ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 10
ಗುರುನಾಥರ ನುಡಿಮುತ್ತುಗಳು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಸಖರಾಯಪಟ್ಟಣದ ಗುರುನಾಥರ ಬಗ್ಗೆ ಸಂಗ್ರಹಿಸುತ್ತಾ ಹೋದಾಗ, ಮೊದಲಿಗೆ ಚಿಕ್ಕಮಗಳೂರಿನ ಗುರುನಾಥರ ಪರಮ ಭಕ್ತರೊಬ್ಬರು, ಗುರುನಾಥರು ಪದೇ ಪದೇ ಹೇಳುತ್ತಿದ್ದ ನುಡಿಮುತ್ತುಗಳನ್ನು ನೆನೆದು, ಅದನ್ನು ಈ ಲೀಲಾಮೃತಕ್ಕಾಗಿ ಕೊಡಮಾಡಿದರು. ಅತ್ಯಂತ ಸತ್ಯವೂ, ಪ್ರತಿಯೊಬ್ಬರಿಗೂ ಅನಿವಾರ್ಯವೂ ಆದ ಆ ಮಾತುಗಳು ಅದನ್ನಿಲ್ಲಿ ಕಾಣಬಹುದು. ಆ ಗುರುಬಂಧುಗಳ ಹೃದಯ ವೈಶಾಲ್ಯಕ್ಕೊಂದು ನಮನ.
ಯಾವಾಗಲೂ ಗುರುನಾಥರು ಯಾರಿಗೋ ಹೇಳದಂತೆಯೋ, ಅಥವಾ ಒಬ್ಬರನ್ನು ಕುರಿತಂತೆಯೋ, ಕೆಲವೊಮ್ಮೆ ಅದು ಎಲ್ಲರಿಗೂ ಅನುಗುಣವಾಗುವಂತಿದ್ದಂತಹ ಅವರ ಬಿಡಿನುಡಿಗಳನ್ನು ಇಲ್ಲಿ ಕಾಣಬಹುದಾಗಿದೆ.
ಪ್ರತಿಯೊಬ್ಬನ ಹುಟ್ಟುವಿಕೆ, ಬಾಳುವಿಕೆ ಹಾಗೂ ಸಾಯುವಿಕೆ - ಅದು ಎಂದೋ ನಿರ್ಧಾರಿತವಾಗಿರುತ್ತದೆ. ಪ್ರಕೃತಿಯ ಮುಂದೆ ನಮ್ಮದೇನೂ ನಡೆಯದೆಂಬುದನ್ನು ಸರಳವಾಗಿ ತಿಳಿಸುತ್ತಿದ್ದರು.
ಪ್ರತಿಯೊಬ್ಬ ಜೀವಿಯೂ ಹುಟ್ಟು ಸಾವಿನ ಚಕ್ರದಲ್ಲಿ ಸಿಲುಕಿಕೊಂಡಿರುತ್ತಾನೆ. ಪ್ರತಿಯೊಬ್ಬ ಜೀವಿನ ಹುಟ್ಟು ಮತ್ತು ಆತನ ಜೀವನ, ಅವರ ಪ್ರಾರಬ್ಧ ಕರ್ಮಗಳಿಗನುಸಾರವಾಗಿರುತ್ತದೆ.
ಒಬ್ಬ ವ್ಯಕ್ತಿಯ ಹುಟ್ಟು, ಸಾಯುವಿಕೆ, ಆತನ ಜೀವನ ಹಾಗೂ ಆಹಾರ, ನಿದ್ರೆ, ಸುಖ ದುಃಖಗಳು ಭಗವಂತನಿಂದ ನಿಯೋಜಿಸಲ್ಪಟ್ಟಿರುತ್ತದೆ.
ಹಾಗಾದರೆ ಒಂದು ಪ್ರಶ್ನೆ ಉದ್ಭವಿಸುತ್ತದೆ. ಜೀವಿಯ ಕೈಯಲ್ಲಿ ಏನೂ ಇಲ್ಲವೇ? ಇದಕ್ಕುತ್ತರವೆಂದರೆ, 'ಪುರುಷಪ್ರಯತ್ನಕ್ಕೆ ಅತ್ಯಲ್ಪ ಅವಕಾಶವಿರುತ್ತದೆ' ಎಂದು ಗುರುನಾಥರು ಅನ್ನುತ್ತಿದ್ದರಂತೆ.
