ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 1
ಗುರುವೇ ನೀನೇ ನನಗೆ ದರ್ಶನ ನೀಡಬೇಕು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಕೊಮಾರನ ಹಳ್ಳಿಯ ಆಶ್ರಮದಲ್ಲಿ ಶ್ರೀ ಶ್ರೀ ಶಂಕರಲಿಂಗ ಭಗವಾನ್ ರ ಆರಾಧನೆಯು ನಡೆಯುತ್ತಿತ್ತು. ಜಮಖಂಡಿಯಿಂದ ಬಂದ ವಯೋವೃದ್ಧರೂ, ಜ್ಞಾನವೃದ್ಧರೂ, ಸಂತರೂ ಆದ ಶ್ರೀ ಭಸ್ಮೇಮಹಾರಾಜರು ನಮ್ಮೊಂದಿಗೆ ಅಲ್ಲಿಗೆ ಬಂದಿದ್ದರು. ಜನಜಂಗುಳಿಯಿಂದ ತುಂಬಿದ ಆವರಣದಲ್ಲಿ 'ಗುರುಹರಿ, ಗುರುಹರ, ಗುರುಬ್ರಹ್ಮ' ದ ಅನುರಣನವಾಗುತ್ತಿತ್ತು. ಭಸ್ಮೇಮಹಾರಾಜರು ಬಳಲಿದ್ದರಿಂದ ಅವರಿಗೊಂದು ರೂಮಿನ ವ್ಯವಸ್ಥೆ ಮಾಡಲು, ಅವರನ್ನು ಒಂದೆಡೆ ಕೂರಿಸಿ ನಾನು ವಿಚಾರಿಸಲು ಹೋಗಿದ್ದೆ. ವಾಪಸ್ಸು ಬರುವಷ್ಟರಲ್ಲಿ ಶ್ರೀ ಶಂಕರಲಿಂಗರ ಸದ್ಭಕ್ತರೊಬ್ಬರು ಭಸ್ಮೇಮಹಾರಾಜರಿಗೆ ಉಚಿತ ವ್ಯವಸ್ಥೆ ಮಾಡಿ, ಅವರೊಂದಿಗೆ ಮಾತನಾಡುತ್ತಿದ್ದರು. ನಾನು ಸೇರಿಕೊಂಡೆ. ಮಾತು ಗುರುನಾಥರತ್ತ ಹೊರಳಿತು. ಸತ್ಸಂಗವೆಂಬುದು ಇಂತಹ ಗುರುನೆಲೆಯಲ್ಲಿ ತಾನೇ ತಾನಾಗಿ ನಡೆಯುತ್ತೆಂಬುದಕ್ಕೆ ಇದೇ ಸಾಕ್ಷಿ ಏನೋ? ಅಪರಿಚಿತರಾದ ಅವರು ಹೀಗೆಂದು ಮುಂದುವರೆಸಿದರು.
"ಸಖರಾಯಪಟ್ಟಣದ ವೆಂಕಟಾಚಲ ಅವಧೂತರ ಬಗ್ಗೆ ನಾನು ಬಹಳ ಕೇಳಿದ್ದೆ. ಅವರ ಬಗ್ಗೆ ಅಪಾರವಾದ ಭಕ್ತಿಭಾವ ನನ್ನಲ್ಲಿತ್ತು. ನಮ್ಮ ಶಂಕರಲಿಂಗನೇನು? ಗುರುನಾಥರೇನು? ಎಲ್ಲಾ ಒಂದೇ ಅಲ್ಲವೇ? ಆದರೆ ನನ್ನಲ್ಲಿ ಅದೇಕೋ ಒಂದು ಭಾವನೆ ಮನಸ್ಸಿನಲ್ಲಿ ಬೇರುಬಿಟ್ಟಿತ್ತು. ಎಲ್ಲರೂ ಗುರುವನ್ನರಸಿ ಅವರ ಬಳಿ ಹೋಗುತ್ತಾರೆ. ಗುರುವೇ ನೀನೆ ನನಗೆ ಕರುಣೆ ತೋರು. ನನಗೆ ದರ್ಶನ ನೀಡು - ನನ್ನನ್ನೇ ನಿನಗರ್ಪಿಸಿಕೊಳ್ಳುವೆ" ಎಂದು ಬೇಡಿದ್ದೆ. ಅನೇಕ ವರ್ಷಗಳು ಗುರುದರ್ಶನವೀಯಲಿಲ್ಲ. ಆದರೆ, ಮನದಲಿ ತಳಮಳ, ಗುರುದರ್ಶನದ ತವಕ ಮಾತ್ರ ಜಾಸ್ತಿಯಾಗುತ್ತಿತ್ತು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು., ಕರ್ಮ ಕಳೆಯಬೇಕಂತೆ. ಒಂದು ಸಾರಿ ಗುರುನಾಥರು ನಮ್ಮ ಊರಿಗೇ ಬಂದರು. ಸನಿಹದ ನಮ್ಮ ನೆಂಟರ ಮನೆಯಲ್ಲೇ ಉಳಿದರು. ಗುರುದರ್ಶನ ಲಭಿಸಿಬಿಟ್ಟಿತು. ಸದ್ಗುರುನಾಥರು ಕೃಪೆ ತೋರಿದರು. ನನ್ನ ಮನದಾಳದ ಕೂಗು ಅವರಿಗೆ ತಲುಪಿದೆ, ಎನ್ನುವಲ್ಲಿ - ಸನಿಹದಲ್ಲಿದ್ದ ಗುರುವನ್ನು ಕಾಣಲಾಗದ ಸಂದರ್ಭ ಬಂದೊದಗಿತು. ನಮ್ಮ ಆಪ್ತ ಬಂಧುಗಳ ಮರಣದ ಅಶೌಚ ಬಂದಿತ್ತು. ಹುಟ್ಟು ಸಾವುಗಳು ಯಾರ ಕೈಲಿದೆ! ಅಲ್ಲದೆ ಗುರುಗಳಿರುವ ಮನೆಗೆ ತಿಳಿದೂ ತಿಳಿದೂ ಮೈಲಿಗೆಯ ನಾನು ಹೋಗುವುದೆಂತು? ಗುರುವಿಗೆ ಸವಾಲೆಸೆದು ತಪ್ಪೆಸಗಿದನೇನೋ ಎಂಬ ಭಾವ ಬಂದರೂ, ಗುರು ದರ್ಶನವಿತ್ತೇವೀಯುತ್ತಾರೆಂಬ ಭಾವನೆ ಮನದಲ್ಲಿ ಭದ್ರವಾಗಿತ್ತು. ಅಂದು ಸಂಜೆ ಅವರು ತಮ್ಮ ಊರಿಗೆ ಹೋಗಲಿದ್ದರು. ಮನೆಯ ಹೊರಗಡೆ ನಾನಿದ್ದೆ. ಗುರುನಾಥರ ಮಧುರವಾಣಿ ಕೇಳಿಬರುತ್ತಿತ್ತು. ಎಲ್ಲರಿಗೂ ಆಶೀರ್ವದಿಸಿದ ಅವರು ಇನ್ನೇನು ಹೊರಡಲಿದ್ದಾರೆ. 'ಇನ್ಯಾರಾದರೂ ಇದ್ದೀರೇನಪ್ಪ ಹೊರಗೆ....... ಬಂದುಬಿಡಿ' ಎಂದು ಗುರುನಾಥರು ಕೂಗಿದರು. ಚಡಪಡಿಸುತ್ತಿದ್ದ ನಾನು ನಿಲ್ಲಲಾಗದೇ ಒಳನುಗ್ಗಿಬಿಟ್ಟ". ಮಾತನಾಡುತ್ತಿದ್ದವರು ಮೌನವಾದರು.
