ಒಟ್ಟು ನೋಟಗಳು

Monday, August 14, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 

ಕೈಯ ನೀಡೋ ಗುರುವೆ 
ಕೈಯ ನೀಡೋ
ಕರವ ಹಿಡಿಯೋ ಸದ್ಗುರುವೇ
ಕರವ ಹಿಡಿಯೋ ||

ಸಮಸ್ತಲೋಕದೊಡೆಯನೆ
ಕೈಯ ನೀಡೋ
ಮನದಿಂಗಿತ ಬಲ್ಲವನೇ 
ಕರವ ಹಿಡಿಯೋ || ೧ ||

ಕರ್ಮಗಳ ಸವೆಸುತಿರುವ
ಕೈಯ ನೀಡೋ
ಸಾನಿಧ್ಯಸೇವೆಯ ಮಾಡುವ 
ಕರವ ಹಿಡಿಯೋ ||೨ ||

ಶುದ್ಧಮನದಿ ನೆನವರಿಗೆ
ಕೈಯ ನೀಡೋ
ಬದುಕೇ ನೀವಾಗಿರುವರ
ಕರವ ಹಿಡಿಯೋ || ೩ ||

ದೇಹಭಾವಕರಗಿಸುತಾ 
ಕೈಯ ನೀಡೋ
ಸರ್ವವೂ ನಿನದೆನುವರಿಗೆ
ಕರವ ಹಿಡಿಯೋ || ೪ ||

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

No comments:

Post a Comment