ಎಲ್ಲವೂ ಭಗವಂತನ ಇಚ್ಛೆಯಂತೆ ನಡೆದರೆ ಜೀವಿನ ಇಚ್ಛೆ, ಸ್ವಪ್ರಯತ್ನಕ್ಕೆ ಬೆಲೆಯೇ ಇಲ್ಲವೇ? ಎಂಬ ಪ್ರಶ್ನೆಗೆ ಗುರುನಾಥರು ಪ್ರಾರಬ್ಧ ಕರ್ಮಗಳಿಗೆ ಅನುಸಾರವಾಗಿ ಒಳಿತು ಕೆಡಕುಗಳು ನಡೆಯುತ್ತಿದ್ದರೂ ಅದೆಲ್ಲವನ್ನೂ ಭಗವಂತನ ಪ್ರಸಾದವೆಂದೇ ಸ್ವೀಕರಿಸಬೇಕು. ಭಗವಂತ ನಮಗೇ ದೇಹವನ್ನು ಕೊಟ್ಟಿರುತ್ತಾನೆ. ಅದರ ಪೋಷಣೆಗೆ ಎಲ್ಲ ವ್ಯವಸ್ಥೆಯನ್ನು ಮಾಡಿರುತ್ತಾನೆ. ಮನಸ್ಸು, ಬುದ್ಧಿ, ಇಂದ್ರಿಯಗಳನ್ನು ಕೊಟ್ಟು ವ್ಯವಸ್ಥೆ ಮಾಡಿರುತ್ತಾನೆ. ಆದರೆ ಇಷ್ಟೆಲ್ಲಾ ನಮಗೆ ನೀಡಿದ ಅವನಿಗೆ ಕೊಡಲು, ಅವನಲ್ಲಿಲ್ಲದಂತಹ ಯಾವ ವಸ್ತುವೂ ನಮ್ಮಲ್ಲಿ ಇಲ್ಲ - ಹಾಗಾಗಿ ಅವನಿಗೆ ನಾವೇನನ್ನೂ ಕೊಡಲಾರೆವು. ಒಂದೇ ಒಂದು ಆತನಿಗೆ ನಾವು ಕೊಡಲು ಸಾಧ್ಯವಿದೆ ಎಂದಾದರೆ, ನಾವವನಿಗೆ ನಿರಂತರ ಋಣಿಗಳಾಗಿರುವುದು, ಸದಾ ಅವನ ಸಂಬಂಧ-ಅನುಬಂಧ ಹೊಂದಿರುವುದು. ಇನ್ನೂ ಹೆಚ್ಚೆಂದರೆ, ಅವನ ಕೃಪೆಯಿಂದಲೇ, ಅವನ ಸ್ಮರಣೆಯನ್ನು ನಿರಂತರ ಮಾಡುತ್ತಿರುವುದು.
ಸಾಮಾನ್ಯವಾಗಿ ಕೆಲವರಲ್ಲಿ ದಿನಚರಿ ಬರೆಯುವ ಅಭ್ಯಾಸ ಇರುತ್ತದೆ. ಇದನ್ನು ಗಮನಿಸಿದ ಗುರುನಾಥರು, ಡೈರಿ ಬರೆಯುವ ಅಭ್ಯಾಸ ಇರುವ ಭಕ್ತರೊಬ್ಬರಿಗೆ ಈ ರೀತಿ ಮಾರ್ಮಿಕವಾಗಿ, ಕಿವಿಮಾತು ಹೇಳಿದರಂತೆ. 'ಭಗವಂತ ಈಗಲೇ ಬರೆದಿರುವ ನಿನ್ನ ಡೈರಿಯನ್ನು ನೀನು ಓದಿದರೆ ಸಾಕು. ಹೊಸದಾಗಿ ಏನೂ ಬರೆಯುವ ಅವಶ್ಯಕತೆ ಇಲ್ಲ, ಬರೆಯಲೂ ಸಾಧ್ಯವೂ ಆಗುವುದಿಲ್ಲ' ಎಂದು.
ಸಮಯ ಪಾಲನೆ, ಸಮಯ ಪ್ರಜ್ಞೆ ಇರಬೇಕೆಂದು ಪದೇ ಪದೇ ಇತರರನ್ನು ಮೂದಲಿಸುತ್ತಿದ್ದ, ತನ್ನನ್ನು ಶಿಸ್ತಿನ ಸಿಪಾಯಿಯೆಂದು ಭಾವಿಸಿಕೊಂಡಿದ್ದ ಸೋಗಿನ ಭಕ್ತರೊಬ್ಬರನ್ನು ಕೂರಿತು ಈ ರೀತಿ ಹೇಳಿದರು: "ಕಾಲವೇ ಭಗವಂತ. ಆ ಕಾಲವನ್ನು ನಾವು ನಿರ್ಣಯಿಸಲಾರೆವು. ಅವನೀಗಾಗಲೇ ಎಲ್ಲಾ ನಿರ್ಣಯಿಸಿದ್ದಾನೆ. ಅವನು ನಿರ್ಣಯಿಸುವ ಕಾಲವನ್ನು ನಾವು ಒಪ್ಪಿಕೊಳ್ಳುವುದೊಂದೇ ನಮಗೆ ಉಳಿದಿರುವುದು" ಎನ್ನುತ್ತಾ, ಮಾರ್ಮಿಕವಾಗಿ ನಗುತ್ತಿದ್ದರು.