ನಾನೆಲ್ಲಿ ತಲೆಯನ್ನಿಡುತಿರ್ಪೆನಲ್ಲಿ
'ಏ, ಏ, ಮೈಲಿಗೆ...ಗುರುಗಳಿದ್ದಾರೆ, ಒಳಗೆ ಹೋಗಬೇಡ., ಮಡಿ, ಮಡಿ' ಅಲ್ಲಿದ್ದ ನನ್ನ ಬಾಂಧವರೆಲ್ಲಾ ಕೂಗಿದ್ದರು. ಗುರುನಾಥರು ಎದ್ದವರೇ " 'ಯಾವುದು ಮಡಿ? ಮೈಲಿಗೆ ಯಾವುದಕ್ಕೆ ಈ ದೇಹಕ್ಕೋ, ಮನಸ್ಸಿಗೋ, ಆತ್ಮಕ್ಕೋ'ಎಂದು ಒಗಟಿನಂತೆ ಮಾತನಾಡುತ್ತಾ, ನಾನು ನಮಸ್ಕರಿಸಿದಾಗ ಪ್ರೀತಿಯಿಂದ ಎತ್ತಿದರಲ್ಲದೆ ತಲೆ ನೇವರಿಸಿದರು. ಆಕಾಶ ಕೈಗೆಟುಕಿದಂತಾಗಿತ್ತು - ಸದ್ಗುರುನಾಥರ ಅಪಾರ ಕರುಣಾಸಾಗರದಲ್ಲಿ ಮಿಂದೆದ್ದ ನನಗೆ ಮಾತು ಬರದಾಯ್ತು., 'ಏನು ಬೇಕು ನಿನಗೆ' ಎಂದವರು ಕೇಳುತ್ತಿದ್ದರು. 'ಬೇಕಾದ್ದನ್ನೆಲ್ಲಾ ನೀಡಿದ ಮೇಲೆ ನನಗಿನ್ನೇನು ಬೇಕಿದೆ, ನಾನೆಲ್ಲಿ ತಲೆಯನ್ನಿಡುತಿರ್ಪೆನಲ್ಲಿ ಶ್ರೀ ಸದ್ಗುರು ನಿಮ್ಮ ಪಾದಪದ್ಮವಿರಲಿ' ಎಂದು ಮನದಲ್ಲಿ ಬೇಡಿಕೊಂಡೆ".
ಮತ್ತೆ ಮಾತನಾಡುತ್ತಿದ್ದ ಆ ಗುರುಭಕ್ತರು ಮೌನವಾದರು. ಮುಂದೆ ತೇಲ ತಿಂಗಳುಗಳ ನಂತರದ ಘಟನೆ. ಬೈಕಿನಲ್ಲಿ ಹೋಗುತ್ತಿದ್ದ ಆ ವ್ಯಕ್ತಿ ಕಾಂಕ್ರೀಟ್ ರೋಡಿನ ಮೇಲೆ ಅಪಘಾತವಾಗಿ ಬಿದ್ದರು. ತಲೆ ಕಾಂಕ್ರೀಟ್ ರೋಡಿಗೆ ಬಡಿಯಿತು. ಅಲ್ಲಿದ್ದವರು ಬಂದು ಎತ್ತಿದರಂತೆ. ತಲೆಗೆ ಪೆಟ್ಟಾಗಿ ಇವರು ಉಳಿಯುವುದು ಅಸಾಧ್ಯವೆಂದು ಅಲ್ಲಿದ್ದವರು ಭಾವಿಸಿದ್ದರಂತೆ. ಮುಂದೆ ನೋಡಿದರೆ ಮೈಕೈ ತರಚಿದ ಗಾಯವಾಗಿತ್ತು. ವಿಚಿತ್ರವಾಗಿ ತಲೆಗೆ ಒಂದಿನಿತೂ ಪೆಟ್ಟಾಗಿರಲಿಲ್ಲ. ಏಕೆಂದರೆ, ಗುರುನಾಥರಲ್ಲಿ ಅವರು ಬೇಡಿಕೊಂಡಿದ್ದು ಇಷ್ಟೇ. "ಗುರುವೇ, ನನಗಿನ್ನೇನೂ ಬೇಡ. ನಾನು ತಲೆಯಿಡುವ ಜಾಗದಲೆಲ್ಲಾ ನಿನ್ನ ಪುನೀತ ಪಾದಪದ್ಮವಿರಲಿ". ಆ ಕಠಿಣ ಕಾಂಕ್ರೀಟು ರಸ್ತೆಯೂ ಗುರಪಾದಪದ್ಮವಾಗಿ ತಲೆ ಕಾಯ್ದಿತ್ತು. ಕೇವಲ ಆರ್ತರಾಗಿ ಒಮ್ಮೆ ದರುಶನ ಪಡೆದ ಮಾತ್ರದಿಂದಲೇ, ಕರುಣಾಳಿ ಗುರುನಾಥರು ಆ ಭಕ್ತರ ತಲೆ ಕಾಯ್ದಿದ್ದರು. ತಮ್ಮ ಮಾತನ್ನು ಅವರು ನಡೆಸಿಕೊಂಡ ರೀತಿ ಅದ್ಭುತವಾಗಿತ್ತು. ಇದೇ ಅಲ್ಲವೇ ಸದ್ಗುರುನಾಥರ ಲೀಲಾಮೃತ.
