ಶ್ರೀ ಸದ್ಗುರುನಾಥ ಲೀಲಾಮೃತ - 3
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 63
ಎಲ್ಲವನ್ನು ಒಂದೇ ಭಾವದಲ್ಲಿ ಸ್ವೀಕರಿಸು
॥ ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ॥
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
॥ ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ॥
'ಇವರನ್ನು ಕೇಳ್ರಪ್ಪ ಅವರೇನು ಹೇಳ್ತಾರೋ... ಅದರಂತೆ ಮಾಡೋಣ' ಎಂದು ಅನೇಕ ಸಾರಿ ನನ್ನನ್ನು ಕೇಳಿದ್ದಿದೆ. ಆದರೆ, ನಾನೇನೂ ಒಂದೂ ಮಾತನಾಡಿಲ್ಲ. ಹೀಗಾಗಲಿ ಎಂದು ತಿಳಿಸುವುದಕ್ಕೆ ಹೋಗಿಲ್ಲ... ಏಕೆಂದರೆ ನಾನು ಅನ್ನುವುದಾಗಲಿ ಅಥ್ವಾ ನನ್ನದು ಎನ್ನುವುದಾಗಲಿ... ಏನೂ ಇಲ್ಲವೇ ಇಲ್ಲವಲ್ಲ... ಎಲ್ಲವನ್ನೂ ಅವರಿಗೆ ಅರ್ಪಿಸಿದ್ದೇನೆ.. ಅಷ್ಟೇ ಅವರು ಇಷ್ಟಪಟ್ಟರೆ ಅದಾಗುತ್ತದೆ. ಇಲ್ಲದಿದ್ದರೆ ಒಂದು ತೃಣವೂ ಜರುಗುವುದಿಲ್ಲವೆಂಬ ಸ್ವಾನುಭವವನ್ನು ಅವನೇ ನೀಡಿರುವಾಗ ನಮ್ಮದೇನಿದೆ? ಎಂದು ನನ್ನ ಮೀಟರನ್ನು ಸೊನ್ನೆಗೆ ತಂದು ನಿಲ್ಲಿಸಿಬಿಟ್ಟಿದ್ದೇನೆ. ನನಗ್ಯಾವ ಉಪದೇಶ, ಪಾಠಗಳನ್ನು ನೇರವಾಗಿ ನೀಡದೆ ಇದ್ದರೂ ಭಾವನಾತ್ಮಕವಾಗಿ ಇಂತಹ ಸ್ಥಿತಿಯನ್ನು ನಾನು ಪಡೆದಿರುವುದು, ಎಲ್ಲವನ್ನೂ ಒಂದೇ ಮನೋಭಾವದಲ್ಲಿ ತೆಗೆದುಕೊಳ್ಳುವಂತೆ ನನ್ನನ್ನು ಸಿದ್ಧಪಡಿಸಿರುವುದೂ ಗುರುನಾಥರೇ.... ಅಷ್ಟೇ ಏಕೆ? ನೀವಿಂದು ಇಲ್ಲಿ ಬಂದಿದ್ದೀರಿ. ನಿಮ್ಮ ಜೊತೆಗೆ ಮಾತನಾಡಲು ಅವಕಾಶ ಕಲ್ಪಿಸಿರುವುದೂ ಅವರೇ. ಅವರಿಗೆ ಇಷ್ಟವಿಲ್ಲದಿದ್ದರೆ ಒಂದು ಕ್ಷಣ ನಾನು ಯಾರೊಂದಿಗೂ ಮಾತನಾಡಲೇ ಸಾಧ್ಯವಿಲ್ಲ. ಬಂದವರ ಎದುರಿನಿಂದ ಏನೂ ಮಾತನಾಡದೇ ನಾನು ಎದ್ದು ಹೋದಾಗ ಬಂದವರು ಇದೇನು ಈ ರೀತಿ, ವಿಚಿತ್ರ ಎಂದು ಚಿಂತಿಸಿದರೂ ಒಳಗೆ ಯಾರ ಆಜ್ಞೆಯ ಪ್ರಕಾರ ಈ ಕಾರ್ಯ ನಡೆದಿದೆ ಎಂಬುದು ನನಗೆ ಗೊತ್ತು. ಹಾಗಾಗಿ, ನಾನೇನೂ ಮಾಡುವಂತಿಲ್ಲ... ಎನ್ನುತ್ತಾರೆ ಅನನ್ಯವಾಗಿ ಗುರುನಾಥರ ನೆರಳಿನಂತೆ ಬಾಳುವ ಅವರ ಸಹೋದರಿಯೊಬ್ಬರು.
