ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 11
ಗುರುವಾಕ್ಯ ಪ್ರಮಾಣ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರ ಭಕ್ತರೊಬ್ಬರು ಹಲವು ತೊಂದರೆಗೊಳಗಾಗಿದ್ದರು. ತಾವು ಮಾಡುತ್ತಿದ್ದ ವ್ಯವಹಾರದಿಂದ ಹೊರಬಂದರೂ ಅವರೇನೂ ಮಾಡಲಾಗದಿದ್ದರೂ, ಹಳೆಯದೇ ರೀತಿಯ ವ್ಯಾಪಾರವನ್ನು ಸ್ವಂತ ಮಾಡುವ ಅಭಿಲಾಷೆ ಅವರದಾಗಿತ್ತು. ಏಕೆಂದರೆ ಗೊತ್ತಿರುವುದು, ಅನುಭವವಿರುವುದು ಆ ವ್ಯಾಪಾರದಲ್ಲಿ ಮಾತ್ರ, ಎಂಬುದು ಅವರ ಅನಿಸಿಕೆಯಾಗಿತ್ತು.
ಅಂಗಡಿಯನ್ನು ಪ್ರಾರಂಭಿಸಬೇಕು. ಒಂದು ದಿನ ಬಂದರೆ ನಾಲ್ಕು ದಿನ ಕೈಕೊಡುವ ಕೆಲಸಗಾರರು, ಹಣದ ಮುಗ್ಗಟ್ಟು, ಇವೆಲ್ಲಾ ಇದ್ದರೂ ನಿರಂತರ ಗುರುದರ್ಶನ, ಗುರುನಾಮ ಸ್ಮರಣೆಯಂತೂ ಅವರು ಬಿಟ್ಟಿರಲಿಲ್ಲ.
ಒಂದು ಸಾರಿ ಗುರುನಾಥರಿಗೆ ಫೋನು ಮಾಡಿ ತಮ್ಮ ಕಷ್ಟಗಳನ್ನು ತೋಡಿಕೊಂಡರು. ಅತ್ತಲಿಂದ ಫೋನಿನಲ್ಲಿ ಗುರುನಾಥರು 'ಯಾಕೆ ಸಾರ್, ಚಿಂತೆ ಮಾಡ್ತೀರಿ, ಗುರು ಚರಿತ್ರೆಯ ಈ ಅಧ್ಯಾಯವನ್ನು ಓದಿ.... ಎಲ್ಲಾ ಸರಿಯಾಗುತ್ತೆ" ಎಂದರು.
ಪೂಜೆ ಪಾರಾಯಣ ಮುಗಿಸುವಲ್ಲಿ, ಹೊರಗಡೆ ಕೆಲಸಗಾರರು ಇವರ ಹೆಸರು ಕೇಳುತ್ತ ಇವರ ಮನೆಯನ್ನು ಹುಡುಕಿಕೊಂಡು ಬಂದಿದ್ದರು. ಅಂಗಡಿಯ ಕೆಲಸ ಸುಸೂತ್ರವಾಗಿ ಸಾಗಿತು. ಯಾವಾಗ ಅಂಗಡಿ ಪ್ರಾರಂಭಿಸಬೇಕೆಂದು ಕೇಳಿದಾಗ ಶುಭಸ್ಯಶ್ರೀಘ್ರಂ ಎನ್ನುವಂತೆ 'ಈ ದಿನವೇ ಸಂಜೆ ಐದೂವರೆಗೆ, ಎಲ್ಲಾ ಆಗುತ್ತದೆ ಪ್ರಾರಂಭಿಸಿ ಬಿಡಿ... ಹಾಂ ಅಂಗಡಿ ಹೆಸರೇನು ಇಡ್ತೀರಿ...? ನಿಮಗೆ ಗೊತ್ತೇ ಇದೆಯಲ್ಲ ಅದನ್ನೇ ಇಡಯ್ಯಾ... ಅದೇ ಲಕ್ಷ್ಮೀ ಪ್ರಾವಿಜನ್ ಸ್ಟೋರ್ಸ್' ಎಂದು ಹೆಸರನ್ನು ಸೂಚಿಸಿದರು.
