ಶ್ರೀ ಸದ್ಗುರು ಮಹಿಮೆ
ಗ್ರಂಥ ರಚನೆ - ಚರಣದಾಸ
ಅಧ್ಯಾಯ - 35
ಕಳ್ಳತನ ಪತ್ತೆದಾರಿಕೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಈ ಘಟನೆ ನಡೆದಿದ್ದು ಚರಣದಾಸನಾದ ನಾನು ಗುರುನಿವಾಸಕ್ಕೆ ಬರುವ ಮೊದಲು. ಗುರುನಾಥರು ಆಗಾಗ್ಗೆ ಈ ಕುರಿತು ಹೇಳುತ್ತಿದ್ದರು. ಸಮೀಪದ ನಗರವೊಂದರಲ್ಲಿ ಪ್ರತಿದಿನ ರಾತ್ರಿ ಕಳ್ಳತನ ನಡೆಯುತ್ತಿತ್ತು. ಆದರೆ ಇಡೀ ಜಿಲ್ಲಾ ಪೋಲೀಸ್ ಪದೇ ಹರಸಾಹಸಪಟ್ಟರೂ ಕಳ್ಳರ ಜಾಡು ಹಿಡಿಯಲಾಗಿರಲಿಲ್ಲ.
ಹೀಗಿರಲು ಗುರುನಾಥರ ಬಗ್ಗೆ ಯಾರಿಂದಲೋ ವಿವರ ಪಡೆದ ಪೋಲೀಸ್ ಮುಖ್ಯಾಧಿಕಾರಿಗಳು ನೇರವಾಗಿ ಗುರುನಿವಾಸಕ್ಕೆ ಬಂದು ಸಮಸ್ಯೆಯನ್ನು ತಿಳಿಸಿ ಪರಿಹಾರವನ್ನು ಬೇಡಿದರು. ಆಗ ಗುರುನಾಥರು ನಕ್ಕು "ಕಳ್ಳತನ ಮಾಡುತ್ತಿರುವುದು ಬೇರಾರೂ ಅಲ್ಲ. ಓರ್ವ ಅಗಸ ವೃತ್ತಿ ಮಾಡುತ್ತಿರುವಾತ". ಆತನ ಇಸ್ತ್ರೀ ಅಂಗಡಿ ಇಂತಹ ಕಡೆ ಇದೆ. ಹೋಗಿ ನೋಡಿ. ಕಳ್ಳತನವಾದ ಮಾಲುಗಳೂ ಅಲ್ಲೇ ಇವೆ" ಎಂದರು.
ಪೋಲೀಸರು ಸರ್ವ ಸನ್ನದ್ಧರಾಗಿ ಹೋಗಿ ನೋಡಲು ಎಲ್ಲ ಮಾಲುಗಳು ಸಿಕ್ಕವು. ಜೊತೆಗೆ ಕಳ್ಳನೂ ಸೆರೆಸಿಕ್ಕ.
ಇದರಿಂದ ಸಮಾಧಾನಗೊಂಡ ಪೋಲೀಸ್ ವರಿಷ್ಠಾಧಿಕಾರಿಗಳು ಕಳ್ಳತನವಾದ ಮಾಲುಗಳ ಸಮೇತ ಸುಮಾರು ಏಳು ಎಂಟು ವಾಹನಗಳಲ್ಲಿ ಬಂದಿಳಿದು ಗುರುನಾಥರಿಗೆ ಗೌರವ ವಂದನೆ ಸಲ್ಲಿಸಿ, ವಶಪಡಿಸಿಕೊಂಡ ಮಾಲುಗಳನ್ನು ತೋರಿಸಿ ಕೃತಜ್ಞತೆ ಸಲ್ಲಿಸಿ ಅಲ್ಲಿಂದ ಹೊರಟರು.