ಹೌದು ಒಂದು ಪಾತ್ರೆ ಅನ್ನವನ್ನು ಮಾಡಲು ಹೊರಟವರು, ಅದು ಪಕ್ವ ಬೆಂದಿದೆಯೇ ಎಂಬುದನ್ನು ತಿಳಿಯಲು ಒಂದೆರಡು ಅನ್ನದ ಕಾಳುಗಳನ್ನು ಪರೀಕ್ಷಿಸುತ್ತಾರೆ. ನಿರ್ಧರಿಸಿ ಬಿಡುತ್ತಾರೆ. ಅಣ್ಣ ಪಕ್ವವಾಗಿ ಬೆಂದಿದೆ ಎಂದು. ಹಾಗೆಯೇ ತಮ್ಮ ಸಹೋದರರೊಂದಿಗಿನ ನಿರಂತರ ಸಂಬಂಧ ಇವರನ್ನು ಅಷ್ಟು ಧೃಡವಾಗಿಸಿದೆ, ಪಕ್ವವಾಗಿಸಿದೆ. ಆದರೆ ಗುರುವಿನ ಪರೀಕ್ಷೆ ಒಂದೆರಡು ತೆರನದ್ದಲ್ಲ.
ಗುರುನಾಥರು ಇದ್ದಾಗಲಂತೂ ಕಣ್ಣಿನ ರೆಪ್ಪೆಯಲ್ಲಿ ಇಟ್ಟುಕೊಂಡು ತಮ್ಮ ಭಕ್ತ ಬಂಧುಗಳನ್ನು ರಕ್ಷಿಸಿದರು. ಭಾವ ಪರಿಶುದ್ಧ ಪಡೆದವರಿಗೆ, ಗುರು ನಿತ್ಯ ಸತ್ಯವೆಂಬುದನ್ನು ಅರಿತವರಿಗೆ, ಈ ರಕ್ಷಣೆ ಎಂದೆಂದೂ ಅವರು ಸಶೀರರಾಗಿ ಇದ್ದಾಗಲೂ ಅಶರೀರರಾದಾಗಲೂ ಸಾಗುತ್ತಲೇ ಬಂದಿದೆ.
ಒಮ್ಮೆ ಇಂತಹ ಭಕ್ತೆಯೊಬ್ಬರ ಪತಿ ದೇವರು ತುಂಬಾ ಅನಾರೋಗ್ಯದ ಸ್ಥಿತಿ ತಲುಪಿದರು. ಮನುಷ್ಯ ಪ್ರಯತ್ನಗಳೆಲ್ಲಾ ಕೊನೆಗೊಂಡವು. ಎಂದಿನಂತೆ ನಮ್ಮಣ್ಣನಿದ್ದಿದ್ದರೆ? ಎಂಬ ಭಾವ ಆ ಭಕ್ತೆಯಲ್ಲಿ ಒಂದು ಕ್ಷಣವೂ ಸುಳಿಯಲಿಲ್ಲ. ನಿರಂತರನೂ, ಸಾಶಾಶ್ವತನೂ ಆದವನ ಬಗ್ಗೆ ಅಪನಂಬಿಕೆಯ ಸೊಲ್ಲು ಧೃಢಭಾವದವರಿಗೆ ಬರಲದೆಂದು ಸಾಧ್ಯ. ಗುರುನಾಥರ ಶಿಷ್ಯಗಣವೇ ಇವರ ಮನೆಗೆ ದೌಡಾಯಿಸಿತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪಾರಾಯಣ, ಪೂಜೆ, ಪುಣ್ಯಕಥೆ, ದಾನ, ಧರ್ಮಗಳು, ವೈದ್ಯಕೀಯ ಚಿಕಿತ್ಸೆಗಳನ್ನು ನಡೆಸುತ್ತಲೇ ಸಾಗಿದವು. ಮನೆಯ ಯಜಮಾನತಿಗೆ ಇದೆಲ್ಲಾ ಯಾರು, ಹೇಗೆ, ಏಕೆ ಮಾಡಿಸುತ್ತಿದ್ದಾರೆ ಎಂದು ಮನನವಾಗಿತ್ತು. ಮೌನ ಪ್ರೇಕ್ಷಕಿಯಾಗಿ ಗುರುನಾಥರ ಸ್ಮರಣೆಯಲ್ಲಿ ತಮ್ಮ ಮನವನ್ನು ತೊಡಗಿಸಿಕೊಂಡರು. 'ಇಂತಹ ಸ್ಥಿತಿಯನ್ನು ಎದುರಿಸಲೂ ಸಿದ್ಧನಾಗಿರು, ಏನು ಬರುವುದೋ, ಬಿಡುವುದೋ ಕಾಣದಕ್ಕೆ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂಬ ಗುರುನಾಥರ ವಾಣಿಯಂತೆ ಮನೆಯೊಡತಿ ಸ್ಥಿತಪ್ರಜ್ಞರಾಗಿದ್ದು ಬಿಟ್ಟರಂತೆ. ದಿನಗಳು ಉರುಳುತ್ತಾ ಸಾಗಿತು. ಪರೀಕ್ಷೆಗಳು ಸಾಲು ಸಾಲಾಗಿ ಬಂದವು. ಅಚಲ ನಂಬಿಕೆ ಇದ್ದಲ್ಲಿ ಸತ್ಯಕ್ಕೆ, ಗುರುಭಕ್ತಿಗೆ, ಗುರುಶಕ್ತಿಗೆ ಜಯ ಸಿಗುವುದು. ಭವರೋಗ ಹರಿಸುವ ಗುರುನಾಥರ ಕೃಪೆ, ಇಚ್ಛೆಗಳಿಂದ, ಮನೆಯ ಯಜಮಾನರು ಮತ್ತೆ ಸ್ವಸ್ಥರಾದರು. ಎಂದಿನಂತೆ ಅವರು ನನ್ನೊಡನೆ ಮಾತನಾಡಿದರು... ಇದು ಯಾರೋ ಹೇಳಿದ್ದಲ್ಲ, ಕಣ್ಣಾರೆ ಕಂಡ ಘಟನೆ. ಗುರುನಾಥರ ನಿರಂತರತೆಗೆ ಗುರು ಭಕ್ತಿಯ ವಿಜಯಕ್ಕೆ ನಂಬಿಕೆಯ ಅಗಾಧ ಬಲಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ.
ಹಿರಿಯರಿಗೆ ಅತ್ಯಂತ ಗೌರವ ಕೊಡುವುದನ್ನು ಗುರುನಾಥರಿಂದ ಕಲಿತ ಅವರ ಸಹೋದರಿಯರು ಏನನ್ನೂ ಧೈರ್ಯವಾಗಿ ಎದುರಿಸುವುದನ್ನೂ ಅವರಿಗೆ ಕಲಿಸಿದ್ದಕ್ಕೇನೋ? ಏಕೆಂದರೆ ಈ ಕೆಳಗಿನ ಘಟನೆಯನ್ನು ನೋಡಿ, ಅವರಿಂದಲೇ ಕೇಳೋಣ ಬನ್ನಿ.
"ನಮ್ಮಣ್ಣನ ಬಗ್ಗೆ ನಮಗೆ ತುಂಬಾ ಅಭಿಮಾನ ಪ್ರೀತಿ". ಅವರು ಬೆಳೆದ ಎತ್ತರ ಕಂಡಾಗ ನಾವೇನು ಮಾತನಾಡಿದರೆ ತಪ್ಪಾಗಿ ಬಿಡುತ್ತದೋ ಎಂದು ಚಿಂತಿಸುತ್ತಿದ್ದೆವು. ಅವರ ಅಪಾರ ಪ್ರೀತಿಗೆ ನಿರಂತರ ತಲೆಬಾಗಿ, ಹೃದಯ ತುಂಬಿ ಆನಂದ ಪಡುತ್ತಿದ್ದೆವು. ಒಮ್ಮೆ ಆ ದಿನಗಳಲ್ಲಿ ನಾವು ಸಖರಾಯಪಟ್ಟಣಕ್ಕೆ ಹೋಗಿದ್ದೆವು. ನಮ್ಮಣ್ಣನವರ ಕಾಲಿನ ಗಾಯಗಳು, ಅವರ ದೇಹದ ಯಾತನೆಗಳು ನಮ್ಮ ಹೃದಯವನ್ನು ಹಿಂಡುತ್ತಿದ್ದವು. ಅವರಿಗೆ ಮಾತ್ರಾ ಇದಾವುದರ ಪರಿವೆ ಇರಲಿಲ್ಲ. ಭೂತ, ಭವಿಷ್ಯತ್, ವರ್ತಮಾನಗಳನ್ನು ಬಲ್ಲ ಅವರು ಎಲ್ಲವನ್ನೂ ನಿರ್ಧರಿಸಿದಂತಿತ್ತು. ತಮಾಷೆ ಮಾಡುತ್ತಾ 'ಏನೀಗ ಇನ್ನೊಂದು ನಲವತ್ತು ದಿವಸಗಳಲ್ಲಿ ನಾನು ಹೋಗಿ ಬಿಟ್ಟರೆ ಏನಾಗುತ್ತದೆ? ಎಂಬ ಮಾತನಾಡಿದರು. ನಾವೇನು ಉತ್ತರ ಕೊಡಬೇಕು? ಹೋಗಬೇಡಾ ನಮ್ಮನ್ನೆಲ್ಲಾ ಬಿಟ್ಟು? ಎಂದರೆ ಏನು ಅಪಚಾರವಾಗುತ್ತದೋ ಆ ಎತ್ತರ ಬೆಳೆದ ವಿಶ್ವಾತ್ಮನ ಎದುರು ನಾವು ತುಂಬಾ ಸಣ್ಣವರಾಗಿದ್ದೆವು... ಏನೂ ಮಾತನಾಡಲಾರದವರಾಗಿದ್ದೆವು. ಮೌನಿಗಳಾಗಿ ಸುಮ್ಮನೆ ನಿಂತಿದ್ದೆವು" ಎನ್ನುತ್ತಾರೆ.