ಅರ್ಜುನ ವರ್ಷಗಟ್ಟಲೆ ತಾಪವಾಚರಿಸಿ, ಶಿವನನ್ನೊಲಿಸಿ ಪಾಶುಪತಾಸ್ತ್ರವನ್ನು ಪಡೆದರೆ, ಭೀಮ ತನ್ನ ಹುಂಬುತನದ ಭಕ್ತಿಯಿಂದ ಶಿವನನ್ನೇಕರೆಸಿ ವರ ಪಡೆದನಂತೆ. ಗುರುನಾಥರ ಬಳಿ ಇಂತಹ ಹಲವು ರೀತಿಯ ಭಕ್ತರ ಸಾಗರವೇ ಇದೆ. ವಿವಿಧ ರೀತಿಯಲ್ಲಿ ಅವರು ಪಡೆದ ಗುರುಕರುಣೆ ನಂಬಲಸಾಧ್ಯವಾದರೂ ನಿತ್ಯಸತ್ಯ. ಭಾವನೆ ಇದ್ದರೆ ಭವತಾರಣ ಸಾಧ್ಯ. ಆದಿಯೂ, ಅಂತ್ಯವೂ ಇಲ್ಲದ ಗುರನಾಥರು ತಮ್ಮ ಇಹ ಲೀಲೆಯನ್ನು ಮುಗಿಸಿದ ನಂತರ ತಮ್ಮ ಭಕ್ತರಿಗೆ ಎಲ್ಲೆಲ್ಲೋ, ಯಾವ ಯಾವುದೋ ರೀತಿಯಲ್ಲಿ ದರ್ಶನವಿತ್ತ ಪ್ರಸಂಗಗಳಿವೆ.
ಮತ್ತೆ ಮಾತನಾಡುತ್ತಿದ್ದ ಆ ಗುರುಭಕ್ತರು ಮೌನವಾದರು. ಮುಂದೆ ತೇಲ ತಿಂಗಳುಗಳ ನಂತರದ ಘಟನೆ. ಬೈಕಿನಲ್ಲಿ ಹೋಗುತ್ತಿದ್ದ ಆ ವ್ಯಕ್ತಿ ಕಾಂಕ್ರೀಟ್ ರೋಡಿನ ಮೇಲೆ ಅಪಘಾತವಾಗಿ ಬಿದ್ದರು. ತಲೆ ಕಾಂಕ್ರೀಟ್ ರೋಡಿಗೆ ಬಡಿಯಿತು. ಅಲ್ಲಿದ್ದವರು ಬಂದು ಎತ್ತಿದರಂತೆ. ತಲೆಗೆ ಪೆಟ್ಟಾಗಿ ಇವರು ಉಳಿಯುವುದು ಅಸಾಧ್ಯವೆಂದು ಅಲ್ಲಿದ್ದವರು ಭಾವಿಸಿದ್ದರಂತೆ. ಮುಂದೆ ನೋಡಿದರೆ ಮೈಕೈ ತರಚಿದ ಗಾಯವಾಗಿತ್ತು. ವಿಚಿತ್ರವಾಗಿ ತಲೆಗೆ ಒಂದಿನಿತೂ ಪೆಟ್ಟಾಗಿರಲಿಲ್ಲ. ಏಕೆಂದರೆ, ಗುರುನಾಥರಲ್ಲಿ ಅವರು ಬೇಡಿಕೊಂಡಿದ್ದು ಇಷ್ಟೇ. "ಗುರುವೇ, ನನಗಿನ್ನೇನೂ ಬೇಡ. ನಾನು ತಲೆಯಿಡುವ ಜಾಗದಲೆಲ್ಲಾ ನಿನ್ನ ಪುನೀತ ಪಾದಪದ್ಮವಿರಲಿ". ಆ ಕಠಿಣ ಕಾಂಕ್ರೀಟು ರಸ್ತೆಯೂ ಗುರಪಾದಪದ್ಮವಾಗಿ ತಲೆ ಕಾಯ್ದಿತ್ತು. ಕೇವಲ ಆರ್ತರಾಗಿ ಒಮ್ಮೆ ದರುಶನ ಪಡೆದ ಮಾತ್ರದಿಂದಲೇ, ಕರುಣಾಳಿ ಗುರುನಾಥರು ಆ ಭಕ್ತರ ತಲೆ ಕಾಯ್ದಿದ್ದರು. ತಮ್ಮ ಮಾತನ್ನು ಅವರು ನಡೆಸಿಕೊಂಡ ರೀತಿ ಅದ್ಭುತವಾಗಿತ್ತು. ಇದೇ ಅಲ್ಲವೇ ಸದ್ಗುರುನಾಥರ ಲೀಲಾಮೃತ.