ಹಾಗೆಯೇ ಇನ್ನೊಮ್ಮೆ ಜಿಲ್ಲಾ ಪೋಲೀಸ್ ದಳದವರು ಬಳಸುವ ವಾಕಿಟಾಕಿಯೊಂದು ಇದ್ದಕ್ಕಿದ್ದಂತೆ ವರಿಷ್ಠಾಧಿಕಾರಿ ಕಚೇರಿಯಿಂದ ಕಾಣೆಯಾಗಿತ್ತು. ಇದರ ಜಾಡು ಸಿಗದ ಪೋಲೀಸರು ಕೊನೆಗೆ ಸಂಪರ್ಕಿಸಿದ್ದು ಗುರುನಾಥರನ್ನು. ವರಿಷ್ಠರ ವಿನಂತಿ ಮೇರೆಗೆ ಕಚೇರಿಗೆ ಭೇಟಿ ನೇಯ್ದ ಗುರುನಾಥರು ಇಂತಹ ಕಡೆ ಇದೆ. ಇಷ್ಟು ದಿನದಲ್ಲಿ ಸಿಗುವುದು ಎಂದಿದ್ದರು. ಅದು ಹಾಗೆಯೇ ಆಯ್ತು.
ಸಾಮಾನ್ಯ ಜನರು ಯಾರನ್ನಾದರೂ ದಂಡಿಸಿದರೆ ಅದರಲ್ಲಿ ದ್ವೇಷ, ಸಿಟ್ಟು, ಪ್ರತೀಕಾರ ಭಾವ ಸಾಮಾನ್ಯವಾಗಿ ಇರುವುದು. ಆದರೆ, "ಗುರು ದಂಡಿಸುವುದರಲ್ಲಿ, ತಪ್ಪನ್ನು ತಿದ್ದುವ ಅಸಾಮಾನ್ಯ ಪ್ರೀತಿ, ಕರುಣೆ ತುಂಬಿರುವುದು".
ಗುರುನಾಥರು ಸಖರಾಯಪಟ್ಟಣದ ಕೆಲವು ಅಂಗಡಿಗಳಲ್ಲಿ ನಿತ್ಯವೂ ದಿನಸಿ, ಬಟ್ಟೆ, ಹಣ್ಣುಗಳನ್ನು ತರಲು ಚರಣದಾಸನಾದ ನನಗೆ ಹೇಳುತ್ತಿದ್ದರು. ಪ್ರತಿ ಅಂಗಡಿಯ ಲೆಕ್ಕವನ್ನು ಸರಿಯಾಗಿಟ್ಟುಕೊಳ್ಳುವ ಜವಾಬ್ದಾರಿ ನನ್ನ ಮೇಲಿತ್ತು. ಗುರುನಾಥರು ಯಾವುದೇ ವಸ್ತು, ಅದರ ಬೆಲೆ ಚೌಕಾಸಿ ಮಾಡದೆ ತೆಗೆದುಕೊಳ್ಳುತ್ತಿದ್ದರು. ದಾನ ಮಾಡಲು ಬಳಸುವ ವಸ್ತುಗಳನ್ನು ಎಂದಿಗೂ ವಿಪರೀತ ಚೌಕಾಸಿ ಮಾಡುವುದನ್ನು ಗುರುನಾಥರು ಒಪ್ಪುತ್ತಿರಲಿಲ್ಲ. ಚರಣದಾಸನಾದ ನಾನು ಕೂಡ ಬಹುಪಾಲು ಅದನ್ನು ಅನುಸರಿಸುತ್ತಿದ್ದೆ. ನಮ್ಮ ಈ ಸ್ವಭಾವ ಗುರುನಾಥರೊಂದಿಗಿನ ಕೆಲ ಸಹಚರರಿಗೆ ಹಿಡಿಸುತ್ತಿರಲಿಲ್ಲ.