ಹೊರಗಿನ ಪ್ರಕ್ರಿಯೆಗಳು, ಕೆಲವೊಮ್ಮೆ ಯಾರೋ ನೋಡುತ್ತಾರೆಂದು ನಾವು ಅಭಿನಯಿಸುವುದಿದೆ. ಹಾಗಾಗಿ, ಇದನ್ನರಿತ ಗುರುನಾಥರು 'ಬಾಹ್ಯ ಪ್ರಕ್ರಿಯೆಗಿಂತ ನಿಮ್ಮ ಮನಸ್ಸಿನ ಅಂತರಂಗದ ಪರಿಶುದ್ಧ ಭಾವನೆಗಳಿಗೆ ಒಟ್ಟು ಕೊಡಿ' ಎನ್ನುತ್ತಿದ್ದರು.
ನಾವು ಪೂಜಾ ಮಂದಿರದಲ್ಲಾಗಲೀ, ದೇವಸ್ಥಾನಗಳಲ್ಲಿ ಆಗಲಿ, ಅದೆಷ್ಟು ಹೊತ್ತು ಆ ಪರಮಾತ್ಮನ ಸಂಬಂಧವೇರ್ಪಡಿಸಿಕೊಂಡ ಆ ಕಾಲವೇ 'ಭಗವಂತ' ಎಂದು ಕರೆಯುತ್ತಿದ್ದಾರೆ ಹೊರತು, ಭಾವವಿಲ್ಲದೇ ಹೋದಲ್ಲಿ ಆ ಮೂರ್ತಿ ಕೇವಲ 'ಜಡ' ಎನ್ನುತ್ತಿದ್ದರು.
ಲಕ್ಷ ಬಿಲ್ವಾರ್ಚನೆಯ ಅರ್ಥವನ್ನು ಗುರುನಾಥರು ಅರ್ಥೈಸಿ ವಿವರಿಸುತ್ತಿದ್ದ ರೀತಿ ಎಂದರೆ 'ಶಿವನ ಕಡೆಗೆ ಸಂಪೂರ್ಣ ಲಕ್ಷ್ಯ'. ಸುಮ್ಮನೆ ಬಿಲ್ವಪತ್ರದ ಮರಕ್ಕೆ ತೊಂದರೆ ನೀಡಿ, ಕೀಳುವ ನಾವು ಅದರ ಒಂದು ಪಾತ್ರೆಯನ್ನು ಪುನಃ ಗಿಡಕ್ಕೆ ಸೇರಿಸುವ ಶಕ್ತಿ ಇಲ್ಲದಿರುವಾಗ, ಸುಮ್ಮ ಸುಮ್ಮನೆ ಪೂಜೆಯ ಹೆಸರಿನಲ್ಲಿ ಗಿಡಕ್ಕೆ ತೊಂದರೆ ನೀಡಿ ಪತ್ರೆಗಳನ್ನು ತಂದು ಹಾಕುವುದು ಸರಿಯಲ್ಲ'.
ಗುರುನಾಥರ ಮನೆಯ ಕೊಟ್ಟಿಗೆಯಲ್ಲಿ ಅಪಾರ ಗೋ ಸಂಪತ್ತಿತ್ತು. ಆದರೆ ಅದರ ಹಾಲನ್ನವರು ಬಳಸುತ್ತಿರಲಿಲ್ಲವಂತೆ. 'ಗೋವು ತನ್ನ ರಕ್ತ ಬಸಿದು ಹಾಲು ನಿರ್ಮಾಣ ಮಾಡುವುದು ತನ್ನ ಕರುವಿಗಾಗಿ... ಆದರೆ ನಾವು ಎಷ್ಟು ಕಠಿಣವಾಗಿ ವರ್ತಿಸುತ್ತೇವೆಂದರೆ, ಆಕಳ ಮುಂದೆ ಕರುವನ್ನು ನಿಲ್ಲಿಸಿಯೋ, ಒಂದು ಸ್ವಲ್ಪ ಆಕಳ ಕರುವಿಗೆ ಕುಡಿಯಲು ಬಿಟ್ಟು ಅದನ್ನಿತ್ತ ಎಳೆದು ಎಲ್ಲವನ್ನೂ ಕರೆದುಕೊಳ್ಳುತ್ತೇವೆ. ಇಂತಹ ಸ್ವಾರ್ಥ ನಮಗೆ ಬೇಕೇ?' ಎಂದು ಪ್ರಶ್ನಿಸುತ್ತಿದ್ದರು. (ಗುರುನಾಥರು ಆ ಗೋಮಾತೆ ತನ್ನ ಕಂದನಿಗೆ ಪ್ರೀತಿಯಿಂದ ಹಾಲನ್ನು ಧಾರೆ ಎರೆಯುವುದು, ಆ ಕಂದ ಮಮತೆಯಿಂದ ಕುಡಿಯುವುದನ್ನು ನೋಡುವುದರಲ್ಲೇ ಮಹದಾನಂದ ಪಡುತ್ತಿದ್ದರಂತೆ).