ಅರ್ಜುನ ವರ್ಷಗಟ್ಟಲೆ ತಾಪವಾಚರಿಸಿ, ಶಿವನನ್ನೊಲಿಸಿ ಪಾಶುಪತಾಸ್ತ್ರವನ್ನು ಪಡೆದರೆ, ಭೀಮ ತನ್ನ ಹುಂಬುತನದ ಭಕ್ತಿಯಿಂದ ಶಿವನನ್ನೇಕರೆಸಿ ವರ ಪಡೆದನಂತೆ. ಗುರುನಾಥರ ಬಳಿ ಇಂತಹ ಹಲವು ರೀತಿಯ ಭಕ್ತರ ಸಾಗರವೇ ಇದೆ. ವಿವಿಧ ರೀತಿಯಲ್ಲಿ ಅವರು ಪಡೆದ ಗುರುಕರುಣೆ ನಂಬಲಸಾಧ್ಯವಾದರೂ ನಿತ್ಯಸತ್ಯ. ಭಾವನೆ ಇದ್ದರೆ ಭವತಾರಣ ಸಾಧ್ಯ. ಆದಿಯೂ, ಅಂತ್ಯವೂ ಇಲ್ಲದ ಗುರನಾಥರು ತಮ್ಮ ಇಹ ಲೀಲೆಯನ್ನು ಮುಗಿಸಿದ ನಂತರ ತಮ್ಮ ಭಕ್ತರಿಗೆ ಎಲ್ಲೆಲ್ಲೋ, ಯಾವ ಯಾವುದೋ ರೀತಿಯಲ್ಲಿ ದರ್ಶನವಿತ್ತ ಪ್ರಸಂಗಗಳಿವೆ.
ಸರಳಾತಿಸರಳ ಸದ್ಗುರುನಾಥರು
ಚಿಕ್ಕಮಗಳೂರಿನ ಶೃಂಗೇರಿ ಶಾರದಾ ಮಠದ ಮುಂದೆ ಒಂದು ಸಣ್ಣ ಜಾಗ. ಬಸವನಹಳ್ಳಿಯ ಆ ರಸ್ತೆಯಲ್ಲಿ ಅನೇಕ ಜನ ತಮ್ಮ ತಮ್ಮ ವಿಚಾರಲಹರಿಗಳನ್ನು ಹೊತ್ತು ಅತ್ತಿತ್ತ ಓಡಾಡುತ್ತಿದ್ದರು. ಗುರುಗಳು ಸನ್ನೆ ಮಾಡಿದರೆ ಸಾಕು, ಕಾರುಗಳ ದಂಡು ತಂದು ನಿಲ್ಲಿಸುವ ಭಕ್ತರಿದ್ದರೂ ಆ ಸಂಜೆಯ ಸಮಯದಲ್ಲಿ ಗುರುನಾಥರೊಬ್ಬರೇ ಏಕಾಂಗಿಯಾಗಿ ಕುಳಿತಿದ್ದಾರೆ. ಅವರೇನು ಶಾರದೆ ಶಂಕರರನ್ನು ಬೇಡುತ್ತಿದ್ದರಾ, ಬಿಡಲಿಕ್ಕೆ ಗುರುವಿಗೇತರ ಕೊರತೆ? ಹೌದು. ಗುರುವಿಗೆ ಕೊರತೆ ಇಲ್ಲ. ಗುರು ಬಂಧುಗಳಿಗೆ ? ಬೇಕು ಬೇಕು ಎಂತಲ್ಲವೇ ಬರುವುದು. ಏನು ಬೇಡವೆಂದರೂ ನಿನ್ನ ಕರುಣೆ, ರಕ್ಷೆ ಸದಾ ನನ್ನ ಮೇಲಿರಲೆಂದು ಬೇಡುವವರಿದ್ದಾರೆ. ಆದರೆ ಮೌನವಾಗಿದ್ದ ಗುರುಗಳ ದೃಷ್ಟಿ ಶಂಕರ ಮಠದ ಮುಂದೆ ಕುಳಿತು ಭಿಕ್ಷೆ ಬೇಡುತ್ತಿದ್ದ ದೀನರ ಮೇಲಿತ್ತು. ಸಂಜೆಯ ಚಳಿ ಪ್ರಾರಂಭವಾಗಿತ್ತು. ಗುರುವಿಗೆ ಚಳಿಯಾಗುತ್ತಿತ್ತೋ, ಬಿಡುತ್ತಿತ್ತೋ, ಆ ಬೇಡಲು ಕುಳಿತಿದ್ದ ವೃದ್ಧರ ಹತಾಶೆ, ನೋವು, ಚಳಿ, ಸಂಕಷ್ಟಗಳಂತೂ ಗುರುನಾಥರು ಸ್ವಯಂ ಅನುಭವಿಸಿದಂತೆ ಕಾಣುತ್ತಿತ್ತು.
