ಒಟ್ಟು ನೋಟಗಳು

Thursday, August 10, 2017

ಗುರುನಾಥ ಗಾನಾಮೃತ 
ನೀ ಎನ್ನ ನಾಥನಯ್ಯಾ ಗುರುರಾಯಾ
ರಚನೆ: ಅಂಬಾಸುತ 


ನೀ ಎನ್ನ ನಾಥನಯ್ಯಾ ಗುರುರಾಯಾ
ನಿನ್ನ ಬಿಟ್ಟರೆ ಕಾಯ್ವರಿಲ್ಲವೋ ಸಖರಾಯಪುರವಾಸಾ  ||ಅ||

ನೀನೆ ಗತಿಯೆನಗೆಂದು ನಂಬಿದೆ ನಿನ್ನ ಹಿಂದೆ ಮುಂದೆ ತಿರುಗಿಹೆ
ಕರುಣಾಮೃತವನು ಸುರಿಸೊ ಗುರುವೇ ಕರ ಪಿಡಿದು ಕಾಯೋ ಪ್ರಭುವೇ ||೧||

ತಂದೆ ತಾಯಿಯು ನೀನೇ ಎಂದೇ ಆತ್ಮಬಂಧುವು ನೀನೇ ಎಂದೇ
ತಮವ ಕಳೆಯಲು ಬಾರೋ ಗುರುವೇ ತನ್ಮಯತೆಯ ನೀಡೋ ಪ್ರಭುವೇ ||೨||

ಅನ್ನ ನೀನೇ ಎನ್ನುಸಿರು ನೀನೇ ಎನ್ನ ಪ್ರಾಣಾಧಾರಾ ನೀನೇ
ಸದ್ಭಕ್ತನನ್ನಾಗಿಸೋ  ಗುರುವೇ ನಿನ್ನ ಪಾದದೊಳಿರಿಸೋ ಪ್ರಭುವೇ ||೩||

ಮನ್ನಿಸೆನ್ನಪರಾಧವಾ ಸ್ವೀಕರಿಸೋ ಈ ಪದಕುಸುಮವಾ
ಭಕ್ತಿಯಿಂದರ್ಪಿಸುವೆ ಗುರುವೇ ನಿಮ್ಮ ಭಕ್ತನನ್ನಾಗಿಸೋ ಪ್ರಭುವೇ ||೪||

ಶ್ರೀವೇಂಕಟಾಚಲನೆಂಬೋ ನಾಮ ಧರಿಸಿಹ ಮಹಾಪ್ರಭುವೇ
ಅಂಬಾಸುತನಾ‌ ಅಂತರಂಗಕೆ ಬಾರೋ ಗುರುವೇ ||೫||

No comments:

Post a Comment