ಭಕ್ತರು ಕಂಡಂತೆ ಸಾಮಾನ್ಯವಾಗಿ ಗುರುನಾಥರು ಯಾರನ್ನೂ ತಮ್ಮ ಮನೆಗೆ ಇಂದು ಪೂಜೆ, ಶ್ರಾದ್ಧ, ಇಂತಹ ಕೆಲಸವಿದೆ ಎಂದು ಕರೆಯುತ್ತಿರಲಿಲ್ಲವಂತೆ. ಬಂದಾಗ ಮಾತ್ರ, ಯಾರೇ ಮನೆಗೆ ಬರಲಿ, ಅಭ್ಯಾಗತ ಸ್ವಯಂ ವಿಷ್ಣು ಅತಿಥಿ ದೇವೋಭವ ಎಂಬ ಮಾತಿನಂತೆ ನೂರು ಪ್ರತಿಶತ ಅತಿ ಹೆಚ್ಚು ಸದ್ಭಾವನೆಯಿಂದ ಅವರ ಸೇವೆ ಸತ್ಕಾರ ಮಾಡುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಗುರುನಾಥರು ಹೇಳುತ್ತಿದ್ದ ಮಾತೆಂದರೆ 'ಭಗವಂತ ಹುಟ್ಟಿಸಿದ ಪ್ರತಿಯೊಂದು ಜೀವಿಗೂ, ಜೀವಿತದ ಪೂರ್ಣ ಅವಧಿ ಮುಗಿಯುವವರೆವಿಗೂ, ಅವರವರಿಗೆ ಅನ್ನವನ್ನು ಸಿದ್ಧಪಡಿಸಿಟ್ಟಿರುತ್ತಾನೆ. ಆದ್ದರಿಂದ ಭಗವಂತ ಈಗಾಗಲೇ, ಸಿದ್ಧಮಾಡಿ ಇಟ್ಟಿರುವ ಆ ಆಹಾರದ ಮೇಲೆ ನಿನ್ನ ಮನೆಯ ಶ್ರದ್ಧಾದೂಟವೋ, ನಾಮಕರಣದ ಆಹಾರವೋ, ಮದುವೆಯೋ, ಮುಂಜಿಯೋ ಇತ್ಯಾದಿ ಕಾರ್ಯಕ್ರಮಗಳ ಹೆಸರನ್ನು ಬರೆಯಬೇಡ' ಎಂದು ಭಾವಿಸಿ, ವಿನಂತಿಸಿ ಹೇಳುತ್ತಿದ್ದರು.
ಎಲ್ಲೋ ಒಂದಿಷ್ಟು ಅನ್ನದಾನ ಮಾಡಿದ ಕಾರಣದಿಂದ ಬೀಗುವ ಜನರನ್ನು 'ಆ ಅಕ್ಕಿ ಬೆಳೆದವರಾರು? ನೀರುಣಿಸಿದವರಾರು? ಅದನ್ನು ಮಾಗಿಸಿ ತಿನ್ನಲು ಯೋಗ್ಯ ಮಾಡಿದವರಾರು? ಬೇಯಿಸಿದವರಾರು?' - ಇದೆಲ್ಲಾ ಯೋಚನೆ ಮಾಡದೆ ನಾಲ್ಕು ಕಾಸು ನೀಡಿ 'ಅನ್ನದಾನ ಮಾಡಿದೆ' ಎನ್ನುವುದು ಸರಿಯೇ?' ಎಂದು ಪ್ರಶ್ನಿಸುತ್ತಾ, ನಮ್ಮ ನಮ್ಮ ಕಣ್ಣು ತೆರೆಸುತ್ತಾ ಅದೆಷ್ಟೋ ವಿಚಾರಗಳನ್ನು ಸುಲಭವಾಗಿ ಶಿಷ್ಯರಿಗೆ ತಿಳಿಸುತ್ತಿದ್ದರಂತೆ.
ಯಾವುದೇ ವಸ್ತುವಿನ ಮೂಲ ಬೆಲೆ ನಾವು ಕಟ್ಟುತ್ತಿಲ್ಲ. ಏಕೆಂದರೆ ಆ ವಸ್ತು ತಯಾರಾಗುವ ಸ್ಥಿತಿ, ವೆಚ್ಚ, ಶ್ರಮಗಳ ಅರಿವು ನಮಗಿಲ್ಲ. "ಈ ದೃಷ್ಠಿಯಲ್ಲಿ ಯಾರೂ ದಾನಿಗಳಿಲ್ಲ" . 'ನಮ್ಮದು ಎಂದು ಹೇಳಿಕೊಳ್ಳುವ ಯಾವ ವಸ್ತುವೂ ನಮ್ಮದಲ್ಲ'. ನಮ್ಮದಲ್ಲದ ವಸ್ತುಗಳನ್ನು ಕೊಡುವುದೂ ಆಗುವುದಿಲ್ಲವೆನ್ನುತ್ತಿದ್ದರು. 'ನೀನು ಸಾಹುಕಾರನೋ ನಾನು ಸಾಲಗಾರನೋ ಸುಮ್ಮನೆಲ್ಲವ ತಿಂದೆನೋ - ಒಡೆಯ ನಿನ್ನೇ ಮರೆತೆನೋ ಎನ್ನುವ, ಶ್ರೀ ಸತ್ ಉಪಾಸಿ ಸದ್ಗುರುಗಳ ಗೀತೆ ಇಲ್ಲಿ ನಿನಪಾಗದಿರದು'.
