ಗುರುನಾಥ ಗಾನಾಮೃತ
ಶಾಂತ ಮೂರುತಿ ತಾ ಕುಳಿತಿಹನು ನೋಡೇ
ರಚನೆ: ಅಂಬಾಸುತ
ಶಾಂತ ಮೂರುತಿ ತಾ ಕುಳಿತಿಹನು ನೋಡೇ
ಭ್ರಾಂತಿ ಅಳಿಪ ಭಗವಂತನಿವ ನೋಡೇ ||ಪ||
ರವಿತೇಜ ತುಂಬಿದ ಆ ಎರಡೂ ನಯನಾ
ಮಂದಸ್ಮಿತ ಮಧುರಾ ಮೋಹಕಾ ವದನಾ
ಅವನಿರುವ ಸ್ಥಳವೇ ಆನಂದದಾ ಸದನಾ
ನಮ್ಮ ಮೇಲಿರುವುದು ಸದಾ ಆತನಾ ಗಮನಾ ||೧||
ದಟ್ಟಿಯೊಂದನು ಬಿಗಿದಿಟ್ಟೂ ಕಟ್ಟೀ
ಯಜ್ಞೋಪವೀತ ಬಗಲಲಿ ಇರಿಸಿಹಾ ಜಟ್ಟೀ
ಸಂತೈಸುತಿಹನವನು ಭಕ್ತರಾ ಮನವನೇ ಮುಟ್ಟೀ
ನಿಜಭಕ್ತಿ ಎಂಬುದೂ ನಲಿದಿಹುದಿಲ್ಲಿ ಹುಟ್ಟೀ ||೨||
ಪವಾಡ ಪುರುಷನಲ್ಲಾ ನಗನಾಣ್ಯ ಬೇಕಿಲ್ಲಾ
ಇವನ ನಂಬಿದರೆ ಭಯ ಎಂದಿಗೂ ಇಲ್ಲಾ
ಭಕ್ತರಾ ಪಾಲಿಗಿವಾ ರಾಮ ಏಸೂ ಅಲ್ಲಾ
ಭುವಿಗಿಳಿದ ಪರಮಾತ್ಮಾ ಅತಿಷಯೋಕ್ತಿ ಏನಲ್ಲಾ ||೩||
ಸಖರಾಯಪುರದೊಳಗೆ ಈತನಾ ವಾಸಾ
ಆದರೂ ಭಕ್ತ ಹೃನ್ಮಂದಿರದಿ ಇರುವನೀತಾ
ಅಂಬಾಸುತನ ಅನವರತ ಪೋಷಿಪ ಸತ್ಯರೂಪ
ಜಗಕೆಲ್ಲಾ ಬೆಳಕಾಗಿಹಾ ಇವನೇ ನಂದಾದೀಪಾ ||೪||
No comments:
Post a Comment