ಗುರುಗಳು, ಗುರುವಾಕ್ಯದಲ್ಲಿ ಅಪಾರ ನಂಬಿಕೆ ಇದ್ದ ಅವರಿಗೆ ಇದೇನಾಯ್ತು?, ಒಂದು ಕ್ಷಣ ಸ್ತಂಭೀಭೂತರಾದರು. ಏಕೆಂದರೆ ಅವರು ಲಕ್ಷ್ಮೀ ಫುಟ್ ವೇರ್ ಅನ್ನು ಪ್ರಾರಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಗುರುನಾಥರು ಪ್ರಾವಿಜನ್ ಸ್ಟೋರ್ ತೆರೆಯಲು ಸೂಚಿಸಿದ್ದರು. ಅದು ಕೆಲವೇ ಗಂಟೆಗಳಲ್ಲಿ. ಪ್ರಾರಂಭೋತ್ಸವವೂ ಆಗಬೇಕು, ಮುಹೂರ್ತ ಸಾಧನೆಯಾಗಬೇಕು, ಏನೂ ಅನುಭವವಿಲ್ಲದ ಕಿರಾಣಿ ಅಂಗಡಿ 'ಗುರುನಾಥರಿದ್ದಾರೆ - ನಡೆಸುತ್ತಾರೆ' ಎಂಬ ಭರವಸೆ. ಸಂಜೆಯೊಳಗೆ ಕಿರಾಣಿ ವಸ್ತುಗಳನ್ನೆಲ್ಲಾ ಸಂಗ್ರಹಿಸಿ, ಜೋಡಿಸಿದ್ದಾಯಿತು. ಚಂದ್ರಶೇಖರ ಭಾರತಿಗಳು, ಗುರುನಾಥರ ಫೋಟೋಗಳು ಅಂಗಡಿಯನ್ನ ಅಲಂಕರಿಸಿದವು. ಇಷ್ಟರಲ್ಲಿ ಅದೆಲ್ಲಿಂದಲೋ ಬಂದ ಮಂಗಳಮುಖಿಯರು ನಿಂಬೆಹಣ್ಣು ತರಿಸಿ ಶುಭಕೋರಿ ಹೋದರು.
'ಅಂಗಡಿಯ ಪೂಜೆಯಾಗಬೇಕಲ್ಲ? ಭಟ್ಟರನ್ನೇಲ್ಲಿ ಹುಡುಕುವುದು, ಮುಂಚೆ ತಿಳಿಸದೆ ಸಿಗುವುದು ಕಷ್ಟ' ಎಂದು ಯೋಚಿಸುತ್ತಿರುವುದಾಗಿ ಪುರೋಹಿತರೊಬ್ಬರು ಬಂದರು. ಗುರುಗಳ ಫೋಟೋ ನೋಡಿದವರು 'ನಮ್ಮ ಗುರುಗಳು... .. ಅಂಗಡಿ ಪ್ರಾರಂಭಿಸುತ್ತಿದ್ದೀರಾ.... ಎಷ್ಟು ಹೊತ್ತಿಗೆ ಪೂಜೆ?. ಯೋಚನೆ ಮಾಡಬೇಡಿ. ನಾನೇ ಬರುತ್ತೇನೆ' ಎಂದು ಉತ್ತಮವಾಗಿ ಪೂಜೆಯನ್ನು ಮಾಡಿದರು. ಶುಭ ಮುಹೂರ್ತದಲ್ಲಿ ಗುರುನಾಥರು ಹೇಳಿದ ಸಮಯದಲ್ಲೇ ಅಂಗಡಿ ಪ್ರಾರಂಭವಾಯಿತು. ಏನೆಲ್ಲಾ ಎಷ್ಟು ಬೇಗ ನಡೆದು ಹೋಯಿತು - ಎಲ್ಲ ಕನಸಿನಲ್ಲಿ ನಡೆದಂತೆ ಗುರುವಾಕ್ಯ ಪ್ರಮಾಣವಾದದ್ದು ಹೀಗೆ ಎಂದು ಸ್ಮರಿಸುತ್ತಾರವರು.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http:// srivenkatachalaavadhoota. blogspot.in/
No comments:
Post a Comment