ಪ್ರಕೃತಿ ಪ್ರಿಯರಾದ ಗುರುನಾಥರು, ಗಿಡದಲ್ಲಿ ಹೂವು ಅರಳಿ ನಳನಳಿಸುತ್ತಿರುವುದನ್ನು ನೋಡಿ ಆನಂದಿಸುತ್ತಿದ್ದರು. ಅದನ್ನು ಕಿತ್ತು ತಂದು ಶಿಲಾ ಮೂರ್ತಿಗಳಿಗೆ, ಭಾವವಿಲ್ಲದೇ ಅಲಂಕರಿಸುವುದನ್ನವರು ಇಷ್ಟಪಡುತ್ತಿರಲಿಲ್ಲ. ಬಾಳು ಪಕ್ವವಾಗಿಸಿ ಈ ಕಾಯವನ್ನು ಭಗವಂತನಿಗೆ ಅರ್ಪಿಸುವುದರ ಬಗ್ಗೆ ಆಗಾಗ್ಗೆ ಒತ್ತಿ ಹೇಳುತ್ತಿದ್ದರಂತೆ. ಅಂತೆಯೇ 'ಗಟ್ಟಿಯಾದರೆ ರೊಟ್ಟಿ ನೀರಾದರೆ ದೋಸೆ' ಎಂಬುದನ್ನು ಪದೇ ಪದೇ ತಿಳಿಸುತ್ತಾ, ಜೀವನದಲ್ಲಿ ಬಂದದ್ದನ್ನು ಬಂದಂತೆ ಸಹಜವಾಗಿ ಸ್ವೀಕರಿಸಿ, ಎನ್ನುತ್ತಿದ್ದರು.
ಸಾವು ನೋವುಗಳನ್ನು ಶುಭ ಅಶುಭಗಳನ್ನು ಸಹಜವಾಗಿ ಸ್ವೀಕರಿಸುತ್ತಿದ್ದ ಗುರುನಾಥರು 'ಎಲ್ಲ ಕಾರ್ಯಗಳಿಗೂ ಬಳಸುವ ಅಕ್ಕಿ ಒಂದೇ. ಸಾಧು ಸತ್ಪುರುಷರ ಕೈಯಿಂದ ಬಂದರೆ 'ಫಲ ಮಂತ್ರಾಕ್ಷತೆ' ಯಾದರೆ, ಪೂಜೆಗೆ ಬಳಸಿದಾಗ ಮಂತ್ರಾಕ್ಷತೆ, ಮದುವೆಗಳಲ್ಲಿ ಬಳಸಿದಾಗ 'ಆರತಕ್ಷತೆ' ಹೆಣದ ಬಾಯಿಗೆ ಹಾಕುವಾಗ ಅದು 'ಬರಕ್ಕಿ', ಊಟಕ್ಕೆ ಬಳಸಿದಾಗ 'ಆಹಾರ'ವಾಗುತ್ತದೆ. ವಸ್ತುವಿನ ಮೌಲ್ಯವು ಬಳಸುವ ಕಾಲ, ಬಳಸುವ ಪರಿಸ್ಥಿತಿ ರೀತಿ ನೀತಿಗಳಿಂದ ಬೇರೆಯಾಗಿರುತ್ತದೆ' ಎನ್ನುತ್ತಿದ್ದರು.
ಜೀವನದಲ್ಲಿ ನಮ್ಮ ಒಳ್ಳೆಯ ನಡವಳಿಕೆ, ಶುದ್ಧ ಭಾವಕ್ಕೆ ಅವರು ಆದ್ಯತೆ ಕೊಡುತ್ತಿದ್ದರು. ಗುರುನಾಥರು ಹಣ, ಅಂತಸ್ತು, ಅಧಿಕಾರಕ್ಕಲ್ಲ. 'ಮಂತ್ರ ತಪ್ಪಿದರೂ ಅಡ್ಡಿ ಇಲ್ಲ. ಮಾತು ತಪ್ಪಬೇಡ' ವೆಂದು ಪದೇ ಪದೇ ಹೇಳುತ್ತಿದ್ದರು.
ಸಂಸಾರದ ವಿಚಾರಕ್ಕೆ ಬಂದಾಗ ಮಕ್ಕಳಲ್ಲಿ ಏನಾದರೂ ಅವಗುಣಗಳು ಕಂಡುಬಂದಾಗ, ನಾವು ಅವರ ಜಾಗದಲ್ಲಿದ್ದಂತೆ ಚಿಂತಿಸಿ, ದಂಡಿಸುವುದಕ್ಕಿಂತ ಉಪಾಯದಿಂದ, ಪ್ರೀತಿಯ ಮಾತಿನಿಂದ ತಿದ್ದಿರಿ' ಎನ್ನುತ್ತಿದ್ದರು.