ಇನ್ನಿತರರಲ್ಲಿ ಕೆಲವರು ಗುರುನಾಥರಲ್ಲವೇ ಎಂದು ನಮಿಸಿ ಮುಂದೆ ಸಾಗಿದ್ದರು. ಮತ್ತೆ ಕೆಲವರಿಗೆ ಇವರಾರೆಂಬ ಪರಿಚಯವೂ ಆಗಿರಲಿಕ್ಕಿಲ್ಲ. ಹತ್ತರಲ್ಲಿ ಹನ್ನೊಂದನೆಯವರೆಂದು ಅನೇಕರು ನೋಡಿಯೂ, ನೋಡದೆಯೇ ಸಾಗಿದ್ದರು.
ಚಿಕ್ಕಮಗಳೂರಿನ ಗುರುನಾಥರು ಪ್ರೀತಿಸುವ ಸರಳ ಸೌಜನ್ಯದ ವ್ಯಕ್ತಿಯೊಬ್ಬರು ಗುರುನಾಥರನ್ನು ಕಾಣುತ್ತಲೇ, ನಿಧಿ ಸಿಕ್ಕವರಂತೆ ಬಂದು ನಮಸ್ಕರಿಸಿದರು. ಇಷ್ಟರಲ್ಲಾಗಲೇ ಅನೇಕರು ನಮಸ್ಕರಿಸಿದರೂ, ಯಾರಿಗೂ ನಿಲ್ಲಲು ಹೇಳಿರಲಿಲ್ಲ. ಆ ಗುರುಬಂಧುವಿಗೆ ಪಕ್ಕದಲ್ಲಿ ನಿಲ್ಲಲು ಹೇಳಿ "ನೋಡಯ್ಯಾ, ಇವರಿಗೆಲ್ಲಾ ಒಂದೊಂದು ಬೆಡ್ ಶೀಟ್, ಒಂದು ನೂರು ರೂಪಾಯಿ ಕೊಡಬೇಕಲ್ಲ" ಎಂದರು. ಕೂಡಲೇ ಅದು ಹೇಗೋ ವ್ಯವಸ್ಥೆಯಾಯಿತು. ಎಲ್ಲ ಭಿಕ್ಷುಕರಿಗೂ ನೂರರ ಒಂದು ನೋಟು, ಚಳಿಯನ್ನು ದೂರಮಾಡಲು ಬಟ್ಟೆಗಳನ್ನು ನೀಡಿದಾಗ ಗುರುನಾಥರ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಗುರುವಿನಿಂದ ವಸ್ತ್ರ ಪಡೆದ ಆ ಭಿಕ್ಷುಕರೂ ಅಷ್ಟೇ ಸಂತಸಪಟ್ಟಿರಬಹುದು.
ಗುರುಮಹಿಮೆಯೇ ಹೀಗಲ್ಲವೇ? ಒಂದೆಡೆ ಶ್ರೀಪಾದ ಶ್ರೀವಲ್ಲಭ ಚರಿತ್ರೆಯಲ್ಲಿ 'ನನ್ನ ಮನಸ್ಸಿಗೆ ಬರುತ್ತಲೇ ಎಲ್ಲ ಕೆಲಸಗಳೂ ತನಗೆ ತಾನೇ ಆಗಿಬಿಡುತ್ತದೆ. ನಾನು ಯಾವ ಸಂಕಲ್ಪವನ್ನೂ ಮಾಡಿ ಕಾರ್ಯಗತಗೊಳಿಸಬೇಕಿಲ್ಲ' ಎಂದು ಶ್ರೀಪಾದ ಶ್ರೀವಲ್ಲಭರೆನ್ನುತ್ತಾರೆ. ದತ್ತಾತ್ರೇಯರ ಪ್ರತಿರೂಪರಾದ ಸ್ವಯಂ ಅವರೇ ಆದ ಗುರನಾಥರೂ ಎಲ್ಲಿದ್ದರೂ ಅವರ ಮನದಲ್ಲಿ ಮೂಡಿದ ಭಾವನೆಗಳನ್ನು ಕಾರ್ಯಗತಗೊಳಿಸಿ, ತಾವಾರೆಂಬುದನ್ನು ಸೂಚ್ಯವಾಗಿ ಅನೇಕ ಸಂದರ್ಭಗಳಲ್ಲಿ ತೋರಿಸಿದ್ದಾರೆ. ಚರ್ಮ ಚಕ್ಷುಗಳಿಗೆ ಇದರ ಅರ್ಥವಾದಲ್ಲಿ ನಮ್ಮ ಜೀವನ ಸಾರ್ಥಕ.
