುರುದತ್ತಾ ||

ಅರಿವಿನ ಮನೆಗೊಯ್ಯೋ ಅಚಿಂತ್ಯಾ
ಆದ್ಯಂತರಹಿತ ನೀ ಗುರುದತ್ತಾ
ನನ್ನ ಪಾಲಿಗೆ ನೀನೇ ಭಗವಂತಾ
ಅವಧೂತನಾಗಿಹ ಗುರುದತ್ತಾ ||

ದಾಸರ ದಾಸ ನಾ ಅಂಬಾಸುತ
ನಿನ್ನ ಅಡಿಗಡಿಗೆ ಎರಗುವೆ ಗುರುದತ್ತಾ
ಸಖರಾಯಪುರದಾ ಗುರುನಾಥಾ
ಅವಧೂತನಾಗಿಹ ಗುರುದತ್ತ ||

Friday, December 1, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಭೋಜನೇ ವಾ ಗಮನೇ ವಾ
ಮಾನಸೇ ವಾ ವಚಸೇ ವಾ |
ಪೂಜನೇ ವಾ ಭಜನೇ ವಾ 
ಸದೈವ ಏಕಂ ಚಿಂತನಂ ||


ಭೋಜನದಲ್ಲಿ ಅಥವಾ ಗಮನದಲ್ಲಿ..ಮನಸ್ಸಿ‌ಲ್ಲಿ ಅಥವಾ ಮಾತಿನಲ್ಲಿ.. ಪೂಜೆ ಮಾಡುವುದರಲ್ಲಿ ಅಥವಾ ಭಜನೆ ಮಾಡುವುದರಲ್ಲಿ  ಯಾವಾಗಲೂ  ಸ್ವಾತ್ಮಾನಂದದಲ್ಲಿರುವ ಸದ್ಗುರುವಿನ ಚಿಂತನೆಯಿರಲಿ...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಅವಧೂತ - ಅಸಮಾನ್ಯ - ಅಪ್ರಮೇಯ - ೧೬
ಸಂಗ್ರಹ : ಅಂಬಾಸುತ 


ಗುರುಗಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಿಷ್ಯ, "ನನ್ನ ತಾಯಿಯು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ, ವಿಷಮ ಪರಿಸ್ಥಿತಿ ಇದೆ", ಎಂದು ಹೇಳುತ್ತಿರುವಾಗಲೇ ತಕ್ಷಣ ಕಾರನ್ನು ನಿಲ್ಲಿಸಿ ಎದುರಿಗೆ ಬರುತ್ತಿದ್ದ ಬಿಳಿ ಹಸುವೊಂದಕ್ಕೆ ಆ ಶಿಷ್ಯನಿಂದ ಪಾದಪೂಜೆಯನ್ನು ಮಾಡಿಸಿ ಆ ಮೂಲಕ ಆತನ ತಾಯಿಯನ್ನು ಸಂಪೂರ್ಣವಾಗಿ ಗುಣಪಡಿಸಿದವರು - ಅವಧೂತರು.