'ಪುರುಷನಿಗೆ ಪ್ರಾಪಂಚಿಕ ಜೀವನವಲ್ಲದೇ ಪರಮಾರ್ಥ ಸಾಧನೆಗಾಗಿ ಪೂಜೆ, ಪುನಸ್ಕಾರ, ಜಪ, ತಪ, ಸಾಧು ಸತ್ಪುರುಷರ ಸೇವೆ' ಇತ್ಯಾದಿ ಅನೇಕ ಮಾರ್ಗಗಳಿವೆ. ಆದರೆ ಗೃಹಿಣಿಗೆ ಮಾತ್ರ ತನ್ನ ಗಂಡ-ಮಕ್ಕಳು, ಅತ್ತೆ ಮಾವಂದಿರು, ಅತಿಥಿ ಅಭ್ಯಾಗತರ ಸೇವೆ, ಹಾಗೂ ತನ್ನ ಮನೆಯ ಶ್ರೇಯಸ್ಸನ್ನು ಬಯಸುತ್ತಾ ಆಕೆ ಅತ್ಯುನ್ನತ ಸ್ಥಿತಿ ಪಡೆಯಬಹುದು ಎನ್ನುತ್ತಿದ್ದರು. ತಾತ್ಪರ್ಯವೆಂದರೆ ಪುರುಷನಿಗಿಂತ ಗೃಹಿಣಿಗೆ ಪರಮಾರ್ಥ ಬಹು ಸುಲಭ ಸಾಧ್ಯವಾದುದು' ಎನ್ನುತ್ತಿದ್ದರು.
'ವಿದ್ವತ್ತನ್ನು ಹೊಂದಿ ತನ್ಮೂಲಕ ಭಗವಂತನನ್ನು ಅರಸುವವರಿಗಿಂತ ಮುಗ್ಧತೆಯಲ್ಲಿ ಪರಮಾತ್ಮನನ್ನು ಅರಸುವವರಿಗೆ ಆತ ಬೇಗ ಸಿಗುತ್ತಾನೆ. ಪರಮಾತ್ಮನಿಗೆ ಮುಗ್ಧ ಶುದ್ಧ ಭಕ್ತಿಯೊಂದೇ ಬೇಕಿರುವುದು. ಇದು ಪರಮಾತ್ಮನನ್ನು ಕಾಣುವ ಅತ್ಯುತ್ತಮ ಮಾರ್ಗ' ಎನ್ನುತ್ತಿದ್ದರು.
ಗುರುವೆಂದರೆ ಹೊರಗೆಲ್ಲೂ ಇಲ್ಲ. ಅದು ನಮ್ಮೊಳಗೇ ಇರುವ ಉದಾತ್ತ ಭಾವ. ಆ ಭಾವವನ್ನು ಹೊರಗಿನ ಉಪಾದಿಯೊಂದರ ಮೇಲೆ ಆರೋಪಿಸಿ, ತನ್ನನ್ನು ತುಂಬಾ ಕನಿಷ್ಠನೆಂದು ಭಾವಿಸಿ, ತನ್ಮೂಲಕ ತನ್ನ ಅಹಂಕಾರವನ್ನು ಕರಗಿಸಿಕೊಳ್ಳುವುದೇ ಗುರು-ಶಿಷ್ಯರ ಸಂಬಂಧ. ಗುರು ವ್ಯಕ್ತಿ ಪ್ರಮಾಣವಲ್ಲ - ವಾಕ್ಯ ಪ್ರಮಾಣ. ಯಾವುದೇ ಒಂದು ಉಪಾದಿಯನ್ನು ಗುರುವೆಂದು ಸ್ವೀಕರಿಸದ ಶಿಷ್ಯನು, ಆ ಗುರುವಿನ ಯಾವುದೇ ವಾಕ್ಯವಾಗಿರಲಿ-ಮತ್ತೇನೂ ವಿಚಾರ ಮಾಡದೇ ಕಟ್ಟು ನಿಟ್ಟಾಗಿ ಪಾಲಿಸುವುದೇ ಶಿಷ್ಯಧರ್ಮ' ಎಂದು ಗುರುನಾಥರು ಅನೇಕ ಸಾರಿ ಹೇಳಿದ್ದಿದೆ. ಗುರುಚರಿತ್ರೆಯಲ್ಲಿ ಬರುವ ನಲವತ್ತನೆಯ ಅಧ್ಯಾಯದ 'ಒಣಗಿದ ಅರಳಿಮರದ ತುಂಡಿಗೆ, ಕುಷ್ಠ ರೋಗಿಯು ನಿಷ್ಠೆಯಿಂದ, ತರ್ಕ ಮಾಡದೆ ಗುರುವಾಕ್ಯ ಪ್ರಮಾಣ' ವೆಂದು ನೀರೆರೆದ ಘಟನೆಯನ್ನಿಲ್ಲಿ ಸ್ಮರಿಸಬಹುದು.