ಗುರುನುಡಿ ಶಿಲಾಶಾಸನದಂತೆ
ಗುರುನಾಥರ ಬಾಯಿಯಿಂದ ಭೂತ, ಭವಿಷ್ಯತ್ ವರ್ತಮಾನಗಳು ಕರಾರುವಾಕ್ಕಾಗಿ ಬರುತ್ತಿತ್ತು. ಕೆಲವೊಮ್ಮೆ ಅವರಾಡಿದ ಮಾತುಗಳು 'ಎಲ್ಲಾ ಆಗಿ ಹೋಗಿದೆ. ಇದೆನೀಗ ಇವರು ಹೀಗೆ ಹೇಳುತ್ತಾರಲ್ಲಾ' ಎಂದು ಯೋಚಿಸಿದರೂ ಗುರುನುಡಿಯೇ ಸತ್ಯವಾಗಿ ಬಿಡುತ್ತಿತ್ತು. ಅವರಾಡಿದ ಮಾತು ಕಲ್ಲಿನಲ್ಲಿ ಕೆತ್ತಿದ ಶಾಸನದಂತೆ ಅಳಿಸಲಾರದ್ದು.
ಶಿವಮೊಗ್ಗದ ಒಬ್ಬ ಭಕ್ತರು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದರು. ಅನೇಕ ವರ್ಷ ಬಾಡಿಗೆ ಮನೆಯಲ್ಲಿದ್ದರು. ಆ ಬಾಡಿಗೆ ಮನೆಯ ಒಡೆಯರು ಒಂದೆರಡು ದಿನದ ಹಿಂದೆ ಬಂದು 'ನೋಡಿ ನಿಮಗೇ ಈ ಮನೆಯನ್ನು ಮಾರಿಬಿಡುತ್ತೇನೆ. ಇಷ್ಟು ಹಣ ನೀಡಿ ನೀವೇ ತೆಗೆದುಕೊಂಡುಬಿಡಿ' ಎಂದಿದ್ದರಂತೆ.
ಇದಾದ ಎರಡು ದಿನಗಳಲ್ಲೇ, ಅಚಾನಕ್ ಆಗಿ ಗುರುನಾಥರು ಇವರಿರುವ ಬೀದಿಯ ಪಕ್ಕದ ಬೀದಿಗೆ ಬಂದಿದ್ದರು. ಗುರುನಾಥರ ದರ್ಶನವೂ ಆಯ್ತು. ಎಲ್ಲವನ್ನೂ ಗುರುವಿಗೆ ಅರಿಕೆ ಮಾಡಿಕೊಳ್ಳುತ್ತಿದ್ದ ಅವರು ಸಂತಸದಿಂದ 'ಗುರುಗಳೇ , ಮನೆ ನಮಗೆ ಮಾರುತ್ತಾರಂತೆ' ಎಂಬ ವಿಚಾರ ತಿಳಿಸಿದರು.
ಗುರುನಾಥರು ನಗುತ್ತ 'ಇಲ್ಲ ಇಲ್ಲ ಈಗ ನಿನಗವರು ಮಾರುವುದಿಲ್ಲ. ಅದೀಗ ನೀನು ಪಡೆಯುವುದೂ ಅಸಾಧ್ಯ. ಸಧ್ಯಕ್ಕೆ ಅದಾಗದು' ಎಂದುಬಿಟ್ಟರು.
