ಒಟ್ಟು ನೋಟಗಳು

Tuesday, August 15, 2017

ಗುರುನಾಥ ಗಾನಾಮೃತ 
ಕಂಡೇ ಕಂಡೇ ಕಂಡೇ ನಾ ಗುರುವರನಾ
ರಚನೆ: ಅಂಬಾಸುತ 


ಕಂಡೇ ಕಂಡೇ ಕಂಡೇ ನಾ ಗುರುವರನಾ
ಗಣನೆಗೆ ನಿಲುಕದ ಮಹಿಮೆಯ ತೋರಿದವನಾ
ಗಂಗೆಯಂತೆ ಶಿಷ್ಯರ ಪಾಪವ ಕಳೆವವನಾ ||ಪ||

ಬಾಧೆ ಕಳೆವವನಾ ಭಕುತರಾ ಪಾಲಿನಾ ಭಾಗ್ಯದ ನಿಧಿಯಾ
ಬೋಧರೂಪನಾ ಶುದ್ಧಭಾವದಿ ಸೇವೆಯ ಮಾಡಿರಿ ಎಂದವನಾ ||೧||

ಸತಿ ಬೇಡಲು ಪತಿಭಿಕ್ಷೆ ನೀಡಿದವನಾ ಮಾತೆಯ ಬರಿದಾದ ಮಡಿಲಾ ತುಂಬಿದವನಾ
ಅನ್ನದಾನ ಹಿರಿದಾನ ಎಂದವನಾ ಪರರ ಚಿಂತೆಯ ಮಾಡದೆ ಬಾಳಿರಿ ಎಂದವನಾ ||೨||

ದಟ್ಟಿಯೊಂದನು ಸುತ್ತಿಕೊಂಡು ಕುಳಿವನಾ ದಿಟ್ಟ ನೋಟದಿ ಮುಗಳು ನಕ್ಕವನಾ
ಬಾ ಇಲ್ಲಿ ಎನ್ನುತ ಪಾದವ ತೋರಿದವನಾ ಮೂಢನ ಕರದೊಳೂ ಪದವಾಗಿ ನಲಿದವನಾ ||೩||

ಸಖರಾಯಪುರದೊಳು ಇರುವವನಾ ಸಖನಾಗಿ ಸಂತೈಸಿ ಪೊರೆವವನಾ
ಅಂಬಾಸುತನಾ ಅಂತರಂಗದಿ ಆನಂದ ರೂಪದಿ ಅನವರತ  ನೆಲೆಸಿಹನಾ ||೪||

No comments:

Post a Comment