'ಮೂರು' ಮ ಕಾರಗಳ ಬಗ್ಗೆ ಗುರುನಾಥರು ಸ್ವಾರಸ್ಯವಾಗಿ ಹೇಳುತ್ತಾ, 'ಅದನ್ನ ನಡಿಸಿರಯ್ಯಾ' ಎನ್ನುತ್ತಿದ್ದರು. ಮೊದಲನೆಯ 'ಮ' ಎಂದರೆ ಪಡೆದ ಉಪಕಾರವನ್ನು ಎಂದೂ ಮರೆಯಬೇಡ. ಎರಡನೆಯ 'ಮ' ಎಂದರೆ ಬಾಂಧವ್ಯವನ್ನು ಮುರಿದುಕೊಳ್ಳಬೇಡ, ಎಂದರೆ ನಿಷ್ಠೂರವಾಗಿ ವರ್ತಿಸಬೇಡ. ಇನ್ನು ಮೂರನೆಯ 'ಮ' ಎಂದರೆ ಅಹಂಕಾರದಿಂದ ಮೆರೆಯಬೇಡ, ಸೌಜನ್ಯಶೀಲನಾಗಿ ಬಾಳುವುದನ್ನು ಕಾಳಿ ಎಂಬುದೇ' ಗುರುನಾಥರ ತಮಾಷೆಯಲ್ಲೂ ತತ್ವಗಳೇ ತುಂಬಿರುತ್ತಿತ್ತು.
"ಸಾಹುಕಾರನೆಂದರೆ ಸುತ್ತಮುತ್ತಲಿನವರಿಗೆ, ಕಷ್ಟದಲ್ಲಿರುವವನಿಗೆ, ಸಹಾಯ ಮಾಡುವವನು ಎಂದು ತಿಳಿಯಬೇಕೇ ಹೊರತು ಶ್ರೀಮಂತಿಕೆಯ ಪ್ರದರ್ಶನ ಮಾಡುವವನಲ್ಲ - ಸಂಸಾರವೆಂದರೆ, ಸೂಜಿ ಕವಲು, ದಾರ ಗಂಟಯ್ಯ. ಹೊಲೆಯುವವನ ಕಣ್ಣು ಕುರುಡು ಆದರೂ ಹೊಲೆಯುವಿಕೆ ನಡದೇ ಇದೆ.
ದೀನರು, ಸಂತ್ರಸ್ಥರು ಎಂದರೆ ನನಗೆ ಪ್ರೀತಿ. ಏಕೆಂದರೆ, ಅವರು ಆ ಪರಮಾತ್ಮನ ಸ್ನೇಹದಲ್ಲಿರುತ್ತಾರೆ (ಸಂಕಟ ಬಂದಾಗಲೇ ವೆಂಕಟರಮಣನನ್ನು ನೆನೆಯುವುದು). ದೇಹವೇ ಬೇರೆ, ನೀನೇ ಬೇರೆ, ಈ ದೇಹ ನಂದಲ್ಲಾ ಎಂದುಕೊಳ್ಳಿ. ಆಗ ಯಾವ ಕಷ್ಟವೂ ನಿಮಗಾಗದು.
ನನಗೆ ಗೊತ್ತಿರುವ ಜ್ಞಾನವನ್ನು ಚೆಲ್ಲಿಕೊಂಡು ಹೋಗುತ್ತೇನೆ. ಆರಿಸಿಕೊಳ್ಳುವವರು ಆರಿಸಿಕೊಳ್ಳುತ್ತಾರೆ. ಗೊತ್ತಿಲ್ಲದವರು ದಾಟಿಕೊಂಡು ಹೋಗುತ್ತಾರೆ. ಕೆಲವರು ತುಳಿದುಕೊಂಡು ಹೋಗುತ್ತಾರೆ. ನಾನು ಯಾವುದನ್ನೂ ತಮಾಷೆಗೆ ಮಾತನಾಡುವುದಿಲ್ಲ. ಅದು ಶಬ್ದ ಬ್ರಹ್ಮ. ಯಾವುದನ್ನೂ ಮಾತನಾಡಬೇಡ. ಯಾರ ಹೆಸರೂ ಅದರ ಮೇಲೆ ಬರೀಬೇಡ, ನಿನ್ನ ಕೈಯಲ್ಲಿ ಏನೂ ಇಲ್ಲ. ನೀನು ಏನೂ ಮಾಡಲಾರೆ.
ಯಾವುದಾವುದೋ ಸಂಘ ಸಂಸ್ಥೆಗಳಿಗೆ ಹೋಗುವುದಕ್ಕಿಂತ ಮನೆಗೆ ಬಂದವರನ್ನು ಆದರಿಸಿ ಸತ್ಕರಿಸುವುದು ಮುಖ್ಯ. ಬಂದವರು ಎಷ್ಟು ಹೊತ್ತಿಗೆ ಎದ್ದು ಹೋಗುತ್ತಾರೋ ಎಂದು ಮನೆಯ ಗೃಹಿಣಿಯು ಯೋಚಿಸುವುದು ಸರೀನಾ ಸಾರ್.