ಮನೆಯೊಡೆಯರೇ ಹೇಳಿದ್ದಾರಲ್ಲಾ - ಎಂದು ಅವರ ಮನ ತರ್ಕಿಸುತ್ತಿತ್ತು. ಕೆಲವೇ ದಿನಗಳಲ್ಲಿ ಇವರ ಬಳಿ ಬಂದ ಮಾಲೀಕರು 'ನಾವೀಗ ಮನೆಯನ್ನು ಮಾರುತ್ತಿಲ್ಲ' ಎಂದಾಗ ಗುರುಮಾತಿನ ಸತ್ಯದ ಅರಿವಾಗಿತ್ತು. 'ಸತ್ಯ ಕಹಿ ಅಲ್ಲವೇ' ಮನಸ್ಸಿಗೆ ಒಂದಿನಿತು ನೋವೂ ಆಗಿರಬಹುದು. ಆದರೆ, ಗುರುನಾಥರನ್ನು ನಂಬಿದ ಅವರು, ಅಂತಹ ತಲೆಕೆಡಿಸಿಕೊಳ್ಳಲಿಲ್ಲ. ಗುರುಕೃಪೆ ಆದಾಗ ಎಲ್ಲವೂ ಆಗುತ್ತದೆಂದು ಸುಮ್ಮನಿದ್ದರು.
ಇದಾದ ಕೆಲವು ವರ್ಷಗಳಲ್ಲಿ, ಒಂದು ದಿನ ಎದುರಾದ ಗುರುನಾಥರು 'ಅದೇ ಮನೆಯವನು ನಿನಗೆ ಮನೆ ಕೊಡುತ್ತಾನೆ. ಕೊಂಡುಬಿಡಿ. ಒಳ್ಳೆಯದಾಗುತ್ತೆ ನಿಮಗೆ' ಎಂದರು.
ಬೇಡದೆ ವರವೀವ ಕರುಣಾಮಯಿ ಗುರುನಾಥರ ಮಾತಿನಂತೆ ಮನೆಯ ಮಾಲೀಕರು ಬಂದು 'ಮನೆಯನ್ನು ನಿಮಗೇ ಕೊಡುತ್ತೇವೆ. ಹತ್ತು ಲಕ್ಷಗಳಾಗುತ್ತೆ. ಅಡ್ವಾನ್ಸ್ ಕೊಡಲು ರೆಡಿ ಮಾಡಿಕೊಳ್ಳಿ' ಎನ್ನಬೇಕೇ!
ಒಂದೇ ಸಾರಿ ಇಷ್ಟೊಂದು ಹಣವೆಂದರೆ ಹೇಗೆ ಎಂದು ಹೌಹಾರಿದ ಇವರು 'ಗುರುನಾಥರಿಲ್ಲವೇ, ಏನೋ ಒಂದು ದಾರಿ ತೋರಿಸುತ್ತಾರೆ. ಅವರಿರುವಾಗ ನಾವೇಕೆ ಚಿಂತಿಸಬೇಕು' ಎಂದು ಭಾವಿಸಿ ನಮ್ರ ಪ್ರಯತ್ನ ಮಾಡಿದರು. ಮನೆ ಈಗ ಅವರದಾಗಿದೆ. ಹೀಗೆ ಗುರುನಾಥರನ್ನು ನಂಬಿದವರಿಗೆ ಏನೆಲ್ಲಾ ಅಸಾಧ್ಯಗಳು ಸಾಧ್ಯವಾಗಿದೆ. ತನ್ನ ಬಂಧುಗಳಿಗೆ ಯಾರಿಗೆ, ಯಾವಾಗ, ಏನು, ಎಷ್ಟು ಕೊಡಬೇಕೆಂದು ಅರಿತ ಗುರುನಾಥರಿಗೆ ನಾವೇನು ನೀಡಲು ಸಾಧ್ಯ. ಶುದ್ಧ ಮನಸ್ಸಿನ ಭಕ್ತಿಯಿಲ್ಲದೆ ಬೇರೇನೂ ಇಲ್ಲ. ಇಂದೂ ಸಹ ತುಂಬಾ ಆನಂದದಿಂದ ಜೀವನ ಸಾಗಿಸುವ ಅವರು 'ಅವರಿಲ್ಲದೇನಿಲ್ಲ... ಅವರೇ ನಮ್ಮ ಉಸಿರೆಲ್ಲಾ' ಎನ್ನುತ್ತಾರೆ ಅನುನಯ ವಿನಯದಿಂದ.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಾಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http:// srivenkatachalaavadhoota. blogspot.in/
No comments:
Post a Comment