ಸೃಷ್ಟಿಯ ಜಾತಕ ಬಲ್ಲವರಿಗೆ ತಮ್ಮ ಬಗ್ಗೆ ತಿಳಿಯದೆ ಇರುತ್ತದೆಯೇ. ಆ ಭೌತಿಕ ಶರೀರದ ಅಂತ್ಯದ ಬಗ್ಗೆ ಅನೇಕ ಭಕ್ತರಿಗೆ ತಮಾಷೆಯಾಗಿ ಕಟುಸತ್ಯವನ್ನು ಗುರುನಾಥರು ಅನೇಕ ಬಾರಿ ತಿಳಿಸಿ, ಮುಂದಿನ ಜವಾಬ್ದಾರಿಗಳನ್ನು ಅವರವರಿಗೆ ತಕ್ಕಂತೆ ವಹಿಸಿ ಮಾತನಾಡಿದ್ದರಂತೆ.
ಆದರೆ ನಮಗೆ ಕಠೋರವಾದ ಸತ್ಯ, ನಮಗೆ ಅರಿವಾದರೂ ಅರಿತಿಲ್ಲವೆಂಬಂತೆ ನಾಟಕವಾಡುವುದು, ಮರೆತು ಹೋದವರಂತೆ ನಟಿಸುವುದು ಸಹಜ, ಸತ್ಯ, ಸತ್ಯವೇ, ಪ್ರಕೃತಿ ನಿಯಮವನ್ನು ಮೀರುವುದು ಸಾಧ್ಯವೇ. ಯದೃಷ್ಟಮ್ ತನ್ನಷ್ಟಮ್ ಎಂಬುದೇ ಸತ್ಯವಾಯಿತಲ್ಲ. ಇದೂ ಸಹಾ ನಮ್ಮ ಜೀವನದ ಬಗ್ಗೆ ಅರಿಯಲು ಗುರುನಾಥರು ತೋರಿದ ಒಂದು ಲೀಲೆಯೇ. ನಿತ್ಯ ಸತ್ಸಂಗಾಭಿಮಾನಿ ಗುರುನಾಥ ಬಾಂಧವರೇ, ಹೀಗೆ ಏನೇನೋ ಘಟನೆಗಳು ಗುರುಲೀಲೆಗಳು ಎಲ್ಲೆಲ್ಲಿಂದಲೋ ನಿತ್ಯ ಸತ್ಸಂಗಕ್ಕೆ ಬರುತ್ತಲೇ ಇದೆ. ಇದವರ ಕೃಪೆಯಿಂದ ಮಾತ್ರ ಸಾಧ್ಯವಾಗಿದೆ. ಇದೆಲ್ಲದರಲ್ಲೂ ಒಂದು ಜೀವನ ಸತ್ಯವಿದೆ. ಅದನ್ನು ಅರಿತರೆ ನಮ್ಮ ನಿತ್ಯ ಸತ್ಸಂಗ ಸಾರ್ಥಕ. ಇಂತಹ ಸತ್ಸಂಗಕ್ಕಾಗಿ ನಾಳೆಯೂ ಬನ್ನಿರಿ....

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 3 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
॥ ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ॥
No comments:
Post a Comment