ನಾನೇನು ನಿಮ್ಮನ್ನ ಕರೆದನಾ - ನೀವು ಬಂದಿರಿ - ಹೊರಡಲು ನನ್ನ ಅನುಮತಿ ಏನು ಕೇಳ್ತೀರಿ. ನಾನು ಹೊರಡೆಂದರೆ ಪ್ರಪಂಚದಿಂದಲೇ ಹೊರಡಬೇಕಾದೀತು.
ಏನೋ ಉದ್ದೇಶ ಇರುತ್ತೆ ಕಣಯ್ಯಾ. ಅದಕ್ಕೆ ಇರಿ ಅಂತ ಹೇಳೋದು, ಸುಮ್ಮಸುಮ್ಮನೆ ಕೂರಿಸಿ ಊಟ ತಿಂಡಿ ಹಾಕೋಕೆ ನನಗೇನಿದೆ?
ಹುಡುಕಬೇಕಾಗುತ್ತಯ್ಯ, ಗುರುವಿಗಾಗಿ - ನಾನು ನಿಮಗೆ ಸುಲಭವಾಗಿ ಸಿಕ್ಕಿಬಿಟ್ಟಿದ್ದೇನೆ. ನನಗೋಸ್ಕರ ಹಿಮಾಲಯದಲ್ಲಿ ಒಂಟಿಕಾಲಲ್ಲಿ ನಿಂತು ನೂರಾರು ವರ್ಷದಿಂದ ಕಾಯುತ್ತಿದ್ದಾರೆ. ಅವರಿಗೂ ಸಿಗೋದು ಬೇಡವೇ?
ಯಮುನೆ ಪೂಜೆ ಎಂದರೆ ಭಾವಿಗೋ, ನೀರಿನ ನಲ್ಲಿಗೋ ಪೂಜೆ ಮಾಡುವುದಲ್ಲ. ನಮ್ಮ ಕಣ್ಣು ಮುಂದಿರುವವರನ್ನು ಗುರುತಿಸಿ ಅವರಿಗೆ ಪೂಜಿಸಿ, ಭಕ್ತಿಯಿಂದ ನೀರು ತರುವುದೇ ಯಮುನೆ ಪೂಜೆ.
ನಿನ್ನದನ್ನು ನೀನು ನೋಡಿಕೋ. ಎಲ್ಲರ ಪ್ರಾರಬ್ಧವನ್ನು ಹೊರುವುದಕ್ಕಾಗುವುದಿಲ್ಲ. ನಾನೊಂದು ಬೇಲಿ ಹಾಕಿಕೊಂಡಿರ್ತೀನಿ. ಅಲ್ಲಿ ನೀ ಬೇರೆಯವರನ್ನು ಕರೆತಂದರೆ ನಿನ್ನ ಜಾಗವೇನಾಗುತ್ತದೆ ಯೋಚಿಸು.
ಹರಿಜನ ಎಂದರೆ ಹರಿಯ ಹತ್ತಿರವಿರುವ ಜನ, ದೂರದಲ್ಲಿ ಮನೆ ಮಾಡಿದೆ ಎಂದುಕೊಳ್ಳಬೇಡ. ವೃಧ್ದರ ರೂಪದಲ್ಲಿ ರುದ್ರ ಬರುತ್ತಾನೆ.
ಆಸ್ಪತ್ರೆ ಹತ್ತಿರದ ಎಳನೀರು ಕುಡಿಯಬೇಡ. ಇದರಿಂದ ರೋಗಿಗಳಿಗೆ ದೊರಕಬೇಕಾದದ್ದು ಇಲ್ಲವಾಗುತ್ತದೆ.
ಸಾಹುಕಾರನೆಂದರೆ ಸುತ್ತಮುತ್ತಲಿನವರಿಗೆ ಸಹಕಾರಿಯಾಗಿರಬೇಕೇ ಹೊರತು ಶ್ರೀಮಂತಿಕೆ ಪ್ರದರ್ಶನ ಮಾಡುವುದಲ್ಲ - ಹೀಗೆ ಗುರುನಾಥರ ನುಡಿಮುತ್ತುಗಳು. ಇದಲ್ಲದೇ ಇನ್ನೂ ಅವರ ಅನೇಕ ಭಕ್ತರ ಹೃದಯಗಳಲ್ಲಿ 'ನುಡಿಮುತ್ತಿನ ಭಂಡಾರವೇ ಇದೆ' ಅದು ಪ್ರಕಟವಾಗಲು ಕಾಲ ಬೇಕಿರಬಹುದು.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....

For more info visit : http:// srivenkatachalaavadhoota. blogspot.in/
No comments:
Post a Comment