ಗುರುನಾಥ ಗಾನಾಮೃತ
ಕಲ್ಯಾಣಕಾರಣ ಸದ್ಗುರು ವಚನಾ
ರಚನೆ: ಅಂಬಾಸುತ
ಕಲ್ಯಾಣಕಾರಣ ಸದ್ಗುರು ವಚನಾ
ಅದ ನಂಬಿ ನೀ ಸಲ್ಲಿಸು ನಮನಾ
ವ್ಯರ್ಥವಾಗಿ ಮಾಡಬೇಡ ಕಾಲಹರಣಾ
ಅದನೆಂದಿಗೂ ಒಪ್ಪನೂ ಪನ್ನಗಶಯನಾ ||
ನಿನ್ನ ಮನವಾಗಲಿ ಸತ್ಚಿಂತನೆಗಳ ಸದನಾ
ದೂರುವರೊಂದಿಗೆ ನೀ ಮಾಡಬೇಡಾ ಕದನಾ
ನಿನ್ನ ನುಂಗಲು ಹೊಂಚುಹಾಕಿಹನು ಮದನಾ
ಅದರಿಂದ ಪಾರಾಗಲು ಹಿಡಿ ಸದ್ಗುರು ಚರಣಾ ||
ಗುರುಭಕ್ತಿಯೊಂದೇ ಸಕಲಕೂ ಸಾಧನಾ
ಬಿಡದೆ ನೀ ಮಾಡು ಜ್ಞಾನ ಸಂಪಾದನಾ
ಧೃಡ ಭಕ್ತಿ ಒಂದೇ ಗುರು ಪಡೆವ ವಿಧಾನಾ
ಸಾತ್ವೀಕತೆಯೊಳಗಿರಲಿ ನಿನ್ನ ಪ್ರತಿಪಾದನಾ ||
ಗುರುವೆಂದರೆ ತತ್ವ ದೇಹವದು ಅಲ್ಲಾ
ಇದ ಸಾರಿದ ನಮ್ಮ ಸದ್ಗುರುವೇ ಎಲ್ಲಾ
ಅಂಬಾಸುತನಾ ಈ ಪದದೊಳಗೆಲ್ಲಾ
ಅವಧೂತನ ಕರುಣೆಯಾ ಕಾಣೋನಲ್ಲಾ ||
No comments:
Post a Comment