ಒಬ್ಬ ಅಂಗಡಿಯಾತ ಗುರುನಾಥರ ಈ ಸ್ವಭಾವವನ್ನು ದುರುಪಯೋಗ ಪಡಿಸಿಕೊಂಡು ನಿಜ ಬೆಲೆಗಿಂತ ಐದು ಸಾವಿರ ರೂಪಾಯಿ ಹೆಚ್ಚಿಗೆ ತೆಗೆದುಕೊಂಡರು. ಚರಣದಾಸನಾದ ನಾನು ಏನೂ ಸಂಶಯಿಸದೆ ಹಣ ನೀಡಿ ಬಂದೆ. ತಕ್ಷಣ ಗುರುನಾಥರು "ಐದಕ್ಕೆ ಹದಿನೈದು ಹೋಗ್ಬೇಕಲ್ವಾ?" ಎಂದು ಹೇಳಿ ಅಂಗಡಿಯವನು ಮಾಡಿದ ವಂಚನೆಯನ್ನು ತಿಳಿಸಿದರು.
ಅದಾಗಿ ಈರದು ಮೂರು ದಿನಗಳಲ್ಲಿ ಅಂಗಡಿಯಾತನಿಗೆ ಇದ್ದಕ್ಕಿದ್ದಂತೆ ಎದೆ ನೋವು ಆರಂಭವಾಯ್ತು. ಮೊದಲು ಸ್ಥಳೀಯ ವೈದ್ಯರು, ನಂತರ ಜಿಲ್ಲಾ ವೈದ್ಯರಲ್ಲಿ ತೋರಿಸಿದರೂ ಫಲಕಾರಿಯಾಗಲಿಲ್ಲ.ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ತೆರಳಿದರು. ಅಲಿ ಹೃದಯ ಸಂಬಂಧಿ ಪರೀಕ್ಷೆಗಳೆಲ್ಲವನ್ನೂ ನಡೆಸಲಾಯಿತು.
ಇದರಿಂದಾಗಿ ಐದು ದಿನ ಅಂಗಡಿ ಮುಚ್ಚುವಂತಾಯಿತು. ಬೆಂಗಳೂರಿನಲ್ಲಿ ಪರೀಕ್ಷೆಗಾಗಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಖರ್ಚಾಯಿತು. ಜೊತೆಗೆ ಅಂಗಡಿ ಮುಚ್ಚಲಾಗಿ ಐದು ದಿನಗಳ ಆದಾಯವೂ ನಿಂತಿತು. ಕೊನೆಗೆ ಯಾವುದೇ ತೊಂದರೆ ಇಲ್ಲ ಎಂದು ಪರೀಕ್ಷೆಯಿಂದ ತಿಳಿದು ಬಂತು.
ನಾನು ಮತ್ತೊಮ್ಮೆ ಆ ಅಂಗಡಿಗೆ ಹೋದಾಗ ಅಂಗಡಿಯವ ತನಗಾದ ತೊಂದರೆ ತಿಳಿಸಲು ನಮ್ಮ ಗುರುನಾಥರು ನೀವು ಮಾಡಿದ್ದ ಹಣದ ವ್ಯತ್ಯಾಸವನ್ನು ತಿಳಿಸಿ ಹಣ ಕಳ್ಕೊಳ್ತಾನೆ ಅಂತ ತಿಳಿಸಿದ್ದನ್ನು ತಿಳಿಸಿದೆ. ಇನ್ನು ಮುಂದೆ ಎಚ್ಚರದಿಂದ ಇರಿ ಎಂದು ನಾನು ಅವರಿಗೆ ವಿನಂತಿಸಿದೆ. ಆತ ತನ್ನ ತಪ್ಪಿಗಾಗಿ ಬೇಸರಿಸಿ ತಲೆ ತಗ್ಗಿಸಿ ನಿಂತರು.
"ಗುರು ಒಬ್ಬ ಅನಂತ ಸಂಸಾರಿ. ಆತ ಕರುಣಾ ಸಾಗರ. ಹೀಗಿದ್ದೂ ಪ್ರಾಪಂಚಿಕ ವ್ಯವಹಾರದಲ್ಲಿ ಪಕ್ಕಾ ಲೆಕ್ಕಾಚಾರಿ. ಒಂದಾಣೆ ಬಿಡನು... ಒಂದಾಣೆ ಕೊಡಲಾರನು",.........,,,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment